ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ವಿವೇಕವು ಕರೆಯುತ್ತಿದೆ’—ನಿಮಗದು ಕೇಳಿಸುತ್ತಿದೆಯಾ?

‘ವಿವೇಕವು ಕರೆಯುತ್ತಿದೆ’—ನಿಮಗದು ಕೇಳಿಸುತ್ತಿದೆಯಾ?

‘ಜ್ಞಾನವೆಂಬಾಕೆಯು ಕರೆಯುತ್ತಾಳೆ, ವಿವೇಕವೆಂಬ ಆಕೆಯೇ ದನಿಗೈಯುತ್ತಾಳೆ. ಆಕೆಯು ರಾಜಮಾರ್ಗಗಳ ಅಗ್ರಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಕೂಗುತ್ತಾಳೆ.’—ಜ್ಞಾನೋಕ್ತಿ 8:1-3.

ವಿವೇಕಕ್ಕೆ ಬೆಲೆಕಟ್ಟಲಾಗದು. ಅದಿಲ್ಲದಿದ್ದರೆ ಬುದ್ಧಿಹೀನರಾಗಿ ಒಂದರ ಮೇಲೊಂದು ತಪ್ಪು ಮಾಡುತ್ತಿರುತ್ತೇವೆ. ಆದರೆ ನಿಜ ವಿವೇಕ ಎಲ್ಲಿ ಸಿಗುತ್ತದೆ? ವಿವೇಕದ ಬಗ್ಗೆ ಮೇಲಿನ ಮಾತುಗಳನ್ನು ಬರೆದವನು ನಮ್ಮ ಸೃಷ್ಟಿಕರ್ತನ ಸರಿಸಾಟಿಯಿಲ್ಲದ ವಿವೇಕದ ಕುರಿತು ಮಾತಾಡುತ್ತಿದ್ದನು. ಆತನ ವಿವೇಕವು ಇಂದು ಹೆಚ್ಚಿನಪಕ್ಷ ಎಲ್ಲ ಮಾನವರ ಕೈಸೇರಿದೆ. ಹೇಗೆ? ಒಂದು ವಿಶೇಷ ಪುಸ್ತಕದ ಮೂಲಕ. ಅದೇ ಬೈಬಲ್‌. ಮುಂದಿನ ಅಂಶಗಳನ್ನು ಗಮನಿಸಿ:

  • “ಇತಿಹಾಸದಲ್ಲೇ ಅತಿ ವ್ಯಾಪಕವಾಗಿ ವಿತರಣೆ ಆಗಿರುವ ಪುಸ್ತಕ” ಬೈಬಲ್‌ ಎಂದು ದ ವರ್ಲ್ಡ್ ಬುಕ್‌ ಎನ್‌ಸೈಕ್ಲಪೀಡಿಯ ತಿಳಿಸುತ್ತದೆ. “ಬೇರೆಲ್ಲಾ ಪುಸ್ತಕಗಳಿಗಿಂತ ಹೆಚ್ಚು ಬಾರಿ ಭಾಷಾಂತರಗೊಂಡಿರುವ ಮತ್ತು ಹೆಚ್ಚು ಭಾಷೆಗಳಲ್ಲಿರುವ ಪುಸ್ತಕ ಇದು.” ಇಡೀ ಬೈಬಲ್‌ ಅಥವಾ ಅದರ ಭಾಗಗಳು ಇಂದು ಸುಮಾರು 2,600 ಭಾಷೆಗಳಲ್ಲಿ ಸಿಗುತ್ತವೆ ಅಂದರೆ ಇಡೀ ಮಾನವ ಕುಟುಂಬದ 90%ಕ್ಕಿಂತಲೂ ಹೆಚ್ಚು ಜನರಿಗೆ ಬೈಬಲ್‌ ಲಭ್ಯವಿದೆ.

  • ವಿವೇಕವು ಅಕ್ಷರಾರ್ಥವಾಗಿಯೂ ‘ಕೂಗುತ್ತಿದೆ.’ ಮತ್ತಾಯ 24:14 ಹೀಗನ್ನುತ್ತದೆ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ [ಈ ಲೋಕದ] ಅಂತ್ಯವು ಬರುವುದು.”

ಈ “ಸುವಾರ್ತೆಯು” ನಿಜ ವಿವೇಕವಾಗಿದೆ. ಏಕೆಂದರೆ ಅದು ಮಾನವಕುಲದ ಸಮಸ್ಯೆಗಳಿಗೆ ದೇವರು ವಿವೇಕದಿಂದ ಮಾಡಿರುವ ಪರಿಹಾರದ ಕಡೆಗೆ ಬೊಟ್ಟುಮಾಡುತ್ತದೆ. ಆ ಪರಿಹಾರ ದೇವರ ರಾಜ್ಯವಾಗಿದೆ. ದೇವರ ರಾಜ್ಯವು ಇಡೀ ಭೂಮಿಯ ಮೇಲೆ ಆಳ್ವಿಕೆ ನಡೆಸುವ ದೇವರ ಸರ್ಕಾರವಾಗಿದೆ. ಹೌದು, ಇಡೀ ಭೂಮಿಗೆ ಒಂದೇ ಸರ್ಕಾರ! (ದಾನಿಯೇಲ 2:44; 7:13, 14) ಆದುದರಿಂದಲೇ ಯೇಸು ಕ್ರಿಸ್ತನು ಪ್ರಾರ್ಥಿಸಿದ್ದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.”—ಮತ್ತಾಯ 6:9, 10.

ದೇವರ ರಾಜ್ಯದ ಕುರಿತು ಪ್ರಕಟಪಡಿಸುವುದನ್ನು ಯೆಹೋವನ ಸಾಕ್ಷಿಗಳು ತಮ್ಮ ಸುಯೋಗವಾಗಿ ಪರಿಗಣಿಸುತ್ತಾರೆ. ಅವರಿದನ್ನು 239 ದೇಶಗಳಲ್ಲಿ ಮಾಡುತ್ತಿದ್ದಾರೆ. ಹೌದು, ದೈವಿಕ ವಿವೇಕವು ‘ಬಾಗಿಲುಗಳಲ್ಲಿ’ ಸಹ ‘ಕೂಗಿ ಕರೆಯುತ್ತಿದೆ.’ ನಿಮಗದು ಕೇಳಿಸುತ್ತಿದೆಯಾ? (g14-E 05)