ಮಾಹಿತಿ ಇರುವಲ್ಲಿ ಹೋಗಲು

ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?

ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?

ರಾಜ್ಯ ವಾರ್ತೆ ನಂ. 35

ಜನರೆಲ್ಲರು ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?

ನೆರೆಯವರ ಪ್ರೀತಿ ತಣ್ಣಗಾಗಿಹೋಗಿದೆ

ಲಕ್ಷಾಂತರ ಜನರು, ಸಹಾಯಕ್ಕಾಗಿ ಯಾವ ಕಡೆಗೂ ತಿರುಗಸಾಧ್ಯವಾಗದೆ, ನಿಸ್ಸಹಾಯಕ ಹಾಗೂ ತಿರಸ್ಕೃತ ಭಾವನೆಯುಳ್ಳವರಾಗಿದ್ದಾರೆ. ಒಬ್ಬ ನಿವೃತ್ತ ವ್ಯಾಪಾರಸ್ಥೆ ಗಮನಿಸಿದ್ದು: ‘ಒಂದು ಸಂಜೆ, ನನ್ನ ಮಹಡಿಯಲ್ಲಿ ಜೀವಿಸುವ ವಿಧವೆಯೊಬ್ಬಳು ನನ್ನ ಬಾಗಿಲನ್ನು ತಟ್ಟಿ, ತಾನು ಏಕಾಂಗಿಯಾಗಿದ್ದೆನೆಂದು ಹೇಳಿದಳು. ನಾನು ನಯವಾಗಿಯಾದರೂ ದಾಕ್ಷಿಣ್ಯವಿಲ್ಲದೆ, ಕಾರ್ಯನಿರತಳಾಗಿದ್ದೇನೆಂದು ಅವಳಿಗೆ ಹೇಳಿದೆ. ನನಗೆ ತೊಂದರೆ ಕೊಟ್ಟದ್ದಕ್ಕಾಗಿ ಕ್ಷಮೆಯಾಚಿಸುತ್ತಾ, ಅವಳು ಹೊರಟುಹೋದಳು.’

ದುಃಖಕರವಾಗಿ, ಆ ರಾತ್ರಿಯೇ, ಆ ವಿಧವೆಯು ಆತ್ಮಹತ್ಯೆ ಮಾಡಿಕೊಂಡಳು. ಅನಂತರ ಆ ವ್ಯಾಪಾರಸ್ಥೆಯು, ತಾನೊಂದು “ಕಠೋರವಾದ ಪಾಠವನ್ನು” ಕಲಿತುಕೊಂಡೆನೆಂದು ಹೇಳಿದಳು.

ನೆರೆಯವರ ಪ್ರೀತಿಯ ಕೊರತೆಯು, ಅನೇಕ ವೇಳೆ ದುರಂತಕರವಾಗಿದೆ. ಈ ಮೊದಲು ಯೂಗೊಸ್ಲಾವಿಯದ ಭಾಗವಾಗಿದ್ದ ಬಾಸ್ನಿಯ ಮತ್ತು ಹರ್ಸಗೋವಿನದಲ್ಲಾದ ಕುಲಸಂಬಂಧಿತ ಘರ್ಷಣೆಗಳ ಸಮಯದಲ್ಲಿ, ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದುಹೋಗುವಂತೆ ಒತ್ತಾಯಿಸಲ್ಪಟ್ಟರು ಮತ್ತು ಹತ್ತಾರು ಸಾವಿರ ಜನರು ಕೊಲ್ಲಲ್ಪಟ್ಟರು. ಯಾರಿಂದ? “ನಮ್ಮ ನೆರೆಯವರಿಂದ,” ಎಂಬುದಾಗಿ ತನ್ನ ಹಳ್ಳಿಯಿಂದ ಹೊಡೆದೋಡಿಸಲ್ಪಟ್ಟಿದ್ದ ಹುಡುಗಿಯೊಬ್ಬಳು ಪ್ರಲಾಪಿಸಿದಳು. “ನಮಗೆ ಅವರ ಪರಿಚಯವಿತ್ತು.”

ರುವಾಂಡದಲ್ಲಿ ಲಕ್ಷಾಂತರ ಜನರು, ಅನೇಕ ವೇಳೆ ತಮ್ಮ ಸ್ವಂತ ನೆರೆಯವರಿಂದಲೇ ಹತಿಸಲ್ಪಟ್ಟರು. “ಹುಟೂ ಮತ್ತು ಟೂಟ್ಸಿ ಕುಲದವರು, ಅಂತರ್ವಿವಾಹ ಮಾಡಿಕೊಳ್ಳುತ್ತಾ, ಯಾರು ಹುಟೂ ಮತ್ತು ಯಾರು ಟೂಟ್ಸಿಯಾಗಿದ್ದರೆಂಬುದರ ಬಗ್ಗೆ ಚಿಂತಿಸದೆ ಇಲ್ಲವೆ ಅದರ ಅರಿವೂ ಇಲ್ಲದೆ ಒಟ್ಟಿಗೆ [ಜೀವಿಸಿದರು],” ಎಂಬುದಾಗಿ ದ ನ್ಯೂ ಯಾರ್ಕ್‌ ಟೈಮ್ಸ್‌ ವರದಿಸಿತು. “ಅನಂತರ ಏನೋ ಫಕ್ಕನೆ ಸಂಭವಿಸಿತು,” ಮತ್ತು “ಕೊಲ್ಲುವಿಕೆಗಳು ಆರಂಭಿಸಿದವು.”

ತದ್ರೀತಿಯಲ್ಲಿ, ಇಸ್ರಾಯೇಲಿನಲ್ಲಿ ಯೆಹೂದ್ಯರು ಮತ್ತು ಅರಬ್ಬಿಯರು ಒತ್ತಾಗಿ ಜೀವಿಸುತ್ತಾರಾದರೂ, ಅನೇಕರು ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ. ಸನ್ನಿವೇಶವು, ಐಅರ್ಲೆಂಡ್‌ನಲ್ಲಿರುವ ಅನೇಕ ಕ್ಯಾತೊಲಿಕರು ಹಾಗೂ ಪ್ರಾಟೆಸ್ಟಂಟರು, ಮತ್ತು ಇತರ ದೇಶಗಳಲ್ಲಿ, ಜನರ ಹೆಚ್ಚುತ್ತಿರುವ ಸಂಖ್ಯೆಗಳ ವಿಷಯದಲ್ಲಿಯೂ ಅದೇ ರೀತಿಯದ್ದಾಗಿದೆ. ಲೋಕದ ಇತಿಹಾಸದಲ್ಲಿ ಹಿಂದೆಂದೂ ಪ್ರೀತಿಯ ಕೊರತೆ ಇಷ್ಟೊಂದು ಇದ್ದಿರಲಿಲ್ಲ.

ನೆರೆಯವರ ಪ್ರೀತಿಯು ತಣ್ಣಗಾಗಿಹೋಗಿರುವುದೇಕೆ?

ನಮ್ಮ ಸೃಷ್ಟಿಕರ್ತನು ಉತ್ತರವನ್ನು ನೀಡುತ್ತಾನೆ. ಆತನ ವಾಕ್ಯವಾದ ಬೈಬಲು, ನಾವು ಜೀವಿಸುತ್ತಿರುವ ಸಮಯವನ್ನು ‘ಕಡೇ ದಿವಸಗಳು’ ಎಂದು ಕರೆಯುತ್ತದೆ. ಈ ಅವಧಿಯಲ್ಲಿ, ಜನರಲ್ಲಿ “ಸ್ವಾಭಾವಿಕ ಪ್ರೀತಿ ಇರದು” (NW) ಎಂದು ಬೈಬಲ್‌ ಪ್ರವಾದನೆಯು ಹೇಳುತ್ತದೆ. ಶಾಸ್ತ್ರಗಳಲ್ಲಿ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” (NW) ಎಂಬುದಾಗಿಯೂ ಕರೆಯಲ್ಪಡುವ ಈ “ನಿಭಾಯಿಸಲು ಕಷ್ಟಕರವಾಗಿರುವ ಕಠಿನಕಾಲಗಳ” (NW) ಕುರಿತು ಯೇಸು ಕ್ರಿಸ್ತನು ಮುಂತಿಳಿಸಿದ್ದೇನೆಂದರೆ, “ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು.”2 ತಿಮೊಥೆಯ 3:1-5; ಮತ್ತಾಯ 24:3, 12.

ಆದುದರಿಂದ, ಇಂದಿನ ಪ್ರೀತಿಯ ಕೊರತೆಯು, ನಾವು ಈ ಲೋಕದ ಕಡೇ ದಿವಸಗಳಲ್ಲಿ ಜೀವಿಸುತ್ತಾ ಇದ್ದೇವೆಂಬುದರ ಪುರಾವೆಯ ಒಂದು ಭಾಗವಾಗಿದೆ. ಸಂತೋಷಕರವಾಗಿ, ಅದು ಭಕ್ತಿಹೀನ ಜನರ ಈ ಲೋಕವು, ಪ್ರೀತಿಯಿಂದ ಆಳಲ್ಪಡುವ ಒಂದು ನೀತಿಯ ಹೊಸ ಲೋಕದಿಂದ ಬೇಗನೆ ಸ್ಥಾನಪಲ್ಲಟಗೊಳಿಸಲ್ಪಡುವುದು ಎಂಬುದನ್ನೂ ಅರ್ಥೈಸುತ್ತದೆ.—ಮತ್ತಾಯ 24:3-14; 2 ಪೇತ್ರ 2:5; 3:7, 13.

ಆದರೆ, ಇಂತಹ ಒಂದು ಬದಲಾವಣೆಯು ಸಾಧ್ಯವಿದೆಯೆಂದು—ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸಲು ಮತ್ತು ಪರಸ್ಪರ ಶಾಂತಿಯಲ್ಲಿ ಒಟ್ಟಿಗೆ ಜೀವಿಸಲು ಕಲಿಯಸಾಧ್ಯವಿದೆಯೆಂದು—ನಂಬಲು, ನಮಗೆ ನಿಜವಾಗಿಯೂ ಕಾರಣವಿದೆಯೊ?

ನೆರೆಯವರ ಪ್ರೀತಿ—ಒಂದು ವಾಸ್ತವಿಕತೆ

‘ನನ್ನ ನೆರೆಯವರು ನಿಜವಾಗಿಯೂ ಯಾರು’? ಎಂಬುದಾಗಿ ಪ್ರಥಮ ಶತಮಾನದ ವಕೀಲನೊಬ್ಬನು ಯೇಸುವನ್ನು ಕೇಳಿದನು. ‘ನಿನ್ನ ಜೊತೆ ಯೆಹೂದ್ಯರು’ ಎಂಬುದಾಗಿ ಯೇಸು ಹೇಳುವನೆಂದು ಅವನು ನಿರೀಕ್ಷಿಸಿದನೆಂಬುದರಲ್ಲಿ ಸಂದೇಹವಿಲ್ಲ. ಆದರೆ, ಸ್ನೇಹಭಾವದ ಸಮಾರ್ಯದವನ ಕುರಿತಾದ ಒಂದು ಕಥೆಯಲ್ಲಿ, ಇತರ ರಾಷ್ಟ್ರಗಳ ಜನರು ಸಹ ನಮ್ಮ ನೆರೆಯವರಾಗಿದ್ದಾರೆಂದು ಯೇಸು ತೋರಿಸಿದನು.—ಲೂಕ 10:29-37; ಯೋಹಾನ 4:7-9.

ದೇವರ ಪ್ರೀತಿಯ ಅನಂತರ, ನೆರೆಯವನ ಕಡೆಗಿನ ಪ್ರೀತಿಯು ನಮ್ಮ ಜೀವಿತಗಳನ್ನು ಪ್ರಭಾವಿಸಬೇಕೆಂದು ಯೇಸು ಒತ್ತಿಹೇಳಿದನು. (ಮತ್ತಾಯ 22:34-40) ಆದರೆ, ಯಾವುದೇ ಗುಂಪಿನ ಜನರು ಎಂದಾದರೂ ತಮ್ಮ ನೆರೆಯವರನ್ನು ನಿಜವಾಗಿಯೂ ಪ್ರೀತಿಸಿದ್ದಾರೊ? ಆದಿ ಕ್ರೈಸ್ತರು ಹಾಗೆ ಮಾಡಿದರು! ಇತರರಿಗಾಗಿ ಅವರಲ್ಲಿದ್ದ ಪ್ರೀತಿಯ ಕಾರಣ ಅವರು ಪ್ರಸಿದ್ಧರಾಗಿದ್ದರು.—ಯೋಹಾನ 13:34, 35.

ಇಂದಿನ ಕುರಿತೇನು? ಕ್ರಿಸ್ತಸದೃಶ ಪ್ರೀತಿಯು ಯಾರಿಂದಲಾದರೂ ಆಚರಿಸಲ್ಪಡುತ್ತದೊ? ಎನ್‌ಸೈಕ್ಲೊಪೀಡಿಯ ಕ್ಯಾನಡಿಆನ ಗಮನಿಸುವುದು: “ಯೆಹೋವನ ಸಾಕ್ಷಿಗಳ ಕೆಲಸವು, ಯೇಸು ಮತ್ತು ಅವನ ಶಿಷ್ಯರಿಂದ ಆಚರಿಸಲ್ಪಟ್ಟ ಪ್ರಾಚೀನ ಕ್ರೈಸ್ತತ್ವದ ಪುನರುಜ್ಜೀವನ ಹಾಗೂ ಪುನಸ್ಸ್ಥಾಪನೆಯಾಗಿದೆ . . . ಎಲ್ಲರು ಸಹೋದರರಾಗಿದ್ದಾರೆ.”

ಅದು ಏನನ್ನು ಅರ್ಥೈಸುತ್ತದೆ? ಯೆಹೋವನ ಸಾಕ್ಷಿಗಳು ಯಾವುದೇ ವಿಷಯವು—ಜಾತಿ, ರಾಷ್ಟ್ರೀಯತೆ, ಇಲ್ಲವೆ ಕುಲಸಂಬಂಧಿತ ಹಿನ್ನೆಲೆಯನ್ನಾಗಲಿ—ತಮ್ಮ ನೆರೆಯವರನ್ನು ದ್ವೇಷಿಸುವಂತೆ ಅವರನ್ನು ನಡಿಸಲು ಬಿಡುವುದಿಲ್ಲವೆಂದು ಅದು ಅರ್ಥೈಸುತ್ತದೆ. ಅವರು ಯಾರನ್ನೂ ಕೊಲ್ಲುವುದಿಲ್ಲ, ಏಕೆಂದರೆ ಅವರು ಸಾಂಕೇತಿಕವಾಗಿ ತಮ್ಮ ಕತ್ತಿಗಳನ್ನು ಬಡಿದು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡಿದ್ದಾರೆ. (ಯೆಶಾಯ 2:4) ವಾಸ್ತವದಲ್ಲಿ ಸಾಕ್ಷಿಗಳು, ತಮ್ಮ ನೆರೆಯವರಿಗೆ ಸಹಾಯ ಮಾಡಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವ ವಿಷಯಕ್ಕಾಗಿ ಪ್ರಸಿದ್ಧರಾಗಿದ್ದಾರೆ.—ಗಲಾತ್ಯ 6:10.

ಕ್ಯಾಲಿಫೋರ್ನಿಯದ ಸ್ಯಾಕ್ರಮೆಂಟೊ ಯೂನಿಯನ್‌ನಲ್ಲಿನ ಒಂದು ಸಂಪಾದಕೀಯವು ಹೀಗೆ ಗಮನಿಸಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ: “ಲೋಕವೆಲ್ಲವು ಯೆಹೋವನ ಸಾಕ್ಷಿಗಳ ಮತಕ್ಕನುಸಾರ ಜೀವಿಸುವುದಾದರೆ, ರಕ್ತಪಾತ ಹಾಗೂ ದ್ವೇಷ ಅಂತ್ಯಗೊಳ್ಳುವವು ಮತ್ತು ಪ್ರೀತಿಯು ರಾಜನಂತೆ ಆಳುವುದೆಂದು ಹೇಳುವುದು ಯೋಗ್ಯವಾಗಿದೆ.” ಹಂಗೆರಿಯ ರಿಂಗ್‌ ಪತ್ರಿಕೆಯಲ್ಲಿ ಒಬ್ಬ ಬರಹಗಾರನು ಹೇಳಿಕೆ ನೀಡಿದ್ದು: “ಯೆಹೋವನ ಸಾಕ್ಷಿಗಳೊಬ್ಬರೇ ಈ ಭೂಮಿಯ ಮೇಲೆ ಜೀವಿಸುತ್ತಿರುವ ಜನರಾಗಿದ್ದಲ್ಲಿ, ಯುದ್ಧಗಳು ಇಲ್ಲದೆ ಹೋಗುವವು, ಮತ್ತು ಪೊಲೀಸರ ಕರ್ತವ್ಯಗಳು ಕೇವಲ ಜನಸಂಚಾರವನ್ನು ನಿಯಂತ್ರಿಸುವುದು ಮತ್ತು ಪಾಸ್‌ಪೋರ್ಟ್‌ಗಳನ್ನು ಹೊರಡಿಸುವುದು ಆಗಿರುವವೆಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ.”

ಆದರೂ, ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸಬೇಕಾದಲ್ಲಿ, ಒಂದು ಭಾರಿ, ಲೋಕವ್ಯಾಪಕ ಬದಲಾವಣೆಯು ಅಗತ್ಯವಾಗಿರುವುದೆಂಬುದು ಒಪ್ಪತಕ್ಕದ್ದು. ಆ ಬದಲಾವಣೆಯು ಹೇಗೆ ಸಂಭವಿಸುವುದು? (ದಯವಿಟ್ಟು ಹಿಂದಿನ ಪುಟ ನೋಡಿರಿ.)

ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸುವಾಗ

ಯೇಸು ಕ್ರಿಸ್ತನು ಕಲಿಸಿದ ಒಂದು ಪ್ರಾರ್ಥನೆಯು, ಎದ್ದುಕಾಣುವ ಬದಲಾವಣೆಯೊಂದು ಹತ್ತಿರದಲ್ಲಿದೆ ಎಂಬುದನ್ನು ತೋರಿಸುತ್ತದೆ. ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗದಲ್ಲಿ, ಯೇಸು ನಮಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:10.

ದೇವರ ರಾಜ್ಯವು ಏನಾಗಿದೆ? ಅದು, ಸ್ವರ್ಗದಿಂದ ಆಳುವಂತಹ ಒಂದು ನೈಜ ಸರಕಾರವಾಗಿದೆ. ಆದುದರಿಂದಲೇ ಅದು “ಪರಲೋಕರಾಜ್ಯ”ವೆಂದು ಕರೆಯಲ್ಪಟ್ಟಿದೆ. “ಶಾಂತಿಯ ರಾಜಕುಮಾರ”ನಾದ (NW) ಯೇಸು, ಅದರ ಪ್ರಭುವಾಗಿರುವಂತೆ ತನ್ನ ತಂದೆಯ ಮೂಲಕ ನೇಮಿಸಲ್ಪಟ್ಟಿದ್ದಾನೆ.—ಮತ್ತಾಯ 10:7; ಯೆಶಾಯ 9:6, 7; ಕೀರ್ತನೆ 72:1-8.

ದೇವರ ರಾಜ್ಯವು ಬರುವಾಗ, ದ್ವೇಷದಿಂದ ತುಂಬಿರುವ ಈ ಲೋಕಕ್ಕೆ ಏನು ಸಂಭವಿಸುವುದು? “ರಾಜ್ಯ”ವು, ಈ ಲೋಕದ ಎಲ್ಲ ಭ್ರಷ್ಟ ಸರಕಾರಗಳನ್ನು “ಭಂಗಪಡಿಸಿ ನಿರ್ನಾಮ”ಮಾಡುವುದು. (ದಾನಿಯೇಲ 2:44) ಬೈಬಲು ವಿವರಿಸುವುದು: ‘ಲೋಕವು . . . ಗತಿಸಿಹೋಗುತ್ತದೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.’—1 ಯೋಹಾನ 2:17.

ದೇವರ ಹೊಸ ಲೋಕದ ಕುರಿತು ಬೈಬಲು ಹೇಳುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:9-11, 29; ಜ್ಞಾನೋಕ್ತಿ 2:21, 22) ಅದು ಎಂತಹ ಒಂದು ಮಹಿಮಾಭರಿತ ಸಮಯವಾಗಿರುವುದು! “ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:4) ಸತ್ತವರು ಕೂಡ ಪುನಃ ಜೀವಿಸುವರು, ಮತ್ತು ಇಡೀ ಭೂಮಿಯು ಅಕ್ಷರಶಃ ಒಂದು ಪ್ರಮೋದವನವಾಗಿ ರೂಪಾಂತರಗೊಳಿಸಲ್ಪಡುವುದು.—ಯೆಶಾಯ 11:6-9; 35:1, 2; ಲೂಕ 23:43; ಅ. ಕೃತ್ಯಗಳು 24:15.

ದೇವರ ಹೊಸ ಲೋಕದಲ್ಲಿ ಜೀವಿಸಬೇಕಾದರೆ, ದೇವರು ಉಪದೇಶಿಸುವಂತೆಯೇ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. (1 ಥೆಸಲೊನೀಕ 4:9) ಪೂರ್ವ ದೇಶದ ಒಬ್ಬ ಬೈಬಲ್‌ ವಿದ್ಯಾರ್ಥಿ ಹೇಳಿದ್ದು: “ಬೈಬಲು ವಾಗ್ದಾನಿಸುವಂತೆ, ಜನರೆಲ್ಲರು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿತಿರುವ ಸಮಯಕ್ಕಾಗಿ ನಾನು ಎದುರು ನೋಡುತ್ತೇನೆ.” ಮತ್ತು ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂಬ ವಿಷಯದಲ್ಲಿ ನಾವು ಖಚಿತರಾಗಿರಬಲ್ಲೆವು! “ನಾನು ನುಡಿದಿದ್ದೇನೆ, ಈಡೇರಿಸುವೆನು” ಎಂಬುದಾಗಿ ಆತನು ಹೇಳುತ್ತಾನೆ.—ಯೆಶಾಯ 46:11.

ಆದರೆ ದೇವರ ರಾಜ್ಯದ ಕೆಳಗೆ ಆಶೀರ್ವಾದಗಳನ್ನು ಅನುಭವಿಸಲು, ಲೋಕವ್ಯಾಪಕವಾಗಿ ಲಕ್ಷಾಂತರ ಪ್ರಾಮಾಣಿಕ ಹೃದಯದ ಜನರು ಮಾಡುತ್ತಿರುವಂತೆ, ನೀವು ಬೈಬಲಿನ ಜ್ಞಾನವನ್ನು ಪಡೆದುಕೊಳ್ಳಬೇಕು. (ಯೋಹಾನ 17:3) ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟದ ಬ್ರೋಷರ್‌ ನಿಮಗೆ ಸಹಾಯ ಮಾಡುವುದು. ಹಿಂದಿನ ಪುಟದಲ್ಲಿ ಒದಗಿಸಲ್ಪಟ್ಟಿರುವ ಕೂಪನ್‌ ಅನ್ನು ತುಂಬಿಸಿ, ನಿಮ್ಮ ಮನೆಗೆ ಹತ್ತಿರವಿರುವ ವಿಳಾಸಕ್ಕೆ ಅದನ್ನು ಕಳುಹಿಸುವ ಮೂಲಕ ಒಂದು ಪ್ರತಿಯನ್ನು ಪಡೆದುಕೊಳ್ಳಿರಿ.

[ಪುಟ 3 ರಲ್ಲಿರುವ ಚಿತ್ರ]

Sniper and funeral in Bosnia: Reuters/Corbis-Bettmann