ಮಾಹಿತಿ ಇರುವಲ್ಲಿ ಹೋಗಲು

ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ!

ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ!

ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ!

1. ಅಷ್ಟು ಹೆಚ್ಚು ಜನರು ಜೀವಿತದಲ್ಲಿ ಅಷ್ಟು ಕೊಂಚ ಸಂತೋಷವನ್ನು ಕಂಡುಕೊಳ್ಳುವುದೇಕೆ? (ಪ್ರಸಂಗಿ 1:14, 15; 2:17, 18)

ಸಮೃದ್ಧಿ, ಶಾಂತಿಯಿಂದ ತುಂಬಿದ ಒಂದು ಒಳ್ಳೇ ಜೀವಿತ! ಇವೆಷ್ಟು ಅಪೇಕ್ಷಣೀಯ ವಿಷಯಗಳಾಗಿವೆ! ಆದರೆ ನೀವು ನಿಮ್ಮ ದಿನಗಳನ್ನು ಹೇಗೆ ಕಳೆಯತ್ತಿದ್ದೀರಿ? ತಮ್ಮ ಕುಟುಂಬಗಳನ್ನು ಪೋಷಿಸುವ ಪುರುಷರು ಹೆಚ್ಚಾಗಿ ತಾವು ಸಂತೋಷಪಡದೆ ಇರುವ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ, ಮತ್ತು ಅನೇಕರು ಸದಾ ನಿರುದ್ಯೋಗದ ಬೆದರಿಕೆಯನ್ನು ಎದುರಿಸುತ್ತಾರೆ. ಅನೇಕ ಗೃಹಿಣಿಯರು ಬಿಡುವಿಲ್ಲದೆ ಇಡೀ ದಿವಸ ದುಡಿಯುತ್ತಾರಾದರೂ ಅವರಿಗೆ ದಿನದಿನವೂ ಸ್ವಲ್ಪವೂ ಉಪಶಮನವಿಲ್ಲ ಮತ್ತು ಯಾವುದೇ ಮಹಾ ಸಂತೃಪ್ತಿಯಿಲ್ಲ. ತದ್ರೀತಿಯ ಜೀವನ ಪ್ರತೀಕ್ಷೆಯೊಂದಿಗೆ ಯುವಜನರು ಮಹಾಸಂಖ್ಯೆಯಲ್ಲಿ ಬೆಳೆಯುತ್ತಾರೆ. ಜೀವಿತವು ತಮ್ಮನ್ನು ಹಿತಕರವಾಗಿ ಉಪಚರಿಸಿದೆ ಎಂದು ಭಾವಿಸುವ ಕೆಲವರಿಗೆ ಸಹ, ಭವಿಷ್ಯತ್ತು ಅನಿಶ್ಚಯತೆಯಿಂದ ಮೋಡಗವಿದಿದೆ.

2. ಮಾನವಕುಲಕ್ಕೆ ಭವಿಷ್ಯವು ಹೇಗೆ ತೋರುತ್ತದೆ? (ಯೆಶಾಯ 60:2)

2 ನಿಜವಾಗಿ ಜೀವಿತದಲ್ಲಿ ಇರುವುದು ಇಷ್ಟೆಯೋ? ಲೋಕದಲ್ಲಿ ನೀವೆಲ್ಲಿ ಬೇಕಾದರೆ ನೋಡಿರಿ, ವ್ಯವಸ್ಥೆಯು ಅತಿಯಾಗಿ ನರಳುತ್ತಿರುವಂತೆ ಕಾಣಿಸುತ್ತದೆ. ತೈಲ ಬಿಕ್ಕಟ್ಟುಗಳು ಮತ್ತು ಹತೋಟಿ ಮೀರಿದ ಬೆಲೆಯೇರಿಕೆಗಳು, ಬರಗಳು ಮತ್ತು ವಾತಾವರಣದ ಮಲಿನತೆಗಳು, ಕ್ರಾಂತಿಗಳು ಮತ್ತು ಶೀತೋಷ್ಣ ಯುದ್ಧಗಳು, ಅಣುಶಸ್ತ್ರಗಳ ಭಾರಿಸಂಗ್ರಹ ಮತ್ತು ಜಾತೀಯ ಸಮಸ್ಯೆಗಳು ಹಾಗೂ ಮಾನವ ಜನತೆಯ ನಡುವೆ ತೀವ್ರವಾಗಿ ಉಕ್ಕೇರುತ್ತಿರುವ ಅಸಂತೃಪ್ತಿ ಇವೆಲ್ಲವೂ ಅದಕ್ಕಿದೆ. ಮಾನವ ಜೀವನ ಮತ್ತು ಸಂರಕ್ಷಣೆಗೆ ಬೆದರಿಕೆ ಹಾಕುವ ಸಮಸ್ಯೆಗಳಿಂದ ಭೂಮಿಯ ಯಾವ ಭಾಗವೂ ಮುಕ್ತವಾಗಿಲ್ಲ!

3. ಭವಿಷ್ಯತ್ತಿನ ಕುರಿತು ನಾವೇಕೆ ಪರಿವೆಯಿಂದಿರಬೇಕು? (ಪ್ರಕಟನೆ 3:10)

3 ‘ಎಷ್ಟರ ತನಕ ಅದು ನನ್ನನ್ನು ಮುಟ್ಟುವದಿಲ್ಲವೊ ಆ ತನಕ ಅದನ್ಯಾರು ಪರಿವೆ ಮಾಡುತ್ತಾರೆ?’ ಎಂಬ ಮನೋಭಾವವು ಕೆಲವು ಜನರಲ್ಲಿರುವಂತೆ ಕಾಣುತ್ತದೆ. ಆದರೆ ಇದೆಷ್ಟು ಸಂಕುಚಿತ ದೃಷ್ಟಿಯಾಗಿದೆ! ಪಾರಾಗಲಾರದ ತೀರ್ಮಾನವೇನಂದರೆ ಅತಿ ಶೀಘ್ರದಲ್ಲೇ ಈ ಸಮಸ್ಯೆಗಳು ಪ್ರತಿಯೊಬ್ಬರ ಜೀವಿತಗಳನ್ನು ಮುಟಲ್ಟಿವೆ.

4, 5. (ಎ) ಮಾನವಕುಲದ ಅಧಿಕ ಸಂಖ್ಯಾತರು ಯಾವ ಮನೋಭಾವವನ್ನು ತೆಗೆದುಕೊಳ್ಳುವಂತೆ ಕಾಣುತ್ತದೆ ಮತ್ತು ಏಕೆ? (ಬಿ) ಬೈಬಲಿನಲ್ಲಿ ಪರಿಹಾರವು ಇರಸಾಧ್ಯವಿದೆ ಏಕೆ? (2 ತಿಮೊಥೆಯ 3:16, 17; ರೋಮಾಪುರ 15:4; 1 ಕೊರಿಂಥ 10:11)

4 ಮಾನವ ಧುರೀಣರು—ಒಂದು ಅಂತರ್ರಾಷ್ಟ್ರೀಯ ಪ್ರಮಾಣದಲ್ಲಿ, ಆರ್ಥಿಕ, ವೈಜ್ಞಾನಿಕ ಮತ್ತು ರಾಜಕೀಯ ರಂಗಗಳಲ್ಲಿ ಸಂಭವಿಸ ಶಕ್ಯವಾದ ಪರಿಹಾರಗಳನ್ನು ಸೂಚಿಸಿದ್ದಾರೆ. ಆದರೆ ಇವೆಲ್ಲವೂ ಶೂನ್ಯವಾದವುಗಳೆಂದೂ ಅತೃಪ್ತಿಕರವೆಂದೂ ರುಜುವಾಗಿರುವುದಿಲ್ಲವೇ? ಪರಿಹಾರಕ್ಕಾಗಿ ಪ್ರಸ್ತಾಪಿಸಲ್ಪಟ್ಟ ಹೆಚ್ಚಿನ ಯೋಜನೆಗಳು ‘ನೆಲದಿಂದಲೇ ಮೇಲೇಳುವುದಿಲ್ಲ’. ಲೋಕದ ಮುಖಂಡರಲ್ಲಿ ಯಾರೂ ದೂರವ್ಯಾಪ್ತಿಯ ನೈಜ ಪರಿಹಾರವೊಂದನ್ನು ನೀಡಶಕ್ತರಾಗಿರುವುದಿಲ್ಲ. ಫಲಿತಾಂಶವಾಗಿ, ಮಾನವಕುಲದ ಅಧಿಕಸಂಖ್ಯಾತ ಜನರಿಗೆ ಜೀವಿತದಲ್ಲಿ ಒಂದು ಉದ್ದೇಶವು ಇರುವುದಿಲ್ಲ; ಆದುದರಿಂದ “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ಸಾಮಾನ್ಯ ಮನೋಭಾವವನ್ನು ಅವರು ತೆಗೆದುಕೊಳ್ಳುತ್ತಾರೆ.

5 ಕೊನೆಯಲ್ಲಿ ಉಲ್ಲೇಖಿಸಿದ ಈ ಮಾತುಗಳು ಬೈಬಲಿನಲ್ಲಿ 1 ಕೊರಿಂಥದವರಿಗೆ 15:32 ರಲ್ಲಿ * ಕಂಡುಬರುತ್ತವೆ, ಆದರೆ ಒಂದು ನಿಶ್ಚಿತ ದೃಷ್ಟಿಕೋನವನ್ನು ಪ್ರೋತ್ಸಾಹಿಸುವ ಪೂರ್ವಾಪರ ಸಂದರ್ಭದಲ್ಲಿ. ಬೈಬಲು ಮಾನವಕುಲದ ಸಮಸ್ಯೆಗಳಿಗೆ ಒಂದು ಪರಿಹಾರವನ್ನೀಯುವ ಸಂಭಾವ್ಯತೆ ಇದೆಯೋ? ನಿಶ್ಚಯವಾಗಿ, ಬೈಬಲನ್ನು ತಿರಸ್ಕರಿಸುವ ಅನೇಕ ಜನರಿದ್ದಾರೆ. ಆದರೆ, ಲೋಕದ ಕಾರ್ಯಾದಿಗಳ ಅಪಾಯಕರ ಸ್ಥಿತಿಯ ನೋಟದಲ್ಲಿ, ಪ್ರಾಯಶಃ ಬೈಬಲಿನ ಕಡೆಗೆ ಪುನಃ ನೋಡುವರೇ ಇದು ತಕ್ಕ ಸಮಯವಾಗಿರಬಹುದು. ಎಷ್ಟೆಂದರೂ, ಇದು ಒಂದು ಅತಿ ಪುರಾತನ ಪುಸ್ತಕ, ಅದರ ಭಾಗಗಳು 3,400 ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಬರೆಯಲ್ಪಟ್ಟವುಗಳು. ಅದು ಮಾನವಕುಲದ ಸಕಲ ಜಾತಿಗಳ ಜನರ ಗೌರವವನ್ನು ಗಳಿಸಿರುತ್ತದೆ. ಅತ್ಯಧಿಕ ಸಂಖ್ಯೆಯ ಸಜೀವವಾಗಿರುವ ಭಾಷೆಗಳಲ್ಲಿ ಅದು ತರ್ಜುಮೆಯಾಗಿರುತ್ತದೆ ಮತ್ತು ಅದರ ವಿತರಣೆಯು ಮಾನವ ಇತಿಹಾಸದಲ್ಲಿ ಬೇರೆ ಯಾವುದೇ ಪ್ರಕಾಶನಕ್ಕಿಂತ ಎಷ್ಟೋ ಅಧಿಕವಾಗಿರುತ್ತದೆ. ಒಳ್ಳೇದು, ಹಾಗಾದರೆ, ಜೀವಿತಕ್ಕೆ ಅಧಿಕ ಹೆಚ್ಚಿನದ್ದು ಇದೆ ಎಂದು ಅದು ನಮಗೆ ತೋರಿಸುತ್ತದೋ?

ಜೀವಿತದ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು

6. ಬೈಬಲು ಕ್ರೈಸ್ತಪ್ರಪಂಚವನ್ನು ಹೇಗೆ ನೋಡುತ್ತದೆ? (ಯಾಕೋಬ 1:27; 5:3-5)

6 ಬೈಬಲಿನ ಕೆಲವು ಟೀಕಾಕಾರರು ಕ್ರೈಸ್ತಪ್ರಪಂಚವು ಮಾಡಿರುವ ದಾಖಲೆಗಳಾದ—ದರಿದ್ರ ಜನರ ಸುಲಿಗೆ, ಮತ್ತು ಮಠೀಯ ದಂಡಯಾತ್ರೆಗಳ ಮೂಲಕ ನಿರ್ದೋಷ ರಕ್ತ ಸುರಿಸುವಿಕೆ, ಪಾಷಂಡ ವಿಚಾರಣೆಗಳು ಮತ್ತು ಈ ಇಪ್ಪತ್ತನೇ ಶತಕದ ಯುದ್ಧಗಳೇ ಮೊದಲಾದವಕ್ಕೆ ಕೈ ತೋರಿಸಿರುತ್ತಾರೆ. ‘ಜನರು ಈ ರೀತಿಯಾಗಿ ವರ್ತಿಸುವಂತೆ ಬೈಬಲು ಕಾರಣವಾಗಿದ್ದರೆ, ಅದರಲ್ಲಿರುವುದೇನೂ ನಮಗೆ ಬೇಡ’ ಎಂದವರನ್ನುತ್ತಾರೆ. ಆದರೆ ಸತ್ಯಸಂಗತಿಯೇನಂದರೆ, ಅಂಥ ರಕ್ತಾಪರಾಧಿಗಳಾದ ಮನುಷ್ಯರು ತಮ್ಮ ಅಕ್ರೈಸ್ತ ಕೃತ್ಯಗಳನ್ನು ಮರೆಮಾಡಲಿಕ್ಕಾಗಿ ಬೈಬಲನ್ನು ಕೇವಲ ಉಪಯೋಗಿಸಿದ್ದಾರೆ. ಅವರ ಕೃತ್ಯಗಳನ್ನು ಬೈಬಲು ತಾನೇ ಬಲವಾಗಿ ಖಂಡಿಸುತ್ತದೆ, ಮತ್ತು ಅವರನ್ನು ಖೋಟಾ ಕ್ರೈಸ್ತರೆಂಬದಾಗಿ ತೋರಿಸುತ್ತದೆ. ಬೈಬಲು ಒಂದು ನಿಜವಾದ ನೈತಿಕ ಜೀವನ ಜೀವಿಸುವುದನ್ನು ಉತ್ತೇಜಿಸುತ್ತದೆ.

7, 8. (ಎ) ಯಾವ ಪ್ರಶ್ನೆಗಳನ್ನು ಬೈಬಲು ಉತ್ತರಿಸಬಹುದು? (ಮತ್ತಾಯ 7:7) (ಬಿ) ಬೈಬಲು ಅನೇಕ ಜನರಿಗೆ ಸಹಾಯ ಮಾಡಿರುವುದು ಹೇಗೆ? (ಕೀರ್ತನೆ 119:105, 165)

7 ಇತರ ಟೀಕಾಕಾರರು ವಾದಿಸುವುದೇನಂದರೆ—ಬೈಬಲು ವೈಜ್ಞಾನಿಕವಾಗಿಲ್ಲ, ಹಿಂದಿನ ಕಾಲದ್ದಾಗಿದೆ, ಮತ್ತು ಅದು ಕಟ್ಟುಕಥೆಗಳ ಪುಸ್ತಕವಾಗಿದೆ ಎಂಬದಾಗಿ. ಆದರೆ ಇದು ನಿಜವೋ? ಇಂದಿರುವ ನಮಗೆ ನಮ್ಮ ಜೀವಿತದ ಮೇಲೆ ಪರಿಣಾಮ ಬೀರುವ ಪ್ರಧಾನ ಪ್ರಶ್ನೆಗಳ ಖಾತ್ರಿಯಾದ ಉತ್ತರಗಳ ಅಗತ್ಯವಿದೆ, ಅದ್ಯಾವುದೆಂದರೆ: ಮನುಷ್ಯನು ಎಲ್ಲಿಂದ ಬಂದಿರುತ್ತಾನೆ? ಸದ್ಯದ ಪರಿಸ್ಥಿತಿಗಳ ಅರ್ಥವೇನು? ಮಾನವ ಜೀವನವು ಭೂಮಿಯಿಂದ ನಾಶಗೊಳಿಸಲ್ಪಡುವದೋ? ಮಾನವಕುಲಕ್ಕಾಗಿ ಭವಿಷ್ಯತ್ತು ಏನನ್ನು ಕಾದಿರಿಸಿದೆ?

8 ಬೈಬಲು ಇದನ್ನು ಮತ್ತು ಜನರು ಆಗಿಂದಾಗ್ಗೆ ಕೇಳುತ್ತಿರುವ ಅನೇಕ ಇತರ ಪ್ರಶ್ನೆಗಳನ್ನು ಉತ್ತರಿಸುತ್ತದೆ. ಕಟ್ಟುಕಥೆಗಳಿಂದ ವ್ಯವಹರಿಸುವ ಬದಲಾಗಿ ತೀರಾ ವಾಸ್ತವಿಕತೆಗಳೊಂದಿಗೆ ಬೈಬಲು ವ್ಯವಹರಿಸುತ್ತದೆ. ನಿಜ ಸಂಗತಿಯೇನಂದರೆ, ಭೂಲೋಕದ ಪ್ರತಿಯೊಂದು ಭಾಗದಲ್ಲಿರುವ ಜನರು ತಮ್ಮ ಜೀವಿತಗಳನ್ನು ತಮಗೆ ನಿಜ ಸಂತೃಪ್ತಿ ಮತ್ತು ಸಮಾಧಾನವನ್ನು ತರುವಂಥಾ ರೀತಿಯಲ್ಲಿ ಉಪಯೋಗಿಸಿಕೊಳ್ಳುವಂತೆ ಅದು ಮಾರ್ಗದರ್ಶನವನ್ನು ಕೊಟ್ಟಿರುತ್ತದೆ. ನೀವು ಬೈಬಲನ್ನು ಪರೀಕ್ಷಿಸುವಾಗ, ಅದು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನೊದಗಿಸುವುದನ್ನು, ಮತ್ತು ನಿಮ್ಮ ಜೀವಿತದಲ್ಲಿ ನಿಜ ಸಂತೋಷವನ್ನು ಕಾಣುವುದಕ್ಕೆ ವ್ಯಾವಹಾರಿಕ ಸಹಾಯವನ್ನು ನಿಮಗೆ ಕೊಡುವುದನ್ನು ನೀವು ಕಾಣುವಿರಿ.

ವಿಶ್ವವು ಅಸ್ತಿತ್ವಕ್ಕೆ ಬಂದ ವಿಧ

9, 10. (ಎ) ಬೈಬಲಿಗನುಸಾರವಾಗಿ ವಿಶ್ವದ ಮೂಲವು ಯಾವುದು? (ಯೆಶಾಯ 45:12, 18) (ಬಿ) ವಿಶ್ವವು ತಾನೇ ಸೃಷ್ಟಿಯ ಕುರಿತಾಗಿ ಸಾಕ್ಷಿಕೊಡುತ್ತದೆ ಹೇಗೆ? (ಇಬ್ರಿಯ 3:4)

9 ಜೀವನವಾದರೂ ಏನು ಎಂಬದನ್ನು ನಾವು ಕಂಡುಕೊಳ್ಳಬಯಸುವುದಾದರೆ, ಉತ್ತರಿಸಲ್ಪಡಬೇಕಾದ ಮೂಲಭೂತ ಪ್ರಶ್ನೆಗಳಲ್ಲಿ ಒಂದು ಯಾವುದೆಂದರೆ: ಜೀವದ ಮೂಲವೇನು? ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಾವು ಎಲ್ಲಿಂದ ಬಂದೆವು? ನಾವು ಜೀವಿತರಾಗಿರುವುದರಲ್ಲಿ ಉದ್ದೇಶವೊಂದು ಇದೆಯೇ? “ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂದು ಬೈಬಲು ಹೇಳುತ್ತದೆ. (ಆದಿಕಾಂಡ 1:1) ಆದರೆ ಆಧುನಿಕ ದಿನದ ವಿಚಾರವುಳ್ಳ ಮನುಷ್ಯರು ಕೇಳುವುದು: ಸರ್ವಶಕ್ತನಾದ ಒಬ್ಬ ದೇವರು—ಒಬ್ಬ ನಿರ್ಮಾಣಿಕನು ಇದ್ದಾನೋ? ವಿಶ್ವವು ವಿಕಾಸದ ಒಂದು ಉತ್ಪಾದನೆಯೆಂದು ಅನೇಕ ಜನರು ನಂಬುವುದು ನಿಜವಲ್ಲವೋ?

10 ಗ್ರಹವ್ಯೂಹದ ಮಾದರಿಯನ್ನು ನೀವೆಂದಾದರೂ ಸಂದರ್ಶಿಸಿದ್ದೀರೋ? ಹಾಗಿದ್ದರೆ, ವಕ್ರಾಕೃತಿಯ ಗುಮ್ಮಟದ ಮೇಲೆ ಆಕಾಶವನ್ನು ಸರಿಯಾಗಿ ಪ್ರಕ್ಷೇಪಿಸಲಿಕ್ಕಾಗಿ ರಚಿಸಲ್ಪಟ್ಟ ಜಟಿಲವಾದ ಯಂತ್ರಕೌಶಲ್ಯವನ್ನು ಮತ್ತು ನಮ್ಮ ಸೌರವ್ಯೂಹದ ಮಾದರಿಯ ಸುಸ್ಪಷ್ಟ ಚಲನೆಯನ್ನು ಕಂಡು ನೀವು ಅಚ್ಚರಿಗೊಂಡಿರಬಹುದು. ಮನುಷ್ಯನ ಚಿತ್ರಕಲಾ ಚಾತುರ್ಯ ಹಾಗೂ ಯಂತ್ರಕಲಾ ಕೌಶಲ್ಯದ ಎಂಥಾ ಉತ್ತಮ ಉತ್ಪಾದನೆಯಿದು ಎಂದು ನೀವು ಯೋಚಿಸಿರಬಹುದು! ಆದರೆ ಒಂದು ಕ್ಷಣ ಯೋಚಿಸಿರಿ. ವಿಶ್ವದ ಅಂಥಾ ಹೋಲಿಕೆಯನ್ನು ರಚಿಸಲು ಮೇಧಾವಿಗಳಾದ ಮನುಷ್ಯರ ಅಗತ್ಯವಿತ್ತೆಂದಾದರೆ, ಅಗಾಧವಾದ ಈ ವಿಶ್ವದ ರಚನೆಗೆ ಖಂಡಿತವಾಗಿಯೂ ಎಷ್ಟೋ ಅತಿಶಯ ಪ್ರಜ್ಞಾಶಾಲಿಯ ಅಗತ್ಯವಿತ್ತು.

11. ಕೆಲವು ವಿಚಾರವಂತರಾದ ಲೌಕಿಕ ಪಂಡಿತರು ಏನನ್ನು ಅಂಗೀಕರಿಸುವಂತೆ ನಿರ್ಬಂಧಿಸಲ್ಪಟ್ಟಿದ್ದಾರೆ? (ರೋಮಾಪುರ 1:20-23)

11 ವಿಶ್ವವೆಲ್ಲವು ಒಂದು ವಿಕಾಸದ ಉತ್ಪಾದನೆಯೆಂದು ಚಾರ್ಲ್ಸ್‌ ಡಾರ್ವಿನರು ವಾದಿಸಿದ್ದು ಹತ್ತೊಂಭತ್ತನೇ ಶತಮಾನದಲ್ಲಿ. ಆದರೆ ಇವೆಲ್ಲವನ್ನು ಯಾವನಾದರೊಬ್ಬನು ನಿರ್ಮಿಸಿಲ್ಲವೆಂಬದಾಗಿ ನೀವು ಸಹ ಯೋಚಿಸುತ್ತೀರೋ? ಜೀವವು ಅಕಸ್ಮಾತ್ತಾಗಿ ಉಂಟಾಯಿತೆಂದು ನೀವು ಆಲೋಚಿಸುತ್ತೀರೋ? ವಿಕಾಸವಾದವು ನ್ಯೂನತೆಯುಳ್ಳದ್ದಾಗಿ ಅನೇಕ ಪ್ರಾಜ್ಞ ವ್ಯಕ್ತಿಗಳು ಕಾಣುತ್ತಾರೆ. ದೃಷ್ಟಾಂತಕ್ಕಾಗಿ, ಇತಿಹಾಸಕಾರ ಆರ್ನಾಲ್ಡ್‌ ಟೊಯಿನ್‌ಬೀರವರು ಅಂದದ್ದು:

“ವಿಶ್ವವು ಅಸ್ತಿತ್ವಕ್ಕೆ ತರಲ್ಪಟ್ಟಿರಬಹುದಾದ ಇನ್ನೊಂದು ಬದಲಿಯಾದ ರೀತಿಯ ನಿಶ್ಚಿತ ದಾಖಲೆಯನ್ನು ಡಾರ್ವಿನನ ವಿಕಾಸವಾದವು ಕೊಟ್ಟಿದೆ ಎಂದು ನಾನು ನೆನಸುವುದಿಲ್ಲ.”1

ಏಕೆ, ಡಾರ್ವಿನರು ಸಹ, ಜೀವದ ಉಗಮವನ್ನು ಚರ್ಚಿಸುವಲ್ಲಿ ಈ ರೀತಿ ಅಂಗೀಕರಿಸಿದ್ದರು:

“ದೇವರ ಅಸ್ತಿತ್ವವನ್ನು ಭಾವನೆಗಳಿಂದಲ್ಲ, ಕಾರಣದಿಂದ ಜೋಡಿಸಲ್ಪಟ್ಟ ಇನ್ನೊಂದು ಮನವರಿಕೆಯ ಉಗಮವು ನನ್ನನ್ನು ಪ್ರಭಾವಿಸುತ್ತದೆ. . . . ಈ ಅಗಾಧ ಮತ್ತು ಆಶ್ಚರ್ಯಕರ ವಿಶ್ವವನ್ನು, ಹಾಗೂ ಗತಕಾಲವನ್ನು ನೆನಸಿಕೊಳ್ಳುವ ಮತ್ತು ದೂರ ಭವಿಷ್ಯತ್ತಿನೊಳಗೆ ದೃಷ್ಟಿಸುವ ಸಾಮರ್ಥ್ಯವುಳ್ಳ ಮನುಷ್ಯನನ್ನು ಕುರುಡು ಘಟನೆ ಯಾ ಅಗತ್ಯತೆಯು ನಿರ್ಮಿಸಿತೆನ್ನುವುದರಲ್ಲಿರುವ ಅತಿರೇಕ ಜಟಿಲತೆ ಅಥವಾ ಅಸಾಧ್ಯತೆಯಿಂದ ಇದು ಹಿಂಬಾಲಿಸಿದೆ. ಹೀಗೆ ವಿವೇಚಿಸುವಲ್ಲಿ, ಒಬ್ಬ ಆದಿ ಕಾರಣನ ಕಡೆಗೆ ದೃಷ್ಟಿಸಲ್ಪಟ್ಟಿದ್ದೇನೆಂದು ನಾನು ಭಾವಿಸುತ್ತೇನೆ.”2

12. ನಾವೇನನ್ನು ದೀನತೆಯಿಂದ ಅಂಗೀಕರಿಸಬೇಕು, ಮತ್ತು ಏಕೆ? (ಅ. ಕೃತ್ಯಗಳು 14:15-17)

12 ಹೌದು, ಸರಳ ವಿವೇಚನೆಯು ನಮಗೆ ತಿಳಿಸುತ್ತದೇನಂದರೆ ಒಬ್ಬ ಮಹಾ ಆದಿ ಕಾರಣನು, ಒಬ್ಬ ನಿರ್ಮಾಣಿಕನು—ದೇವರು ಇರಲೇಬೇಕು. ಮತ್ತು ಮನುಷ್ಯನ ಅತ್ಯಂತ ಶಕ್ತಿಯುಕ್ತ ದೂರದರ್ಶಕಗಳು ಆತನ ಆಶ್ಚರ್ಯಕರ ವಿಶ್ವದ ಆಳವನ್ನು ಅನ್ವೇಷಿಸಲು ಕೇವಲ ಆರಂಭಿಸಿವೆಂಬದನ್ನು ನಾವು ವಿವೇಚಿಸುವಾಗ, ದೇವರ ಪರಮ ವಿವೇಕ ಮತ್ತು ಶಕ್ತಿಯ ಎದುರಿಗೆ ಮನುಷ್ಯನ ವಿವೇಕ ಮತ್ತು ಸಾಮರ್ಥ್ಯಗಳು ನಿಶ್ಚಯವಾಗಿಯೂ ಕೊಂಚವೆಂಬದನ್ನು ನಾವು ದೀನತೆಯಿಂದ ಅಂಗೀಕರಿಸಲೇಬೇಕು. ನಾವು ನೋಡಲಿರುವ ಪ್ರಕಾರ, ಒಂದು ಸಂತೋಷವುಳ್ಳ ಮತ್ತು ಅರ್ಥಭರಿತ ಜೀವಿತವನ್ನು ನಾವು ಆನಂದಿಸಬಯಸುವುದಾದರೆ ದೇವರನ್ನು ದೃಶ್ಯದಿಂದ ಹೊರಗಿಡ ಸಾಧ್ಯವಿಲ್ಲ. ನಮ್ಮ ಭೂಮಿಯು ಸೇರಿರುವ ವಿಶ್ವವನ್ನು ನಿರ್ಮಿಸಿದರಲ್ಲಿ ಆತನಿಗೊಂದು ಉದ್ದೇಶವು ಇದ್ದಿರಲೇಬೇಕು. ಆತನ ಮಹಾ ಉದ್ದೇಶಗಳ ಕುರಿತಾಗಿ ನಾವು ಹೆಚ್ಚನ್ನು ಕಲಿಯುವಾಗ, ಜೀವನಕ್ಕೆ ಹೆಚ್ಚಿನದ್ದು ಇದೆ ಎಂಬದನ್ನು ಕಂಡುಕೊಳ್ಳುವಂತೆ ನಾವು ಅಪೇಕ್ಷಿಸಬಹುದು!

ಭೂಮಿಯ ಮೇಲೆ ಜೀವವು ಆರಂಭಿಸಿದ ವಿಧ

13. ಈ ಭೂಮಿಯು ದೇವರ ಸೃಷ್ಟಿಯಲ್ಲಿ ಗಮನಾರ್ಹವಾಗಿರುತ್ತದೆ ಏಕೆ? (ಕೀರ್ತನೆ 104:24)

13 ನಾವೀಗ ನಮ್ಮ ಗಮನವನ್ನು ಈ ಅಪಾರವಾದ ವಿಶ್ವದಲ್ಲಿ ಒಂದು ಚಿಕ್ಕ ಚುಕ್ಕೆಯಂತಿರುವ ಭೂಮಿಗೆ ತಾನೇ ತಿರುಗಿಸೋಣ. ಒಂದು ವಿಶಿಷವಾದ ಸೌಂದರ್ಯವು ಈ ಭೂಮಿಗಿದೆ. ಅದು ಬಣ್ಣಗಳಿಂದ ಹೊದಿಸಲ್ಪಟ್ಟಿದೆ ಮತ್ತು ಆಶ್ಚರ್ಯಕರ ವೈವಿಧ್ಯತೆಗಳುಳ್ಳ ಸಜೀವ ವಸ್ತುಗಳಿಂದ ಸಂಪನ್ನವಾಗಿದೆ. ಅದರಲ್ಲಿ ಜೀವವಿದೆ. ಚಂದ್ರಲೋಕಕ್ಕೆ ಪ್ರಯಾಣ ಮಾಡಿದ್ದ ಗಗನಯಾತ್ರಿಕನೊಬ್ಬನು ಅದನ್ನು ಈ ಮಾತುಗಳಲ್ಲಿ ವರ್ಣಿಸಿದನು:

“ಇಡೀ ವಿಶ್ವದಲ್ಲಿ ನಾವೆತ್ತ ಕಡೆ ನೋಡಿದರೂ ಒಂದೇ ಒಂದು ತುಣುಕು ಬಣ್ಣವು ಕಂಡುಬಂದದ್ದು ಈ ಭೂಮಿಯಿಂದಲೇ. ಸಾಗರಗಳ ಕಡು ನೀಲಿಬಣ್ಣ, ಬಿಸಿಲುಗಂದು ಕಂದುಬಣ್ಣದ ನೆಲ, ಮತ್ತು ಮುಗಿಲಗಳ ಶ್ವೇತವರ್ಣ . . . ಆಕಾಶಮಂಡಲದಲ್ಲೆಲ್ಲಾ ನೋಡಲು ಅತ್ಯಂತ ಸುಂದರವಾದ ವಸ್ತು ಅದಾಗಿತ್ತು. ಇಲ್ಲಿ ಕೆಳಗಿರುವ ಜನರಿಗೆ ತಮಗೇನಿದೆ ಎಂಬ ಮನವರಿಕೆಯಿಲ್ಲ.”3

ಈ ಅಪಾರ ವಿಶ್ವದಲ್ಲಿ ಭೂಮಿಯು ಒಂದು ರತ್ನದಂತೆ ಎದ್ದು ನಿಂತಿರುತ್ತದೆಂಬದಕ್ಕೆ ಯಾವ ಸಂದೇಹವೂ ಇಲ್ಲ. ಅದು ನಿಶ್ಚಯವಾಗಿಯೂ ಜೀವದಿಂದ ತುಂಬಿರುತ್ತದೆ. ಮತ್ತು ಈ ಎಲ್ಲಾ ಜೀವಕ್ಕೆ ಖಂಡಿತವಾಗಿಯೂ ಒಂದು ಉದ್ದೇಶವಿರಲೇ ಬೇಕು! ಈ ಉದ್ದೇಶವೇನೆಂದು ಕಂಡುಹಿಡಿಯಲು ನಮಗಾಗುವುದೋ ಎಂದು ನೋಡೋಣ.

14. ಜೀವವು ಎಲ್ಲಿಂದ ಬಂತು, ಮತ್ತು ಹೇಗೆ? (ಕೀರ್ತನೆ 104:30, 31)

14 ಜೀವವು ಎಲ್ಲಿಂದ ಬಂತೆಂಬದನ್ನು ಕಂಡುಹಿಡಿಯುವದು ಹೆಚ್ಚು ಕಷ್ಟಕರವಲ್ಲ. ಅದರ ಉಗಮದ ಕಡೆಗೆ ಕೈತೋರಿಸುತ್ತಾ ಬೈಬಲ್‌ ಲೇಖಕನೊಬ್ಬನು ಸುಮಾರು 3000 ವರ್ಷಗಳ ಹಿಂದೆ ಪ್ರಕಟಿಸಿದ್ದು:

“ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು; . . . ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ; ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ.”—ಕೀರ್ತನೆ 36:7, 9.

ಬೈಬಲಿನ ಕೆಲವು ಕಟು ಟೀಕಾಕಾರರಿಗೆ ದೇವರು ಜೀವದ ಮೂಲನೆಂಬದನ್ನು ಅಂಗೀಕರಿಸಲೇಬೇಕಾಯಿತು. ವಿಕಾಸವಾದಿ ಡಾರ್ವಿನನು ಸಹ ಒಪ್ಪಿಕೊಂಡನೇನಂದರೆ ಆರಂಭದಲ್ಲಿ ಜೀವವು “ಕೆಲವು ಅಥವಾ ಒಂದು ಸ್ವರೂಪದೊಳಗೆ ನಿರ್ಮಾಣಿಕನಿಂದ ಊದಲ್ಪಟ್ಟಿರಬೇಕು” ಎಂಬದಾಗಿ.4 ಆದರೆ ದೇವರು “ಕೆಲವು ಸ್ವರೂಪ”ದೊಳಗೆ ಜೀವವನ್ನೂದಶಕ್ತನೆಂದ ಮೇಲೆ, ತದ್ರೀತಿ ನಿರ್ಮಿಸಲ್ಪಟ್ಟ ನೂರಾರು “ಜಾತಿಯ” ಜೀವಿಗಳೊಳಗೆ ಪ್ರತಿಯೊಂದರ ಸರದಿಗನುಸಾರ ಜೀವವನ್ನೇಕೆ ಊದಶಕ್ತನಲ್ಲ? ಆತನು ಅದನ್ನೇ ಮಾಡಿದನು ಎಂದು ಬೈಬಲನ್ನುತ್ತದೆ! ಆತನು ಪ್ರತಿಯೊಂದು ಜೀವಿಯನ್ನು “ತಮ್ಮತಮ್ಮ ಜಾತಿಗನುಸಾರವಾಗಿ” ನಿರ್ಮಿಸಿದನು. (ಆದಿಕಾಂಡ 1:12, 21, 24, 25) ಮೊದಲನೇ ಮನುಷ್ಯನನ್ನು ದೇವರು ನಿರ್ಮಿಸಿದ್ದು ಹೇಗೆಂಬದು ಈ ಮಾತುಗಳಲ್ಲಿ ವರ್ಣಿಸಲ್ಪಟ್ಟಿದೆ:

“ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿ (ಆತ್ಮ, NW) ಯಾದನು.”—ಆದಿಕಾಂಡ 2:7, NW.

ಬೈಬಲಿಗನುಸಾರವಾಗಿ, ಮಾನವ ಜೀವವು ಇಲ್ಲಿ ಉಂಟಾದದ್ದು ಈ ರೀತಿಯಲ್ಲಿಯೇ—ದೇವರಿಂದ ನೇರವಾಗಿ ಸೃಷ್ಟಿಸಲ್ಪಟ್ಟ ಮೂಲಕ—ಕೇವಲ 6000 ವರ್ಷ ಪೂರ್ವದಲ್ಲಿ. ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ ಎಂಬದನ್ನು ಗಣ್ಯ ಮಾಡುವುದಕ್ಕೋಸ್ಕರ ನಾವು ಆ ನಿಜತ್ವವನ್ನು ತಿಳಿದುಕೊಳ್ಳುವದು ಅತ್ಯಾವಶ್ಯ.

15. ಜೀವವು ಪ್ರಮಾದವಶಾತ್‌ ಉಂಟಾಗಿರ ಸಾಧ್ಯವಿದೆಯೋ? (ಕೀರ್ತನೆ 100:3)

15 ಬೈಬಲಿನ ಸರಳವಾದ ಸೃಷ್ಟಿ ದಾಖಲೆಯೊಂದಿಗೆ ಹೋಲಿಕೆಯಲ್ಲಿ, ವಿಕಾಸವಾದಿಗಳ ಕೆಲವು ಅರ್ಥ ವಿವರಣೆಗಳಾದರೋ ವಿಲಕ್ಷಣ ಕಲ್ಪನೆಗಳಾಗಿ ಕಂಡುಬರುತ್ತವೆ. ದೃಷ್ಟಾಂತಕ್ಕಾಗಿ, ಒಬ್ಬ ವಿಕಾಸವಾದ ತಜ್ಞರು ಈ ರೀತಿ ಬರೆದಿರುತ್ತಾರೆ:

“ಒಂದಾನೊಂದು ಕಾಲದಲ್ಲಿ ಬಹಳ ಪೂರ್ವದ ಹಿಂದೆ ಪ್ರಾಯಶಃ ಎರಡೂವರೆ ಶತಕೋಟಿ ವರ್ಷಗಳಷ್ಟು ಹಿಂದೆ, ಒಂದು ಮಾರಕ ಸೂರ್ಯನ ಕೆಳಗೆ, ವಿಷಕಾರಿ ವಾತಾವರಣದಿಂದ ಪೂರಿತವಾದ ಅಮೋನಿಯದೊಡನೆ ಸಂಯೋಗಹೊಂದಿದ ಸಾಗರದಲ್ಲಿ, ಜೈವಿಕ ಪರಮಾಣುಗಳ ಸಾರಿನ ಮಧ್ಯೆ, ಒಂದು ನಾಭಿಯಂಥ ಆಮ್ಲಗುಣದ ಪರಮಾಣು ಅಕಸ್ಮಾತ್ತಾಗಿ ಅಸ್ತಿತ್ವಕ್ಕೆ ಬಂದು, ತನ್ನಂಥ ಇನ್ನೊಂದನ್ನು ಹೇಗಾದರೂ ಅಸ್ತಿತ್ವಕ್ಕೆ ತರಶಕ್ತವಾಯಿತು—ಮತ್ತು ಅದರಿಂದ ಬೇರೆ ಎಲ್ಲವೂ ಹಿಂಬಾಲಿಸಿದವು!” (ಓರೆ ಅಕ್ಷರ ಸೇರಿಸಿದ್ದು)5

ಅದು ನಿಮ್ಮನ್ನು ಮನದಟ್ಟು ಮಾಡುತ್ತದೋ? ಭೂಮಿಯಷ್ಟು ಗಾತ್ರದ ರಾಸಾಯನಿಕ ದ್ರವ್ಯಗಳ ಸಾಗರವೊಂದರಲ್ಲಿ, ಹಿತಕರವಾದ ಪರಿಸ್ಥಿತಿಗಳ ಕೆಳಗೆ, ಒಂದು ಸಸಾರಜನಕ ಪರಮಾಣುವು ತನ್ನನ್ನು ತಾನೇ ಉತ್ಪಾದಿಸ ಶಕ್ಯವಾಗುವ ಸಂಭಾವ್ಯತೆಯ ಕುರಿತು ವಿಕಾಸವಾದಿ ಲಿಕೊಮ್ಟೆ ಡ್ಯು ನೊವ್‌ ಲೆಕ್ಕಿಸಿದನು. ಅದು 10243 (ಅಂದರೆ 1 ಅಂಕೆಯನ್ನು 243 ಸೊನ್ನೆಗಳಿಂದ ಹಿಂಬಾಲಿಸಲ್ಪಡುವುದು.) ಶತಕೋಟಿ ವರ್ಷಗಳಲ್ಲಿ ಕೇವಲ ಒಂದು ಸಲ ಮಾತ್ರವೇ ಸಂಭವಿಸ ಸಾಧ್ಯವಿದೆ ಎಂದವರು ಹೇಳಿದ್ದಾರೆ.6 ಆದರೂ, ಒಂದು ಜೀವಾಣುವು ಒಂದಲ್ಲ, ಆದರೆ ನೂರಾರು ಸಸಾರಜನಕ ಪರಮಾಣುಗಳಿಂದ, ಹಾಗೂ ಇತರ ಅನೇಕ ಜಟಿಲ ದ್ರವ್ಯಗಳಿಂದ ಮಾಡಲ್ಪಟ್ಟಿರುತ್ತದೆ! ನಿಶ್ಚಯವಾಗಿ ಜೀವವು ಅಕಸ್ಮಾತ್ತಾಗಿ ಬಂದಿರುವುದಿಲ್ಲ!

16. ವಿಕಾಸವನ್ನು ಒಂದು “ಕಟ್ಟುಕಥೆ”ಯಾಗಿ ಕರೆಯಬಹುದೇಕೆ? (1 ತಿಮೊಥೆಯ 1:3, 4)

16 ನಿಜ ಸಂಗತಿಗಳಿಗೆ ಪರಸ್ಪರ ವಿರುದ್ಧವಾದ ತುಂಬಾ ವಿಷಯಗಳು ವಿಕಾಸವಾದದಲ್ಲಿವೆ! ಉದಾಹರಣೆಗೆ, ಪ್ರತಿಯೊಂದು ಸಸ್ಯ, ಪ್ರಾಣಿ ಮತ್ತು ಮಾನವ ಜೀವಿಯು ತನ್ನತನ್ನ ಜಾತಿಗನುಸಾರವಾಗಿ ಮಾತ್ರವೇ ಪುನರುತ್ಪತ್ತಿ ಮಾಡಶಕ್ಯವಾಗಿರುವುದು ಸಕಲ ಜೀವಿಗಳಿಗಾಗಿರುವ ಮಾರ್ಪಡದ ಪುನರುತ್ಪತ್ತಿಯ ನಿಯಮವಾಗಿದೆ. ಅನೇಕ ವಿಧದ ನಾಯಿಗಳಲ್ಲಿ ಅವಲೋಕಿಸಲ್ಪಡುವ ಪ್ರಕಾರ, ಒಂದು ಜಾತಿಯ ಒಳಗೆ ಬದಲಾವಣೆಗಳಿರಬಹುದು. ಆದರೆ ನಾಯಿ ಜಾತಿಯು ಯಾವಾಗಲೂ ನಾಯಿಗಳನ್ನು ಹುಟ್ಟಿಸುತ್ತದೆ. ಅದನ್ನು ಬೆಕ್ಕಿನೊಂದಿಗೆ ಯಾ ಇತರ ಜಾತಿಗಳೊಂದಿಗೆ ತಳಿ ಹುಟ್ಟಿಸಲು ಸಾಧ್ಯವಿಲ್ಲ. ವಿಕಾಸವಾದಿಗಳ ಅಧಿಕ ಆಶಾಭಂಗಕ್ಕಾಗಿ, ಮುಂತಿಳಿಸಿದಂತೆ ಬಂಡೆಗಳಡಿಯಲ್ಲಿರುವ ಜೀವ್ಯವಶೇಷಗಳು ಜಾತಿಗಳ ನಡುವಣ “ಮಧ್ಯವರ್ತಿ” ಪ್ರಾಣಿರೂಪಗಳನ್ನು ಹೊರತರಲು ತಪ್ಪಿ ಹೋಗಿರುತ್ತವೆ. ಅದಲ್ಲದೆ “ಮಾರ್ಪಾಟುಗಳು” ಅಥವಾ ಜೀವಕಣಗಳ ಬದಲಾವಣೆಗಳು ಮಾನವಕುಲದ ಸಂಬಂಧದಲ್ಲಿ ಕೇವಲ ನ್ಯೂನತೆಗಳನ್ನು ಅಥವಾ ಇತರ ಕುಂದುಗಳಿರುವ ಮನುಷ್ಯರನ್ನು ಉಂಟುಮಾಡುವುದು—ವಿಕಾಸವು ಏನನ್ನು ವಾದಿಸುತ್ತದೋ ಅದಕ್ಕೆ ಪ್ರತಿಕೂಲವಾಗಿ—ಬಹಳ ಮಟ್ಟಿಗೆ ಯಾವಾಗಲೂ ಹಾನಿಕಾರಕವಾಗಿರುತ್ತದೆ. ಆದುದರಿಂದ ನಿರ್ದಿಷ್ಟ ಪ್ರಸಿದ್ಧ ವಿಜ್ಞಾನಿಗಳು ಈಗ ವಿಕಾಸವಾದವನ್ನು “ಕಟ್ಟುಕಥೆ”,7 “ಯುಕ್ತಾಯುಕ್ತ ಪರಿಜ್ಞಾನವುಳ್ಳ ಊಹನೆ”,8 “ಮತ್ತು ವಿಜ್ಞಾನದ ಹೆಸರಿನ ಕೆಳಗೆ ಎಂದಿಗೂ ವೇಷಹಾಕಿಕೊಂಡು ಕಾಣಿಸಿಕೊಳ್ಳುವ ಮಹಾ ವಿಚಿತ್ರ ಕಥೆ”9 ಎಂಬ ಹೆಸರಿನಿಂದ ಈಗ ವರ್ಣಿಸುವುದರಲ್ಲೇನೂ ಆಶ್ಚರ್ಯವಿಲ್ಲ.

17. ಯಾವ ರೀತಿಯಲ್ಲಿ ಮನುಷ್ಯನು ಪ್ರಾಣಿಗಳಿಗಿಂತ ಅಧಿಕ ಆಶ್ಚರ್ಯಕರವಾಗಿ ಮಾಡಲ್ಪಟ್ಟಿದ್ದಾನೆ? (ಆದಿಕಾಂಡ 1:27, 28)

17 ಆದರೆ ಮನುಷ್ಯನು ತಾನೇ ಒಂದು “ಕಟ್ಟುಕಥೆ” ಯಲ್ಲ. ಅವನು ಜೀವಿಸುತ್ತಾನೆ. “ದೇವರ ಸ್ವರೂಪ” ದಲ್ಲಿ ಮಾಡಲ್ಪಟ್ಟವನೂ, ಮನಸ್ಸಾಕ್ಷಿಯಿಂದ ನಡಿಸಲ್ಪಡುವವನೂ ಆಗಿದ್ದು, ಬುದ್ಧಿಶಕ್ತಿಯುಳ್ಳ, ನೈತಿಕಜೀವಿಯಾದ ಆತನ ಅಸ್ತಿತ್ವವು ತಾನೇ ಅವನನ್ನು ಕೆಳದರ್ಜೆ ಜೀವಿಗಳೆಲ್ಲದರಿಂದ ಪೂರ್ಣವಾಗಿ ಪ್ರತ್ಯೇಕಿಸುತ್ತದೆ. ಆದುದರಿಂದ ಕೇವಲ ಪ್ರಾಣಿಗಳಂತೆ ಜೀವಿಸಿರುವುದಕ್ಕಿಂತ ಅಧಿಕ ಹೆಚ್ಚಿನದ್ದು ಜೀವನಕ್ಕಿರಲೇಬೇಕು. ಒಂದು ಪ್ರಚಂಡವಾದ ಕಂದರವು ಮನುಷ್ಯನನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತದೆ. ಯಾವ ಪ್ರಾಣಿಯು ತನ್ನ ಎಳೆಯರಲ್ಲಿ ಪ್ರತಿಯೊಬ್ಬನ ಪರಾಮರಿಕೆ ಮತ್ತು ತರಬೇತಿಯಲ್ಲಿ ಇಪ್ಪತ್ತು ವರ್ಷಗಳಷ್ಟು ಹೆಚ್ಚು ಸಮಯವನ್ನು ಕಳೆಯುತ್ತದೆ? ಆಶ್ಚರ್ಯಕರ ಗುಣಗಳಾದ ಪ್ರೀತಿ, ದಯೆ, ದೂರದೃಷ್ಟಿ, ಸಂಶೋಧನಾತ್ಮಕ ಮತ್ತು ಸೌಂದರ್ಯ, ಕಲೆ ಮತ್ತು ಸಂಗೀತಗಳಿಗಾಗಿ ಗಣ್ಯತೆಯನ್ನು ತೋರಿಸಶಕ್ತನಾದವನು ಕೇವಲ ಮನುಷ್ಯನು ತಾನೇ ಆಗಿದ್ದಾನೆ. ಇಷ್ಟು ಹೇರಳವಾದ ಯೋಗ್ಯತೆಗಳನ್ನು ಪಡೆದದಕ್ಕಾಗಿ ಕೃತಜ್ಞತೆಯಲ್ಲಿ, ಜೀವವನ್ನು ಪ್ರೀತಿಸುವವರಾದ ಮಾನವರೆಲ್ಲರೂ ಪುರಾತನ ರಾಜ ದಾವೀದನೊಂದಿಗೆ ಜತೆಗೂಡುತ್ತಾ “ಯೆಹೋವನೇ, . . . ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ” ಎಂಬ ಹೇಳಿಕೆಯನ್ನು ವ್ಯಕ್ತಪಡಿಸಬಾರದೇ?—ಕೀರ್ತನೆ 139:4, 14.

“ವಿಕಾಸ” ಜೀವಿತಗಳಿಗೆ ಮಾಡಿರುವಂಥ ವಿಷಯಗಳು

18, 19. ವಿಕಾಸವು (ಎ) ನೈತಿಕತೆಯನ್ನು (ಕೀರ್ತನೆ 10:3, 4) (ಬಿ) ಅಧಿಪತಿಗಳ ಮನೋಭಾವವನ್ನು (1 ಯೋಹಾನ 3:15) ಹೇಗೆ ಪ್ರಭಾವಕ್ಕೊಳಪಡಿಸಿದೆ?

18 ಇಂದು ಇಷ್ಟು ಹೆಚ್ಚು ಜನರಿಂದ ವಿಕಾಸವಾದವು ಸುಲಭವಾಗಿಯೇ ಸ್ವೀಕರಿಸಲ್ಪಟ್ಟಿರುವುದು ಏಕೆ? ಅದಕ್ಕೆ ಒಂದು ಕಾರಣವೇನಂದರೆ ವ್ಯಕ್ತಿಯೊಬ್ಬನು ಅದಕ್ಕೆ ಅನುಗತವಾಗಿರುವುದು ಜನಪ್ರಿಯತೆಯ, ಕಾಲಾನುಗುಣವಾದ ರೂಢಿಯ ವಿಷಯವಾಗಿದೆ. ಅದಲ್ಲದೆ, ಒಬ್ಬ ನಿರ್ಮಾಣಿಕನಿಗೆ ಅಥವಾ ಆತನ ನೈತಿಕ ನಿಯಮಗಳಿಗೆ ಹೊಣೆಗಾರಿಕೆಯ ಭಾವವಿಲ್ಲದೆ ತಮ್ಮ ‘ಸ್ವಂತ ವಿಷಯಗಳನ್ನು ಮಾಡಲು’ ಬಯಸುವ ಸ್ವತಂತ್ರವರ್ತಿಗಳೂ ಅನೈತಿಕರೂ ಆದ ವ್ಯಕ್ತಿಗಳಿಗೆ ಅದೊಂದು ಪಾರಾಗುವ ಮಾರ್ಗವನ್ನೊದಗಿಸಿದೆ. ದಿ ಔಟ್‌ಲೈನ್‌ ಆಫ್‌ ಹಿಸ್ಟರಿ ಪುಸ್ತಕದಲ್ಲಿ ಎಚ್‌. ಜಿ. ವೆಲ್ಸ್‌ರವರು ವಿಕಾಸವಾದವು ವಿಕಸಿಸಿದ್ದು ಹೇಗೆಂಬದನ್ನು ವಿವರಿಸುತ್ತಾರೆ ಮತ್ತು ಹೇಳುವುದು: “ಹಳೇ ನೈತಿಕ ಅವಲಂಬನೆಗಳನ್ನು ಸ್ಥಾನಪಲ್ಲಟ ಮಾಡಲು . . . ರಚನಾತ್ಮಕವಾದ ಯಾವುದನ್ನೇ ಅದು ತಂದಿರುವುದಿಲ್ಲ. ಒಂದು ನಿಜವಾದ ನೀತಿಭ್ರಷ್ಟತೆಯು ಪರಿಣಮಿಸಿದೆ.”10 ಜೀವಿತವನ್ನು ಅರ್ಹವಾದದನ್ನಾಗಿ ಮಾಡಲು ಅದು ಯಾವ ರೀತಿಯಲ್ಲೂ ನೆರವು ಮಾಡುತ್ತಿರಲಿಲ್ಲ.

19 ವಿಕಾಸವಾದ ಬೋಧನೆಯ ಹೆಚ್ಚಿನ ಪರಿಣಾಮದ ಕುರಿತು ಎಚ್‌. ಜಿ. ವೆಲ್ಸ್‌ ಹೀಗೆಂದು ತಿಳಿಸಿದ್ದಾರೆ: “ಯಾವುದರಲ್ಲಿ ಬಲಾಢ್ಯರೂ ಕುತಂತ್ರಿಗಳೂ ಆದವರು ನಿರ್ಬಲರೂ ದೀನರೂ ಆದವರ ಮೇಲೆ ಮೇಲುಗೈ ಮಾಡುತ್ತಾರೋ ಆ ಜೀವನದ ಹೋರಾಟದ ಆಧಾರದ ಮೇಲೆ ತಾವು ಉಳಿದಿದ್ದೇವೆಂದು . . . ಈಗಿರುವ ಜನರು ನಂಬುತ್ತಾರೆ. ಆದುದರಿಂದ ಮನುಷ್ಯ ತಂಡದ ದೊಡ್ಡ ನಾಯಿಗಳು ಪೀಡಿಸಿ, ಬಗ್ಗಿಸುವುದು ಸರಿ ಎಂದು ಅವರಿಗೆ ತೋರಿದೆ.”11 ಹೀಗೆ ವಿಕಾಸವಾದವು “ಕ್ರೈಸ್ತ ಪ್ರಪಂಚಕ್ಕೆ” ಕ್ರೂರ ಯುದ್ಧವನ್ನು ನಡಿಸಿದಕ್ಕಾಗಿ ಆತ್ಮ ಸಮರ್ಥನೆಯನ್ನೊದಗಿಸಿತು. ಎವಲ್ಯೂಶನ್‌ ಆ್ಯಂಡ್‌ ಕ್ರಿಶ್ಚನ್ಸ್‌ ಎಂಬ ಪುಸ್ತಕವು, 1914ರ ಒಂದನೇ ಲೋಕ ಯುದ್ಧದ ದುರಂತಕ್ಕೆ ಮತ್ತು ಅನಂತರ ನಾಜಿ ಸಂಪ್ರದಾಯದ ದುಷ್ಟ ಅತ್ಯಾಚಾರಕ್ಕೆ ಡಾರ್ವಿನನ ಬೋಧನೆಯ ಮೇಲೆ ಆರೋಪ ಹೊರಿಸಿದೆ.12 ಇದೇ ರೀತಿಯಲ್ಲಿ ಕಮ್ಯೂನಿಷ್ಟ್‌ ವಾದದ ವೃದ್ಧಿಗೆ ವಿಕಾಸವಾದವು ತನ್ನ ಪಾಲಿನ ಹೊಣೆಗಾರಿಕೆಯನ್ನು ಹೊರಲೇಬೇಕು. ಯಾವುದು ದೇವರಿಗೆ “ಮಾರಕ ಹೊಡೆತ” ಕೊಡುವುದಾಗಿ ವರ್ಣಿಸಲ್ಪಟ್ಟಿತ್ತೋ ಆ ಡಾರ್ವಿನನ ಆರಿಜಿನ್‌ ಆಫ್‌ ಸ್ಪೀಷೀಸ್‌ ಪುಸ್ತಕವನ್ನೋದಿದಾಗ ಕಾರ್ಲ್‌ ಮಾಕ್ಸ್‌ನು ಉಲ್ಲಾಸಪಟ್ಟನೆಂಬದಾಗಿ ಹೇಳಲ್ಪಟ್ಟಿದೆ.13 ಅವನು ಇದನ್ನೂ ಹೇಳಿದ್ದನು:

“ಡಾರ್ವಿನನ ಪುಸ್ತಕವು ಅತಿ ಮಹತ್ವವುಳ್ಳದ್ದಾಗಿದೆ ಮತ್ತು ಇತಿಹಾಸದಲ್ಲಿ ವರ್ಗ ಹೋರಾಟಕ್ಕೆ ಮೂಲಾಧಾರವಾಗಿ ನನಗೆ ನೆರವಾಗಿದೆ.”14

ಈ ದಿನದ ತನಕವೂ ಕಮ್ಯೂನಿಷ್ಟ್‌ ರಾಷ್ಟ್ರಗಳು “ಸ್ವತವುಳ್ಳದ್ದು ಉಳಿಯುವುದು” ಎಂಬ ವಿಕಾಸ ಬೋಧನೆಯ ಆಧಾರದಲ್ಲಿ ಲೋಕಾಧಿಪತ್ಯದ ತಮ್ಮ ಗುರಿಯನ್ನು ಬೆನ್ನಟ್ಟುತ್ತಾ ಇವೆ. ಇತರ ರಾಷ್ಟ್ರಗಳು ಸಹ ಬದುಕಿ ಉಳಿಯುವ ಹೋರಾಟದಲ್ಲಿ ಭಾಗವಹಿಸುತ್ತ ಮತ್ತು ಇದರ ಫಲಿತಾಂಶ ಈ ಅಣುಯುಗದ ಮಹತ್ತಾದ ಶಸ್ತಾಸ್ತ್ರ ಸ್ಪರ್ಧೆ. ಮಾನವಕುಲದವರೆಲ್ಲರ ಜೀವವು ಗಂಡಾಂತರದಲ್ಲಿದೆ.

20. ವಿಕಾಸದಲ್ಲಿ ನಂಬಿಕೆಯು ನಿಮ್ಮ ಸ್ವಂತ ಜೀವಿತವನ್ನು ಹೇಗೆ ಪ್ರಭಾವಿಸ ಸಾಧ್ಯವಿದೆ? (ಕೊಲೊಸ್ಸೆ 2:8)

20 ಇದು ನಿಮ್ಮ ಸ್ವಂತ ಜೀವವನ್ನು ಹೇಗೆ ಪ್ರಭಾವಕ್ಕೊಳಪಡಿಸುತ್ತದೆ? ವಿಕಾಸವಾದದೊಳಗೆ ಸಿಕ್ಕಿಬೀಳುವುದು ನಿಮಗೆ ವೈಯಕ್ತಿಕವಾಗಿ ತೀರಾ ಹಾನಿಕರವಾಗಿರ ಸಾಧ್ಯವಿದೆ. ವಿಕಾಸವಾದವು ಸತ್ಯವಾಗಿದ್ದರೆ, ಜೀವಿತವು ಉದ್ದೇಶರಹಿತವೂ ಅರ್ಥವಿಲ್ಲದ್ದೂ ಆಗಿ ಪರಿಣಮಿಸುತ್ತಿತ್ತು. ಬದುಕಿ ಉಳಿಯುವ ಹೋರಾಟದ ಕೇವಲ ಒಂದು “ಪೈಪೋಟಿ” ಯಾಗಿದ್ದು ಮರಣವೊಂದೇ ಅದರ ಕೊನೆಯ ಫಲಿತಾಂಶವಾಗುತ್ತಿತ್ತು. “ಸ್ವತವುಳ್ಳದ್ದು ಬದುಕಿ ಉಳಿಯುವುದ” ರಲ್ಲಿ ನಂಬಿಕೆಯನ್ನಿಡುವ ವಿಕಾಸವಾದಿಯಲ್ಲಿ ತನ್ನ ಜೊತೆ ಮಾನವರನ್ನು ಪ್ರೀತಿಸಲು, ಸಭ್ಯವಾದ ನೈತಿಕ ಜೀವನವನ್ನು ನಡಿಸಲು ಅಥವಾ ಕಾಡು ಮೃಗಗಳಿಗಿಂತ ಬೇರೆಯಾಗಿ ವರ್ತಿಸಲು ಯಾವ ಪ್ರೇರಣೆಯೂ ಇರಲಾರದು. ಮಾನವಕುಲದ ಮೇಲೆ ಅದರ ಪ್ರಭಾವದಲ್ಲಿ ವಿಕಾಸವಾದವು ಸಮಗ್ರವಾಗಿ ನಕಾರಾತ್ಮಕವಾಗಿದೆ. ಜೀವದ ಕುರಿತು ಯಾವುದೇ ಪ್ರಶ್ನೆಗಳಿಗೆ ಒಂದು ತೃಪ್ತಿಕರವಾದ ಉತ್ತರವನ್ನು ಅದು ಕೊಡಲಾರದು. ಆದರೆ ಬೈಬಲ್‌ ಕೊಡಶಕ್ತವಾಗಿದೆ.

ಜೀವಿತವು ಸಮಸ್ಯೆಗಳಿಂದ ಇಷ್ಟು ತುಂಬಿರುವುದೇಕೆ?

21, 22. (ಎ) ಮನುಷ್ಯನ ಸದ್ಯದ ಪರಿಸ್ಥಿತಿಯನ್ನು ಯಾವುದಕ್ಕೆ ಹೋಲಿಸಬಹುದು? (ಬಿ) ಆದಾಮನು ಯಾವ “ಸಂಜ್ಞೆ”ಗೆ ವಿಧೇಯನಾಗಲು ತಪ್ಪಿದನು, ಯಾವ ಫಲಿತಾಂಶದೊಂದಿಗೆ? (ಆದಿಕಾಂಡ 2:15-17; 3:17-19)

21 ಪರಿಸ್ಥಿತಿಯನ್ನು ಒಂದು ಸುಂದರವಾದ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಕುಟುಂಬವೊಂದಕ್ಕೆ ಹೋಲಿಸಬಹುದು. ಅದು ಒಂದು ಮಹಿಮಾಭರಿತ ಪರದೈಸದ ಮೂಲಕ ನಡಿಸುತ್ತದೆ. ಒಂದು ಸುಖಕರವಾದ ಪ್ರಯಾಣಕ್ಕೆ ಎಲ್ಲವೂ ಹಿತಕರವಾಗಿದೆ. ಆದರೆ ಪಕ್ಕದ ಒಂದು ಅಗಲವಾದ ದಾರಿಯಲ್ಲಿ “ಅಪಾಯ—ಪ್ರವೇಶಿಸಬೇಡಿರಿ” ಎಂಬ ಸಂಜ್ಞೆಯನ್ನು ಅವರು ಕಾಣುತ್ತಾರೆ. ಕುತೂಹಲ ಮತ್ತು ಒಂದು ಸ್ವತಂತ್ರತೆಯ ಭಾವವು ಅವರನ್ನು ಸೋಲಿಸುತ್ತದೆ. ಅವರು ಆ ದಾರಿಯನ್ನು ಪ್ರವೇಶಿಸುತ್ತಾರೆ ಮತ್ತು ಹೆದ್ದಾರಿಯಿಂದ ದೂರ, ಅತಿದೂರ ಸಂಚರಿಸುತ್ತಾರೆ. ಕಟ್ಟಕಡೆಗೆ, ಒಂದು ಕಡಿದಾದ ಇಳಿಜಾರು ಇತ್ತು. ಅವರೀಗ ಹತೋಟಿತಪ್ಪಿ ಪ್ರಯಾಣ ಮಾಡುತ್ತಿದ್ದಾರೆ. ಹಿಂದಕ್ಕೆ ಹೆದ್ದಾರಿಗೆ ಅವರಿಗೆ ಹೋಗಲು ಅಸಾಧ್ಯ. ಬ್ರೇಕ್‌ ತಪ್ಪಿಹೋಗಿದೆ. ನಿಲ್ಲಿಸುವ ಯಾವ ದಾರಿಯೂ ಇಲ್ಲ. ಅವರು ವೇಗವಾಗಿ ರಭಸದಿಂದ ಇಳಿಜಾರಿಗೆ ದುಮುಕುತ್ತಿದ್ದಾರೆ. ಕೊನೆಗೆ ಒಂದು ಪ್ರಪಾತದ ಮೇಲಿನಿಂದ ಅವರ ವಿನಾಶಕ್ಕೆ ಅಪ್ಪಳಿಸಲ್ಪಡುತ್ತಾರೆ.

22 ಮಾನವಕುಲದವರ ವಿಷಯದಲ್ಲಿಯೂ ಇದೇ ರೀತಿ ಇದೆ ಎಂದು ಬೈಬಲು ತೋರಿಸುತ್ತದೆ. ಮೊದಲನೆಯ ಮನುಷ್ಯನಿಗಾಗಿ ಏದೆನ್‌ ತೋಟದಲ್ಲಿ ದೇವರು ಒಂದು “ದಾರಿ ಸಂಜ್ಞೆ”ಯನ್ನಿಟ್ಟಿದ್ದನು: ‘ನೀವು ಈ ಒಂದು ಮರದ ಹಣ್ಣನ್ನು ತಿನ್ನಬಾರದು.’ ಆ ಸರಳವಾದ ಆಜ್ಞೆಯನ್ನು ವಿಧೇಯತೆಯಿಂದ ಪಾಲಿಸುವ ಮೂಲಕ ದೇವರಿಗೆ ತಮ್ಮ ಪ್ರೀತಿಯನ್ನು ತೋರಿಸುವಂತೆ ಆ ಪುರುಷ ಮತ್ತು ಅವನ ಪತ್ನಿಯಿಂದ ಕೇಳಿಕೊಳ್ಳಲ್ಪಟ್ಟಿತ್ತು. ಆದರೆ ಹಾಗೆ ಮಾಡಲು ಅವರು ತಪ್ಪಿದರು. ಅವರು ಹೆದ್ದಾರಿಯನ್ನು ಪೂರ್ಣವಾಗಿ ಸ್ವಇಚ್ಛೆಯಿಂದ ತೊರೆದು ಬಿಟ್ಟು, ದೇವರ ತೀರ್ಪಿನ ಕೆಳಗೆ ಮರಣ ಮತ್ತು ನಾಶಕ್ಕೆ ನಡಿಸುವ ಪಾಪದ ರಸ್ತೆಯನ್ನು ಪ್ರವೇಶಿಸಿದರು. ರೋಮಾಪುರದವರಿಗೆ 5:12 ರಲ್ಲಿ ನಾವು ಓದುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು. ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” ಹೀಗೆ, ನಾವು ಅವಿಧೇಯ ಆದಾಮನ ಸಂತತಿಯವರಾದ ಕಾರಣ, ಮಾನವ ಕುಟುಂಬದ ಹೆತ್ತವರು ಪರದೈಸದಲ್ಲಿ ಆನಂದಿಸಿದ ಪರಿಪೂರ್ಣತೆಯಿಂದ ದೂರ ತೊಲಗಿದವರಾಗಿ ಈ ಅಹಿತಕರವಾದ ರಸ್ತೆಯಲ್ಲಿ ನಾವೆಲ್ಲರೂ ಪ್ರಯಾಣ ಮಾಡಬೇಕಾಗಿ ಬಂದಿದೆ. ಆ ರಸ್ತೆಯು ಇತ್ತೀಚಿಗಿನ ವರ್ಷಗಳಲ್ಲಿ ಅದೆಷ್ಟು ಉಬ್ಬುಗಳುಳ್ಳದ್ದೂ ಅಹಿತಕಾರಿಯೂ ಆಗಿ ಪರಿಣಮಿಸಿದೆ! ಅದು ಅಗಲವಾದ ಹಾಗೂ ಏಕ ದಿಕ್ಕಿನಲ್ಲಿ ಮಾತ್ರ ಸಂಚರಿಸಲವಕಾಶವಿರುವ ರಸ್ತೆಯಾಗಿದೆ, ಮತ್ತು ಹಿಂದಿರುಗುವ ಮಾರ್ಗವನ್ನು ತೋರಿಸಲು ಲೋಕದ ಯಾವ ರಾಜನೀತಿಜ್ಞನಾಗಲಿ ವಿವೇಕಿಯಾಗಲಿ ಶಕ್ತರಾಗಿಲ್ಲ. ಅದರಲ್ಲಿರುವ ಪ್ರತೀ ವ್ಯಕ್ತಿಗೆ, ರಸ್ತೆಯ ಕೊನೆಯು ಮರಣವೇ. ಮತ್ತು ಮಾನವಕುಲದ ಇಡೀ ಲೋಕದ ನಾಶನವು ನಿಶ್ಚಿತ ಸಂಭವನೀಯವಾಗಿ ಪರಿಣಮಿಸಿದೆ.

23, 24. (ಎ) ಯೋಹಾನ 14:6 ರ ಅರ್ಥವೇನು, ಮತ್ತು ಅದು ಯೇಸುವಿನ ವಿಷಯದಲ್ಲಿ ಹೇಗೆ ಸತ್ಯವಾಗಿದೆ? (ಬಿ) ಆ ಹೆದ್ದಾರಿಗೆ ಮರಳುವುದಕ್ಕೆ ನಿಮಗೆ ಅದು ಹೇಗೆ ಪ್ರಯೋಜನಕಾರಿಯಾಗುವುದು? (ಯೋಹಾನ 3:16)

23 ಆದರೆ, ನೋಡಿರಿ! ಬೆಳಕಿನ ಕಿರಣವೊಂದು ಪಕ್ಕದ ದಾರಿಯೊಂದರ ಮೇಲೆ ಬೆಳಗುತ್ತಿದೆ, ಅದು ಅಗಲವಾದ ಮಾರ್ಗದಿಂದ ಹಿಂದೆ ಹೆದ್ದಾರಿಗೆ ನಡಿಸುವ ಅಗಲಕಿರಿದಾದ ರಸ್ತೆಯಾಗಿದೆ. ಮೊದಲ ದೃಷ್ಟಿಗೆ ಅದು ಬಹಳ ಇಕ್ಕಟ್ಟಾಗಿ ಕಂಡು ಬರುತ್ತದೆ. ಅದರೊಳಗೆ ತೆರಳಲು ಕಷ್ಟಕರವಾಗಿರುವುದು. ಅಗಲವಾದ ರಸ್ತೆಯ ಇಳಿಜಾರಿಗೆ ಈಗ ತಿಳಿಗೇಡಿತನದಿಂದ ಧಾವಿಸುತ್ತಿರುವ ಜನರ ದೊಡ್ಡ ಕುಟುಂಬವು ಕಿರಿದಾದ ಮಾರ್ಗವನ್ನು ದುರ್ಲಕ್ಷಿಸಲು ಆಯ್ದುಕೊಳ್ಳುತ್ತಾರೆ. ಜನಸಂದಣಿಯೊಂದಿಗೆ ಮುಂದರಿಯುವುದಕ್ಕೆ ಅವರು ಇಷ್ಟ ಪಡುತ್ತಾರೆ. ಅಧಿಕ ಸಂಖ್ಯಾತರಾದ ಜನರು ಈ ಅಗಲವಾದ ದಾರಿಯಲ್ಲಿರುವುದು, ತಮ್ಮ ಅನುಕೂಲತೆಗಳಿಗಾಗಿ ಹಾಗೂ ಅದು ಒದಗಿಸುವ ತಾತ್ಕಾಲಿಕ ರೋಮಾಂಚನೆಗಳಿಗಾಗಿ. ಮುಂದಿರುವ ಅಪಾಯದ ಕುರಿತಾದ ಅಧಿಕ ಎಚ್ಚರಿಕೆಗಳಿಗೆ ಅವರು ಯಾವ ಲಕ್ಷ್ಯವನ್ನೂ ಕೊಡುವುದಿಲ್ಲ. ಆದರೆ ಕೆಲವು ಎಚ್ಚರವುಳ್ಳ ಜನರು ಕಿರಿದಾದ ಮಾರ್ಗದೊಳಗೆ ತಿರುಗುತ್ತಿದ್ದಾರೆ. ಅದು ಅವರಿಗೆ ಸ್ವಲ್ಪ ಕಷ್ಟಾನುಭವಗಳನ್ನು ನೀಡುತ್ತದೆ, ಮತ್ತು ಅವರು ಎಚ್ಚರದಿಂದಿರಬೇಕಾಗುತ್ತದೆ, ಆದರೆ ತಕ್ಕ ಕಾಲದಲ್ಲಿ ಅದು ಪ್ರಯಾಣಕ್ಕೆ ಸುಖಕರವಾಗಿ ಪರಿಣಮಿಸುತ್ತದೆ. ಮತ್ತು ಕೊನೆಗೆ ಅದು ಅವರನ್ನು ಸಮೃದ್ಧಿಯ ಪುನಃ ಸ್ಥಾಪಿತ ಪರದೈಸಕ್ಕೆ ನಡಿಸುತ್ತದೆ. ಆ ಉಲ್ಲಾಸಕರವಾದ ಶಾಂತಿಭರಿತ ಪರದೈಸದ ಸೌಂದರ್ಯಾದಿಗಳಿಂದ ತಮ್ಮ ಕಣ್ಣುಗಳನ್ನು ಸಂತೃಪ್ತಿಗೊಳಿಸುವುದು ಅವರಿಗೆಷ್ಟು ಹಿತಕರವಾಗಿದೆ!

24 ಪುನಃ, ಬೈಬಲು ತೋರಿಸುವ ಪ್ರಕಾರ, ಮಾನವ ಕುಟುಂಬದ ಸಂಬಂಧದಲ್ಲಿ ವಿಷಯವು ಹೀಗೆಯೇ ಇದೆ. ಅಧಿಕ ಸಂಖ್ಯಾತರು ತಮ್ಮ ಸ್ವಾತಂತ್ರ್ಯಕ್ಕಾಗಿ ತಗಾದೆಮಾಡಿ, ನಾಶಕ್ಕೆ ನಡಿಸುವ ಅಗಲವಾದ ದಾರಿಯಲ್ಲಿ ಜನಸಂದಣಿಯೊಂದಿಗೆ ಹೋಗುತ್ತಿರುವಾಗ, ಹಿಂತಿರುಗುವ ಮಾರ್ಗವೊಂದು ತೆರೆಯಲ್ಪಟ್ಟಿದೆ. ದೇವಕುಮಾರನಾದ ಯೇಸುವು ಈ ಭೂಮಿಯಲ್ಲಿರುವಾಗ ಇದಕ್ಕೆ ಗಮನವನ್ನು ಸೆಳೆಯುತ್ತಾ ಅಂದದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ.” (ಯೋಹಾನ 14:6) ಯೇಸುವು ಭೂಮಿಯಲ್ಲಿ ದೇವರ ಚಿತ್ತವನ್ನು ನಂಬಿಗಸತ್ತೆಯಿಂದ ಮಾಡಿದ್ದರಿಂದ, ಮಾನವ ಕುಟುಂಬದ ನಿಮಿತ್ತವಾಗಿ ತನ್ನ ಜೀವವನ್ನು ಬಲಿತೆತ್ತದ್ದರಿಂದ ದೇವರು ಆತನನ್ನು “ಜೀವದ ಮುಖ್ಯ ಕಾರ್ಯಭಾರಿ” ಯಾಗಿರುವಂತೆ ನೇಮಿಸಿದ್ದಾನೆ. “ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವುದಕ್ಕೋಸ್ಕರ” ಮತ್ತು ದೇವರ ಉದ್ದೇಶಗಳನ್ನು ಪ್ರಕಟಪಡಿಸುವುದಕ್ಕೋಸ್ಕರ ಸಹ ಆತನು ಲೋಕದೊಳಗೆ ಬಂದಿದ್ದನು. (ಅ. ಕೃತ್ಯಗಳು 3:15; ಯೋಹಾನ 18:37) ದೇವರ ಭೂಪರದೈಸದಲ್ಲಿ ಸಂತಸದ ಜೀವಿತವನ್ನು ಪೂರ್ಣವಾಗಿ ಆನಂದಿಸುವುದಕ್ಕೆ ನಡಿಸುವಂಥಾ ಸುಂದರವಾದ ಹೆದ್ದಾರಿಗೆ ಮರಳುವ ಮಾರ್ಗವನ್ನು ಮಾನವ ಕುಟುಂಬದ ಸದಸ್ಯರಿಗೆ ತೋರಿಸ ಶಕ್ತನಾಗಿರುವಾತನು ಆತನೊಬ್ಬನೇ.

25. ಪರದೈಸ ಭೂಮಿಯಲ್ಲಿ ಜೀವಿತವು ಅತ್ಯಂತ ಅಪೇಕ್ಷಣೀಯವಾಗಿರುವುದೇಕೆ? (ಪ್ರಕಟನೆ 21:3, 4)

25 ಪರಿಪೂರ್ಣ ಸೌಖ್ಯ ಮತ್ತು ಸಂತೋಷದಲ್ಲಿ ನಿರಂತರವೂ ಜೀವಿಸುವ ಪ್ರತೀಕ್ಷೆಯೊಂದಿಗೆ ಮಹಿಮೆಯುಳ್ಳದ್ದಾಗಿ ಮಾಡಲ್ಪಟ್ಟ ಭೂಮಿಯೊಂದನ್ನು ಪ್ರವೇಶಿಸುವ ಅಂಥ ಹೆದ್ದಾರಿಯಲ್ಲಿ ಪ್ರಯಾಣ ಮಾಡಲು ನೀವು ಇಷ್ಟಪಡಲಾರಿರೋ? ನಿಜವಾಗಿಯೂ ಆ ರೀತಿಯ ಜೀವನಕ್ಕೆ ಅಧಿಕ ಹೆಚ್ಚಿನದ್ದು ಇರುತ್ತದೆ!

26. ನೀವು ನಿಜವಾಗಿಯೂ ಸತ್ಯವನ್ನು ಕಲಿಯುವುದು ಎಷ್ಟು ಮಹತ್ವವುಳ್ಳದ್ದಾಗಿದೆ? (ಯೋಹಾನ 8:31, 32)

26 ದೇವರು ನೇಮಿಸಿದ ಜೀವದ ಮುಖ್ಯ ಕಾರ್ಯಭಾರಿಯಲ್ಲಿ ನಂಬಿಕೆಯನ್ನಿಡುವ ಮೂಲಕ ಆ ಜೀವಕ್ಕೆ “ಮಾರ್ಗ”ವನ್ನು ನಾವು ಕಂಡುಕೊಳ್ಳಸಾಧ್ಯವಿದೆ. ಜೀವನಕ್ಕೆ ಉದ್ದೇಶವಿರುವಾಗ, ಮತ್ತು ಭವಿಷ್ಯತ್ತಿನೊಳಗೆ ದೀರ್ಘಕಾಲ ವಿಸ್ತರಿಸುವ ಸಂತೃಪ್ತಿಕರವೂ ಫಲದಾಯಕವೂ ಆದ ಜೀವನದ ದೃಢ ನಿರೀಕ್ಷೆಯಿರುವಾಗ ಜೀವಿತವು ಅದೆಷ್ಟೋ ಬೇರೆಯಾಗಿದೆ. ಮತ್ತು ನಾವು ಆ ನಿರೀಕ್ಷೆಯನ್ನು ಹೇಗೆ ಸಿದ್ಧಿಸಿಕೊಳ್ಳಬಹುದು? ತನ್ನ ತಂದೆಗೆ ಪ್ರಾರ್ಥನೆಯಲ್ಲಿ ಯೇಸು ತಾನೇ ಉತ್ತರಿಸಿದ್ದು: “ಒಬ್ಬನೇ ಸತ್ಯದೇವರಾದ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನು ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಸಿಸುವ ಮೂಲಕ ಸತ್ಯವನ್ನು ನಾವು ಕಲಿಯಬಲ್ಲೆವು; ಮತ್ತು ಅದನ್ನು ನಿತ್ಯವೂ ಅನ್ವಯಿಸಿಕೊಳ್ಳುವ ಮೂಲಕ, ನಾವೀಗ ಸಹ ನಿಜವಾಗಿಯೂ ಜೀವಿಸುವುದಕ್ಕಾರಂಭಿಸಬಲ್ಲೆವು!

ನಿಮ್ಮ ಜೀವಿತದ ಮೇಲೆ ಪ್ರಭಾವ ಬೀರುವ ಲೋಕ ಪರಿಸ್ಥಿತಿಗಳು

27. ನಾವಿಂದು ಯಾವ ಪರಿಸ್ಥಿತಿಯಲ್ಲಿ ನಮ್ಮನ್ನು ಕಂಡುಕೊಳ್ಳುತ್ತೇವೆ? (2 ತಿಮೊಥೆಯ 3:1)

27 ಲೋಕ ಪರಿಸ್ಥಿತಿಗಳು ಕೆಡುತ್ತಾ ಬರುತ್ತಿವೆಂಬುದನ್ನು ಒಪ್ಪತಕ್ಕದ್ದೇ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಬಡತನ ಮತ್ತು ದುಷ್ಕರ್ಮಗಳು ವೃದ್ಧಿಯಾಗುತ್ತಾ ಇವೆ. ನೀವೆಲ್ಲಿಯೇ ಜೀವಿಸಿರಿ, ನೀವು ನಿಮ್ಮ ರೊಟ್ಟಿಗಾಗಿ ಅಧಿಕ ಹಣ ತೆರುತ್ತೀರಿ, ಮಾಂಸಕ್ಕಾಗಿ ಹೆಚ್ಚು ಬೆಲೆ ಕೊಡುತ್ತೀರಿ, ಬರೇ ಜೀವಿತರಾಗಿ ಉಳಿಯುವುದಕ್ಕೆ ಖರ್ಚು ಏರುತ್ತಿದೆ. ಅನೇಕ ಸ್ಥಳಗಳಲ್ಲಿ ಪುಂಡಾಟವು ಬೀದಿಗಳಲ್ಲಿ ತಿರುಗುತ್ತಿದೆ. ಅಧಿಕ ಹಿಂಸಾತ್ಮಕ ಕೃತ್ಯ ಮತ್ತು ಯುದ್ಧ ಸಹ ಯಾವುದೇ ಸಮಯದಲ್ಲಿ ಸ್ಫೋಟಿಸಬಹುದಾಗಿ ತೋರುತ್ತಿದೆ. ಮಾನವಕುಲವು ನಾಶದ ಮಾರ್ಗದ ಕೆಳಗೆ ಕೊನೆಯ ದುಮುಕುವಿಕೆಯನ್ನು ಮಾಡುತ್ತದೋ ಎಂಬಂತೆ ಕಾಣುತ್ತದೆ.

28. ತೊಂದರೆಯೆಲ್ಲಾದರ ಹಿಂದುಗಡೆ ಯಾರಿದ್ದಾನೆ, ಮತ್ತು ಅವನ ಹೇತುವೇನು? (2 ಕೊರಿಂಥ 4:4)

28 ಇವೆಲ್ಲವುಗಳ ಹಿಂದಿರುವ ಶಕ್ತಿಯು ಯಾವುದು? ಅದು “ಭೂಲೋಕದವರನ್ನೆಲ್ಲಾ ಮರಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ವಾದ ಒಂದು ದುಷ್ಟ ಆತ್ಮಿಕ ವ್ಯಕ್ತಿಯಾಗಿದೆ. ರಾಷ್ಟ್ರ ವ್ಯವಹಾರ ನಿರ್ವಹಣೆಗಳ ಹಿಂದಿರುವ ಸೂತ್ರಚಾಲಕನು ಅವನಾಗಿದ್ದಾನೆ. ಆದರೂ, ಸೈತಾನನ ಅಧಿಕಾರವನ್ನು ಸ್ವರ್ಗೀಯ ರಾಜ್ಯದ ಮೂಲಕ ಮಾನವಕುಲದ ಮೇಲೆ ಕ್ರಿಸ್ತನ ಸುಸಂಗತವಾದ ಪ್ರೀತಿಯುಳ್ಳ ಆಳಿಕೆಯಿಂದ ಸ್ಥಾನಪಲ್ಲಟಗೊಳಿಸುವುದಕ್ಕೆ ದೇವರ ಕ್ಲುಪ್ತ ಕಾಲವು ಈಗ ಬಂದಿದೆ. ಜೀವವನ್ನು ಪ್ರೀತಿಸುವವರನ್ನು ಮರಳಿ ಹೆದ್ದಾರಿಗೆ ಕರತಂದು ನಿತ್ಯಜೀವವನ್ನು ಸಂತೋಷದಲ್ಲಿ ಆನಂದಿಸುವಂತೆ ಮಾಡುವುದಕ್ಕೆ ಇದು ಆತನ ಸಮಯವಾಗಿದೆ. ಆದರೆ ಸೈತಾನನು ಸ್ಥಾನ ಬಿಟ್ಟುಕೊಡಲು ನಿರಾಕರಿಸುತ್ತಾನೆ. ಆದಕಾರಣ ಇಂದು ಇದು “ಭೂಮಿಗೆ ದುರ್ಗತಿಯಾಗಿದೆ”, ಯಾಕಂದರೆ “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.” (ಪ್ರಕಟನೆ 12:9, 12) ಅವನ ಹೇತುವು ಮಾನವಕುಲವನ್ನು ನಾಶನಕ್ಕೆ ದುಮುಕಿಸುವುದೇ ಆಗಿದೆ.

29. ಈ ಕಾಲಕ್ಕಾಗಿ ದೇವರ ಉದ್ದೇಶವು ಏನು? (ಕೀರ್ತನೆ 37:9-11)

29 ಆ ವಿಷಯದಲ್ಲಿ ಯಾವ ಸಂದೇಹವೂ ಇಲ್ಲ! ಇಂದು ಭೂಮಿಯಲ್ಲಿ ನೀವೆತ್ತ ನೋಡಿದರೂ “ಲೋಕವೆಲ್ಲವೂ ಕೆಡುಕನ”, ಸೈತಾನನ “ವಶದಲ್ಲಿ ಬಿದಿದ್ದೆ” ಎಂಬದಕ್ಕೆ ಪುರಾವೆಯು ತೋರಿಬರುತ್ತದೆ. (1 ಯೋಹಾನ 5:19) ಆದರೆ ಸೈತಾನನು ತನ್ನ ದುರುದ್ದೇಶದಲ್ಲಿ ಸಫಲಗೊಳ್ಳುವಂತೆ ದೇವರು ಬಿಡಲಾರನು! ನಿಜ, ಈ ಲೋಕ ಸಮಾಜದ ನಾಶನವು ಸನ್ನಿಹಿತವಾಗಿದೆ. ಆದರೆ ದೇವರು ಜೀವಗಳನ್ನು ರಕ್ಷಿಸಲು ಉದ್ದೇಶಿಸುತ್ತಾನೆ. ಬೈಬಲಿನಲ್ಲಿ ಬರೆಯಲ್ಪಟ್ಟಿರುವ ಪ್ರವಾದನೆಗಳಲ್ಲಿ, ಆತನಿದನ್ನು ಮಾಡುವುದು ಹೇಗೆಂಬದನ್ನು ತೋರಿಸಿದ್ದಾನೆ.

ಜೀವಗಳನ್ನು ರಕ್ಷಿಸಲು ಬೈಬಲ್‌ ಪ್ರವಾದನೆಯು ಸಹಾಯ ಮಾಡುವ ವಿಧ

30. ನಮ್ಮ ದಿನಗಳ ಕುರಿತಾದ ಬೈಬಲ್‌ ಪ್ರವಾದನೆಗಳು ನೆರವೇರಲಿವೆಂಬ ಭರವಸ ನಿಮಗಿರ ಸಾಧ್ಯವಿದೆಯೇಕೆ? (2 ಪೇತ್ರ 1:19-21; ದಾನಿಯೇಲ 9:24-27)

30 ಬೈಬಲಿನ ಅನೇಕ ಪ್ರವಾದನೆಗಳು ಈ ಮೊದಲೇ ಗಮನಾರ್ಹವಾದ ನೆರವೇರಿಕೆಗಳನ್ನು ಪಡೆದಿವೆ. ಉದಾಹರಣೆಗೆ, ಯೇಸುವು ಈ ಭೂಮಿಗೆ ಆಗಮಿಸುವ ನೂರಾರು ವರ್ಷಗಳ ಮುಂಚಿತವಾಗಿ, ಆತನ ಸಾರುವ ಚಟುವಟಿಕೆಯು—ಸಾ.ಶ. 29 ರಿಂದ 33ರ ತನಕ ನಡೆಯುವುದೆಂಬ ಸರಿಯಾದ ತಾರೀಖುಗಳನ್ನು ಮಾತ್ರವೇ ಅಲ್ಲ ಆತನ ಜೀವನ ಮತ್ತು ಮರಣದ ಹಲವಾರು ವಿವರಣೆಗಳನ್ನು ಈ ಪ್ರವಾದನೆಗಳು ನೀಡಿದ್ದವು. ಈ ಎಲ್ಲಾ ಸಂಗತಿಗಳು ನೆರವೇರಿದವು. ಯೇಸುವು ತಾನೇ ಕೆಲವೊಂದು ಪ್ರಾಮುಖ್ಯವಾದ ಪ್ರವಾದನೆಗಳ ಕುರಿತು ಮಾತಾಡಿದನು. ಇವುಗಳಲ್ಲೊಂದು ಈ “ಯುಗದ ಸಮಾಪ್ತಿ”ಯ ಕುರಿತಾಗಿ ಅದೆ. ಒಂದನೇ ಶತಮಾನದ ಯೆಹೂದಿ ವ್ಯವಸ್ಥೆಯ ಮೇಲೆ ಅದು ಒಂದು ಗಮನಾರ್ಹವಾದ ನೆರವೇರಿಕೆಯನ್ನು ಪಡೆದಿತ್ತು.

31, 32. ಸಾ.ಶ. 70 ರಲ್ಲಿ ಪ್ರವಾದನೆಯು ಜೀವರಕ್ಷಣೆಗೆ ಹೇಗೆ ಸಹಾಯ ಮಾಡಿತು? (ಲೂಕ 21:20-24)

31ಮತ್ತಾಯ 24:3, 15-22 ಕ್ಕನುಸಾರವಾಗಿ, ಯೆರೂಸಲೇಮು “ಅಸಹ್ಯ ವಸ್ತು” ವಾದ ರೋಮ್‌ ಸಾಮ್ರಾಜ್ಯದ ಸೇನೆಯಿಂದ ಮುತ್ತಲ್ಪಡುವುದೆಂದು ಯೇಸು ನಿರ್ದೇಶಿಸಿದನು. ಕ್ರೈಸ್ತರು ಇದನ್ನು ಕಂಡಾಗ “ಬೆಟ್ಟಗಳಿಗೆ ಓಡಿಹೋಗು” ವುದಕ್ಕೆ ತೊಡಗುವಂತೆ ಆತನು ತನ್ನ ಪ್ರವಾದನೆಯಲ್ಲಿ ನುಡಿದಿದ್ದನು. ಮೂವತ್ತನಾಲ್ಕು ವರ್ಷಗಳ ಅನಂತರ, ಆ ಸೇನೆಗಳು ನಿಜವಾಗಿ ಬಂದಾಗ, ಅವು ಯೇಸುವಿನ ಪ್ರವಾದನೆಯ ಅನೇಕ ವೈಶಿಷ್ಠ್ಯಗಳನ್ನು ನೆರವೇರಿಸಿದವು, ಅವುಗಳಲ್ಲಿ “ಪಟ್ಟಣಕ್ಕೆ ಒಡ್ಡುಕಟ್ಟಿ ಸುತ್ತಲೂ ಮುತ್ತಿಗೆ” ಹಾಕಿದ್ದು ಮತ್ತು ಯೆರೂಸಲೇಮಿನ ದೇವಾಲಯದ ಪಶ್ಚಿಮ ಗೋಡೆಯ ತನಕ ತೂರಿಕೊಂಡು “ಪವಿತ್ರ ಸ್ಥಾನ”ದಲ್ಲಿ ನಿಂತದ್ದು ಮುಂತಾದವುಗಳು ಸೇರಿವೆ. (ಲೂಕ 19:43; ಮತ್ತಾಯ 24:15) ಆದರೆ ಈ ಅಸಾಧ್ಯವಾಗಿ ತೋರುತ್ತಿದ್ದ ಪರಿಸ್ಥಿತಿಯಲ್ಲಿ ಕ್ರೈಸ್ತರು ಪಟ್ಟಣವನ್ನು ತೊರೆಯುವುದು ಹೇಗೆ ಸಾಧ್ಯ?

32 ಇದ್ದಕ್ಕಿದ್ದ ಹಾಗೆ, ಯಾವುದೇ ಕಾರಣರಹಿತವಾಗಿ, ರೋಮನ್‌ ಸೇನೆಗಳು ಮುತ್ತಿಗೆಯನ್ನು ಹಿಂದಕ್ಕೆಳೆದುಕೊಂಡವು! ಯೇಸುವಿನ ಆಜ್ಞೆಗೆ ವಿಧೇಯತೆಯಲ್ಲಿ, ಕ್ರೈಸ್ತರು ತಮ್ಮ ಪ್ರಾಣ ರಕ್ಷಣೆಗಾಗಿ ಯೊರ್ದನ್‌ ನದಿಯ ಆಚೆಕಡೆಯ ಬೆಟ್ಟಗಳಿಗೆ ಈಗ ಪಲಾಯನಗೈಯ ಶಕ್ತರಾದರು. ತದನಂತರ ಸಾ.ಶ. 70 ರಲ್ಲಿ ರೋಮೀಯ ಸೇನೆಗಳು ಜನರಲ್‌ ಟೈಟಸನ ಕೈಕೆಳಗೆ ಪುನಃ ಹಿಂದಿರುಗಿ ಬಂದು ಯೆರೂಸಲೇಮನ್ನೂ, ಅದರ ದೇವಾಲಯವನ್ನೂ ಧ್ವಂಸಗೊಳಿಸಿದವು. ಮುತ್ತಿಗೆ, ಬರ ಮತ್ತು ಕತ್ತಿಯು 11,00,000 ರಾಷ್ಟ್ರೀಯಭಾವದ ಯೆಹೂದ್ಯರನ್ನು ಬಲಿ ತಕ್ಕೊಂಡಿತೆಂದೂ 97,000 ಮಂದಿಯನ್ನು ಬಂಧಿಸಿ ಗುಲಾಮರನ್ನಾಗಿ ಒಯ್ಯಲಾಯಿತೆಂದೂ ಇತಿಹಾಸಕಾರ ಜೊಸೀಫಸನು ತಿಳಿಸಿದ್ದಾನೆ. ಆದರೆ ಬೈಬಲ್‌ ಪ್ರವಾದನೆಗೆ ವಿಧೇಯರಾಗುವ ಮೂಲಕ ಯಾರು ನಿಜವಾಗಿ ಜೀವವನ್ನು ಪ್ರೀತಿಸಿದರೋ ಅವರು ತಮ್ಮ ಜೀವಗಳೊಂದಿಗೆ ಪಾರಾದರು!

33. ಇಂದಿನ ಯಾವ ಪರಿಸ್ಥಿತಿಯು ಯೆಹೂದಿ ವ್ಯವಸ್ಥೆಯ ಕೊನೆಯ ದಿನಗಳಿಗೆ ಸಮರೂಪವಾಗಿದೆ? (ಲೂಕ 21:25, 26)

33 ಯೇಸುವು ಒಂದನೇ ಶತಕಕ್ಕಾಗಿ ಮುಂತಿಳಿಸಲ್ಪಟ್ಟ ಈ ಘಟನೆಗಳನ್ನು ಸಾ.ಶ. 1914 ರಂದಿನಿಂದ ಮುಂದೆ ಇದೇ ಸಂತತಿಯಲ್ಲಿ ಇನ್ನೂ ಸಂಭವಿಸಲಿಕ್ಕಿರುವ ಲೋಕಕಂಪನ ಸಂಭವಗಳಿಗೆ ಮಾದರಿರೂಪವಾಗಿ ಉಪಯೋಗಿಸಿದ್ದನು. ಇಂದು ಸಹ ಜೀವಗಳನ್ನು ರಕ್ಷಿಸುವ ಅಗತ್ಯವಿದೆ! ಯಾಕಂದರೆ ನಾವೀಗ ಸೈತಾನನ ಅಧಿಕಾರದ ಕೆಳಗಿರುವ ಇಡೀ ಲೋಕ ವ್ಯವಸ್ಥೆಯ “ಯುಗದಸಮಾಪ್ತಿ”ಯ ಸಮಯಕ್ಕೆ ಆಗಮಿಸಿದ್ದೇವೆ. ವಿಷಯವು ಹೀಗಿದೆಯೆಂಬದಾಗಿ 1914 ರಿಂದ ನಡೆದ ಘಟನೆಗಳು ಎಷ್ಟು ಸ್ಪಷ್ಟವಾಗಿಗಿ ರುಜುಪಡಿಸುತ್ತವೆ! ಯೇಸುವಿನ ಪ್ರವಾದನೆಯ ಕೊನೆಯ ನೆರವೇರಿಕೆಯಲ್ಲಿ, ಆ ವರ್ಷವು 1ನೇ ಲೋಕಯುದ್ಧದ ರಕ್ತಸ್ನಾನದಲ್ಲಿ ‘ಜನಾಂಗಕ್ಕೆ ವಿರೋಧವಾಗಿ ಜನಾಂಗವು’ ಎದ್ದಾಗ “ವೇದನೆಯ ಪ್ರಾರಂಭ” ವನ್ನು ಕಂಡಿತು. ಮುಂತಿಳಿಸಿದ ಪ್ರಕಾರವೇ, “ಮಹಾ ಭೂಕಂಪಗಳು  . . . ಬರಗಳು ಮತ್ತು ಸೋಂಕು ರೋಗಗಳು” ಅದನ್ನು ಹಿಂಬಾಲಿಸಿದವು. ಒಂದನೆಯದ್ದಕ್ಕಿಂತಲೂ ಎಷ್ಟೋ ಅಧಿಕ ಭೀಕರವಾದ ಎರಡನೇ ಲೋಕಯುದ್ಧವು ಆರಂಭವಾಯಿತು, ಮತ್ತು “ಅಧರ್ಮವು ಹೆಚ್ಚಾಗುತ್ತಾ” ಬಂದು ಇಂದು ಲೋಕವನ್ನು ಬಾಧಿಸುತ್ತಿದೆ. (ಮತ್ತಾಯ 24:7-13; ಲೂಕ 21:10, 11) ಜನಾಂಗಗಳು ಕ್ಷೋಭೆಗೊಂಡಿವೆ. ಅವರಲ್ಲಿ ಯಾರಿಗೂ ಪಾರಾಗುವ ಮಾರ್ಗವು ತಿಳಿದಿರುವುದಿಲ್ಲ.

34. ಜೀವಗಳನ್ನು ರಕ್ಷಿಸುವುದಕ್ಕಾಗಿ ದೇವರು ಹೇಗೆ ಕ್ರಿಯೆಗೈಯುತ್ತಾನೆ? (ದಾನಿಯೇಲ 2:44)

34 ಆದರೆ ದೇವರಿಗೆ ತಿಳಿದಿದೆ! ಭೂಮಿಯ ಸ್ವಾರ್ಥಿ ರಾಜ್ಯಗಳಿಗೆ ಅಥವಾ ಜನಾಂಗಗಳಿಗೆ ತನ್ನ ತೀರ್ಪಿನ ಕುರಿತು ಮಾತಾಡುತ್ತಾ, “ಎಂದಿಗೂ ಅಳಿಯದ ಒಂದು ರಾಜ್ಯವನ್ನು” ಸ್ಥಾಪಿಸುವನೆಂದೂ ಮತ್ತು ಅದು “ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡು” ವದೆಂದೂ ದೇವರು ಪ್ರಕಟಪಡಿಸಿದ್ದಾನೆ. (ದಾನಿಯೇಲ 2:44) ಅನಂತರ ಅದು ಶಾಂತಿಭರಿತ ಪರಿಸ್ಥಿತಿಗಳ ಕೆಳಗೆ ಯೇಸುವಿನ ರಾಜ್ಯದ ಆಳಿಕೆಯನ್ನು ಸ್ವೀಕರಿಸಿದವರೆಲ್ಲರ ಮೇಲೆ ಜೀವದ ದಾನಮಾಡುವುದು. ಜೀವಾನ್ವೇಶಿಗಳಾದ ಅಂಥ ಜನರೆಲ್ಲರ ಸಹಾಯಕ್ಕಾಗಿ, ನಿಜ ಕ್ರೈಸ್ತರು ಯೇಸುವಿನ ಮಹಾ ಪ್ರವಾದನೆಯ ಅಧಿಕ ಭಾಗದ ನೆರವೇರಿಕೆಯಲ್ಲಿ ಒಂದು ಜೀವರಕ್ಷಕ ಕಾರ್ಯದಲ್ಲಿ ಇಂದು ಭಾಗವಹಿಸುತ್ತಾರೆ: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು.”—ಮತ್ತಾಯ 24:14.

35. (ಎ) ಯಾವಾಗ ಮತ್ತು ಹೇಗೆ ಅಂತ್ಯವು ಬರುವುದು? (ಬಿ) ಪ್ರವಾದನೆಗೆ ಕಿವಿಗೊಡುವುದು ನಿಮಗೆ ಹೇಗೆ ಪ್ರಯೋಜನಕಾರಿಯಾಗಬಹುದು? (ಲೂಕ 21:34-36)

35 ಯಾವಾಗ “ಅಂತ್ಯವು ಬರುವದು” ಎಂದು ತಿಳಿಯುವುದರಲ್ಲಿ ನಿಶ್ಚಯವಾಗಿ ನಾವು ಅತ್ಯಾಸ್ತಕರಾಗಿದ್ದೇವೆ. ಏಕೆಂದರೆ ನಿಜವಾಗಿಯೂ ನಮ್ಮ ಜೀವಗಳು ಒಳಗೂಡಿರುತ್ತವೆ! ಯೋಬ 24:1 ರಲ್ಲಿ ನಾವು ಓದುವುದು: “ಸರ್ವಶಕ್ತನಿಗೆ ದಂಡನೆಯ ದಿನವು ಗುಪ್ತವಾಗಿರುವುದಿಲ್ಲ, ಆದರೂ ಆತನನ್ನು ಅರಿತವರಿಗೆ ಅದರ ತಾರೀಖಿನ ಸುಳಿವಿಲ್ಲ.” (ದ ನ್ಯೂ ಇಂಗ್ಲಿಷ್‌ ಬೈಬಲ್‌) ಆದರೆ ಅದೀಗ ಸಮೀಪವಾಗಿರಲೇ ಬೇಕು! ಏಕೆಂದರೆ ಸಾ.ಶ. 1914 ರಲ್ಲಿ “ವೇದನೆಯ” ಪ್ರಾರಂಭವನ್ನು ಕಂಡ ವ್ಯಕ್ತಿಗಳ ಕುರಿತಾಗಿ ಯೇಸುವು ಅಂದದ್ದು: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ.” (ಮತ್ತಾಯ 24:34) “ಇದೆಲ್ಲಾ” ವಿಷಯಗಳಲ್ಲಿ ಇಂದಿನ ಭ್ರಷ್ಟ ಸಮಾಜದ ನಾಶನವೂ ಸೇರಿದೆ, ಯೇಸುವು ಆಗಲೇ ಅದನ್ನು ವಿವರಿಸಿದಂತಿದೆ: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ. ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆ ಮಾಡಲಾಗುವುದು.” (ಮತ್ತಾಯ 24:21, 22) “ಮಹಾಸಂಕಟ”ವು ಕಡಿಮೆ ಮಾಡಲ್ಪಡದೆ ಇದ್ದಲ್ಲಿ, ಮಾನವಕುಲವು ತಾನಾಗಿಯೇ ಭೂಮಿಯಿಂದ ನಾಶವಾಗಿ ಹೋಗುತ್ತಿತ್ತು! ಆದರೆ ಸಂತೋಷಕರವಾಗಿ, ದೇವರನ್ನು ಪ್ರೀತಿಸುವವರೆಲ್ಲರೂ ತಮ್ಮ ಜೀವಗಳೊಂದಿಗೆ ಪಾರಾಗಬಹುದು. “ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ. ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.” (ಕೀರ್ತನೆ 145:20) ನೀವು ಬೈಬಲಿನ ಪ್ರವಾದನೆಗೆ ಕಿವಿಗೊಡುವುದಾದರೆ ನೀವು ಸಹ ಪಾರಾಗಿ, ಜೀವಿಸುತ್ತಾ ಇರಬಲ್ಲಿರಿ.

ನಿತ್ಯ ಜೀವಕ್ಕಾಗಿ ಪಾರಾಗುವ ಮಾರ್ಗ

36. 1 ಯೋಹಾನ 2:15-17 ನ್ನು ನಿಮ್ಮ ನಿತ್ಯದ ಜೀವಿತದಲ್ಲಿ ನೀವು ಹೇಗೆ ಅನ್ವಯಿಸುವಿರಿ? (ಮಾರ್ಕ 12:28-31)

36 ಪಾರಾಗುವವರೊಂದಿಗೆ ನೀವು ಸಹ ಇರುವಿರೋ? ನಾಶನದ ಕಡೆಗೆ ದುಮುಕುವ ಅಗಲವಾದ ರಸ್ತೆಯಿಂದ ನೀವು ಹಿಂದೆ ತಿರುಗುವಿರೋ ಇಲ್ಲವೋ ಅದರ ಮೇಲೆ ಇದು ಆಧರಿಸಿರುತ್ತದೆ. ಜೀವಕ್ಕೆ ನಡಿಸುವ ಮಾರ್ಗದಲ್ಲಿರುವ ದಾರಿಸಂಜ್ಞೆಗಳಿಗೆ ವಿಧೇಯರಾಗುವುದರ ಮೇಲೆ ಅದು ಆಧರಿಸಿದೆ. ನಿಮಗೆ ನಿಜವಾಗಿಯೂ ಜೀವಿಸಲು ಮನಸ್ಸಿದ್ದರೆ, ಅದು ತೀರಾ ಕಷ್ಟವಾಗಿರದು. ಅದು ದೇವರನ್ನು ಮತ್ತು ನೆರೆಯವನನ್ನು ಪ್ರೀತಿಸಲು ಕಲಿಯುವ ಅರ್ಥದಲ್ಲಿದೆ. 1 ಯೋಹಾನ 5:3 ಹೇಳುವ ಪ್ರಕಾರ, “ದೇವರ ಮೇಲಣ ಪ್ರೀತಿ ಏನೆಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” ನಮ್ಮಿಂದ ಆತನು ಕೇಳಿಕೊಳ್ಳುವ ಕೆಲವು ವಿಷಯಗಳು ಈ ಯೋಹಾನನ ಪತ್ರದ (2:15-17) ಆರಂಭದ ಭಾಗದಲ್ಲಿ ತಿಳಿಸಲ್ಪಟ್ಟಿವೆ:

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”

ಎಂದೆಂದಿಗೂ ಜೀವಿಸುತ್ತಾ ಇರುವುದಕ್ಕೋಸ್ಕರ, ಮತ್ತು ದೇವರ ಸಂರಕ್ಷೆ ಮತ್ತು ಮೆಚ್ಚಿಕೆಯ ಮೂಲಕ “ಮಹಾ ಸಂಕಟ”ವನ್ನು ಪಾರಾಗಿ ಪುನಃ ಸ್ಥಾಪಿತ ಪರದೈಸದೊಳಗೆ ಸೇರುವುದಕ್ಕೋಸ್ಕರ, ದೇವರು ಏನನ್ನು ದ್ವೇಷಿಸುತ್ತಾನೋ—ಅನೈತಿಕತೆ, ಲೋಭ, ಅಪ್ರಾಮಾಣಿಕತೆ, ಸುಳ್ಳಾಡುವಿಕೆ, ಕಳ್ಳತನ ಮತ್ತು ಲೋಕದ ಯುದ್ಧಗಳು—ಅವುಗಳಿಂದ ನಾವು ದೂರ ತೊಲಗಬೇಕಾಗಿದೆ. ಇದನ್ನು ಮಾಡುವ ಮೂಲಕ ನಾವೀಗಲೂ ಜೀವನವನ್ನು ಜೀವಿಸುವುದಕ್ಕರ್ಹವನ್ನಾಗಿ ಮಾಡಬಲ್ಲೆವು.

37. (ಎ) ಯಾವ ರೀತಿಯಲ್ಲಿ ನಾವು ಈ “ಲೋಕದ ಭಾಗ” ವಾಗಿರಬಾರದು? (ಯೋಹಾನ 15:17-19) (ಬಿ) ದೇವರ ರಾಜ್ಯಕ್ಕಾಗಿ ನೀವು ಬೆಂಬಲವನ್ನು ಹೇಗೆ ತೋರಿಸಬಹುದು? (ಮತ್ತಾಯ 6:33)

37 ಯೇಸು ತಾನೇ ತನ್ನ ಶಿಷ್ಯರ ಕುರಿತು ಅಂದದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.” (ಯೋಹಾನ 17:16) ನಾವಿದನ್ನು ಹೇಗೆ ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವೆವು? ಲೋಕದ ದೇವರೂ, ಅಧಿಪತಿಯೂ ಆದ “ಕೆಡುಕ” ನಾದ ಸೈತಾನನ ಕೆಳಗೆ ನಿಜವಾಗಿ ನಾಶನಕ್ಕೆ ಹೋಗುತ್ತಿರುವ ಈ ಲೋಕದ ಗುರಿಗಳಿಂದ ಮತ್ತು ಕಾರ್ಯಕ್ರಮಗಳಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳತಕ್ಕದ್ದು ಎಂದಿದರ ಅರ್ಥ. ನಮ್ಮ ನಿತ್ಯದ ಜೀವಿತದಲ್ಲಿ ದೇವರ ಆಳಿಕೆಗೆ ಪ್ರತಿವಿರುದ್ಧವಾದ ಲೋಕದ ಚಟುವಟಿಕೆಗಳಲ್ಲಿ ನಾವು ಭಾಗವಹಿಸದೆ ಇರುವ ಅಗತ್ಯವು ಇದೆ. ಮತ್ತಾಯ 24:3 ಮತ್ತು 25:31 ತೋರಿಸುವ ಪ್ರಕಾರ, “ಯುಗದ ಸಮಾಪ್ತಿಯ” ಸೂಚನೆಯು ಯೇಸುವು ಸ್ವರ್ಗದಲ್ಲಿ ರಾಜ್ಯಾಧಿಕಾರದೊಂದಿಗೆ “ಪ್ರತ್ಯಕ್ಷ” ನಾಗಿರುವುದಕ್ಕೂ ಸೂಚನೆ ಆಗಿರುತ್ತದೆ. ಆದುದರಿಂದ 1914ನೇ ವರ್ಷದಿಂದ “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತ [ದೇವರು] ನಿಗೂ ಆತನ ಕ್ರಿಸ್ತನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಪ್ರವಾದನೆಯು ಸಹ ನೆರವೇರಿರುತ್ತದೆ. (ಪ್ರಕಟನೆ 11:15) ಆ ರಾಜ್ಯಕ್ಕೆ ಬೆಂಬಲವನ್ನು ಕೊಡುವ ಸಮಯವು ಈಗಾಗಲೇ ಆಗಿದೆ! ನಮ್ಮ ಭವಿಷ್ಯತ್ತಿನ ಜೀವಿತವು ದೇವರ ರಾಜ್ಯದ ಮೇಲೆ ಆಧಾರಿಸಿರುತ್ತದೆ. ಹೀಗಿರುವಾಗ ನಾವು ನಮ್ಮ ಕಾಲದ ಯುದ್ಧಗಳನ್ನೂ, ಕ್ರಾಂತಿಗಳನ್ನೂ, ರಾಜಕೀಯ ಚಟುವಟಿಕೆಗಳನ್ನೂ ಅಥವಾ ಲೌಕಿಕ ಯೋಜನೆಗಳನ್ನೂ ಮನಸ್ಸಾಕ್ಷಿ ಪೂರ್ವಕವಾಗಿ ಬೆಂಬಲಿಸ ಸಾಧ್ಯವಿದೆಯೇ? ಇವು ತಮ್ಮ ಧ್ಯೇಯ ಸಾಧನೆಯಲ್ಲಿ ಖಂಡಿತವಾಗಿಯೂ ಸೋತುಹೋಗಲಿವೆ. ಯಾಕಂದರೆ ದೇವರ ರಾಜ್ಯ ಮಾತ್ರವೇ ಮಾಡಶಕ್ತವಾದದ್ದನ್ನು ತಾವು ಮಾಡುತ್ತೇವೆಂದು ಅವರು ವಾದಿಸುತ್ತಿದ್ದಾರೆ. ಇಡೀ ವ್ಯವಸ್ಥೆಯೇ ನಾಶಪಾತ್ರವಾಗಿದೆ. ಆದುದರಿಂದ ಅದಕ್ಕೆ ತೇಪೆ ಹಚ್ಚಲು ಪ್ರಯತ್ನಿಸುವುದರಲ್ಲಿ ಭಾಗವಹಿಸುವುದೇಕೆ? ಬದಲಿಗೆ, ನಾವು ನಿಶ್ಚಿತವಾಗಿ ಪರಿಹಾರವನ್ನು ತರುವ ದೇವರ ರಾಜ್ಯಕ್ಕೆ ನಮ್ಮ ಹೃತ್ಪೂರ್ವಕವಾದ ಬೆಂಬಲವನ್ನು ಕೊಡೋಣ!

38. ಇಂದಿನ ಅಧಿಪತಿಗಳ ಕಡೆಗೆ ನಾವು ಯಾವ ಮನೋಭಾವವನ್ನು ತೆಗೆದುಕೊಳ್ಳಬೇಕು? (ಲೂಕ 20:25)

38 ಹಾಗಾದರೆ ನಾವು ಅರಾಜಕತಾವಾದಿಗಳು ಆಗಬೇಕೆಂದು ಇದರ ಅರ್ಥವೋ? ಅಲ್ಲವೇ ಅಲ್ಲ! ಯಾಕಂದರೆ “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.” (1 ಕೊರಿಂಥ 14:33) ಅಸ್ತಿತ್ವದಲ್ಲಿರುವ ಸರಕಾರಗಳು ಎಷ್ಟರ ತನಕ ಮುಂದುವರಿಯುತ್ತವೋ, ಆ ತನಕ ಅದರ ನಿಯಮಗಳಿಗೆ ವಿಧೇಯರಾಗಲು ಮತ್ತು ಅದರ ಅಧಿಪತಿಗಳನ್ನು ಗೌರವಿಸಲು ದೇವರು ನಮ್ಮಿಂದ ಅಪೇಕ್ಷಿಸುತ್ತಾನೆ. ರೋಮಾಪುರದವರಿಗೆ 13:1 ಅನ್ನುವುದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” ಇದರ ಅರ್ಥವು ಕೈಸರನಿಗೆ (ಸರಕಾರಕ್ಕೆ) ಸಲ್ಲತಕ್ಕ ತೆರಿಗೆಗಳನ್ನು ಕೊಡುವುದು ಮತ್ತು ದೇವರ ನಿಯಮಕ್ಕೆ ವಿರುದ್ಧವಾಗಿರದಿರುವ ಅವನ ನಿಯಮಗಳೆಲ್ಲವನ್ನು ಪಾಲಿಸುವುದು ಆಗಿದೆ.—ಮಾರ್ಕ 12:17.

39. ನೆರೆಯವರ ಪ್ರೀತಿಯನ್ನು ನೀವು ಹೇಗೆ ತೋರಿಸಬಲ್ಲಿರಿ? (1 ಕೊರಿಂಥ 13:4-7)

39 ದೇವರನ್ನು ಪ್ರೀತಿಸುವುದರೊಂದಿಗೆ ಕೂಡಿಸಿ ನಾವು ನಮ್ಮ ನೆರೆಯವರ ಕಡೆಗೂ ಪ್ರೀತಿ ತೋರಿಸಬೇಕು. ಇದನ್ನು ನಮ್ಮ ಸ್ವಂತ ಕುಟುಂಬಗಳಲ್ಲಿ ಆರಂಭಿಸುವುದಕ್ಕಿಂತ ಬೇರೆ ಒಳ್ಳೆಯ ಸ್ಥಳವೆಲ್ಲಿದೆ! ಆದರೆ ನಾವಿದನ್ನು ಹೇಗೆ ಮಾಡಬಲ್ಲೆವು? ಕೊಲೊಸ್ಸೆಯವರಿಗೆ 3:18-21 ರಲ್ಲಿ ಬೈಬಲು ಸರಳವಾಗಿ ಉತ್ತರಿಸುವುದು:

“ಹೆಂಡತಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ. ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ. ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.”

ಒಕ್ಕಟ್ಟಿನ ಕುಟುಂಬವೊಂದನ್ನು ಕಟ್ಟುವದಕ್ಕೆ ನಿಶ್ಚಯವಾಗಿ ಒಂದು ಅತ್ಯುತ್ತಮವಾದ ಬುನಾದಿ! ಮತ್ತು ಕುಟುಂಬದೊಂದಿಗೆ ಮಾತ್ರವೇ ಅಲ್ಲ, ಬೇರೆ ಎಲ್ಲರೊಂದಿಗಿನ ಸಂಬಂಧದಲ್ಲೂ ನಾವು “ಕನಿಕರ, ದಯೆ, ದೀನಭಾವ, ಸಾತ್ವಿಕತ್ವ, ದೀರ್ಘಶಾಂತಿ” ಎಂಬ ಸದ್ಗುಣಗಳನ್ನು ಬೆಳೆಸಿಕೊಳ್ಳಬಲ್ಲೆವು. ಮತ್ತು ಪ್ರಧಾನ ವಿಷಯ ಯಾವುದು? “ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣ ಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:12, 14.

40. ಯೆಹೋವನ ಸಾಕ್ಷಿಗಳು ಯಾವ ರೀತಿಯ ಜನರಾಗಿದ್ದಾರೆ? (ಯೋಹಾನ 13:34, 35)

40 ಈ ದೇವರ ಪ್ರೀತಿ ಮತ್ತು ನೆರೆಯವರ ಪ್ರೀತಿಯನ್ನು ತಮ್ಮ ಜೀವಿತದಲ್ಲಿ ನಿಜವಾಗಿ ಅನ್ವಯಿಸುವ ಜನರು ಇಂದು ಭೂಮಿಯಲ್ಲಿದ್ದಾರೋ ಎಂದು ನೀವು ಕೇಳಬಹುದು. ಹೌದು, ಅಂಥ ಒಂದು ಗುಂಪಿದೆ. ನಿಮ್ಮ ನೆರೆಹೊರೆಯಲ್ಲಿ ರಾಜ್ಯ ಸಭಾಗೃಹವೊಂದು ಇರುವುದಾದರೆ, ಅವರನ್ನು ಕಂಡುಕೊಳ್ಳಲು ನಿಮಗೆ ಹೋಗಲಿಕ್ಕಿರುವುದು ಅಷ್ಟೇ ದೂರ. ಅವರು ಲಕ್ಷಾಂತರ ಸಂಖ್ಯೆಯಲ್ಲಿರುವ ಒಂದು ಅಂತ್ರರಾಷ್ಟ್ರೀಯ ಗುಂಪಾಗಿದ್ದಾರೆ. ಅತ್ಯಧಿಕವಾಗಿ, ಅವರು ಸಾಮಾನ್ಯ ಜನರಾಗಿದ್ದಾರೆ, ಹಿನ್ನೆಲೆಯಲ್ಲಿ ತಮ್ಮ ಹೆಚ್ಚಿನ ನೆರೆಯವರಿಗಿಂತ ಬೇರೆಯಾಗಿಲ್ಲ, ಮತ್ತು ಸಾಮಾನ್ಯವಾಗಿ ತಮ್ಮ ಸಮಾಜದ ಇತರರು ಮಾಡುವಂಥಾ ನಿತ್ಯದ ಕಸುಬುಗಳನ್ನು ಮಾಡುತ್ತಿರುತ್ತಾರೆ. ಆದರೆ ಅವರ ಮೊದಲ ಪ್ರೀತಿಯು ಅವರ ದೇವರಿಗಾಗಿ ಮೀಸಲಾಗಿದೆ. ಭೂಮಿಯಲ್ಲಿ ಆತನ ಚಿತ್ತವು ನೆರವೇರುವುದಕ್ಕಾಗಿ ಅವರು ಮುನ್ನೋಡುತ್ತಾರೆ, ಮತ್ತು ತಮ್ಮ ಜೀವಿತಗಳನ್ನು ಅದಕ್ಕನುಸಾರವಾಗಿ ಜೀವಿಸುತ್ತಾರೆ. ಆದಕಾರಣ, ಅವರು ಬೈಬಲ್‌ ಅಧ್ಯಯನದಲ್ಲಿ, ಅದರ ತತ್ವಗಳನ್ನು ತಮ್ಮ ನಿತ್ಯದ ಜೀವಿತದಲ್ಲಿ ಅನ್ವಯಿಸುವುದರಲ್ಲಿ ಮತ್ತು ಅದರ ಸಂದೇಶವನ್ನು ತಮ್ಮ ನೆರೆಯವರಿಗೆ ತಿಳಿಸುವುದರಲ್ಲಿ ಉತ್ಸಾಹದಿಂದಿದ್ದಾರೆ. ಅವರೇ ಯೆಹೋವನ ಕ್ರೈಸ್ತ ಸಾಕ್ಷಿಗಳು, ನಿಮ್ಮ ಸಮಾಜದಲ್ಲಿರುವ ಅವರ ರಾಜ್ಯ ಸಭಾಗೃಹದಲ್ಲಿ ಅವರನ್ನೇಕೆ ಭೇಟಿಯಾಗಬಾರದು? ಅಲ್ಲಿ ಯಾವ ಸಂಸ್ಕಾರಗಳಾಗಲಿ, ಕಾಣಿಕೆ ಪೆಟ್ಟಿಗೆಗಳ ದಾಟಿಸುವಿಕೆಯಾಗಲಿ, ಕಟ್ಟುನಿಟ್ಟಿನ ಬಾಹ್ಯನಿಷ್ಠೆಗಳಾಗಲಿ ಇರದಿರುವುದನ್ನು ನೀವು ಕಾಣುವಿರಿ. ಬದಲಿಗೆ, ಈಗಲೂ ಜೀವಿತದಿಂದ ಹೆಚ್ಚಿನ ಸಂತೃಪ್ತಿಯನ್ನು ಪಡೆಯುತ್ತಿರುವ ಮತ್ತು ಪರದೈಸ ಭೂಮಿಯಲ್ಲಿ ಪರಿಪೂರ್ಣತೆಯ ನಿತ್ಯಜೀವಕ್ಕಾಗಿ ಮುನ್ನೋಡುತ್ತಿರುವ ಹೃತ್ಪೂರ್ವಕರಾದ ಜನರನ್ನು ನೀವು ಕಂಡುಕೊಳ್ಳುವಿರಿ.

41. ಸಾಕ್ಷಿಗಳು ತಮ್ಮ ದೊಡ್ಡ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಂಡಿದ್ದಾರೆ? (ಅ. ಕೃತ್ಯಗಳು 10:34, 35)

41 ಈ ನಿರೀಕ್ಷೆಯಿರುವ ಮತ್ತು ಅದಕ್ಕನುಸಾರ ಜೀವಿಸುವ ಇಂಥಾ ಜನರೊಂದಿಗೆ ಸಹವಾಸ ಮಾಡಲು ನೀವು ಬಯಸಲಾರಿರೋ? ಬೈಬಲಿನ ತತ್ವಗಳಿಂದ ಜೀವಿಸಿದ್ದರಿಂದಾಗಿ ತರಲ್ಪಟ್ಟ ಒಂದು ಜಗವ್ಯಾಪಕ ಐಕ್ಯತೆಯು ಅವರಲ್ಲಿದೆ. ಜನಾಂಗಗಳಿಗೆ ಶತಮಾನಗಳಿಂದ ಪರಿಹರಿಸಲು ಅಶಕ್ಯವಾದ ಸಮಸ್ಯೆಗಳಾದ ಯುದ್ಧ, ಜಾತಿಬೇಧ ಮತ್ತು ರಾಷ್ಟ್ರೀಯತೆ ಮುಂತಾದವುಗಳನ್ನು ಅವರು ತಮ್ಮ ಪಂಕ್ತಿಯಿಂದ ಪರಿಹರಿಸಿರುತ್ತಾರೆ. ಅವರು ಬೈಬಲಿಗೆ ಹೊಂದಿಕೆಯಲ್ಲಿ ಜೀವಿಸುವುದರಿಂದ, ತಮ್ಮ ನಡುವೆ ಹಿಂಸಾತ್ಮಕ ಕೃತ್ಯ, ದುಷ್ಕರ್ಮ, ಅಪ್ರಾಮಾಣಿಕತೆ ಮತ್ತು ಅನೈತಿಕತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮೂಲಭೂತವಾಗಿ ಅವರು ಸ್ವತಂತ್ರರಾಗಿದ್ದಾರೆ. ಸಾಮಾಜಿಕ ಕೆಡುಕುಗಳಿಂದ ಅವರು ಬಾಧಿಸಲ್ಪಡುವುದಿಲ್ಲ. ಅವರ ಸದಸ್ಯರಲ್ಲೊಬ್ಬನು ಗಂಭೀರತರದ ತಪ್ಪನ್ನು ಮಾಡಿದಾಗಲೂ,—ಇದು ತೀರಾ ಅಪರೂಪವಾಗಿದ್ದರೂ,—ಅವನು ಪಶ್ಚಾತ್ತಾಪಪಟ್ಟಲ್ಲಿ ಪ್ರೀತಿಯಿಂದ ಪುನಃ ಸ್ಥಾಪಿಸಲ್ಪಡುತ್ತಾನೆ. ದೇವರು “ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಭೂಮಂಡಲದಲ್ಲೆಲ್ಲಾ ವಾಸ ಮಾಡಿಸಿದ” ನೆಂಬದನ್ನು ತಿಳಿದವರಾಗಿ ಅವರು ಪ್ರತಿಯೊಬ್ಬ ವೈಯಕ್ತಿಕ ಮನುಷ್ಯನ ಕುರಿತಾದ ತಮ್ಮ ನೋಟವು ಅವನ ಸಾಮಾಜಿಕ ಅಂತಸ್ತು, ಅವನ ವಿದ್ಯೆ ಯಾ ವಿದ್ಯೆಯ ಕೊರತೆ, ಅವನ ರಾಷ್ಟ್ರೀಯತೆ ಅಥವಾ ಅವನ ಮೈಬಣ್ಣ ಮೊದಲಾದವುಗಳಿಂದ ಪ್ರಭಾವಕ್ಕೊಳಗಾಗುವಂತೆ ಬಿಡುವುದಿಲ್ಲ.—ಅ. ಕೃತ್ಯಗಳು 17:26.

ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ ಏಕೆಂಬದಕ್ಕೆ ಕಾರಣ!

42. ಜೀವವನ್ನು ಪ್ರೀತಿಸುವವರಿಗೆ ಯಾವ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ? (ಕೀರ್ತನೆ 72:1-8)

42 ಜೀವವನ್ನು ಪ್ರೀತಿಸುವವರಿಗಾಗಿ ಮತ್ತು ತಮ್ಮ ಜೀವಗಳನ್ನು ರಕ್ಷಿಸುವುದಕ್ಕಾಗಿ ಈಗಲೇ ಕ್ರಿಯೆ ನಡಿಸುವವರಿಗಾಗಿ ಒಂದು ಭವ್ಯವಾದ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ. ಆ ಭವಿಷ್ಯವು ಹೇಗಿರಲಿದೆ? ಅನೇಕಾನೇಕ ಮಾನವ ಕುಟುಂಬಗಳು ಇಂದು ಅನುಭವಿಸುತ್ತಿರುವ ನೀರಸ ಜೀವನದಂತೆ ಅದಿರಲಾರದು. “ಮೊದಲಿದ್ದ” ವಿಷಯಗಳು—ಸದ್ಯದ ವ್ಯವಸ್ಥೆಯ ದುಃಖ, ಮರಣ ಮತ್ತು ಕಷ್ಟಗಳು—“ಇಲ್ಲದೇ” ಹೋಗುವುವು. ಅದನ್ನು ಹಿಂಬಾಲಿಸಿ ಏನು ಬರುವುದು? ದೇವರು ತಾನೇ ಪ್ರಕಟಿಸಿದ್ದು: “ಇಗೋ, ಎಲ್ಲವನ್ನು ಹೊಸದು ಮಾಡುತ್ತೇನೆ.” (ಪ್ರಕಟನೆ 21:4, 5) ಹೊಸ ವ್ಯವಸ್ಥೆಯಲ್ಲಿ, ಸ್ವರ್ಗೀಯ ರಾಜನಾದ ಯೇಸು ಕ್ರಿಸ್ತನು “ನಿತ್ಯನಾದ ತಂದೆ” ಯೋಪಾದಿ ಮಾನವಕುಲವೆಲ್ಲಾದರ ಮೇಲೆ ಪ್ರೀತಿಯುಳ್ಳ ಆಳಿಕೆಯನ್ನು ನಡಿಸುವನು. “[ಆತನ] ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು . . . ಆತನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು.” ನೀತಿ ನ್ಯಾಯಗಳು ಆ ರಾಜ್ಯದ ತಳಪಾಯಗಳಾಗಿರುವುವು. (ಯೆಶಾಯ 9:6, 7) ಆ ಪರಿಸ್ಥಿತಿಗಳ ಕೆಳಗೆ ಜೀವನವೆಷ್ಟು ಸಂತೃಪ್ತಿಕರವೂ ಆನಂದಮಯವೂ ಆಗಿರಲಿದೆ! ನಮ್ಮ ನೆರೆಯವರ ಕಡೆಗೆ ಪ್ರೀತಿಯೊಂದಿಗೆ ದೇವರ ಚಿತ್ತವನ್ನು ಭೂಮಿಯಲ್ಲಿ ಮಾಡುವ ಉದ್ದೇಶವು ಅದಕ್ಕಿರುವುದು. ಸಮಾಧಿಗಳಲ್ಲಿರುವವರು ಸಹ “ಆತನ ಧ್ವನಿಯನ್ನು ಕೇಳಿ” ಆ ಪರದೈಸ ಭೂಮಿಯಲ್ಲಿ ಆನಂದಿಸುವುದಕ್ಕಾಗಿ ಎದ್ದು ಬರುವರೆಂಬ ಆಶ್ವಾಸನೆಯನ್ನು ಯೇಸು ನಮಗಿತ್ತಿದ್ದಾನೆ.—ಯೋಹಾನ 5:28, 29.

43. ನೀವು ನಿಮ್ಮ ಜೀವವನ್ನು ಹೇಗೆ ಉಳಿಸಿಕೊಳ್ಳಬಹುದು? (ಚೆಫೆನ್ಯ 2:2, 3)

43 ಈ “ಸದ್ಯದ ದುಷ್ಟ ವ್ಯವಸ್ಥೆಯು” ಅಗಲವಾದ ಮಾರ್ಗದಿಂದಾಚೆ ನಾಶನಕ್ಕೆ ಬೇಗನೇ ದುಮುಕಲಿಕ್ಕಿದೆ. ಆದರೆ ನೀವೂ ಅದರೊಂದಿಗೆ ದುಮುಕಬೇಕಾದ ಅಗತ್ಯವಿಲ್ಲ. ಲೋಕದ ರಕ್ತಾಪರಾಧಿ ರಾಷ್ಟ್ರಗಳ ನಾಶನಕ್ಕಾಗಿ ದೇವರು ಬರುವಾಗ—ಜೀವವನ್ನು ಪ್ರೀತಿಸುವವರಾದ—ದೇವರ ಸ್ವಂತ ಜನರೊಂದಿಗೆ ಸಹವಾಸದಲ್ಲಿ ನೀವು ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಬಹುದು:

“ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ. ಇಗೋ, ಯೆಹೋವನು ಭೂನಿವಾಸಿಗಳಿಗೆ, ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ. ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದವ್ದರನ್ನು ಇನ್ನು ಮರೆಮಾಜದು.”—ಯೆಶಾಯ 26:20, 21.

44. ನಿಮ್ಮ ಮುಂದೆ ಯಾವ ಮಹತ್ತಾದ ಸುಸಂದರ್ಭವು ಇದೆ? (ಧರ್ಮೋಪದೇಶಕಾಂಡ 30:19, 20)

44 ಆದುದರಿಂದ, ಬೈಬಲಿನ ಮಟ್ಟಗಳಿಗೆ ಅನುಸಾರವಾಗಿ ನಿಜ ಜೀವನವನ್ನೀಗಲೇ ಜೀವಿಸಲಾರಂಭಿಸುವ ಮೂಲಕ, ದೇವಜನರ ಉತ್ಸಾಹದ, ಮುನ್ನೋಟವುಳ್ಳ ಸಮಾಜದೊಂದಿಗೆ “ಮಹಾ ಸಂಕಟವನ್ನು” ಸಜೀವವಾಗಿ ಪಾರಾಗುವುದರಲ್ಲಿ ಮತ್ತು ಈ ಭೂಮಿಯಿಂದ ಎಂದೆಂದಿಗೂ ಸಾಯದೆ ಇರುವವರಲ್ಲಿ, ನೀವು ಭಾಗವಹಿಸಬಹುದು, ಹೌದು, ಈಗ ಜೀವಿಸುತ್ತಿರುವ “ಮಹಾ ಸಮೂಹ”ವು ಎಂದಿಗೂ ಸಾಯದೆ ಇರಬಹುದೆಂದು ನಿಶ್ಚಯವಾಗಿಯೂ ಭರವಸದಿಂದ ಹೇಳಸಾಧ್ಯವಿದೆ!

45. (ಎ) ಈಗಲೂ ಮತ್ತು ಭವಿಷ್ಯತ್ತಿನಲ್ಲೂ ಕಾರ್ಯ ನಡಿಸುಥದ್ದು ಯಾವುದು? (1 ತಿಮೊಥೆಯ 6:11, 12) (ಬಿ) ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆಯೆಂಬದನ್ನು ನೀವು ಗಣ್ಯ ಮಾಡುತ್ತೀರೆಂದು ಹೇಗೆ ತೋರಿಸಬಹುದು? (1 ತಿಮೊಥೆಯ 6:17-19)

45 ಭೂಮಿಯಲ್ಲೆಲ್ಲೂ ಇರುವ ಆತನ ಸಾಕ್ಷಿಗಳ ಜೀವಂತ ಸಮಾಜದಲ್ಲಿ, ಈಗಾಗಲೇ ಕಾರ್ಯ ನಡಿಸುಥ ಒಂದು ವಿಷಯವನ್ನು ಯೆಹೋವನು ಉತ್ಪಾದಿಸಿದ್ದಾನೆ! ಅದು ನಿಮಗಾಗಿಯೂ ಕಾರ್ಯ ನಡಿಸಬಲ್ಲದು! ಮತ್ತು ಎಲ್ಲಿ “ಶ್ವಾಸವಿರುವದೆಲ್ಲವೂ” ಮಹಾ ಜೀವದಾತನಾದ ಯೆಹೋವ ದೇವರನ್ನು ಸುತ್ತಿಸುವುದೋ ಆ ಪರದೈಸ ಭೂಮಿಯಲ್ಲಿ ಅದು ಮಹತ್ತಾಗಿ ಕಾರ್ಯ ನಡಿಸುವುದು. (ಕೀರ್ತನೆ 150:6) ನಿಜವಾಗಿಯೂ, ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ!

REFERENCES

1. Intellectual Digest, December 1971, p. 59.

2. Charles Darwin: His Life, chapter 3, p. 66.

3. The Yomiuri, Tokyo, January 17, 1969.

4. Charles Darwin, Origin of Species, concluding sentence.

5. Isaac Asimov, The Wellsprings of Life, 1960, pp. 224, 225.

6. Lecomte du Noüy, Human Destiny, 1947, p. 34.

7. Prof. John N. Moore, Michigan State University, paper of December 27, 1971, p. 5

8. Isaac Asimov, The Wellsprings of Life, 1960, p. 85.

9. M. S. Keringthan, The Globe and Mail, Toronto, November 26, 1970, p. 46.

10. H. G. Wells, The Outline of History, 3rd Edition, 1921, p. 956.

11. Ibid, p. 957.

12. Philip G. Fothergill, Evolution and Christians, 1961, p.17.

13. Himmelfarb, Darwin and the Darwinian Revolution, p. 398.

14. J. D. Bernal, Marx and Science, 1952, p. 17.

[ಪಾದಟಿಪ್ಪಣಿ]

^ ಪ್ಯಾರ. 5 ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ ಈ ಪ್ರಕಾಶನದಲ್ಲಿರುವ ಶಾಸ್ತ್ರವಚನದ ಉಲ್ಲೇಖಗಳು ಆಧುನಿಕ ಭಾಷೆಯ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ ನಿಂದ ಭಾಷಾಂತರಿಸಿ ಬರೆಯಲಾಗಿದೆ. ಕೆಲವು ಉಲ್ಲೇಖಗಳನ್ನು ಬಿ.ಎಫ್‌.ಬಿ.ಎಸ್‌.ನವರ 1865 ಕನ್ನಡ ಸತ್ಯವೇದದಿಂದ ತೆಗೆಯಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಚಿತ್ರ]

ಕುಶಲರಾದ ವಿಜ್ಞಾನಿಗಳು ನಮ್ಮ ಸೌರವ್ಯೂಹದ ಮಾದರಿಗಳನ್ನು ರಚಿಸಿರುತ್ತಾರೆ. ಅಗಾಧ ವಿಶ್ವವನ್ನು ತಾನೇ ರಚಿಸುವುದಕ್ಕೆ ಎಷ್ಟೋ ಮಹತ್ತಾದ ಬುದ್ಧಿಶಕ್ತಿಯ ಅವಶ್ಯಕತೆ ಇರದೋ?

[ಪುಟ 8ರಲ್ಲಿರುವ ಚಿತ್ರ]

ಭೂಮಿಯನ್ನು “ಆಕಾಶಮಂಡಲದಲ್ಲೆಲ್ಲಾ ನೋಡಲು ಅತ್ಯಂತ ಸುಂದರವಾದ” ಸ್ಥಳವಾಗಿ ಗಗನಯಾತ್ರಿಕನೊಬ್ಬನು ವರ್ಣಿಸಿದ್ದಾನೆ. ಇದಕ್ಕೆ ಕಾರಣವು ದೇವರಿಂದ ನಿರ್ಮಿಸಲ್ಪಟ್ಟಿರುವ ಜೀವವು ಅದರಲ್ಲಿದೆ

[ಪುಟ 10ರಲ್ಲಿರುವ ಚಿತ್ರ]

ತಳಿಬೆರಸ ಸಾಧ್ಯವಿರುವ ಅನೇಕ ವಿಧದ ನಾಯಿಗಳಿವೆ. ಆದರೆ ಅವನ್ನು ಬೆಕ್ಕಿನಂಥ ಇನ್ನೊಂದು “ಜಾತಿ”ಯೊಂದಿಗೆ ತಳಿಹುಟ್ಟಿಸ ಸಾಧ್ಯವಿಲ್ಲ

[ಪುಟ 11ರಲ್ಲಿರುವ ಚಿತ್ರ]

The Seattle Times, November 21, 1971

The Washington Daily News, December 27, 1971

The Express, Easton, Pa., May 3, 1973

[ಪುಟ 12, 13ರಲ್ಲಿರುವ ಚಿತ್ರ]

ಮನುಷ್ಯ ಮತ್ತು ಪ್ರಾಣಿಗಳ ನಡುವಣ ಮಹಾ ಕಂದರವನ್ನು ಮುಚ್ಚಲು ಅಶಕ್ಯವು. ಅವು ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟ “ಜಾತಿಗಳು” ಆಗಿರುತ್ತವೆ

[ಪುಟ 15ರಲ್ಲಿರುವ ಚಿತ್ರ]

ಭವ್ಯವಾದ ಪರದೈಸದಲ್ಲಿ ಜೀವಿಸುವುದಕ್ಕಾಗಿ ಮನುಷ್ಯನು ನಿರ್ಮಿಸಲ್ಪಟ್ಟನು. ಆದರೆ ಅದರಲ್ಲಿ ಸದಾ ಆನಂದಿಸುವಿಕೆಯು ವಿಧೇಯತೆಯ ಮೇಲೆ ಆತುಕೊಂಡಿತ್ತು

[ಪುಟ 20ರಲ್ಲಿರುವ ಚಿತ್ರ]

ಟೈಟಸನ ಕಮಾನಿನ (ರೋಮಿನಲ್ಲಿ) ಮೇಲಿರುವ ಈ ಉಬ್ಬುಚಿತ್ರವು ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನದ ಇತಿಹಾಸವನ್ನು ದಾಖಲಿಸುತ್ತದೆ

[ಪುಟ 21ರಲ್ಲಿರುವ ಚಿತ್ರ]

ಬೈಬಲಿನ ಪ್ರವಾದನೆಗೆ ಕಿವಿಗೊಡುವಿಕೆಯು ಒಂದನೇ ಶತಕದ ಕ್ರೈಸ್ತರ ಜೀವಗಳನ್ನು ರಕ್ಷಿಸಿತು. ಅದು ತದ್ರೀತಿ ಇಂದು ನಿಮ್ಮ ಜೀವವನ್ನು ರಕ್ಷಿಸಬಲ್ಲದು

[ಪುಟ 23ರಲ್ಲಿರುವ ಚಿತ್ರ]

‘ಒಂದನೇ ಲೋಕ ಯುದ್ಧವು ಸಮಗ್ರ ಯುದ್ಧದ ಒಂದು ಶತಮಾನವನ್ನು ಒಳತಂದಿತು. . . . ಹಿಂದೆಂದೂ ಅಷ್ಟು ಹೆಚ್ಚು ಜನಾಂಗಗಳು ಒಳಗೂಡಿರಲಿಲ್ಲ. ಅಷ್ಟು ವ್ಯಾಪಕವಾದ ಮತ್ತು ಗೊತ್ತುಗುರಿಯಿಲ್ಲದ ಸಂಹಾರವು ಹಿಂದೆಂದೂ ನಡೆದಿರಲಿಲ್ಲ.’—“ವರ್ಲ್ಡ್‌ ವಾರ್‌ 1,”—ಯಚ್‌, ಡಬ್ಲ್ಯೂ. ಬಾಲ್‌ವ್ಡಿನ್‌ರಿಂದ.

[ಪುಟ 23ರಲ್ಲಿರುವ ಚಿತ್ರ]

ಸುಮಾರು 40,00,00,000 ಜನರು ಅರೆಹೊಟ್ಟೆಯಲ್ಲಿ ನರಳುತ್ತಿದ್ದಾರೆಂದು ಅಂದಾಜುಮಾಡಲಾಗಿದೆ

[ಪುಟ 29ರಲ್ಲಿರುವ ಚಿತ್ರ]

ದೇವಜನರ ಹೊಸ ಸಮಾಜವು ನಿಜ ಜೀವನದಲ್ಲಿ ಆನಂದಿಸಲಿರುವುದು ಮತ್ತು ನಿರಂತರವೂ ದೇವರನ್ನು ಸುತ್ತಿಸಲಿರುವುದು