ಮಾಹಿತಿ ಇರುವಲ್ಲಿ ಹೋಗಲು

ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ?

ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ?

ರಾಜ್ಯ ವಾರ್ತೆ ನಂ. 34

ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ?

ಒಂದು ಸಮಸ್ಯೆಮುಕ್ತ ಪ್ರಮೋದವನವು ಸಾಧ್ಯವೋ?

ಗಂಭೀರ ಸಮಸ್ಯೆಗಳು ಕೆಡುತ್ತಿವೆ—ಯಾಕೆ?

ಜನರಿಗೆ ಯಾವಾಗಲೂ ಸಮಸ್ಯೆಗಳು ಇದ್ದವು. ಆಧುನಿಕ ತಂತ್ರಜ್ಞಾನವು ಅವುಗಳನ್ನು ಬಗೆಹರಿಸಬಹುದೆಂದು ಅನೇಕರು ನೆನಸಿದರಾದರೂ, ಗಂಭೀರ ಸಮಸ್ಯೆಗಳು ಕೆಡುತ್ತಾ ಇವೆ.

ಪಾತಕ: ಬೀದಿಗಳಲ್ಲಿ ನಡೆಯಲು ಅಥವಾ ತಮ್ಮ ಸ್ವಂತ ಮನೆಗಳಲ್ಲಿ ಕುಳಿತುಕೊಳ್ಳಲು ಸಹ ಕೆಲವೇ ಜನರಿಗೆ ಸುರಕ್ಷಿತವೆನಿಸುತ್ತದೆ. ಒಂದು ಯೂರೋಪಿಯನ್‌ ದೇಶದಲ್ಲಿ, ಇತ್ತೀಚೆಗಿನ ಒಂದು ವರ್ಷದಲ್ಲಿ ಬಹುಮಟ್ಟಿಗೆ ಪ್ರತಿ 3 ವ್ಯಕ್ತಿಗಳಲ್ಲಿ 1 ವ್ಯಕ್ತಿ ಒಂದು ಪಾತಕದ ಬಲಿಯಾಗಿದ್ದನು.

ಪರಿಸರ: ಗಾಳಿ, ನೆಲ, ಮತ್ತು ಜಲ ಮಾಲಿನ್ಯವು ಹೆಚ್ಚೆಚ್ಚು ವ್ಯಾಪಕವಾಗಿದೆ. ವರ್ಧಿಷ್ಟು ರಾಷ್ಟ್ರಗಳಲ್ಲಿ, ನಾಲ್ಕರಲ್ಲಿ ಒಂದಂಶದ ಜನರಿಗೆ ಶುದ್ಧವಾದ ನೀರನ್ನು ಪಡೆಯಲಿಕ್ಕೆ ಮಾರ್ಗವಿರುವದಿಲ್ಲ.

ಬಡತನ: ಎಂದಿಗಿಂತಲೂ ಹೆಚ್ಚು ಬಡವರಾಗಿರುವ ಮತ್ತು ಹಸಿದ ಜನರು ಇದ್ದಾರೆ. ಕೆಲವು ದೇಶಗಳಲ್ಲಿ 90 ಪ್ರತಿಶತಕ್ಕಿಂತ ಹೆಚ್ಚು ಜನರು ಬಡತನದಲ್ಲಿ ಜೀವಿಸುತ್ತಾರೆ; ಲೋಕದ ಕಾರ್ಮಿಕರ ತಂಡದಲ್ಲಿ 30 ಪ್ರತಿಶತ, ಸುಮಾರು 80 ಕೋಟಿ ಜನರು, ನಿರುದ್ಯೋಗಿಗಳಾಗಿದ್ದಾರೆ ಅಥವಾ ಸಾಕಷ್ಟು ವೇತನವಿಲ್ಲದ ಅಥವಾ ತಮ್ಮ ಕೌಶಲಗಳು ಪೂರ್ಣವಾಗಿ ಬಳಸಲ್ಪಡದ ನೌಕರಿಗಳಲ್ಲಿದ್ದಾರೆ—ಮತ್ತು ಅವರ ಸಂಖ್ಯೆಗಳು ಬೆಳೆಯುತ್ತಿವೆ.

ಹಸಿವು: ಸ್ವತಃ ನಿಮಗೆ ತಿನ್ನಲು ಸಾಕಷ್ಟು ಇರುವದಾದರೂ, ಹೆಚ್ಚುತ್ತಿರುವ ಲಕ್ಷಾಂತರ ಮಂದಿಗೆ ಇರುವುದಿಲ್ಲ. ಅಭಿವೃದ್ಧಿಯಾಗಿರದ ದೇಶಗಳಲ್ಲಿ, ಪ್ರತಿ ವರ್ಷ ಕಡಿಮೆಪಕ್ಷ 1.3 ಕೋಟಿ ಜನರು, ಹೆಚ್ಚಾಗಿ ಮಕ್ಕಳು, ಹಸಿವಿನ ಪರಿಣಾಮಗಳಿಂದ ಸಾಯುತ್ತಾರೆ.

ಯುದ್ಧ: ಇತ್ತೀಚೆಗಿನ ಕುಲಸಂಬಂಧವಾದ ಹಿಂಸೆಯಲ್ಲಿ ಲಕ್ಷಾಂತರ ಮಂದಿ ಕೊಲ್ಲಲ್ಪಟ್ಟಿದ್ದಾರೆ. ಮತ್ತು 20 ನೆಯ ಶತಮಾನದಲ್ಲಿ, ಯುದ್ಧಗಳು ಹತ್ತು ಕೋಟಿಗಿಂತಲೂ ಎಷ್ಟೋ ಹೆಚ್ಚಿನ ಜನರನ್ನು ಕೊಂದಿವೆ.

ಇತರ ಸಮಸ್ಯೆಗಳು: ಮೇಲೆ ತಿಳಿಸಲ್ಪಟ್ಟ ಸಮಸ್ಯೆಗಳಿಗೆ, ಕೆಡುತ್ತಿರುವ ಕುಟುಂಬ ಕುಸಿತ, ಹೆಚ್ಚು ಅವಿವಾಹಿತ ತಾಯಂದಿರು, ವೃದ್ಧಿಯಾಗುತ್ತಿರುವ ಗೃಹರಾಹಿತ್ಯ, ಬಹುವ್ಯಾಪಕವಾದ ಅಮಲೌಷಧ ದುರುಪಯೋಗ, ಅತಿಯಾಗಿ ಹಬ್ಬಿರುವ ಅನೈತಿಕತೆಯನ್ನು ಕೂಡಿಸಿರಿ. ತಕ್ಕದ್ದಾಗಿಯೇ, ಅಮೆರಿಕದ ಮಾಜಿ ಮಂತ್ರಿಮಂಡಲದ ಒಬ್ಬ ಸದಸ್ಯನು ಹೇಳಿದ್ದು: “ನಾಗರಿಕತೆಯು ಕೊಳೆತುಹೋಗಿದೆಯೆಂಬದರ . . . ಧಾರಾಳವಾದ ಸೂಚನೆಗಳಿವೆ.” ಇತ್ತೀಚೆಗಿನ 30 ವರ್ಷಗಳ ಒಂದು ಅವಧಿಯಲ್ಲಿ, ಅಮೆರಿಕದ ಜನಸಂಖ್ಯೆಯು 41 ಪ್ರತಿಶತ ಬೆಳೆಯಿತು, ಆದರೆ ಹಿಂಸಾತ್ಮಕ ಪಾತಕವು 560 ಪ್ರತಿಶತ, ಜಾರಜ ಜನನಗಳು 400 ಪ್ರತಿಶತ, ವಿವಾಹವಿಚ್ಛೇದಗಳು 300 ಪ್ರತಿಶತ, ಹದಿವಯಸ್ಕರ ಆತ್ಮಹತ್ಯೆಯ ಸಂಖ್ಯೆ 200 ಪ್ರತಿಶತಕ್ಕಿಂತ ಹೆಚ್ಚು ಕ್ಷಿಪ್ರವಾಗಿ ಬೆಳೆಯಿತು. ಇತರ ರಾಷ್ಟ್ರಗಳಲ್ಲಿ ಸನ್ನಿವೇಶವು ತದ್ರೀತಿಯದ್ದಾಗಿದೆ.

ಸಮಸ್ಯೆಗಳು ಯಾಕೆ ಕೆಟ್ಟಿವೆ?

ನಮ್ಮ ಸೃಷ್ಟಿಕರ್ತನು ಉತ್ತರವನ್ನು ಒದಗಿಸುತ್ತಾನೆ. ಸಮಸ್ಯೆಗಳಿಂದ ತುಂಬಿರುವ ಈ ಸಮಯಗಳನ್ನು ಆತನ ವಾಕ್ಯವು “ನಿಭಾಯಿಸಲು ಕಠಿನವಾಗಿರುವ ಕಾಲ” ಗಳಿರುವ ಒಂದು ಅವಧಿ, “ಕಡೆಯ ದಿವಸಗಳು” ಎಂದು ಕರೆಯುತ್ತದೆ. (2 ತಿಮೊಥೆಯ 3:1, NW) ಯಾವುದರ ಕಡೆಯ ದಿವಸಗಳು? ಒಳ್ಳೇದು, ಬೈಬಲು “ಲೋಕದ ಅಂತ್ಯ”ದ ಕುರಿತಾಗಿ ಮಾತಾಡುತ್ತದೆ.—ಮತ್ತಾಯ 24:3, ಕಿಂಗ್‌ ಜೇಮ್ಸ್‌ ವರ್ಷನ್‌.

ಇಂದಿನ ಬೆಳೆಯುತ್ತಿರುವ ಸಮಸ್ಯೆಗಳು, ದುಷ್ಟತನದ ಮತ್ತು ಅದಕ್ಕೆ ಜವಾಬ್ದಾರರಾಗಿರುವವರೆಲ್ಲರ ಅಂತ್ಯವನ್ನು ಒಳಗೊಂಡು ಈ ವಿಷಯಗಳ ವ್ಯವಸ್ಥೆಯ ಅಂತ್ಯವು ಹತ್ತಿರವಿದೆಯೆಂಬದಕ್ಕೆ ಸ್ಪಷ್ಟವಾದ ರುಜುವಾತಾಗಿವೆ. (ಮತ್ತಾಯ 24:3-14; 2 ತಿಮೊಥೆಯ 3:1-5; ಪ್ರಕಟನೆ 12:7-12) ಬೇಗನೇ ದೇವರು ಹಸ್ತಕ್ಷೇಪಮಾಡಿ ಇಂದಿನ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಸಲ್ಪಡುವಂತೆ ನೋಡಿಕೊಳ್ಳುವನು.—ಯೆರೆಮೀಯ 25:31-33; ಪ್ರಕಟನೆ 19:11-21.

ಈ ಲೋಕದ ಧರ್ಮಗಳು ವಿಫಲಗೊಂಡಿವೆ

ಇಂದಿನ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುವ ಬದಲಿಗೆ, ಈ ಲೋಕದ ಧಾರ್ಮಿಕ ವ್ಯವಸ್ಥೆಗಳು ಅವುಗಳಿಗೆ ಕೂಡಿಸಿವೆ. ಯುದ್ಧಗಳ ಸಮಯದಲ್ಲಿ, ಕ್ಯಾತೊಲಿಕರು ಕ್ಯಾತೊಲಿಕರನ್ನು, ಪ್ರಾಟೆಸ್ಟಂಟರು ಪ್ರಾಟೆಸ್ಟಂಟರನ್ನು ಲಕ್ಷಗಟ್ಟಲೆಯಾಗಿ ಕೊಲ್ಲುತ್ತಾರೆ. ಸ್ವಲ್ಪ ಸಮಯದ ಹಿಂದೆ ರುವಾಂಡದಲ್ಲಿ, ಎಲ್ಲಿ ಹೆಚ್ಚಿನವರು ಕ್ಯಾತೊಲಿಕರಾಗಿದ್ದಾರೊ, ಅಲ್ಲಿ ಜನರು ಒಬ್ಬರನ್ನೊಬ್ಬರು ಲಕ್ಷಗಟ್ಟಲೆಯಾಗಿ ಕೊಂದರು! (ಎಡಕ್ಕೆ ಇರುವ ಚಿತ್ರವನ್ನು ನೋಡಿರಿ.)

ಅವರ ರಾಷ್ಟ್ರೀಯತೆಯು ತನ್ನಿಂದ ಭಿನ್ನವಾಗಿದ್ದ ಕಾರಣದಿಂದ ಯೇಸು ಒಂದು ಬಂದೂಕು ಅಥವಾ ಒಂದು ಮಚ್ಚುಕತ್ತಿಯೊಂದಿಗೆ ಯುದ್ಧಕ್ಕೆ ಹೋಗಿ ತನ್ನ ಶಿಷ್ಯರನ್ನು ಕೊಲ್ಲುತ್ತಿದ್ದನೋ? ಖಂಡಿತವಾಗಿಯೂ ಇಲ್ಲ! “ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂದು” ಬೈಬಲು ಹೇಳುತ್ತದೆ. (1 ಯೋಹಾನ 4:20, 21) ಈ ಲೋಕದ ಧರ್ಮಗಳು ಅದನ್ನು ಮಾಡುವುದರಲ್ಲಿ ವಿಫಲವಾಗಿವೆ. “ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ . . . ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳು” ತ್ತಾರೆ.—ತೀತ 1:16.

ಇನ್ನೂ ಹೆಚ್ಚಾಗಿ, ಬೈಬಲಿನ ನೈತಿಕತೆಯ ಮಟ್ಟಗಳನ್ನು ನಿಜವಾಗಿ ಎತ್ತಿಹಿಡಿಯದಿರುವದರಿಂದ, ಲೋಕದ ಧರ್ಮಗಳು ಲೋಕವ್ಯಾಪಕವಾದ ಆಘಾತಗೊಳಿಸುವ ನೈತಿಕ ಕುಸಿತಕ್ಕೆ ನೆರವು ನೀಡುತ್ತಿವೆ.

‘ಅದರ ಫಲಗಳಿಂದ,’ ಅದರ ಸದಸ್ಯರು ಏನು ಮಾಡುತ್ತಾರೋ ಅದರಿಂದ, ಒಬ್ಬನು ಸತ್ಯ ಧರ್ಮದಿಂದ ಸುಳ್ಳು ಧರ್ಮಕ್ಕಿರುವ ವ್ಯತ್ಯಾಸವನ್ನು ಹೇಳಬಹುದೆಂದು ಯೇಸು ತಿಳಿಸಿದನು. ಅವನು ಇದನ್ನೂ ಹೇಳಿದನು: “ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.” (ಮತ್ತಾಯ 7:15-20) ಕೆಟ್ಟ ಫಲಗಳನ್ನು ಕೊಡುವ ಮತ್ತು ಇದರಿಂದಾಗಿ ನಾಶನವನ್ನು ಎದುರಿಸುವ ಧರ್ಮದಿಂದ ಓಡಿಹೋಗುವಂತೆ ದೇವರ ವಾಕ್ಯವು ನಮ್ಮನ್ನು ಪ್ರೇರೇಪಿಸುತ್ತದೆ.—ಪ್ರಕಟನೆ 18:4.

ಸತ್ಯ ಧರ್ಮವು ವಿಫಲಗೊಂಡಿಲ್ಲ

ಸತ್ಯ ಧರ್ಮವು “ಒಳ್ಳೇ ಫಲವನ್ನು ಕೊಡು” ತ್ತದೆ, ವಿಶೇಷವಾಗಿ ಪ್ರೀತಿಯನ್ನು ಉತ್ಪಾದಿಸುತ್ತದೆ. (ಮತ್ತಾಯ 7:17; ಯೋಹಾನ 13:34, 35) ಇಂತಹ ಪ್ರೀತಿಯನ್ನು ಯಾವ ಐಕ್ಯ ಅಂತಾರಾಷ್ಟ್ರೀಯ ಕ್ರೈಸ್ತರ ಸಹೋದರತ್ವವು ಆಚರಿಸುತ್ತದೆ? ತಮ್ಮ ಸ್ವಂತ ಧರ್ಮದವರನ್ನು, ಅಥವಾ ಬೇರೆ ಯಾರನ್ನಾದರೂ ಕೊಲ್ಲಲು ಯಾರು ನಿರಾಕರಿಸುತ್ತಾರೆ?—1 ಯೋಹಾನ 3:10-12.

ಆ “ಒಳ್ಳೇ ಫಲವನ್ನು” ಕೊಡುವ ಖ್ಯಾತಿ ಯೆಹೋವನ ಸಾಕ್ಷಿಗಳಿಗಿದೆ. ಭೂಗೋಲದಲ್ಲಿಲ್ಲಾ, 230 ಕ್ಕಿಂತ ಹೆಚ್ಚಿನ ದೇಶಗಳಲ್ಲಿ ‘ಅವರು ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡಿದ್ದಾರೆ’. (ಯೆಶಾಯ 2:4) ದೇವರ ರಾಜ್ಯದ “ಸುವಾರ್ತೆ” ಯನ್ನು ಲೋಕವ್ಯಾಪಕವಾಗಿ ಸಾರಲಿಕ್ಕಿರುವ ಕ್ರಿಸ್ತನ ಆಜ್ಞೆಗೆ ಅವರ ವಿಧೇಯತೆಯಿಂದಲೂ ಜನರಿಗಾಗಿರುವ ಅವರ ಪ್ರೀತಿಯು ತೋರಿಸಲ್ಪಟ್ಟಿರುತ್ತದೆ. (ಮತ್ತಾಯ 24:14) ಅವರು ಬೈಬಲಿನಲ್ಲಿ ಕಲಿಸಲ್ಪಟ್ಟ ಉಚ್ಚ ನೀತಿತತ್ವಗಳನ್ನು ಸಹ ಆಚರಿಸುತ್ತಾರೆ ಮತ್ತು ಸಮರ್ಥಿಸುತ್ತಾರೆ.—1 ಕೊರಿಂಥ 6:9-11.

ಸತ್ಯ ಧರ್ಮವು ವಿಫಲಗೊಂಡಿಲ್ಲ. ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲು ಶಕ್ತನಾಗಿರುವ ಏಕಮಾತ್ರ ವ್ಯಕ್ತಿಗೆ ಅದು ಜನರನ್ನು ನಿರ್ದೇಶಿಸುತ್ತದೆ. ಬಲು ಬೇಗನೇ, ಆತನು ಪೂರ್ಣವಾಗಿ ಹೊಸದಾಗಿರುವ ಒಂದು ಲೋಕವನ್ನು ತರುವನು. ಆ ವ್ಯಕ್ತಿಯು ಯಾರು? (ದಯವಿಟ್ಟು ಕೊನೆಯ ಪುಟವನ್ನು ನೋಡಿರಿ.)

ಒಂದು ಸಮಸ್ಯೆಮುಕ್ತ ಪ್ರಮೋದವನವು ಖಂಡಿತ

ನಿಮಗೆ ಸಾಧ್ಯವಿದ್ದಲ್ಲಿ ಮಾನವಕುಲವನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ನೀವು ಬಗೆಹರಿಸುತ್ತಿರಲಿಲ್ಲವೋ? ಖಂಡಿತವಾಗಿಯೂ ನೀವು ಹಾಗೇ ಮಾಡುತ್ತಿದ್ದಿರಿ! ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲಿಕ್ಕೆ ಬೇಕಾದ ಶಕ್ತಿ ಮತ್ತು ವಿವೇಕವಿರುವ ಏಕಮಾತ್ರ ವ್ಯಕ್ತಿಯಾದ ನಮ್ಮ ಪ್ರೀತಿಯ ಸೃಷ್ಟಿಕರ್ತನು, ಅದಕ್ಕಿಂತ ಕಡಿಮೆ ಮಾಡುವನೆಂದು ನಾವು ನೆನಸಬೇಕೋ?

ಯೇಸು ಕ್ರಿಸ್ತನ ಕೈಯಲ್ಲಿ ತನ್ನ ಸ್ವರ್ಗೀಯ ಸರಕಾರದ ಮೂಲಕ ದೇವರು ಮಾನವ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡುವನೆಂದು ಬೈಬಲು ಪ್ರಕಟಪಡಿಸುತ್ತದೆ. ಅದು ಭೂಮಿಯ ಮೇಲಿರುವ ಭ್ರಷ್ಟ ಸರಕಾರಗಳನ್ನು “ಭಂಗಪಡಿ” ಸುವುದು. (ದಾನಿಯೇಲ 2:44; ಮತ್ತಾಯ 6:9, 10) ಮತ್ತು ಯಾಕೆ? ದೇವರನ್ನು ಉದ್ದೇಶಿಸುತ್ತಾ, ಕೀರ್ತನೆಗಾರನು ಉತ್ತರಿಸುವುದು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲಿಲ್ಲಾ ಸರ್ವೂನ್ನತನೆಂದು ಗ್ರಹಿಸುವರು.”—ಕೀರ್ತನೆ 83:18.

ಈ ಲೋಕವು ಅಂತ್ಯಗೊಳ್ಳುವಾಗ, ಪಾರಾಗುವವರು ಇರುವರೋ? “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಬೈಬಲ್‌ ಹೇಳುತ್ತದೆ. (1 ಯೋಹಾನ 2:17) ಪಾರಾಗುವವರಾದ ಇವರು ಸದಾಕಾಲ ಎಲ್ಲಿ ಜೀವಿಸುವರು? “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು,” ಎಂದು ಬೈಬಲು ಉತ್ತರಿಸುತ್ತದೆ.—ಕೀರ್ತನೆ 37:9-11, 29; ಜ್ಞಾನೋಕ್ತಿ 2:21, 22.

ದೇವರ ಹೊಸ ಲೋಕದಲ್ಲಿ, “ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕಟನೆ 21:4) ಇನ್ನು ಮುಂದೆ ಪಾತಕ, ಬಡತನ, ಹಸಿವು, ಅಸ್ವಸ್ಥತೆ, ದುಃಖ, ಅಥವಾ ಮರಣವಿಲ್ಲ! ಸತ್ತವರೂ ಪುನ ಜೀವಿಸುವರು! “ಒಂದು ಪುನರುತ್ಥಾನ” ವಿರುವದು. (ಅ. ಕೃತ್ಯಗಳು 24:15, NW) ಮತ್ತು ಭೂಮಿಯು ತಾನೇ ಒಂದು ಅಕ್ಷರಶಃ ಪ್ರಮೋದವನವಾಗಿ ಪರಿವರ್ತಿಸಲ್ಪಡುವುದು.—ಯೆಶಾಯ 35:1, 2; ಲೂಕ 23:43.

ದೇವರ ಹೊಸ ಲೋಕದಲ್ಲಿ ಜೀವನವನ್ನು ಅನುಭವಿಸಬೇಕಾದರೆ ನಾವೇನು ಮಾಡಬೇಕು? ಯೇಸು ಅಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಪ್ರಾಮಾಣಿಕ ಹೃದಯವುಳ್ಳ ಲಕ್ಷಾಂತರ ಜನರು ಲೋಕದಲ್ಲಿಲ್ಲಾ ಆ ಜ್ಞಾನವನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ತಮ್ಮ ಈಗಿನ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ಅದು ಅವರನ್ನು ಶಕ್ತರನ್ನಾಗಿ ಮಾಡುತ್ತದೆ ಆದರೆ ಹೆಚ್ಚು ಪ್ರಮುಖವಾಗಿ, ಬಗೆಹರಿಸಲು ಅವರ ಸಾಮರ್ಥ್ಯಕ್ಕೆ ಮೀರಿದ ಸಮಸ್ಯೆಗಳು ದೇವರ ಹೊಸ ಲೋಕದಲ್ಲಿ ಪೂರ್ಣವಾಗಿ ಬಗೆಹರಿಸಲ್ಪಡುವವು ಎಂಬ ಪೂರ್ಣ ಭರವಸೆಯನ್ನು ಅದು ಅವರಿಗೆ ಕೊಡುತ್ತದೆ.

[ಪುಟ 3 ರಲ್ಲಿರುವ ಚಿತ್ರ ಕೃಪೆ]

WHO photo by P. Almasy

[ಪುಟ 4 ರಲ್ಲಿರುವ ಚಿತ್ರ ಕೃಪೆ]

Jerden Bouman/Sipa Press