ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ?
ನಿಮ್ಮ ಅನಿಸಿಕೆ . . .
-
ಆಳುತ್ತಾನಾ?
-
ಆಳುವುದಿಲ್ವಾ?
-
• ಹೇಳಲಿಕ್ಕೆ ಆಗುವುದಿಲ್ವಾ?
ಪವಿತ್ರ ಗ್ರಂಥ ಏನು ಹೇಳುತ್ತದೆ?
“ಪರಲೋಕದೇವರು ಒಂದು ರಾಜ್ಯವನ್ನು [ಸರ್ಕಾರವನ್ನು] ಸ್ಥಾಪಿಸುವನು; ಅದು ಎಂದಿಗೂ ಅಳಿಯದು.”—ದಾನಿಯೇಲ 2:44.
“ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು.”—ಯೆಶಾಯ 9:6.
ಇದರರ್ಥ . .
-
ನಿಮ್ಮ ಒಳಿತಿಗಾಗಿ ಶ್ರಮಿಸುವ ಒಂದು ನೀತಿಯುತ ಸರ್ಕಾರ ಬರಲಿದೆ.—ಯೆಶಾಯ 48:17, 18.
-
ಸಂಪೂರ್ಣ ಆರೋಗ್ಯ ಮತ್ತು ಸಂತೋಷದಿಂದ ಬದುಕುವ ಹೊಸ ವ್ಯವಸ್ಥೆಯನ್ನು ಅದು ತರಲಿದೆ.—ಪ್ರಕಟನೆ 21:3, 4.
ಪವಿತ್ರ ಗ್ರಂಥ ಹೇಳುವುದನ್ನು ನಂಬಬಹುದಾ?
ಕೊನೆಯಪಕ್ಷ ಎರಡು ಕಾರಣಗಳಿಗಾದರೂ ಖಂಡಿತ ನಂಬಬಹುದು.
-
• ದೇವರ ಸರ್ಕಾರ ಸಾಧಿಸಲಿರುವ ವಿಷಯ ಗಳನ್ನು ಯೇಸು ಮಾಡಿ ತೋರಿಸಿದನು. ದೇವರ ಸರ್ಕಾರ ಬರಲಿ ಮತ್ತು ದೇವರ ಇಷ್ಟ ಭೂಮಿಯಲ್ಲಿ ನೆರವೇರಲಿ ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9, 10) ಅಷ್ಟೇ ಅಲ್ಲದೆ, ಈ ಪ್ರಾರ್ಥನೆಗೆ ಹೇಗೆ ಉತ್ತರ ಸಿಗುವುದೆಂದು ಯೇಸು ಕಾರ್ಯರೂಪದಲ್ಲೂ ತೋರಿಸಿದನು.
ಯೇಸು ಭೂಮಿಯಲ್ಲಿದ್ದಾಗ ಹಸಿದವರಿಗೆ ಆಹಾರ, ಅಸ್ವಸ್ಥರಿಗೆ ಆರೋಗ್ಯ ಮತ್ತು ಸತ್ತವರಿಗೆ ಮರುಜೀವ ಕೊಟ್ಟನು! (ಮತ್ತಾಯ 15:29-38; ಯೋಹಾನ 11:38-44) ಭವಿಷ್ಯದಲ್ಲಿ ದೇವರ ಸರ್ಕಾರದ ರಾಜನಾಗಲಿರುವ ಯೇಸು, ಆ ಸರ್ಕಾರ ತನ್ನ ಪ್ರಜೆಗಳಿಗಾಗಿ ಏನು ಮಾಡಲಿರುವುದೆಂಬ ಸುಂದರ ಮುನ್ನೋಟವನ್ನು ಕೊಟ್ಟನು.—ಪ್ರಕಟನೆ 11:15.
-
ಇಂದಿನ ಲೋಕದ ಪರಿಸ್ಥಿತಿ ದೇವರ ಆಳ್ವಿಕೆ ಸಮೀಪದಲ್ಲಿದೆ ಎಂದು ದೃಢೀಕರಿಸುತ್ತದೆ. ದೇವರ ಸರ್ಕಾರ ಭೂಮಿಗೆ ಶಾಂತಿ ತರುವ ಸ್ವಲ್ಪ ಮುಂಚೆ ಯುದ್ಧ, ಬರಗಾಲ ಮತ್ತು ಭೂಕಂಪಗಳಿಂದ ನಮ್ಮ ಈ ಲೋಕವು ತತ್ತರಿಸುವುದೆಂದು ಯೇಸು ತುಂಬಾ ಹಿಂದೆನೇ ತಿಳಿಸಿದ್ದನು.—ಮತ್ತಾಯ 24:3, 7.
ಅದೇ ರೀತಿಯ ಪರಿಸ್ಥಿತಿಯನ್ನು ಇಂದು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಆದ್ದರಿಂದ, ದೇವರ ರಾಜ್ಯವು ಬಲು ಬೇಗನೆ ಈ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುವುದೆಂದು ನಾವು ಭರವಸೆಯಿಂದಿರಬಹುದು.
ಯೋಚಿಸಿ
ದೇವರೇ ಆಳ್ವಿಕೆ ಮಾಡಿದರೆ ನಮ್ಮ ಜೀವನ ಹೇಗಿರುವುದು?
ಇದಕ್ಕೆ ಉತ್ತರ, ಪವಿತ್ರ ಗ್ರಂಥದ ಈ ಭಾಗದಲ್ಲಿದೆ: ಕೀರ್ತನೆ 37:29; ಯೆಶಾಯ 65:21-23.