ಮಾಹಿತಿ ಇರುವಲ್ಲಿ ಹೋಗಲು

ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?

ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?

ರಾಜ್ಯ ವಾರ್ತೆ ನಂ. 37

ಇಡೀ ಜಗತ್ತಿಗೆ ಒಂದು ಸಂದೇಶ

ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?

▪ ಧರ್ಮದ ಹೆಸರಿನಲ್ಲಿ ದುಷ್ಕೃತ್ಯಗಳನ್ನು ಏಕೆ ನಡೆಸಲಾಗುತ್ತಿದೆ?

▪ ಅವು ಹೇಗೆ ಅಂತ್ಯವಾಗುವವು?

▪ ಇದು ನಿಮ್ಮನ್ನು ಹೇಗೆ ಬಾಧಿಸುವುದು?

ಧರ್ಮದ ಹೆಸರಿನಲ್ಲಿ ದುಷ್ಕೃತ್ಯಗಳನ್ನು ಏಕೆ ನಡೆಸಲಾಗುತ್ತಿದೆ?

ಧರ್ಮದ ಹೆಸರಿನಲ್ಲಿ ನಡೆಸಲ್ಪಡುವ ಅಪರಾಧಗಳು ನಿಮ್ಮ ಮನಸ್ಸನ್ನು ಕಲಕುತ್ತಿವೆಯೊ? ದೇವರನ್ನು ಆರಾಧಿಸುತ್ತೇವೆಂದು ಹೇಳುವವರೇ ಯುದ್ಧ, ಭಯೋತ್ಪಾದನೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವಾಗ ನಿಮ್ಮ ನ್ಯಾಯಪ್ರಜ್ಞೆಯನ್ನು ಅಟ್ಟಹಾಸಮಾಡಲಾಗುತ್ತಿದೆ ಎಂದು ನಿಮಗನಿಸುತ್ತದೊ? ಬಹಳಷ್ಟು ಸಮಸ್ಯೆಗಳಿಗೆ ಧರ್ಮವೇ ಮೂಲಕಾರಣವೆಂದು ತೋರುವುದೇಕೆ?

ತಪ್ಪು ಎಲ್ಲಾ ಧರ್ಮಗಳದ್ದಲ್ಲ, ಬದಲಾಗಿ ದುಷ್ಕೃತ್ಯಗಳನ್ನು ಪ್ರವರ್ಧಿಸುವ ಧರ್ಮಗಳದ್ದೇ ಆಗಿದೆ. “ಹುಳುಕು ಮರವು ಕೆಟ್ಟ ಫಲವನ್ನು ಕೊಡು”ವಂತೆಯೇ ಅಂಥ ಧರ್ಮಗಳು ದುಷ್ಕೃತ್ಯಗಳನ್ನು ಉತ್ಪಾದಿಸುತ್ತವೆ ಎಂದು, ವ್ಯಾಪಕವಾಗಿ ಮಾನ್ಯಮಾಡಲ್ಪಟ್ಟಿರುವ ಒಬ್ಬ ಧಾರ್ಮಿಕ ಪುರುಷನಾದ ಯೇಸು ಕ್ರಿಸ್ತನು ಸೂಚಿಸಿದನು. (ಮತ್ತಾಯ 7:​15-17) ಅಂಥ ಧರ್ಮಗಳು ಯಾವ ಫಲವನ್ನು ಉತ್ಪಾದಿಸುತ್ತವೆ?

ಧರ್ಮದ ಹೆಸರಿನಲ್ಲಿ ನಡೆಸಲಾಗುವ ದುಷ್ಕೃತ್ಯಗಳಲ್ಲಿ ಕೆಲವು

ಯುದ್ಧ ಹಾಗೂ ರಾಜಕೀಯದಲ್ಲಿ ತಲೆಹಾಕುತ್ತಿರುವುದು: ಏಷಿಯಾವೀಕ್‌ ಎಂಬ ಪತ್ರಿಕೆ ಹೇಳಿದ್ದು: “ಏಷ್ಯಾ ಹಾಗೂ ಇತರ ಸ್ಥಳಗಳಲ್ಲಿ, ಅಧಿಕಾರದಾಹಿ ಧರ್ಮಮುಖಂಡರು ಜನರ ಧಾರ್ಮಿಕ ಭಾವನೆಗಳನ್ನು ತಮ್ಮ ಸ್ವಂತ ಅಗತ್ಯಗಳಿಗೆ ತಕ್ಕಂತೆ ತುಚ್ಛವಾದ ರೀತಿಯಲ್ಲಿ ಬಳಸುತ್ತಿದ್ದಾರೆ.” ಇದರ ಫಲಿತಾಂಶವಾಗಿ “ಲೋಕವು ಉನ್ಮಾದದಲ್ಲಿ ಮುಳುಗಿಹೋಗುವ ಅಪಾಯದಲ್ಲಿದೆ” ಎಂದು ಆ ಪತ್ರಿಕೆಯು ಎಚ್ಚರಿಸುತ್ತದೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಒಬ್ಬ ಪ್ರಖ್ಯಾತ ಧಾರ್ಮಿಕ ಮುಖಂಡನು ಘೋಷಿಸಿದ್ದು: “ಭಯೋತ್ಪಾದಕರು ಕೊಲ್ಲುವುದನ್ನು ನಿಲ್ಲಿಸಬೇಕಾದರೆ ಅವರನ್ನೇ ಕೊಲ್ಲಬೇಕು.” ಇದಕ್ಕಾಗಿ ಅವನು ಸೂಚಿಸುವ ವಿಧಾನ ಯಾವುದು? “ದೇವರ ಹೆಸರಿನಲ್ಲಿ ಅವರೆಲ್ಲರನ್ನೂ ಮುಗಿಸಿಬಿಡಿ.” ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೈಬಲ್‌ ಹೇಳುವುದು: “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ.” (1 ಯೋಹಾನ 4:20) “ನಿಮ್ಮ ವೈರಿಗಳನ್ನು ಪ್ರೀತಿಸಿರಿ” ಎಂದೂ ಯೇಸು ಹೇಳಿದನು. (ಮತ್ತಾಯ 5:44) ಎಷ್ಟು ಧರ್ಮಗಳ ಸದಸ್ಯರು ಯುದ್ಧದಲ್ಲಿ ಭಾಗವಹಿಸುತ್ತಿರುವುದು ನಿಮ್ಮ ನೆನಪಿಗೆ ಬರುತ್ತದೆ?

ಸುಳ್ಳು ಬೋಧನೆಗಳನ್ನು ಹಬ್ಬಿಸುತ್ತಿರುವುದು: ಆತ್ಮ ಎಂಬುದು ಮಾನವದೇಹದಲ್ಲಿರುವ ಒಂದು ಅದೃಶ್ಯ ಭಾಗವಾಗಿದೆ ಮತ್ತು ಮನುಷ್ಯನು ಸತ್ತನಂತರವೂ ಅದು ಬದುಕಿರುತ್ತದೆಂದು ಹೆಚ್ಚಿನ ಧರ್ಮಗಳು ಕಲಿಸುತ್ತವೆ. ಈ ಬೋಧನೆಯ ಕಾರಣ, ಅಗಲಿದ ಆತ್ಮಗಳಿಗಾಗಿ ಪ್ರಾರ್ಥಿಸಲಿಕ್ಕೋಸ್ಕರ ಹಣತೆಗೆದುಕೊಳ್ಳುವ ಮೂಲಕ ಹೆಚ್ಚಿನ ಧರ್ಮಗಳು ತಮ್ಮ ಸದಸ್ಯರ ಶೋಷಣೆಮಾಡುತ್ತವೆ. ಆದರೆ ಬೈಬಲ್‌ ತೀರ ಭಿನ್ನವಾದ ಸಂಗತಿಯನ್ನು ಬೋಧಿಸುತ್ತದೆ. “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಸತ್ತವರ ಪುನರುತ್ಥಾನವಾಗಲಿದೆ ಎಂದು ಯೇಸು ಕಲಿಸಿದನು. ಒಂದುವೇಳೆ ಮನುಷ್ಯರಲ್ಲಿ ಅಮರವಾದ ಆತ್ಮವಿರುವಲ್ಲಿ ಪುನರುತ್ಥಾನದ ಅಗತ್ಯವೇ ಇರುತ್ತಿರಲಿಲ್ಲ, ಅಲ್ಲವೇ? (ಯೋಹಾನ 11:​11-25) ಆತ್ಮವು ಸಾಯುವುದಿಲ್ಲವೆಂದು ನಿಮ್ಮ ಧರ್ಮವು ಕಲಿಸುತ್ತದೊ?

ಲೈಂಗಿಕ ಅನೈತಿಕತೆಯನ್ನು ಸಹಿಸುವುದು: ಪಾಶ್ಚಾತ್ಯ ದೇಶಗಳಲ್ಲಿ, ಚರ್ಚು ಗುಂಪುಗಳು ತಮ್ಮ ಸಲಿಂಗಕಾಮಿ ಸದಸ್ಯರು ಸಹ ಪಾದ್ರಿಗಳಾಗುವಂತೆ ದೀಕ್ಷೆಕೊಡುತ್ತವೆ ಮತ್ತು ಸಮಲಿಂಗ ವಿವಾಹಗಳಿಗೆ ಮನ್ನಣೆಕೊಡುವಂತೆ ಸರಕಾರಗಳನ್ನು ಒತ್ತಾಯಿಸುತ್ತವೆ. ಅನೈತಿಕತೆಯನ್ನು ಖಂಡಿಸುವಂಥ ಚರ್ಚುಗಳು ಸಹ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿರುವ ಧಾರ್ಮಿಕ ಮುಖಂಡರನ್ನು ಸಹಿಸಿಕೊಂಡಿವೆ. ಆದರೆ ಬೈಬಲ್‌ ಏನು ಬೋಧಿಸುತ್ತದೆ? ಅದು ಸ್ಪಷ್ಟವಾಗಿ ಹೇಳುವುದು: “ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು . . . ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ಲೈಂಗಿಕ ಅನೈತಿಕತೆಯನ್ನು ಸಹಿಸಿಕೊಳ್ಳುವಂಥ ಧರ್ಮಗಳ ಬಗ್ಗೆ ನಿಮಗೆ ತಿಳಿದಿದೆಯೊ?

ಕೆಟ್ಟ ಫಲವನ್ನು ಕೊಡುವ ಧರ್ಮಗಳ ಭವಿಷ್ಯವೇನು? ಯೇಸು ಎಚ್ಚರಿಸಿದ್ದು: “ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.” (ಮತ್ತಾಯ 7:19) ಹೌದು, ಅಂಥ ಧರ್ಮಗಳನ್ನು ಕಡಿದುಹಾಕಿ ನಾಶಮಾಡಲಾಗುವುದು! ಆದರೆ ಇದು ಹೇಗೆ ಮತ್ತು ಯಾವಾಗ ಸಂಭವಿಸುವುದು? ಬೈಬಲಿನಲ್ಲಿ ಪ್ರಕಟನೆ ಎಂಬ ಪುಸ್ತಕದ 17 ಮತ್ತು 18ನೆಯ ಅಧ್ಯಾಯಗಳಲ್ಲಿ ದಾಖಲಾಗಿರುವ ಒಂದು ಪ್ರವಾದನಾತ್ಮಕ ದರ್ಶನವು ಇದಕ್ಕೆ ಉತ್ತರ ಕೊಡುತ್ತದೆ.

ದುಷ್ಕೃತ್ಯಗಳನ್ನು ಪ್ರವರ್ಧಿಸುವ ಧರ್ಮಗಳು ಹೇಗೆ ಅಂತ್ಯವಾಗುವವು?

ಈ ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಏಳು ತಲೆಗಳು ಮತ್ತು ಹತ್ತು ಕೊಂಬುಗಳಿರುವ ಒಂದು ಭಯಂಕರ ಮೃಗದ ಮೇಲೆ ಒಬ್ಬ ಜಾರಸ್ತ್ರೀ ಕುಳಿತುಕೊಂಡಿದ್ದಾಳೆ. (ಪ್ರಕಟನೆ 17:​1-4) ಈ ಜಾರಸ್ತ್ರೀ ಯಾರನ್ನು ಪ್ರತಿನಿಧಿಸುತ್ತಾಳೆ? ಅವಳು “ಭೂರಾಜರ ಮೇಲೆ” ಪ್ರಭಾವಬೀರುತ್ತಾಳೆ, ಧೂಮ್ರವರ್ಣದ ವಸ್ತ್ರವನ್ನು ಧರಿಸಿದ್ದಾಳೆ, ಧೂಪವನ್ನು ಬಳಸುತ್ತಾಳೆ ಮತ್ತು ಬಹಳಷ್ಟು ಐಶ್ವರ್ಯವಂತಳಾಗಿದ್ದಾಳೆ. ಅಷ್ಟುಮಾತ್ರವಲ್ಲದೆ, ಅವಳ ಮಾಟಮಂತ್ರದಿಂದ ‘ಎಲ್ಲಾ ಜನಾಂಗದವರು ಮರುಳಾಗಿದ್ದಾರೆ.’ (ಪ್ರಕಟನೆ 17:18; 18:12, 13, 23) ಹೀಗೆ, ಈ ಜಾರಸ್ತ್ರೀಯು ಲೋಕವ್ಯಾಪಕವಾಗಿರುವ ಒಂದು ಧಾರ್ಮಿಕ ಸಂಘಟನೆಯಾಗಿದೆ ಎಂಬುದನ್ನು ನಾವು ಗ್ರಹಿಸುವಂತೆ ಬೈಬಲ್‌ ಸಹಾಯಮಾಡುತ್ತದೆ. ಅವಳು ಯಾವುದೇ ಒಂದು ಧರ್ಮವನ್ನಲ್ಲ ಬದಲಾಗಿ ಕೆಟ್ಟ ಫಲವನ್ನು ಉತ್ಪಾದಿಸುವ ಎಲ್ಲಾ ಧರ್ಮಗಳನ್ನು ಪ್ರತಿನಿಧಿಸುತ್ತಾಳೆ.

ಆ ಜಾರಸ್ತ್ರೀ ಸವಾರಿಮಾಡುತ್ತಿರುವ ಮೃಗವು ಲೋಕದ ರಾಜಕೀಯ ಶಕ್ತಿಗಳನ್ನು ಚಿತ್ರಿಸುತ್ತದೆ. * (ಪ್ರಕಟನೆ 17:​10-13) ದುಷ್ಕೃತ್ಯಗಳನ್ನು ಪ್ರವರ್ಧಿಸುವ ಧರ್ಮಗಳು ಈ ರಾಜಕೀಯ ಮೃಗದ ಮೇಲೆ ಸವಾರಿಮಾಡುತ್ತವೆ, ಅಂದರೆ ಅದರ ನಿರ್ಣಯಗಳನ್ನು ಪ್ರಭಾವಿಸಲು ಮತ್ತು ಅದು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ.

ಆದರೆ ಬಲುಬೇಗನೆ ಒಂದು ಚಕಿತಗೊಳಿಸುವಂಥ ಘಟನೆ ನಡೆಯಲಿದೆ. ‘ಹತ್ತು ಕೊಂಬುಗಳು ಮತ್ತು ಮೃಗದಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.’ (ಪ್ರಕಟನೆ 17:16) ಲೋಕದ ರಾಜಕೀಯ ಶಕ್ತಿಗಳು ತಟ್ಟನೆ, ಆಘಾತಕರವಾಗಿ ಕ್ರಮಗೈಯುತ್ತಾ ಅಂಥ ಧರ್ಮಗಳ ಮೇಲೆ ತಿರುಗಿಬಿದ್ದು, ಅವುಗಳನ್ನು ಸಂಪೂರ್ಣವಾಗಿ ನಾಶಮಾಡುವವು! ಈ ಕ್ರಮಗೈಯಲು ಪ್ರಚೋದನೆ ಏನಾಗಿರುವುದು? ಬೈಬಲಿನ ಪುಸ್ತಕವಾದ ಪ್ರಕಟನೆಯು ಹೇಳುವುದು: “ದೇವರು ತನ್ನ ವಚನವು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರಿಸಿದನು.” (ಪ್ರಕಟನೆ 17:17) ಹೌದು, ಅಂಥ ಎಲ್ಲಾ ಧರ್ಮಗಳು ದೇವರ ಹೆಸರಿನಲ್ಲಿ ನಡೆಸಿರುವ ತುಚ್ಛ ಕೃತ್ಯಗಳಿಗೆಲ್ಲಾ ಆತನು ಅವುಗಳಿಂದ ಲೆಕ್ಕಕೇಳುವನು. ದೇವರು ಪರಿಪೂರ್ಣ ನ್ಯಾಯದಿಂದ ಕಾರ್ಯವೆಸಗುತ್ತಾ, ಈ ಧರ್ಮಗಳ ರಾಜಕೀಯ ಪ್ರಿಯತಮರನ್ನೇ ಅವುಗಳ ಹತ್ಯೆಯ ಸಾಧನವಾಗಿ ಬಳಸುವನು.

ನೀವು ಈ ಧಾರ್ಮಿಕ ಜಾರಸ್ತ್ರೀಗಾಗುವ ದುರ್ಗತಿಯಲ್ಲಿ ಭಾಗಿಗಳಾಗಲು ಬಯಸದಿದ್ದರೆ ಏನು ಮಾಡಬೇಕು? “ಅವಳನ್ನು ಬಿಟ್ಟುಬನ್ನಿರಿ” ಎಂದು ದೇವರ ದೂತನು ಉತ್ತೇಜಿಸುತ್ತಾನೆ. (ಪ್ರಕಟನೆ 18:⁠4) ಹೌದು, ಅಂಥ ಧರ್ಮಗಳಿಂದ ಓಡಿಹೋಗುವ ಸಮಯವು ಇದೇ ಆಗಿದೆ! ಆದರೆ ನೀವು ಎಲ್ಲಿಗೆ ಓಡಿಹೋಗಬಹುದು? ನಾಸ್ತಿಕವಾದಕ್ಕಂತೂ ಅಲ್ಲ, ಏಕೆಂದರೆ ಅದರ ಭವಿಷ್ಯ ಸಹ ಕರಾಳವಾಗಿದೆ. (2 ಥೆಸಲೊನೀಕ 1:​6-9) ನೀವು ಓಡಿಹೋಗಬಹುದಾದ ಒಂದೇ ಒಂದು ಆಶ್ರಯವು ಸತ್ಯ ಧರ್ಮವೇ ಆಗಿದೆ. ಆದರೆ ಸತ್ಯ ಧರ್ಮವನ್ನು ನೀವು ಗುರುತಿಸುವುದು ಹೇಗೆ?

ಸತ್ಯ ಧರ್ಮವನ್ನು ಗುರುತಿಸುವ ವಿಧ

ಸತ್ಯ ಧರ್ಮವು ಯಾವ ಒಳ್ಳೇ ಫಲವನ್ನು ಕೊಡಬೇಕು?​—⁠ಮತ್ತಾಯ 7:⁠17.

ಸತ್ಯ ಧರ್ಮವು . . .

ಪ್ರೀತಿಯನ್ನು ಕಾರ್ಯರೂಪಕ್ಕೆ ಹಾಕುತ್ತದೆ: ಸತ್ಯಾರಾಧಕರು ‘ಈ ಲೋಕದ [ಭಾಗವಾಗಿಲ್ಲ],’ ಜಾತಿ ಇಲ್ಲವೆ ಸಂಸ್ಕೃತಿಯಿಂದ ವಿಭಜಿಸಲ್ಪಟ್ಟಿಲ್ಲ ಮತ್ತು ಅವರಿಗೆ ‘ತಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದೆ.’ (ಯೋಹಾನ 13:35; 17:16; ಅ. ಕೃತ್ಯಗಳು 10:​34, 35) ಒಬ್ಬರನ್ನೊಬ್ಬರು ಕೊಲ್ಲುವ ಬದಲು, ಅವರು ಒಬ್ಬರು ಇನ್ನೊಬ್ಬರಿಗಾಗಿ ತಮ್ಮ ಜೀವವನ್ನೂ ಕೊಡಲು ಸಿದ್ಧರಿರುತ್ತಾರೆ.​—⁠1 ಯೋಹಾನ 3:⁠16.

ದೇವರ ವಾಕ್ಯದ ಮೇಲೆ ಭರವಸೆಯಿಡುತ್ತದೆ: ಸತ್ಯಧರ್ಮವು “ಸಂಪ್ರದಾಯ” ಮತ್ತು ‘ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನು’ ಕಲಿಸುವ ಬದಲಿಗೆ ಅದರ ಬೋಧನೆಗಳನ್ನು ದೇವರ ವಾಕ್ಯವಾದ ಬೈಬಲಿನ ಮೇಲೆ ಆಧರಿಸುತ್ತದೆ. (ಮತ್ತಾಯ 15:​6-9) ಏಕೆ? ಏಕೆಂದರೆ “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” ​—⁠2 ತಿಮೊಥೆಯ 3:⁠16.

ಕುಟುಂಬಗಳನ್ನು ಬಲಪಡಿಸುತ್ತದೆ ಮತ್ತು ಉಚ್ಚ ನೈತಿಕ ಮಟ್ಟಗಳನ್ನು ಎತ್ತಿಹಿಡಿಯುತ್ತದೆ: ಸತ್ಯಧರ್ಮವು, ಗಂಡಂದಿರು ‘ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವಂತೆ’ ತರಬೇತಿಗೊಳಿಸುತ್ತದೆ, ಹೆಂಡತಿಯರು ‘ತಮ್ಮ ಗಂಡಂದಿರಿಗಾಗಿ [ಗೌರವವನ್ನು]’ ಬೆಳೆಸಿಕೊಳ್ಳುವಂತೆ ಮತ್ತು ಮಕ್ಕಳು ‘ತಮ್ಮ ತಂದೆತಾಯಿಗಳ ಮಾತನ್ನು ಕೇಳುವಂತೆ’ ಕಲಿಸುತ್ತದೆ. (ಎಫೆಸ 5:​28, 33; 6:⁠1) ಅಷ್ಟುಮಾತ್ರವಲ್ಲದೆ, ಸತ್ಯ ಧರ್ಮದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಆದರ್ಶಪ್ರಾಯ ನೈತಿಕ ತತ್ತ್ವಗಳನ್ನು ಪಾಲಿಸುವವರಾಗಿರಬೇಕು.​—⁠1 ತಿಮೊಥೆಯ 3:​1-10.

ಈ ಮಟ್ಟಗಳನ್ನು ತಲಪುವ ಯಾವ ಧರ್ಮವಾದರೂ ಇದೆಯೊ? 2001ರಲ್ಲಿ ಪ್ರಕಾಶಿಸಲ್ಪಟ್ಟಿರುವ ಹತ್ಯಾಕಾಂಡದ ರಾಜಕಾರಣ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಯೆಹೋವನ ಸಾಕ್ಷಿಗಳು ಸಾರುವ ಮತ್ತು ಸ್ವತಃ ಕಾರ್ಯರೂಪಕ್ಕೆ ಹಾಕುವ ವಿಷಯಗಳನ್ನೇ ಇನ್ನೂ ಹೆಚ್ಚು ಜನರು ಪಾಲಿಸುತ್ತಿದ್ದಲ್ಲಿ, ಯೆಹೂದ್ಯರ ಹತ್ಯಾಕಾಂಡವನ್ನು ತಡೆಗಟ್ಟಬಹುದಿತ್ತು ಮತ್ತು ಸಾಮೂಹಿಕ ಜನಹತ್ಯೆಯೆಂಬ ಪೀಡೆಯು ಲೋಕವನ್ನು ಎಂದೂ ಬಾಧಿಸುತ್ತಿರಲಿಲ್ಲ.”

235 ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಬೈಬಲಿನ ನೈತಿಕ ಮಟ್ಟಗಳನ್ನು ಇತರರಿಗೆ ಸಾರುತ್ತಾರೆ ಮಾತ್ರವಲ್ಲ, ಸ್ವತಃ ಅವರೇ ಅವುಗಳಿಗನುಸಾರ ಜೀವಿಸುತ್ತಾರೆ. ದೇವರನ್ನು ಸ್ವೀಕಾರಾರ್ಹವಾಗಿ ಆರಾಧಿಸಲು ನೀವೇನು ಮಾಡಬೇಕೆಂದು ಆತನು ಬಯಸುತ್ತಾನೆ? ನೀವು ಇದನ್ನು ಕಲಿಯಲು ಸಹಾಯಮಾಡಲಿಕ್ಕಾಗಿ ಯೆಹೋವನ ಸಾಕ್ಷಿಗಳನ್ನು ಕೇಳುವಂತೆ ಉತ್ತೇಜಿಸುತ್ತೇವೆ. ಕ್ರಿಯೆಗೈಯುವ ಸಮಯ ಇದೇ ಆಗಿದೆ. ತಡಮಾಡಬೇಡಿ, ಏಕೆಂದರೆ ದುಷ್ಕೃತ್ಯಗಳನ್ನು ಪ್ರವರ್ಧಿಸುವ ಧರ್ಮಗಳ ಅಂತ್ಯವು ಹತ್ತಿರವಿದೆ!​—⁠ಚೆಫನ್ಯ 2:​2, 3.

ಯೆಹೋವನ ಸಾಕ್ಷಿಗಳು ಸಾರುವ ಬೈಬಲಾಧಾರಿತ ಸಂದೇಶದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿರುವಲ್ಲಿ, ದಯವಿಟ್ಟು ಅವರನ್ನು ಈ ಕೆಳಗಿನ ವಿಳಾಸದಲ್ಲಿ ಸಂಪರ್ಕಿಸಿರಿ.

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಎಚ್ಚರಿಕೆಯಿಂದಿರಿ! ಎಂಬ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.

[ಪಾದಟಿಪ್ಪಣಿ]

^ ಪ್ಯಾರ. 17 ಈ ವಿಷಯದ ಬಗ್ಗೆ ಸವಿಸ್ತಾರವಾದ ವಿವರಣೆಗಾಗಿ ಯೆಹೋವನ ಸಾಕ್ಷಿಗಳ, ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪ್ರಕಾಶನವನ್ನು ನೋಡಿರಿ.

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

ದುಷ್ಕೃತ್ಯಗಳನ್ನು ಪ್ರವರ್ಧಿಸುವ ಧರ್ಮಗಳು “ಭೂರಾಜರ ಮೇಲೆ” ಪ್ರಭಾವಬೀರುತ್ತವೆ

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ”