ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಬೈಬಲ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅದು . . .

  • ಮನುಷ್ಯ ಬರೆದ ಪುಸ್ತಕ?

  • ಪುರಾಣ ಕಥೆಗಳಿರುವ ಗ್ರಂಥ?

  • ದೇವರ ಮಾತುಗಳಿರುವ ಗ್ರಂಥ?

ಬೈಬಲ್‌ ಏನು ಹೇಳುತ್ತದೆ?

“ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ.”​—2 ತಿಮೊಥೆಯ 3:16, ಸತ್ಯವೇದವು.

ಬೈಬಲ್‌ ನಿಮಗೆ . . .

ಜೀವನದಲ್ಲಿ ಏಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ.—ಜ್ಞಾನೋಕ್ತಿ 2:1-5.

ದಿನನಿತ್ಯದ ಬದುಕಿಗೆ ಬೇಕಾದ ಮಾರ್ಗದರ್ಶನ ಕೊಡುತ್ತದೆ.—ಕೀರ್ತನೆ 119:105.

ಭವಿಷ್ಯದಲ್ಲಿ ಬದುಕು ಹಸನಾಗುತ್ತೆ ಎನ್ನುವ ಪ್ರತೀಕ್ಷೆಯನ್ನೂ ನೀಡುತ್ತದೆ. —ರೋಮನ್ನರಿಗೆ 15:4.

ಬೈಬಲ್‌ ಹೇಳುವುದನ್ನು ನಂಬಬಹುದಾ?

ಖಂಡಿತ ನಂಬಬಹುದು. ಯಾಕೆ ಅಂತ ಮೂರು ಕಾರಣಗಳನ್ನು ನೋಡೋಣ:

  • ಸರಿಸಾಟಿಯಿಲ್ಲದ ಸಾಮರಸ್ಯ. ಬೈಬಲನ್ನು ಸುಮಾರು 40 ಜನರು ಬರೆದರು. ಬರೆದು ಮುಗಿಸಲು ಹೆಚ್ಚುಕಮ್ಮಿ 1,600 ವರ್ಷ ಹಿಡಿಯಿತು. ಈ 40 ಜನರಲ್ಲಿ ಬಹುಪಾಲು ಜನರು ಒಬ್ಬರನ್ನೊಬ್ಬರು ಭೇಟಿಯಾದದ್ದೇ ಇಲ್ಲ. ಆದರೂ ಎಲ್ಲರೂ ಒಂದೇ ವಿಷಯವನ್ನು ಆಧರಿಸಿ ಬರೆದಿದ್ದಾರೆ. ಹಾಗಾಗಿ ಇಡೀ ಬೈಬಲ್‌ನಲ್ಲಿ ಸಾಮರಸ್ಯವಿದೆ.

  • ಪ್ರಾಮಾಣಿಕ ಲೇಖಕರು. ಇತಿಹಾಸಕಾರರು ಹೆಚ್ಚಾಗಿ ತಮ್ಮ ಜನರ ಸೋಲುಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ. ಆದರೆ ಬೈಬಲನ್ನು ಬರೆದ ಲೇಖಕರು ತಮ್ಮ ತಪ್ಪುಗಳನ್ನು, ತಮ್ಮ ಜನರ ತಪ್ಪುಗಳನ್ನು ಮುಚ್ಚಿಹಾಕಲಿಲ್ಲ. ಇದ್ದದ್ದನ್ನು ಇದ್ದ ಹಾಗೇ ಬೈಬಲಿನಲ್ಲಿ ಬರೆದಿದ್ದಾರೆ.​—2 ಪೂರ್ವಕಾಲವೃತ್ತಾಂತ 36:15, 16; ಕೀರ್ತನೆ 51:1-4.

  • ಸುಳ್ಳಾಗದ ಭವಿಷ್ಯನುಡಿಗಳು. ಪ್ರಾಚೀನ ಬಾಬೆಲ್‌ ನಗರ ನಾಶವಾಗುವ 200 ವರ್ಷಗಳ ಹಿಂದೆಯೇ ಅದರ ನಾಶನದ ಬಗ್ಗೆ ಬೈಬಲ್‌ ಹೇಳಿತ್ತು. (ಯೆಶಾಯ 13:17-22) ಅಷ್ಟೇ ಅಲ್ಲ ಬಾಬೆಲ್‌ ನಗರ ಹೇಗೆ ನಾಶವಾಗುತ್ತೆ ಮತ್ತು ಆ ನಗರವನ್ನು ವಶಪಡಿಸಿಕೊಳ್ಳುವವನ ಹೆಸರೇನು ಅಂತ ಕೂಡ ಬೈಬಲ್‌ ಹೇಳಿತ್ತು.​—ಯೆಶಾಯ 45:1-3.

    ಬೈಬಲಿನಲ್ಲಿರುವ ಇಂಥ ಹತ್ತು-ಹಲವಾರು ಭವಿಷ್ಯನುಡಿಗಳು ಸತ್ಯವಾಗಿವೆ. ಆ ಭವಿಷ್ಯನುಡಿಗಳಲ್ಲಿ ತಿಳಿಸಲಾದ ಚಿಕ್ಕಚಿಕ್ಕ ವಿವರಣೆಗಳು ಸಹ ತಪ್ಪದೆ ನೆರವೇರಿವೆ. ಬೈಬಲ್‌ ದೇವರ ವಾಕ್ಯ ಅಂತ ನಂಬಲು ಇದಕ್ಕಿಂತ ಹೆಚ್ಚಿನ ಕಾರಣ ಬೇಕೆ?​—2 ಪೇತ್ರ 1:21.

ಯೋಚಿಸಿ

ನಿಮ್ಮ ಬದುಕನ್ನು ಉತ್ತಮಗೊಳಿಸಲು ದೇವರ ವಾಕ್ಯ ಹೇಗೆ ಸಹಾಯ ಮಾಡುತ್ತದೆ?

ಉತ್ತರ ಬೈಬಲಿನ ಈ ಭಾಗದಲ್ಲಿದೆ: ಯೆಶಾಯ 48:17, 18; 2 ತಿಮೊಥೆಯ 3:16, 17.