ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

ಸಭಾ ಕೂಟಗಳ ಕಾರ್ಯಕ್ರಮಕ್ಕೆ ತಯಾರಿ ಮಾಡುವುದು ಹೇಗೆ?

ಸಭಾ ಕೂಟಗಳ ಕಾರ್ಯಕ್ರಮಕ್ಕೆ ತಯಾರಿ ಮಾಡುವುದು ಹೇಗೆ?

ಕಾಂಬೋಡಿಯ

ಯುಕ್ರೇನ್‌

ಯೆಹೋವನ ಸಾಕ್ಷಿಗಳಿಂದ ಬೈಬಲ್‌ ವಿಷಯ ಕಲಿಯುತ್ತಿದ್ದೀರಾ? ಹಾಗಾದರೆ ಪ್ರತಿಬಾರಿ ಮುಂಚಿತವಾಗಿ ಓದಿ ತಯಾರಿ ಮಾಡುವ ಮಹತ್ವ ನಿಮಗೆ ಗೊತ್ತಿರಬಹುದು. ಸಭಾ ಕೂಟಗಳಲ್ಲಿ ತಿಳಿಸಲಾಗುವ ವಿಷಯಗಳನ್ನು ಸಹ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ಪೂರ್ವತಯಾರಿ ಮಾಡಬೇಕು. ರೂಢಿ ಮಾಡಿಕೊಂಡರಂತೂ ಫಲಿತಾಂಶ ಅದ್ಭುತವಾಗಿರುತ್ತದೆ.

ಸೂಕ್ತ ಸಮಯ ಹಾಗೂ ಪರಿಸರ ಆಯ್ಕೆ ಮಾಡಿ. ಏಕಾಗ್ರತೆ ಕೊಟ್ಟು ಓದಲು ನಿಮ್ಮಿಂದ ಯಾವಾಗ ಸಾಧ್ಯ? ಬೆಳಿಗ್ಗೆ ಕೆಲಸ ಆರಂಭಿಸುವ ಮುಂಚೆ . . . ರಾತ್ರಿ ಮಕ್ಕಳು ನಿದ್ರಿಸಿದ ಮೇಲೆ . . . ? ತುಂಬಾ ಹೊತ್ತು ಓದಲು ನಿಮ್ಮಿಂದ ಆಗದಿದ್ದಲ್ಲಿ ಎಷ್ಟು ಹೊತ್ತು ವ್ಯಯಿಸಲು ಸಾಧ್ಯ ಎಂದು ನಿರ್ಧರಿಸಿ. ಆ ನಿಗದಿತ ಸಮಯವನ್ನು ಇತರ ಸಂಗತಿ ಕಸಿದುಕೊಳ್ಳದಂತೆ ನೋಡಿಕೊಳ್ಳಿ. ಓದಿಗೆ ಪ್ರಶಾಂತ ಜಾಗ ಆಯ್ಕೆ ಮಾಡಿ. ಟೀವಿ, ಮೊಬೈಲ್‌ ಇತ್ಯಾದಿಗಳನ್ನು ಬಂದ್‌ ಮಾಡಿ ಅಡಚಣೆ ತಪ್ಪಿಸಿ. ತಯಾರಿ ಆರಂಭಿಸುವ ಮುನ್ನ ದೇವರ ಬಳಿ ಪ್ರಾರ್ಥಿಸಿ. ಆಗ ಚಿಂತೆಗಳನ್ನೆಲ್ಲ ಬದಿಗಿಟ್ಟು ಬೈಬಲ್‌ ಕಲಿಕೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಆಗುವುದು.—ಫಿಲಿಪ್ಪಿ 4:6, 7.

ಓದಿ ಅಡಿಗೆರೆ ಹಾಕಿ, ಚರ್ಚೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿ. ಮೊದಲು, ಓದುವ ವಿಷಯದ ಮೇಲ್ನೋಟ ಪಡೆದುಕೊಳ್ಳಿ. ಅದಕ್ಕಾಗಿ ಹೀಗೆ ಮಾಡಿ, ಲೇಖನದ ಅಥವಾ ಅಧ್ಯಾಯದ ಶೀರ್ಷಿಕೆಯನ್ನು ಮೊದಲು ಓದಿ. ಅದು ಲೇಖನದ ಮುಖ್ಯ ವಿಷಯ ಯಾವುದೆಂದು ಸೂಚಿಸುತ್ತದೆ. ನಂತರ ಪ್ರತಿಯೊಂದು ಉಪಶೀರ್ಷಿಕೆಯನ್ನು ಗಮನಿಸಿ. ಅವು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಆಲೋಚಿಸಿ. ಆಮೇಲೆ ಚಿತ್ರಗಳು ಹಾಗೂ ಪುನರವಲೋಕನ ಪ್ರಶ್ನೆಗಳನ್ನು ನೋಡಿ. ಅವು ಮುಖ್ಯ ವಿಷಯದ ಬಗ್ಗೆ ಹೇಗೆ ಇನ್ನಷ್ಟು ಸ್ಪಷ್ಟ ವಿವರ ನೀಡುತ್ತವೆ ಎಂದು ಚಿಂತಿಸಿ. ಅನಂತರ ಪ್ರತಿಯೊಂದು ಪ್ಯಾರಗ್ರಾಫ್‌ ಓದಿ ಅದರ ಕೆಳಗಿರುವ ಪ್ರಶ್ನೆಗೆ ಉತ್ತರ ಕಂಡು ಹಿಡಿಯಿರಿ. ಪ್ಯಾರಗ್ರಾಫ್‌ನಲ್ಲಿರುವ ಬೈಬಲ್‌ ವಚನಗಳನ್ನು ತೆರೆದು ಓದಿ. ಅವು ಪ್ಯಾರಗ್ರಾಫ್‌ನಲ್ಲಿರುವ ವಿಷಯದ ಬಗ್ಗೆ ಏನು ತಿಳಿಸುತ್ತವೆ ಎಂದು ಅವಲೋಕಿಸಿ. (ಅಪೊಸ್ತಲರ ಕಾರ್ಯಗಳು 17:11) ಉತ್ತರ ಕಂಡು ಹಿಡಿದ ಮೇಲೆ ಮುಖ್ಯ ಪದಗಳಿಗೆ ಅಥವಾ ವಾಕ್ಯಗಳಿಗೆ ಅಡಿಗೆರೆ ಹಾಕಿ. ಸಭಾ ಕೂಟದಲ್ಲಿ ಆ ಪದಗಳನ್ನು ನೋಡಿದ ಕೂಡಲೇ ಉತ್ತರವನ್ನು ನೆನಪಿಸಿಕೊಳ್ಳಲು ಸುಲಭವಾಗುತ್ತದೆ. ಚರ್ಚೆಯ ಸಮಯದಲ್ಲಿ ನೀವು ಸಹ ಕೈ ಎತ್ತಿ ಸ್ವಂತ ಮಾತಿನಲ್ಲಿ ಉತ್ತರ ಹೇಳಬಹುದು.

ಪ್ರತಿವಾರ ಸಭಾ ಕೂಟಗಳಲ್ಲಿ ಚರ್ಚಿಸಲಾಗುವ ವಿಭಿನ್ನ ವಿಷಯಗಳನ್ನು ಈ ರೀತಿ ಓದಿ ತಯಾರಿ ಮಾಡಿ. ಬೈಬಲಿನ ನಿಮ್ಮ ಜ್ಞಾನ ಭಂಡಾರ ಅಥವಾ “ಬೊಕ್ಕಸ” ಹೊಸ ವಿಷಯಗಳಿಂದ ಸಮೃದ್ಧಿಯಾಗಿ ಹಿಗ್ಗುವುದು.—ಮತ್ತಾಯ 13:51, 52.

  • ಸಭಾ ಕೂಟಗಳಿಗೆ ತಯಾರಿ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಲು ನೀವೇನು ಮಾಡಬೇಕು?

  • ಸಭಾ ಕೂಟದಲ್ಲಿ ಉತ್ತರ ಹೇಳಲು ಹೇಗೆ ತಯಾರಿ ಮಾಡುವಿರಿ?