ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 2

“ಯೆಹೋವನ ಸಾಕ್ಷಿಗಳು” ಎಂಬ ಹೆಸರೇಕೆ?

“ಯೆಹೋವನ ಸಾಕ್ಷಿಗಳು” ಎಂಬ ಹೆಸರೇಕೆ?

ನೋಹ

ಅಬ್ರಹಾಮ ಮತ್ತು ಸಾರ

ಮೋಶೆ

ಯೇಸು ಕ್ರಿಸ್ತ

ಯೆಹೋವನ ಸಾಕ್ಷಿಗಳು ಎಂದ ಕೂಡಲೆ ಅನೇಕರು ಇದ್ಯಾವುದಪ್ಪ ಹೊಸ ಧರ್ಮ ಎಂದು ಕೇಳಬಹುದು. ನಿಜ ಸಂಗತಿ ಏನೆಂದರೆ 2,700 ವರ್ಷಗಳ ಹಿಂದೆಯೇ ಸತ್ಯ ದೇವರಾದ ಯೆಹೋವನ ಭಕ್ತರನ್ನು “ಸಾಕ್ಷಿಗಳು” ಎಂದು ಬೈಬಲಿನಲ್ಲಿ ಕರೆಯಲಾಗಿದೆ. (ಯೆಶಾಯ 43:10-12) ‘ಬೈಬಲ್‌ ವಿದ್ಯಾರ್ಥಿಗಳು’ ಎಂಬ ನಮ್ಮ ಹೆಸರನ್ನು ಇಸವಿ 1931⁠ರಲ್ಲಿ ಯೆಹೋವನ ಸಾಕ್ಷಿಗಳು ಎಂದು ಬದಲಾಯಿಸಿದೆವು. ಕಾರಣ ಗೊತ್ತೇ?

ಈ ಹೆಸರು ನಮ್ಮ ದೇವರು ಯಾರೆಂದು ತಿಳಿಸುತ್ತದೆ. ಬೈಬಲನ್ನು ಬರೆದಾಗ ಅದರಲ್ಲಿ ಯೆಹೋವ ದೇವರ ಹೆಸರು ಸಾವಿರಾರು ಬಾರಿ ಇತ್ತು. ಆದರೆ ಬೈಬಲನ್ನು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸಿದಾಗ ಅನೇಕರು ಈ ಹೆಸರಿನ ಬದಲು ಕರ್ತನು, ದೇವರು ಎಂಬಂಥ ಬಿರುದುಗಳನ್ನು ಬಳಸಿದರು. ನಾವು ಗಮನಿಸಬೇಕಾದ ವಿಷಯ ಏನೆಂದರೆ ಸತ್ಯ ದೇವರು ಸಾವಿರಾರು ವರ್ಷಗಳ ಹಿಂದೆಯೇ ಮೋಶೆ ಎಂಬ ವ್ಯಕ್ತಿಗೆ ತನ್ನ ಹೆಸರು ಯೆಹೋವ ಎಂದು ತಿಳಿಸಿ “ಇದು ಸದಾಕಾಲಕ್ಕೂ ನನ್ನ ಹೆಸರು” ಎಂದು ಸ್ಪಷ್ಟವಾಗಿ ಹೇಳಿದ್ದನು. (ವಿಮೋಚನಕಾಂಡ 3:15) ಯೆಹೋವ ಎಂಬ ಹೆಸರು ಸತ್ಯ ದೇವರಾದ ಆತನನ್ನು ಸುಳ್ಳು ದೇವರುಗಳಿಂದ ಪ್ರತ್ಯೇಕಿಸುತ್ತದೆ. ಆ ಪವಿತ್ರ ನಾಮವನ್ನು ಪ್ರತಿನಿಧಿಸುವುದು ನಮಗೆ ಹೆಮ್ಮೆಯ ಸಂಗತಿ.

ನಮಗೆ ನಿಯೋಜಿಸಲಾಗಿರುವ ಕೆಲಸವನ್ನು ಒತ್ತಿಹೇಳುತ್ತದೆ. ಪ್ರಾಚೀನ ಕಾಲದಲ್ಲಿ ಜೀವಿಸಿದ್ದ ದೇವಭಕ್ತ ಹೇಬೆಲನಿಂದ ಹಿಡಿದು ನಮ್ಮ ಕಾಲದವರೆಗೂ ಯೆಹೋವ ದೇವರ ಕುರಿತು ಸಾಕ್ಷಿನೀಡಿದ್ದ ಅನೇಕಾನೇಕ ಜನರ ಉದ್ದ ಪಟ್ಟಿ ಬೈಬಲಿನಲ್ಲಿದೆ. “ಸಾಕ್ಷಿಗಳ ಇಷ್ಟೊಂದು ದೊಡ್ಡ ಮೇಘ”ದಲ್ಲಿ ನೋಹ, ಅಬ್ರಹಾಮ, ಸಾರ, ಮೋಶೆ, ದಾವೀದ ಮುಂತಾದವರು ಸಹ ಸೇರಿದ್ದಾರೆ. (ಇಬ್ರಿಯ 11:4–12:1) ನ್ಯಾಯಾಲಯದ ಕಟಕಟೆಯಲ್ಲಿ ನಿಂತು ನಿರ್ದೋಷಿಯ ಪರ ಸಾಕ್ಷಿ ನೀಡುವ ವ್ಯಕ್ತಿಯಂತೆ ನಾವು ಸಹ ನಮ್ಮ ದೇವರ ಕುರಿತ ಸತ್ಯವನ್ನು ತಿಳಿಸಲು ದೃಢಸಂಕಲ್ಪ ಮಾಡಿದ್ದೇವೆ.

ನಮ್ಮನ್ನು ಯೇಸುವಿನ ಅನುಯಾಯಿಗಳೆಂದು ತೋರಿಸುತ್ತದೆ. ಬೈಬಲ್‌ ಯೇಸುವನ್ನು ನಂಬಿಗಸ್ತ ಹಾಗೂ ಸತ್ಯ ಸಾಕ್ಷಿ ಎಂದು ಹೇಳುತ್ತದೆ. (ಪ್ರಕಟನೆ 3:14) ದೇವರ “ಹೆಸರನ್ನು ತಿಳಿಯಪಡಿಸಿದ್ದೇನೆ” ಎಂದು ಅವನೇ ಹೇಳಿದ್ದಾನೆ. ಮಾತ್ರವಲ್ಲ ದೇವರ ಕುರಿತ “ಸತ್ಯಕ್ಕೆ ಸಾಕ್ಷಿ” ನೀಡಿದ್ದಾನೆ. (ಯೋಹಾನ 17:26; 18:37) ಹಾಗಾದರೆ ಕ್ರಿಸ್ತನ ಅನುಯಾಯಿಗಳು ಸಹ ಯೆಹೋವ ದೇವರ ನಾಮಧಾರಿಗಳಾಗಿದ್ದು ಆ ನಾಮದ ಕುರಿತು ಇತರರಿಗೆ ತಿಳಿಸಬೇಕಲ್ಲವೆ? ಅದನ್ನೇ ಯೆಹೋವನ ಸಾಕ್ಷಿಗಳು ಮಾಡುತ್ತಿದ್ದಾರೆ.

  • ಬೈಬಲ್‌ ವಿದ್ಯಾರ್ಥಿಗಳು ಎಂಬ ಹೆಸರನ್ನು ಯೆಹೋವನ ಸಾಕ್ಷಿಗಳು ಎಂದು ಬದಲಿಸಲು ಕಾರಣವೇನು?

  • ಯೆಹೋವ ದೇವರಿಗೆ ಯಾವ ಕಾಲದಿಂದಲೂ ಸಾಕ್ಷಿಗಳಿದ್ದಾರೆ?

  • ಈ ಭೂಮಿಯ ಮೇಲೆ ಯೆಹೋವ ದೇವರ ಬಗ್ಗೆ ಅತ್ಯಧಿಕ ಪ್ರಮಾಣದಲ್ಲಿ ಸಾಕ್ಷಿ ನೀಡಿದ ವ್ಯಕ್ತಿ ಯಾರು?