ಮಾಹಿತಿ ಇರುವಲ್ಲಿ ಹೋಗಲು

ಲಕ್ಷಿಸುವಾತನಾದ ದೇವರೊಬ್ಬನು ಇದ್ದಾನೋ?

ಲಕ್ಷಿಸುವಾತನಾದ ದೇವರೊಬ್ಬನು ಇದ್ದಾನೋ?

ಲಕ್ಷಿಸುವಾತನಾದ ದೇವರೊಬ್ಬನು ಇದ್ದಾನೋ?

1, 2. (ಎ) ಒಂದನೇ ಪ್ಯಾರಾದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳು ನೀವು ಕೇಳಿದವುಗಳೇ ಆಗಿವೆಯೇ? (ಬಿ) ಅಂಥ ಪ್ರಶ್ನೆಗಳನ್ನು ಕೇಳುವುದಕ್ಕೆ ಯಾವ ಪರಿಸ್ಥಿತಿಗಳು ಜನರಿಗೆ ಕಾರಣವಾಗಿವೆ?

ದೇವರು ಅಸ್ತಿತ್ವದಲ್ಲಿದದ್ದಾದ್ದರೆ, ಇತಿಹಾಸದಲ್ಲೆಲ್ಲಾ ಭೀಕರವಾದ ಎಷ್ಟೋ ಸಂಗತಿಗಳು ಜನರಿಗೆ ಸಂಭವಿಸುವಂತೆ ಆತನು ಅನುಮತಿ ಕೊಟ್ಟಿರುವುದೇಕೆ? ಆತನು ನಿಜವಾಗಿಯೂ ನಮ್ಮನ್ನು ಲಕ್ಷಿಸುತ್ತಾನಾದರೆ, ದುಷ್ಟತನವೂ ಕಷ್ಟಾನುಭವವೂ ಮುಂದರಿಯುವಂತೆ ಆತನು ಬಿಟ್ಟಿರುವುದೇಕೆ?

2 ಎಲ್ಲೆಲ್ಲಿಯೂ ಇರುವ ವಿಚಾರಶೀಲರಾದ ಜನರು ಆ ಪ್ರಶ್ನೆಗಳನ್ನು ಕೇಳುತ್ತಾರೆ. ಮತ್ತು ಸಕಾರಣದಿಂದಲೇ, ಯಾಕೆಂದರೆ ಶತಮಾನಗಳಿಂದ ಮಾನವ ಕುಟುಂಬವು ಭೀಕರ ಯುದ್ಧಗಳಿಂದ, ಆಹಾರದ ಅಭಾವಗಳಿಂದ, ದಾರಿದ್ರ್ಯ, ದುಷ್ಕರ್ಮ ಮತ್ತು ರೋಗದಿಂದ ಬಹಳ ಕಷ್ಟವನ್ನನುಭವಿಸಿದೆ. ಅನ್ಯಾಯ ಮತ್ತು ದಬ್ಬಾಳಿಕೆಯು ಸಹ ಮಹತ್ತಾದ ದುಃಖವನ್ನುಂಟು ಮಾಡಿದೆ. ಹಾಗೆಯೇ ನೆರೆಗಳು ಮತ್ತು ಭೂಕಂಪಗಳಂಥ ವಿಪತ್ತುಗಳು ಸಹ. ಎಷ್ಟೋ ಸಲ ನಿರಪರಾಧಿಗಳಾದ ಜನರು ತಮ್ಮದೇ ಆದ ಯಾವ ತಪ್ಪಿರದಿದ್ದರೂ ಕಷ್ಟಪಡುತ್ತಾರೆ. ನಮಗೇನು ಸಂಭವಿಸುತ್ತದೆ ಎಂಬದರ ಕುರಿತು ದೇವರು ಲಕ್ಷಿಸುವುದಿಲ್ಲವೆಂಬದಕ್ಕೆ ಇವೆಲ್ಲವೂ ರುಜುವಾತಾಗಿದೆಯೇ? ಎಲ್ಲಿ ನಾವು ಭೂ ಜೀವಿತವನ್ನು ಈ ಎಲ್ಲಾ ತೊಂದರೆಗಳಿಲ್ಲದೆ ಪೂರ್ಣತೆಯಲ್ಲಿ ನಿಜವಾಗಿ ಆನಂದಿಸಸಾಧ್ಯವಿದೆಯೇ ಅಂಥ ಒಂದು ಲೋಕದ, ಒಂದು ಒಳ್ಳೇ ಲೋಕದ ಯಾವುದೇ ನಿಜ ಪರೀಕ್ಷೆಯು ಅಲ್ಲಿದೆಯೇ?

3. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಶಕ್ತರಾಗುವುದೇಕೆ ನ್ಯಾಯಸಮ್ಮತವಾಗಿದೆ?

3 ಅಂಥ ಪ್ರಶ್ನೆಗಳು ಸತ್ಯತೆಯುಳ್ಳ, ತೃಪ್ತಿಕರ ಉತ್ತರಗಳನ್ನು ಕೇಳಿಕೊಳ್ಳುತ್ತವೆ. ಆದರೆ “ನಾವು ಕಷ್ಟಪಡುವುದು ದೇವರ ಚಿತ್ತದಿಂದಲೇ” ಅಥವಾ “ಇವುಗಳು ನಾವು ತಿಳಿಯಲಾರದ ವಿಷಯಗಳು” ಎಂದು ಹೇಳಲ್ಪಡುವುದು ಸತ್ಯತೆಯಾದುದ್ದಲ್ಲ ಅಥವಾ ತೃಪ್ತಿಕರವಾದದ್ದಲ್ಲ. ಅಷ್ಟೊಂದು ವಿಸ್ಮಯಕರ ಕ್ರಮಬದ್ಧತೆಯೊಂದಿಗೆ ದೇವರು ಈ ಅಗಾಧ ವಿಶ್ವವನ್ನು ನಿರ್ಮಿಸಿದದ್ದಾದ್ದರೆ, ಮಾನವರನ್ನು ಇಷ್ಟು ಅಕ್ರಮತೆಗಿಳಿಯಲು ಬಿಟ್ಟಿರುವುದಕ್ಕೆ ಆತನಿಗೆ ನಿಶ್ಚಯವಾಗಿಯೂ ಒಂದು ಕಾರಣವಿರಬೇಕು. ಮತ್ತು ದುಷ್ಟತನಕ್ಕೆ ಏಕೆ ಅನುಮತಿ ಕೊಟ್ಟಿದ್ದಾನೆಂದು ನಮಗೆ ತಿಳಿಸಲು ಅಂಥ ನಿರ್ಮಾಣಿಕನೊಬ್ಬನು ತನ್ನ ಸ್ವಂತ ಮಾನವ ಸೃಷ್ಟಿಯ ಕುರಿತು ಸಾಕಷ್ಟು ಲಕ್ಷ್ಯವಿಡಲಾರನೋ? ಈ ಕೆಟ್ಟ ಪರಿಸ್ಥಿತಿಗಳನ್ನು ಸರಿಪಡಿಸಲು ಆತನಿಗೆ ಶಕ್ತಿಯಿರುವುದಾದರೆ ತಕ್ಕ ಸಮಯದಲ್ಲಿ ಹಾಗೆ ಮಾಡುವುದು ಆತನಿಗೆ ವಿವೇಕವೆನಿಸದೇ? ಪ್ರೀತಿಯುಳ್ಳ ಯಾವನೇ ತಂದೆಯು ತನಗೆ ಶಕ್ಯವಿದ್ದಲ್ಲಿ ತನ್ನ ಮಕ್ಕಳಿಗಾಗಿ ಅದನ್ನೇ ಮಾಡುವನು. ಖಂಡಿತವಾಗಿಯೂ ಸರ್ವ ತ್ರಾಣಿಯೂ ಸರ್ವ ಜ್ಞಾನಿಯೂ ಆಗಿರುವ ಪ್ರೀತಿಯುಳ್ಳ ನಿರ್ಮಾಣಿಕನೊಬ್ಬನು ತನ್ನ ಸ್ವಂತ ಲೌಕಿಕ ಮಕ್ಕಳಿಗಾಗಿ ಕಡಿಮೆ ಮಾಡಲಾರನು.

ಅತ್ಯುತ್ತಮ ಉತ್ತರವನ್ನು ಯಾರು ಕೊಡಶಕ್ತರು?

4. ದೇವರು ದುಷ್ಟತನಕ್ಕೇಕೆ ಅನುಮತಿ ಕೊಟ್ಟಿದ್ದಾನೆಂದು ನಮಗೆ ತಿಳಿಸಲು ಯಾರು ಉತ್ತಮ ಸ್ಥಾನದಲ್ಲಿದ್ದಾರೆ?

4 ದುಷ್ಟತನಕ್ಕೆ ದೇವರಿತ್ತಿರುವ ಅನುಮತಿಯ ಕುರಿತು ಪ್ರಶ್ನೆಗಳನ್ನು ಉತ್ತಮವಾಗಿ ಉತ್ತರಿಸಬಲ್ಲವರು ಯಾರು? ಒಳ್ಳೇದು, ಯಾವುದಾದರೂ ತಪ್ಪಿನ ಆರೋಪವು ನಿಮ್ಮ ಮೇಲೆ ಹೊರಿಸಲ್ಪಟ್ಟಿದ್ದರೆ, ಬೇರೆಯವರು ಆ ಕುರಿತು ಏನನ್ನುತ್ತಾರೋ ಅದನ್ನು ಮಾತ್ರವೇ ಜನರು ಕೇಳುವಂತೆ ನೀವು ಬಯಸುವಿರೋ? ಇಲ್ಲವೇ ಪ್ರಾಮಾಣಿಕತೆಯಿಂದ ತಿಳಿಯಬಯಸುವ ಯಾವನೊಬ್ಬನ ಮನಸ್ಸಿನಲ್ಲಿ ವಿಷಯವನ್ನು ಸ್ಪಷ್ಟೀಕರಿಸಲು ನಿಮಗಾಗಿ ನೀವೇ ಮಾತಾಡುವಂತೆ ಬಯಸುವಿರೋ? ದುಷ್ಟತನಕ್ಕೆ ಅನುಮತಿ ಕೊಟ್ಟದ್ದಕ್ಕಾಗಿ ದೇವರು ದೋಷಿಯಾಗಿ ಹಿಡಿಯಲ್ಪಟ್ಟಿದ್ದಾನೆ. ಅದಕ್ಕೆ ಅನುಮತಿ ಕೊಟ್ಟದ್ದೇಕೆಂದು ಆತನಿಗೆ ಚೆನ್ನಾಗಿ ತಿಳಿದಿರುವುದರಿಂದ, ಆತನು ತನ್ನ ಪರವಾಗಿ ತಾನೇ ಮಾತಾಡುವಂತೆ ಬಿಡುವುದು ಯುಕ್ತವಲ್ಲವೇ? ಉತ್ತರಗಳಿಗಾಗಿ ಮನುಷ್ಯರ ಕಡೆಗೆ ನೋಡುವುದೆಂದೂ ತೃಪ್ತಿಕರವಾಗಿರದು. ಯಾಕಂದರೆ ಈ ವಿಷಯಗಳ ಕುರಿತು ಎಷ್ಟೋ ಹೆಚ್ಚಾದ ಪ್ರತಿ ವಿರುದ್ಧವಾದ ವಿಚಾರಗಳು ಅದರಲ್ಲಿರುತ್ತವೆ.

5. ಬೈಬಲಿನ ಕರ್ತೃವು ದೇವರೆಂಬದಾಗಿ ನಂಬುವುದು ನ್ಯಾಯಸಮ್ಮತವೂ? (2 ಪೇತ್ರ 1:21; ಹಬಕ್ಕೂಕ 2:2)

5 ಉತ್ತರಗಳನ್ನು ದೇವರು ಒದಗಿಸಿರುವುದೆಲ್ಲಿ? ಸಂಭವಿಸಿದ್ದೇನು ಮತ್ತು ಏಕೆ ಎಂದು ನಮಗೆ ತಿಳಿಸಲು ನಿರ್ಮಾಣಿಕನು ಅಧಿಕಾರವಿತ್ತಿರುವ ಒಂದೇ ಒಂದು ಉಗಮವು ಅಲ್ಲಿದೆ. ಆ ಉಗಮವೇ ಬೈಬಲು, ಅದನ್ನುವುದು: “ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ.” (2 ತಿಮೊಥೆಯ 3:16) * ಇದು ಆಶ್ಚರ್ಯವೆನಿಸಬಾರದು. ಯಾಕೆಂದರೆ ಬೆರಗುಗೊಳಿಸುವ ವಿಶ್ವವೊಂದನ್ನು ನಿರ್ಮಿಸಲು ದೇವರಿಗೆ ಶಕ್ತಿಯಿತ್ತಾದರೆ, ನಿಶ್ಚಯವಾಗಿಯೂ ಪುಸ್ತಕವೊಂದರ ಕರ್ತೃವಾಗುವ ಶಕ್ತಿಯು ಆತನಿಗಿರಲೇಬೇಕು. ಮಾನವ ಮಾತ್ರದವರು ನಿಮ್ಮ ರೇಡಿಯೋ ಅಥವಾ ಟೆಲಿವಿಷನ್‌ ಸೆಟ್ಟಿನೊಳಗೆ ಅದೃಶ್ಯ ವಾಯುತರಂಗಗಳಾಚೆ ಹೊರಗಿನಿಂದ ಧ್ವನಿಗಳನ್ನು ಮತ್ತು ವಿಚಾರಗಳನ್ನು, ಚಿತ್ರಗಳನ್ನು ಸಹ ಪ್ರಕ್ಷೇಪಿಸಶಕ್ತರಾಗಿದ್ದಾರೆ. ಹೀಗಿರಲಾಗಿ ಸರ್ವಶಕ್ತನಾದ ನಿರ್ಮಾಣಿಕನಿಗೆ ತನ್ನ ವಿಚಾರಗಳನ್ನು ನಂಬಿಗಸ್ತ ಮಾನವ ಲೇಖಕರಿಗೆ ಪ್ರಕ್ಷೇಪಿಸುವುದಕ್ಕೆ ಮತ್ತು ಅವರದನ್ನು ಸುಸ್ಪಷ್ಟವಾಗಿಗಿ ಬರೆದಿಡುವಂತೆ ನೋಡಿಕೊಳ್ಳುವುದಕ್ಕೆ ಏನೊಂದು ದೊಡ್ಡ ಕೆಲಸವಲ್ಲ. ಆದುದರಿಂದಲೇ ಅಪೊಸ್ತಲನಾದ ಪೌಲನು ಆತ್ಮ ವಿಶ್ವಾಸದಿಂದ ಹೀಗೆ ನುಡಿಯಶಕ್ತನಾದನು: “ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ಸತ್ಯಪೂರ್ಣವಾಗಿರುವ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದಿರಿ.”—1 ಥೆಸಲೊನೀಕ 2:13.

6. ಬೈಬಲಿನ ಇತಿಹಾಸವು ಹಿಂದೆ ಎಷ್ಟು ದೂರಕ್ಕೆ ಹೋಗಿರುತ್ತದೆ, ಆದಕಾರಣ ಯಾವ ಸಮಾಚಾರವನ್ನು ಅದು ನಮಗೆ ಒದಗಿಸಬಲ್ಲದು? (ಲೂಕ 1:1-4; ಲೂಕ 3:23-38ನ್ನು ಗಮನಿಸಿರಿ.)

6 ಒಂದು ವೇಳೆ ನೀವು ಬೈಬಲನ್ನು ಎಂದೂ ಪರೀಕ್ಷಿಸದೆ ಇದ್ದಿರಬಹುದು. ಆದರೂ ಅದರಲ್ಲಿ ಇಂದು ಅಸ್ತಿತ್ವದಲ್ಲಿ ಅತಿ ಪೂರ್ಣವಾದ, ಕಾಲ ನಿರ್ದೇಶಕ ಐತಿಹಾಸಿಕ ದಾಖಲೆಯು ಅಡಕವಾಗಿರುತ್ತದೆ ಎಂದು ತಿಳಿಯುವುದರಲ್ಲಿ ನಿಮಗೆ ಅಭಿರುಚಿ ಇರಬಹುದು. ವಾಸ್ತವದಲ್ಲಿ, ಒಂದನೇ ಶತಮಾನದ ಇತಿಹಾಸಕಾರನೂ ಒಬ್ಬ ವೈದ್ಯಕೀಯ ಡಾಕ್ಟರನೂ ಆದ ಲೂಕನು ನಜರೇತಿನ ಯೇಸುವಿನ ವಂಶಾವಳಿಯನ್ನು ಇತಿಹಾಸದ ನಾಲ್ಕು ಸಾವಿರ ವರ್ಷಗಳನ್ನೆಲ್ಲಾ ತೂರಿಕೊಂಡು ಹಿಂದಕ್ಕೆ ಮೊದಲನೇ ಮನುಷ್ಯನ ತನಕವೂ ಹೆಜ್ಜೆಹೆಜ್ಜೆಯಾಗಿ, ಹೆಸರು ಹೆಸರಾಗಿ ಶೋಧಿಸಲು ಶಕ್ತನಾದನು. ಬೈಬಲು ಮನುಷ್ಯ ಅಸ್ತಿತ್ವದ ಅತಿ ಆರಂಭದ ಕಡೆಗೂ ಹೋಗಿರುವುದರಿಂದ, ದುಷ್ಟತ್ವಕ್ಕೆ ಯಾರು ದೋಷಿಯು, ದೇವರು ಅದಕ್ಕೆ ಅನುಮತಿ ಕೊಟ್ಟದ್ದೇಕೆ, ಮತ್ತು ಅದು ಹೇಗೆ ಪರಿಹರಿಸಲ್ಪಡುವುದು ಎಂಬದನ್ನು ಅದೇ ನಮಗೆ ತಿಳಿಸಶಕ್ತವಾಗಿದೆ.

ದೇವರು ದೋಷಿಯೋ?

7. ತಪ್ಪುಗಳು ಮಾಡಲ್ಪಡುವಾಗ, ಯಾರ ಮೇಲೆ ದೋಷ ಹೊರಿಸಲ್ಪಡಬೇಕು?

7 ಯಾರೋ ಬೇರೊಬ್ಬನು ಒಂದು ದುಷ್ಕರ್ಮವನ್ನು ಗೈದಿರಲಾಗಿ, ಅದಕ್ಕಾಗಿ ದೋಷವು ನಿಮ್ಮ ಮೇಲೆ ಹೊರಿಸಲ್ಪಟ್ಟದಾದ್ದರೆ ನಿಮಗೆ ಹೇಗೆನಿಸುವುದು? ಅದು ಅತ್ಯಂತ ಅನ್ಯಾಯವೆಂಬದಾಗಿ ನೀವು ಎಣಿಸುವಿರಿ. ಅಪರಾಧಿಗಳು ಶಿಕ್ಷಿಸಲ್ಪಡಬೇಕು ಮತ್ತು ನಿರಪರಾಧಿಗಳು ದೋಷ ವಿಮುಕ್ತರಾಗಬೇಕು ಎಂದು ನ್ಯಾಯವು ಕೇಳಿಕೊಳ್ಳುತ್ತದೆ. ಒಂದು ನಿಬಿಡವಾದ ಅಡ್ಡ ದಾರಿಯಲ್ಲಿ ನಿಲ್ಲು ಸಂಜ್ಞೆಯನ್ನು ಮೋಟಾರು ಡ್ರೈವರನೊಬ್ಬನು ಅಸಡ್ಡೆಮಾಡಿದರೆ ಮತ್ತು ಫಲಿತಾಂಶವಾಗಿ ಒಂದು ಕೆಟ್ಟ ಅಪಘಾತಕ್ಕೆ ಗುರಿಯಾದಾರೆ, ಅದು ನಿಯಮದ ತಪ್ಪಲ್ಲ. ವ್ಯಕ್ತಿಯೊಬ್ಬನು ಹೊಟ್ಟೆಬಾಕನಾಗಿದ್ದರೆ ಮತ್ತು ಮಿತಿಮೀರಿ ತಿನ್ನುವುದರಿಂದ ಅಸೌಖ್ಯದಲ್ಲಿ ಬಿದ್ದರೆ, ಆಹಾರವನ್ನು ಬೆಳೆಸಿದ ಬೇಸಾಯಗಾರನು ಅದಕ್ಕೆ ದೋಷಿಯಲ್ಲ. ಒಳ್ಳೇ ಪರಿಪಾಲನೆ ಕೊಡಲ್ಪಟ್ಟಾಗ್ಯೂ ಯುವಕನೊಬ್ಬನು ತನ್ನ ತಂದೆಯ ಸದ್ಭೋದೆಯನ್ನು ತಿರಸ್ಕರಿಸಿ ಮನೆಬಿಟ್ಟು ಹೋದರೆ ಮತ್ತು ನಂತರ ತೊಂದರೆಗೊಳಗಾದರೆ, ಅದಕ್ಕೆ ದೋಷಿಯು ತಂದೆಯಲ್ಲ. ಹೀಗಿರುವಲ್ಲಿ, ಮಾನವಕುಲವು ತಪ್ಪುಗಳನ್ನು ಮಾಡುವಾಗ ಸ್ವರ್ಗೀಯ ತಂದೆಯಾದ ದೇವರನ್ನೇಕೆ ದೂರಬೇಕು? ತಪ್ಪು ಎಲ್ಲಿದೆಯೋ ಅಲ್ಲಿ—ಅಪರಾಧಿಗಳ ಮೇಲೆಯೇ—ತಪ್ಪು ಹೊರಿಸಲ್ಪಡಬೇಡವೇ?

8. ಯಾವುದು ಕೆಟ್ಟದ್ದೋ ಅದಕ್ಕಾಗಿ ನಾವು ದೇವರನ್ನು ದೂರುವುದಾದರೆ ಯಾವ ವಿರೋಧೋಕ್ತಿಯು ಗೋಚರಿಸುತ್ತದೆ?

8 ಅದಲ್ಲದೆ ಗಮನಿಸಲ್ಪಡಬೇಕಾದ ಬೇರೊಂದು ವಿಷಯವೂ ಇದೆ. ಆಹಾರದ ಅಭಾವದಿಂದಾಗಿ ಹೊಟ್ಟೆಗಿಲ್ಲದಿರುವಿಕೆಯೇ ಮುಂತಾದವುಗಳಿಗೆ ನಾವು ದೇವರನ್ನು ದೂರುವುದಾದರೆ, ಅನೇಕ ದೇಶಗಳಲ್ಲಿ ಎಷ್ಟೋ ಸಮೃದ್ಧಿಯಾದ ಬೆಳೆಯನ್ನು ಉತ್ಪಾದಿಸುವ ಫಲವತ್ತಾದ ಹೊಲಗಳಿಗಾಗಿ ಮತ್ತು ಹಣ್ಣು ತೋಟಗಳಿಗಾಗಿ ನಾವು ಯಾರಿಗೆ ಕೀರ್ತಿಯನ್ನು ಕೊಡುವೆವು? ಅಸೌಖ್ಯಕ್ಕಾಗಿ ನಾವು ದೇವರ ಮೇಲೆ ತಪ್ಪು ಹೊರಿಸುವುದಾದರೆ ದೇಹದ ವಿಸ್ಮಯಕರವಾದ ಗುಣಕಾರಕ ಏರ್ಪಾಡಿಗಾಗಿ ಪ್ರಶಸ್ತಿಯನ್ನು ಯಾರಿಗೆ ಕೊಡುವೆವು? ನಗರದ ಹೊಲಸುಕೇರಿಗಾಗಿ ದೇವರ ಮೇಲೆ ದೋಷ ಹೊರಿಸುವುದಾದರೆ ಘನ ಗಾಂಭೀರ್ಯವುಳ್ಳ ಬೆಟ್ಟಗಳಿಗಾಗಿ, ತಿಳಿಯಾದ ಸರೋವರಗಳಿಗಾಗಿ, ಹರ್ಷಕರವಾದ ಪುಷ್ಪಗಳಿಗಾಗಿ ಮತ್ತು ಅಂದವಾದ ವೃಕ್ಷಗಳಿಗಾಗಿ ನಾವು ಯಾರನ್ನು ಹರಸುವೆವು? ಲೋಕದ ತೊಂದರೆಗಳಿಗಾಗಿ ನಾವು ದೇವರನ್ನು ದೂರಿ ಮತ್ತು ನಂತರ ಭೂಮಿಯ ಒಳ್ಳೇ ವಸ್ತುಗಳಿಗಾಗಿ ಆತನನ್ನೇ ಕೊಂಡಾಡುವುದಾದರೆ ಅದು ವಿರೋಧೋಕ್ತಿಯೆಂಬದು ಸ್ಪಷ್ಟ. ಪ್ರೀತಿಯುಳ್ಳ ಒಬ್ಬ ದೇವರು ಒಳ್ಳೇದನ್ನು ಮತ್ತು ಕೆಟ್ಟದ್ದನ್ನು ಎರಡನ್ನೂ ಒಂದೇ ಸಮಯದಲ್ಲಿ ಪ್ರವರ್ಧಿಸಲಾರನು.

9. ಮನುಷ್ಯರು ತಪ್ಪು ಕೆಲಸ ಮಾಡುತ್ತಾರೆ ಎಂಬ ಕಾರಣ ಮಾತ್ರದಿಂದ ದೇವರೇ ಅಸ್ತಿತ್ವದಲ್ಲಿಲ್ಲ ಎಂದು ಹೇಳುವುದು ನ್ಯಾಯಸಮ್ಮತವೂ? (ಯೆಶಾಯ 45:18)

9 ದೇವರು ಅಸ್ತಿತ್ವದಲ್ಲೀ ಇಲ್ಲ ಎಂದು ಹೇಳುವುದರಿಂದ ಸಮಸ್ಯೆಯು ಇನ್ನಷ್ಟು ಹೆಚ್ಚು ಕೆಡುತ್ತದೆ. ಈ ಭೂಮಿ ಮತ್ತು ಅದರ ಆಶ್ಚರ್ಯಕರ ಜೀವರಚನೆಯು ಅಕಸ್ಮಾತ್ತಾಗಿ ಸಂಭವಿಸಿತೆಂದು ನಂಬುವುದು ನಿಜತ್ವಗಳ ನಿರಾಕರಣೆಯಾಗಿದೆ. ಯಾವುದೇ ಮನೆಗಿಂತ ಭೂಮಿಯು ಜೀವ ಪೋಷಣೆಗಾಗಿ ಎಷ್ಟೋ ಉತ್ತಮವಾಗಿ ಸಜ್ಜಿತವಾಗಿದೆ. ಆದರೂ ಪ್ರತಿಯೊಂದು ಮನೆಗೆ ಒಬ್ಬ ಜ್ಞಾನಿಯಾದ ರಚಕನು ಮತ್ತು ಕಟ್ಟುವಾತನು ಇದ್ದಾನೆ. ಹೀಗಿರುವಾಗ ವಾಯು, ನೆಲ, ಜಲಗಳ ಎಷ್ಟೋ ಮಹತ್ತಾದ ಜೀವಪೋಷಕ ವ್ಯವಸ್ಥೆಯಿರುವ ಈ ಭೂಗೃಹದ ವಿಷಯದಲ್ಲೀನು? ನ್ಯಾಯಸಮ್ಮತವಾಗಿ ಬೈಬಲನ್ನುವುದು: “ಪ್ರತಿಯೊಂದು ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ.” (ಇಬ್ರಿಯ 3:4) ನಿಜ, ಮನುಷ್ಯರು ಕೆಟ್ಟತನವನ್ನು ಗೈಯುವುದೇ ದೇವರು ಅಸ್ತಿತ್ವದಲ್ಲಿಲ್ಲವೆಂದರ್ಥವೆಂದು ಕೆಲವು ಜನರು ತೀರ್ಮಾನಿಸುತ್ತಾರೆ. ಆದರೂ ಇದು ಮನೆಗಳಲ್ಲಿ ವಾಸಿಸುವವರು ಕೆಟ್ಟ ಕೆಲಸ ಮಾಡುತ್ತಾರಾದ ಕಾರಣ, ಆ ಮನೆಗಳನ್ನು ಯಾರೂ ರಚಿಸಲಿಲ್ಲ ಅಥವಾ ಕಟಲ್ಟಿಲ್ಲ ಎಂದು ಹೇಳಿದ ಹಾಗಾಗುತ್ತದೆ. ಅದು ಹೀಗೂ ಹೇಳಿದಂತಾಗುತ್ತದೆ ಏನೆಂದರೆ, ವ್ಯಕ್ತಿಯೊಬ್ಬನು ಏನಾದರೂ ತಪ್ಪನ್ನು ಮಾಡಿದನಾದ ಕಾರಣ ಅವನಿಗೆಂದೂ ತಂದೆಯಿರಲಿಲ್ಲ ಎಂಬದಾಗಿ.

10. ದುಷ್ಟತನಕ್ಕಾಗಿ ಹೆಚ್ಚಿನ ದೋಷವನ್ನು ಯಾರ ಮೇಲೆ ನಾವು ಹೊರಿಸಬಹುದು?

10 ಹಾಗಾದರೆ ಮಾನವ ಕುಟುಂಬಕ್ಕೆ ಸಂಭವಿಸಿದ ಭೀಕರ ವಿಷಯಗಳಿಗಾಗಿ ದೂರುವುದಾದರೂ ಯಾರನ್ನು? ಹೆಚ್ಚಿನ ತಪ್ಪು ಸಥ್ವಾ ಜನತೆಯ ಮೇಲೆಯೇ ಆಧರಿಸಿರುತ್ತದೆ. ಮಾನುಷ ಅಪ್ರಾಮಾಣಿಕತೆ ಮತ್ತು ಆಶಾಭಂಗವು ದುಷ್ಕರ್ಮಗಳಿಗೆ ಕಾರಣವಾಗುತ್ತದೆ. ಮಾನವ ದುರಭಿಮಾನ ಮತ್ತು ಸ್ವಾರ್ಥಪರತೆಯು ವಿವಾಹಗಳ ಒಡಕುಗಳಿಗೆ, ದ್ವೇಷಗಳಿಗೆ ಮತ್ತು ಜಾತೀಯ ದುರಭಿಮಾನಗಳಿಗೆ ಕಾರಣವಾಗಿದೆ. ಮಾನುಷ ತಪ್ಪುಗಳು ಮತ್ತು ನಿರಾಸಕ್ತಿಯು ಮಾಲಿನ್ಯತೆ ಮತ್ತು ಹೊಲಸಿಗೆ ಕಾರಣೀಭೂತವಾಗಿವೆ. ಮನುಷ್ಯರ ದುರಹಂಕಾರ ಮತ್ತು ಮೂರ್ಖತೆಯು ಯುದ್ಧಗಳನ್ನುಂಟು ಮಾಡುತ್ತದೆ; ಮತ್ತು ಇಡೀ ರಾಷ್ಟ್ರಗಳೇ ಆ ಯುದ್ಧಗಳೊಳಗೆ ತಮ್ಮ ರಾಜಕೀಯ ಮುಖಂಡರೊಂದಿಗೆ ಅಜ್ಞಾನದಿಂದ ಧುಮುಕುವಾಗ ಬರುವ ಕಷ್ಟಾನುಭವ ದೋಷಕ್ಕೆ ಅವರೇ ಪಾತ್ರರಾಗಿರಬೇಕು. ಹಸಿವೆ ಮತ್ತು ದಾರಿದ್ರ್ಯವು ಮುಖ್ಯವಾಗಿ ಮಾನವ ಅಸಡ್ಡೆ ಮತ್ತು ಲೋಭದಿಂದ ಉಂಟಾಗಿದೆ. ಗಮನಿಸಿರಿ: ಲೋಕವಿಂದು ವರ್ಷಕ್ಕೆ 1600 ಶತಕೋಟಿ ರೂಪಾಯಿಗಳಿಗಿಂತಲೂ ಹೆಚ್ಚನ್ನು ಶಸ್ತ್ರಾಸ್ತ್ರಗಳಿಗಾಗಿ ವಿನಿಯೋಗಿಸುತ್ತದೆ. ಇದೆಲ್ಲವನ್ನು ಆಹಾರದ ಉತ್ಪನ್ನ ಮತ್ತು ಸರಿಸಮಾನ ವಿತರಣೆಗಾಗಿ ಮತ್ತು ಬಡ ಮನೆಗಳ ಸುಧಾರಣೆಗಾಗಿ ಯೋಗ್ಯ ಉಪಯೋಗಕ್ಕೆ ಹಾಕಿದಲ್ಲಿ, ಏನೆಲ್ಲಾ ಮಾಡಸಾಧ್ಯವಿದೆ ಎಂಬದನ್ನು ಸ್ವಲ್ಪ ಯೋಚಿಸಿರಿ!

11. ವೈದಿಕರು ತಮ್ಮ ರಾಷ್ಟ್ರಗಳ ಸೇನೆಗಳಿಗಾಗಿ ಪ್ರಾರ್ಥಿಸುವುದರಿಂದ, ಆ ಸೇನೆಗಳು ಹೋರಾಡುವ ಯುದ್ಧಗಳಿಗಾಗಿ ದೇವರನ್ನು ದೋಷಿಯಾಗಿಡಸಾಧ್ಯವೂ? (ಯೆಶಾಯ 1:15; ಜ್ಞಾನೋಕ್ತಿ 28:9)

11 ಧರ್ಮದ ಹೆಸರಲ್ಲಿ ನಡಿಸಲ್ಪಡುವ ತಪ್ಪುಗಳಿಗಾಗಿಯೂ ನಾವು ದೇವರನ್ನು ದೋಷಿಯಾಗಿಡಸಾಧ್ಯವಿಲ್ಲ. ದೃಷ್ಟಾಂತಕ್ಕಾಗಿ, ವೈದಿಕರು ತಮ್ಮ ರಾಷ್ಟ್ರಗಳ ಯುದ್ಧಗಳ ಮೇಲೆ ದೇವರ ಆಶೀರ್ವಾದಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೂ ಹೆಚ್ಚಾಗಿ, ಪ್ರತಿ ವಿರುದ್ಧ ಪಕ್ಷದಲ್ಲಿದ್ದರೂ, ಸೈನಿಕರು ಒಂದೇ ಧರ್ಮಕ್ಕೆ ಸೇರಿರುವ ಒಬ್ಬರನ್ನೊಬ್ಬರು ಕೊಲ್ಲುತ್ತಾರೆ! ಅದಕ್ಕಾಗಿ ದೇವರನ್ನು ದೂಷಿಸಸಾಧ್ಯವಿಲ್ಲ, ಯಾಕೆಂದರೆ ಅವರೇನು ಮಾಡುತ್ತಾರೋ ಅದನ್ನು ಆತನು ಖಂಡಿಸುತ್ತಾನೆ, ತನ್ನನ್ನು ನಿಜವಾಗಿ ಸೇವಿಸುವವರು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಅನ್ನುತ್ತಾನೆ. (ಯೋಹಾನ 13:34, 35) ಅವರಲ್ಲಿ ಈ ಪ್ರೀತಿಯು ಇಲ್ಲದಿದ್ದರೆ ಅವರು “ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ” ಇದ್ದಾರೆ ಎಂದು ದೇವರನ್ನುತ್ತಾನೆ. (1 ಯೋಹಾನ 3:10-12) ಅನುಸಂಧಾನಗಳಲ್ಲಾಗಲಿ ಯುದ್ಧಗಳಲಾಗ್ಲಲಿ ದೇವರ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಸುಳ್ಳು ದೇವತೆಗಳಿಗೆ ಮಕ್ಕಳನ್ನು ಬಲಿಯರ್ಪಿಸುವ ಪ್ರಾಚೀನ ಪದ್ಧತಿಗೆ ಸರಿಸಮಾನವಾಗಿದೆ, “ನಾನು ಆ ಸಂಸ್ಕಾರವನ್ನು ವಿಧಿಸಲಿಲ್ಲ, ನನ್ನ ಹೃದಯದಲ್ಲಿ ಹುಟ್ಟಲೂ ಇಲ್ಲ” ಎಂದು ಸರ್ವಶಕ್ತನಾದ ದೇವರು ಆ ಕುರಿತು ಅನ್ನುತ್ತಾನೆ.—ಯೆರೆಮೀಯ 7:31.

12. ಧಾರ್ಮಿಕ ವೈದಿಕರನ್ನು ಬೈಬಲಿನಲ್ಲಿ “ಕಪಟಿಗಳು” ಎಂದು ಕರೆದಿರುವುದೇಕೆ? (ಮತ್ತಾಯ 15:7-9)

12 ವೈದಿಕರ ರಾಜಕೀಯ ತಲೆ ಹಾಕುವಿಕೆ, ಯುದ್ಧಗಳಿಗೆ ಬೆಂಬಲ, ಮತ್ತು ಈ ಲೋಕದ ಕಷ್ಟಗಳಿಗೆ ದೇವರು ಹೊಣೆಗಾರನು, ಅಥವಾ ಒಂದು ಅಕ್ಷರಾರ್ಥ ನರಕಾಗ್ನಿಯಲ್ಲಿ ಆತನು ಜನರಿಗೆ ಸದಾಕಾಲದ ಯಾತನೆ ಕೊಡುತ್ತಿರುತ್ತಾನೆ ಎಂದನ್ನುವಂಥ ಸುಳ್ಳು ಬೋಧನೆಗಳು ವಿವೇಚನೆಯುಳ್ಳ ಜನರಿಗೆ ಮತ್ತು ದೇವರಿಗೆ ಅಸಹ್ಯಕರವಾಗಿವೆ. ದೇವರಿಗೆ ವಿರೋಧವಾದ ವಿಷಯಗಳನ್ನು ಕಲಿಸುವ ಮತ್ತು ನಡಿಸುವ ಆ ಧಾರ್ಮಿಕ ಮುಖಂಡರನ್ನು ದೇವರ ವಾಕ್ಯವು “ಕಪಟಿಗಳು” ಎಂದು ಕರೆಯುತ್ತಾ ಅವರಿಗನ್ನುವುದು: “ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ, ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ. ಹಾಗೆಯೇ ನೀವು ಸಹ ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುತ್ತೀರಿ ಸರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.” (ಮತ್ತಾಯ 23:27, 28) ವಾಸ್ತವದಲ್ಲಿ ಯೇಸು ಆ ಕಪಟಿಗಳಾದ ಧಾರ್ಮಿಕ ಮುಖಂಡರಿಗೆ ಅಂದದ್ದು: “ನೀವು ನಿಮ್ಮ ತಂದೆಯಾದ ಪಿಶಾಚನಿಂದ ಹುಟ್ಟಿದವರಾಗಿದ್ದೀರಿ.”—ಯೋಹಾನ 8:44.

13. (ಎ) ಹೀಗೆ ಮನುಷ್ಯರು, ಧಾರ್ಮಿಕ ಮುಖಂಡರು ಸಹ ತಪ್ಪುಗಳನ್ನು ಮಾಡುವಾಗ ಅದಕ್ಕಾಗಿ ದೇವರನ್ನು ದೂರಸಾಧ್ಯವೂ? (ಬಿ) ಆದರೂ ಯಾವ ಪ್ರಶ್ನೆಗಳನ್ನು ಇನ್ನೂ ಕೇಳಸಾಧ್ಯವಿದೆ?

13 ಇಲ್ಲ, ಮಾನವರು ಸಥ್ವಾ ಗೈಯುತ್ತಿರುವ ತಪ್ಪುಗಳಿಗಾಗಿ ದೇವರು ದೋಷಿಯಲ್ಲ, ಮತ್ತು ದೇವರನ್ನು ಸೇವಿಸುತ್ತೇವೆಂದೂ ವಾದಿಸುವವರೂ ಆದರೆ ಸತ್ಯವನ್ನು ನುಡಿಯದವರೂ ಪಾಲಿಸದವರೂ ಆದ ಪಾದ್ರಿಗಳಿಂದ ಹರಸಲ್ಪಟ್ಟ ತಪ್ಪುಗಳಿಗೆ ಆತನನ್ನು ದೂರಸಾಧ್ಯವಿಲ್ಲ. ಒಳ್ಳೇದು, ಹಾಗಾದರೆ ಮಾನವಕುಲವನ್ನು ದೇವರು ರಚಿಸಿದ ವಿಧಾನದಲ್ಲಿ ಏನಾದರೂ ತಪ್ಪಿದೆಯೇ? ಆತನು ಮಾನವ ಜಾತಿಗೆ ಒಂದು ಕೆಟ್ಟ ಆರಂಭವನ್ನು ಕೊಟ್ಟನೋ?

ಒಂದು ಪರಿಪೂರ್ಣ ಆರಂಭ

14. ನಮ್ಮ ಪ್ರಥಮ ಹೆತ್ತವರಿಗೆ ದೇವರು ಕೊಟ್ಟಂಥ ಆರಂಭವನ್ನು ವರ್ಣಿಸಿರಿ. (ಆದಿಕಾಂಡ 1:26-31; 2:7-9, 15)

14 ಒಬ್ಬ ವ್ಯಕ್ತಿಯು ಆದಿಕಾಂಡ ಪುಸ್ತಕದ ಮೊದಲ ಎರಡು ಅಧ್ಯಾಯಗಳನ್ನು ಓದುವಾಗ, ದೇವರು ಪುರುಷನನ್ನು ಮತ್ತು ಸ್ತ್ರೀಯನ್ನು ನಿರ್ಮಿಸಿದ ಸಮಯದಲ್ಲಿ ಅವರಿಗೆ ಒಂದು ಪರಿಪೂರ್ಣ ಆರಂಭವನ್ನಿತ್ತನೆಂಬದು ಅತಿ ಸ್ಪಷ್ಟವಾಗಿಗುತ್ತದೆ. ಅವರನ್ನು ಅಸೌಖ್ಯವಾಗಲಿ ಮರಣವಾಗಲಿ ಎಂದೂ ಬಾಧಿಸದಂತೆ ಆತನು ಅವರನ್ನು ಸಂಪೂರ್ಣ ದೇಹ ಮತ್ತು ಮನಸ್ಸುಳ್ಳವರಾಗಿ ನಿರ್ಮಿಸಿದನು. ಅವರ ಮನೆಯು ಸುಂದರವಾದ ಪುಷ್ಪಗಳೂ ಹುಲುಸಾದ ಸಸ್ಯಗಳೂ ಫಲಬಿಡುವ ಮರಗಳೂ ಕೂಡಿದ್ದ ರಮ್ಯವಾದ ಉದ್ಯಾನವನದಂತಿತ್ತು. ಅಲ್ಲಿ ಯಾವ ಕೊರತೆಯೂ ಇರಲಿಲ್ಲ. ಬದಲಾಗಿ ಸಮೃದ್ಧಿಯಿತ್ತು. ಅಲ್ಲದೆ ದೇವರು ನಮ್ಮ ಪ್ರಥಮ ಹೆತ್ತವರ ಮುಂದೆ ಆಸಕ್ತಿಭರಿತ ಕೆಲಸವನ್ನೂ ಉತ್ತೇಜಕ ಗುರಿಗಳನ್ನೂ ಇಟ್ಟಿದ್ದನು. ಆ ಪರದೈಸದ ಪರಿಸ್ಥಿತಿಗಳನ್ನು ಸಮಸ್ತ ಭೂಮಿಯಲ್ಲೆಲ್ಲಾ ವಿಸ್ತರಿಸಿಕೊಳ್ಳುವಂತೆ ಅವರಿಗೆ ಆಜ್ಞೆಯನ್ನಿತ್ತನು. ತಕ್ಕ ಸಮಯದಲ್ಲಿ ಇದರಲ್ಲಿ ಅವರಿಗೆ ಸಹಾಯವು ಅವರು ಉತ್ಪಾದಿಸಲಿಕ್ಕಿದ್ದ ಅನೇಕ ಪರಿಪೂರ್ಣ ಮಕ್ಕಳಿಂದ ಕೊಡಲ್ಪಡಲಿಕ್ಕಿತ್ತು. ಹೀಗೆ ಕಟ್ಟಕಡೆಗೆ ಮಾನವ ಕುಟುಂಬವು ಜನತೆಯ ಒಂದು ಪರಿಪೂರ್ಣ ಕುಲವಾಗಿ ಭೂಪರದೈಸದಲ್ಲಿ ಜೀವಿಸುತ್ತಾ, ಜೀವವನ್ನು ನಿತ್ಯವಾಗಿ ಆನಂದಿಸುತ್ತಾ, ಪಶುಗಳನ್ನೂ ಪ್ರೀತಿಯುಳ್ಳ ಅಧೀನತೆಗೆ ತರಲಿಕ್ಕಿದ್ದರು.

15. ಮಾನವ ಪರಿಪೂರ್ಣತೆಯ ಅರ್ಥವೇನು, ಮತ್ತು ಅದರ ಅರ್ಥವು ಏನಾಗಿಲ್ಲ?

15 ಆದರೆ ವಿಷಯಗಳು ಇಷ್ಟು ವಿಪತ್ಕಾರಕವಾಗಿ ಪರಿಣಮಿಸಿದ್ದೇಕೆ? ಮೊತ್ತ ಮೊದಲಾಗಿ ದೇವರು ಮಾನವರನ್ನು ನಿಜವಾಗಿ ಪರಿಪೂರ್ಣರಾಗಿ ನಿರ್ಮಿಸದೆ ಇದ್ದದ್ದೇ ಅದಕ್ಕೆ ಕಾರಣವೂ? ಇಲ್ಲ, ವಿಷಯವು ಹಾಗಿಲ್ಲ, ಯಾಕಂದರೆ ಧರ್ಮೋಪದೇಶಕಾಂಡ 32:4 ದೇವರ ಕುರಿತಾಗಿ “ಆತನ ಕಾರ್ಯದಲ್ಲಿ ಯಾವ ಕುಂದೂ ಇಲ್ಲ” ಎಂದು ಹೇಳಿರುತ್ತದೆ. ಆದರೂ ಮಾನವ ಸಂಪೂರ್ಣತೆಯೆಂದರೆ ಮೊದಲನೆ ಜೊತೆಗೆ ಎಲ್ಲವೂ ತಿಳಿದಿತ್ತೆಂದಾಗಲಿ ಎಲ್ಲವನ್ನೂ ಮಾಡಶಕ್ತಿಯಿತ್ತೆಂದಾಗಲಿ ತಪ್ಪನ್ನೇ ಮಾಡಲಾರರೆಂದಾಗಲಿ ಅರ್ಥವಿರಲಿಲ್ಲ. ಪರಿಪೂರ್ಣ ಜೀವಿಗಳಿಗೆ ಸಹ ಪರಿಮಿತಿಗಳಿವೆ. ದೃಷ್ಟಾಂತಕ್ಕಾಗಿ, ಅಲ್ಲಿ ಶಾರೀರಿಕ ಪರಿಮಿತಿಗಳಿದ್ದವು. ಅವರು ಆಹಾರವನ್ನುಣ್ಣದಿದ್ದರೆ, ನೀರನ್ನು ಕುಡಿಯದಿದ್ದರೆ ಮತ್ತು ಗಾಳಿಯನ್ನು ಉಸಿರಾಡದಿದ್ದರೆ ಅವರು ಸಾಯುತ್ತಿದ್ದರು. ಅಲ್ಲದೆ ಗುರುತ್ವಾಕರ್ಷಣೆಯ ನಿಯಮವೇ ಮುಂತಾದದ್ದನ್ನು ಮೀರಿ ಒಂದು ಉನ್ನತವಾದ ಸ್ಥಳದಿಂದ ಕೆಳಗೆ ಹಾರಿದರೂ ತಮಗೇನೂ ಹಾನಿ ತಟ್ಟದು ಎಂದು ಅಪೇಕ್ಷಿಸಸಾಧ್ಯವಿರಲಿಲ್ಲ. ಅಲ್ಲದೆ ಅವರಿಗೆ ಮಾನಸಿಕ ಪರಿಮಿತಿಗಳೂ ಇದ್ದವು. ಆದಾಮಹವ್ವರಿಗೆ ಪ್ರತ್ಯಕ್ಷವಾಗಿ ತುಂಬಾ ಕಲಿಯಲಿಕ್ಕಿತ್ತು ಯಾಕಂದರೆ ಅವರಿಗೆ ಯಾವುದರ ಅನುಭವವೂ ಇರಲಿಲ್ಲ. ಆದರೆ ಅವರೆಷ್ಟನ್ನೇ ಕಲಿಯಲಿ, ತಮ್ಮ ನಿರ್ಮಾಣಿಕನಷ್ಟನ್ನು ಮಾತ್ರ ಅವರೆಂದೂ ತಿಳಿಯಶಕ್ತರಿರಲಿಲ್ಲ. ಹೀಗೆ ಪರಿಪೂರ್ಣರಾಗಿದ್ದರೂ ಮಾನವ ರಂಗದಲ್ಲಿದ್ದ ಕಾರಣ ಪರಿಮಿತಿಯೊಳಗಿದ್ದರು. ಪರಿಪೂರ್ಣತೆಯೆಂದರೆ ಕೇವಲ ಅವರು ಪೂರ್ಣರಾಗಿದ್ದರು ಎಂದರ್ಥ, ಅಂದರೆ ಅವರ ಶಾರೀರಿಕ ಮತ್ತು ಮಾನಸಿಕ ರಚನೆಯಲ್ಲಿ ಯಾವ ಲೋಪವೂ ಇರಲಿಲ್ಲ.

16. ಯಾವ ಮೇರೆಗಳೊಳಗೆ ಮನುಷ್ಯ ಸ್ವಾತಂತ್ರ್ಯವು ಉತ್ತಮವಾಗಿ ಕಾರ್ಯ ನಡಿಸುವಂತೆ ರಚಿಸಲ್ಪಟ್ಟಿತ್ತು? (1 ಪೇತ್ರ 2:16)

16 ಅದಲ್ಲದೆ ದೇವರು ಮನುಷ್ಯರನ್ನು ಕ್ರಿಯಾ ಸ್ವಾತಂತ್ರ್ಯದೊಂದಿಗೆ ನಿರ್ಮಿಸಿದ್ದನು, ಪ್ರಾಣಿಗಳಂತೆ ಹುಟ್ಟರಿವಿನಿಂದ ಮಾತ್ರವೇ ನಡಿಸಲ್ಪಡುವುದಲ್ಲ. ಮತ್ತು ನೀವು ನಿಶ್ಚಯವಾಗಿಯೂ ಅಂಥ ಸ್ವಾತಂತ್ರ್ಯವನ್ನು ಗಣ್ಯ ಮಾಡುವಿರಿ. ನೀವೇನು ಮಾಡಬೇಕೆಂದು ನಿಮ್ಮ ಜೀವಿತದ ಪ್ರತಿಯೊಂದು ನಿಮಿಷದಲ್ಲಿ ಯಾರಾದರೊಬ್ಬನು ನಿಮಗೆ ಆಜ್ಞೆ ಕೊಡುತ್ತಾ ಇರುವುದನ್ನು ನೀವು ಬಯಸಲಾರಿರಿ. ಆದರೂ ಆ ಸ್ವಾತಂತ್ರ್ಯವು ಸಂಪೂರ್ಣವಲ್ಲ, ಅಂದರೆ ಪರಿಮಿತಿಯಿಲ್ಲದ್ದಲ್ಲ, ಬದಲಿಗೆ ಸಂಬಂಧಿತವಾಗಿದೆ. ದೇವರ ನಿಯಮದ ಮೇರೆಗಳೊಳಗೆ ಅದು ನಿರ್ವಹಿಸಲ್ಪಡಬೇಕು. ಈ ಉತ್ತಮ ನಿಯಮಗಳು ಕೇವಲ ಕೆಲವೇ ಮತ್ತು ಸರಳವಾದವುಗಳಾಗಿದ್ದು ಇಡೀ ಮಾನವ ಕುಟುಂಬದ ಅತ್ಯಂತ ಸಂತೋಷವನ್ನು ಗಮನದಲ್ಲಿಟ್ಟೇ ರಚಿಸಲಾಗಿವೆ. ಮನುಷ್ಯರು ತನ್ನ ನಿಯಮಕ್ಕೆ ವಿಧೇಯರಾಗಬೇಕೆಂದು ದೇವರ ಕೇಳಿಕೊಳ್ಳುವಿಕೆಯಿಂದ ಮಾನವರಲ್ಲಿ ಆತನಿಗಿರುವ ಪ್ರೀತಿಯು ತೋರಿಬರುತ್ತದೆ, ಯಾಕೆಂದರೆ ಆ ನಿಯಮಗಳಿಗೆ ಗೌರವವು ಅನಂತ ಪ್ರಯೋಜನಗಳನ್ನು ತರುವುದೆಂದು ಆತನಿಗೆ ತಿಳಿದಿದೆ. ದೇವರಿಗೂ ಆತನ ನಿಯಮಕ್ಕೂ ಅಗೌರವವು ಅವರ ಸಂತೋಷಕ್ಕೆ ಅಡಿಯ್ಡಾಗುವುದು. ಅದು ಯಾವ ಹಿತವನ್ನೂ ಬರಮಾಡದು. ವಾಸ್ತವದಲ್ಲಿ, ನಿರ್ದಿಷ್ಟ ವಿಪತ್ತನ್ನು ಅದು ತರುವುದು. ಯಾಕೆಂದರೆ ಆದಾಮಹವ್ವರು ತನ್ನನ್ನು ತ್ಯಜಿಸಿಬಿಟ್ಟರೆ “ನಿಶ್ಚಯವಾಗಿಯೂ ಸಾಯುವರು” ಎಂದು ದೇವರು ಎಚ್ಚರಿಸಿದ್ದನು. (ಆದಿಕಾಂಡ 2:17) ಆದ್ದರಿಂದ ಜೀವಿಸುತ್ತಾ ಇರುವುದಕ್ಕೆ, ಅವರಿಗೆ ಊಟ ಮಾಡುವ, ನೀರು ಕುಡಿಯುವ ಮತ್ತು ಗಾಳಿಯನ್ನು ಉಸಿರಾಡುವ ಅಗತ್ಯವಿತ್ತು ಮಾತ್ರವೇ ಅಲ್ಲ ದೇವರಿಂದಲೂ ಆತನ ನಿಯಮದಿಂದಲೂ ನಡೆಸಲ್ಪಡುವ ಅಗತ್ಯವೂ ಇತ್ತು.

17. ಮನುಷ್ಯರಿಗೆ ದೇವರ ಮೇಲೆ ಆತುಕೊಳ್ಳುವ ಅಗತ್ಯವೇಕೆಂಬದಕ್ಕೆ ಇನ್ನೊಂದು ಮಹತ್ವದ ಕಾರಣವು ಯಾವುದು? (ಕೀರ್ತನೆ 146:3; ಯೆರೆಮೀಯ 17:5-9)

17 ನಮ್ಮ ಮೊದಲನೆ ಹೆತ್ತವರಿಗೆ ದೇವರ ಮೇಲೆ ಆತುಕೊಳ್ಳುವ ಅಗತ್ಯವಿತ್ತೇಕೆಂಬದಕ್ಕೆ ಇನ್ನೊಂದು ಅತಿ ನಿರ್ಧಾರಕ ಕಾರಣವು ಅಲ್ಲಿತ್ತು. ಆ ಕಾರಣವು ಏನಂದರೆ ಮಾನವರು ದೇವರಿಂದ ಸ್ವತಂತ್ರವಾಗಿ ತಮ್ಮ ಕಾರ್ಯಾಧಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ನಿರ್ಮಿಸಲ್ಪಟ್ಟಿರಲ್ಲಿಲ ಎಂಬದೇ. ಅದನ್ನು ಮಾಡುವ ಹಕ್ಕನ್ನಾಗಲಿ ಸಾಮರ್ಥ್ಯವನ್ನಾಗಲಿ ದೇವರು ಅವರಿಗೆ ಕೊಟ್ಟಿರಲಿಲ್ಲ. ಬೈಬಲು ಅನ್ನುವ ಪ್ರಕಾರ: “ಮಾನವನ ಮಾರ್ಗವು ಅವನ ಸ್ವಾಧೀನದಲಿಲ್ಲವ್ಲೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಆದ್ದರಿಂದಲೇ ಬೈಬಲು ಪ್ರಕಟಿಸಿದ್ದು: “ತನ್ನ ಸ್ವಂತ ಹೃದಯದಲ್ಲೀ ಭರವಸವಿಡುವವನು ಮೂಢನು.”—ಜ್ಞಾನೋಕ್ತಿ 28:26.

ದುಷ್ಟತನವು ಆರಂಭಿಸಿದ್ದು ಹೇಗೆ?

18. ನಮ್ಮ ಮೊದಲನೇ ಹೆತ್ತವರಿಂದ ಏನು ತಪ್ಪಾಯಿತು? (ಯಾಕೋಬ 1:14, 15; ಕೀರ್ತನೆ 36:9)

18 ಅಂಥ ಅತ್ಯುತ್ತಮ ಆರಂಭವಿದಿರ್ದಲಾಗಿ ನಡೆದ ತಪ್ಪೇನು? ಇದು: ನಮ್ಮ ಮೊದಲ ಹೆತ್ತವರಾದ ಆದಾಮಹವ್ವರು ತಮ್ಮ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ತಪ್ಪಾಗಿ ಉಪಯೋಗಿಸಿದರು. ದೇವರ ಆಳಿಕೆಗೆ ಅಧೀನಪಡಿಸಿಕೊಳ್ಳುವ ಬದಲಾಗಿ ತಮ್ಮ ಸ್ವಂತ ಮಾರ್ಗದಲ್ಲಿ ಹೋಗಲು ನಿರ್ಧರಿಸಿದರು. ವಾಸ್ತವದಲ್ಲಿ ಆ ಸ್ತ್ರೀಯು ನೆನಸಿದ್ದೇನಂದರೆ ತಾವು “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿ”ಯಲು ಶಕ್ತರಾಗುವೆವು ಎಂಬದಾಗಿ. (ಆದಿಕಾಂಡ 3:5) ತಮ್ಮ ಸ್ವಂತ ಯೋಚನೆಯಲ್ಲಿ ಆತುಕೊಂಡವರಾಗಿ, ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬದನ್ನು ತಮಗಾಗಿ ತಾವೇ ನಿರ್ಣಯಿಸಿಕೊಳ್ಳಲು ಅವರು ಬಯಸಿದರು. ಅಂಥ ಯೋಚನೆಯಿಂದ ಉಂಟಾಗುವ ಅಪಾರ ಹಾನಿಯನ್ನು ಅವರು ಮುನ್ನೋಡಲಿಲ್ಲ. ಆದರೆ ಸಂಭವಿಸಿದ್ದು ಅದೇ, ಏಕೆಂದರೆ “ದೇವರು ಸುಳ್ಳಾಡಶಕ್ತನಲ್ಲ.” (ತೀತ 1:2) ದೇವರ ಆಡಳಿತೆಯಿಂದ ಅವರು ದೂರ ಎಳೆಯಲ್ಪಟ್ಟಾಗ ಒಂದು ವಿಸ್ತಾರಾರ್ಥದಲ್ಲಿ ಏನು ಸಂಭವಿಸಿತೆಂದರೆ ಒಂದು ಎಲೆಕ್ಟ್ರಿಕ್‌ ಫ್ಯಾನ್‌ನ ಪ್ಲಗ್ಗನ್ನು ಹೊರಗೆಳೆದಾಗ ಏನು ಸಂಭವಿಸುತ್ತದೋ ಹಾಗೆಯೇ. ಶಕ್ತಿಪೋಷಕ ಮೂಲದಿಂದ ಕಡಿಯಲ್ಪಟ್ಟಾಗ, ಫ್ಯಾನ್‌ ನಿಧಾನವಾಗಿ ಚಲಿಸುತ್ತಾ ಕಟ್ಟಕಡೆಗೆ ನಿಂತು ಹೋಗುತ್ತದೆ. ತದ್ರೀತಿಯಲ್ಲಿ ಮೊದಲನೆ ಮಾನವ ಜೊತೆಯು ಜೀವದ ಮೂಲವಾದ ಯೆಹೋವ ದೇವರಿಂದ ದೂರ ಎಳೆಯಲ್ಪಟ್ಟಾಗ ಅವರು ಅಧೋಗತಿಗಿಳಿಯುತ್ತಾ ಕಟ್ಟಕಡೆಗೆ ಸತ್ತುಹೋದರು, ದೇವರು ಎಚ್ಚರಿಸಿದ್ದ ಪ್ರಕಾರವೇ ಅವರಿಗಾಯಿತು.

19. ಇಡೀ ಮಾನವಕುಲವು ಅಸಂಪೂರ್ಣತೆಯಲ್ಲಿ ಜನಿಸಿದ್ದೇಕೆ? (ರೋಮಾಪುರ 5:12)

19 ನಮ್ಮ ಮೊದಲನೆ ಹೆತ್ತವರು ತಮಗೆ ಮಕ್ಕಳಾಗುವ ಮುಂಚೆ ದೇವರ ವಿರುದ್ಧವಾಗಿ ದಂಗೆಯೆದ್ದ ಕಾರಣ, ಅವರ ಮೊದಲನೆ ಮಗುವಿನ ಜನನಕ್ಕೆ ಮುಂಚಿತವಾಗಿಯೇ ಅಸಂಪೂರ್ಣತೆಯು ಒಳಸೇರಿತು. ಆದಾಮಹವ್ವರು ಒಂದು ಲೋಪವುಳ್ಳ ಮಾದರಿಯಾಗಿ ಪರಿಣಮಿಸಿದರು. ಅವರಿಂದ ಉಂಟುಮಾಡಲ್ಪಟ್ಟದೆಲ್ಲವು ಕೂಡ ಲೋಪವುಳ್ಳದಾಯ್ದಿತು. ತಮ್ಮಲ್ಲಿ ಈಗೇನಿತ್ತೋ ಅದನ್ನು ಮಾತ್ರವೇ—ಅಂದರೆ ಅಸಂಪೂರ್ಣ ಶರೀರಗಳನ್ನೂ ಮನಸ್ಸುಗಳನ್ನೂ ತಮ್ಮ ಮಕ್ಕಳಿಗೆ ದಾಟಿಸಶಕ್ತರಾದರು. ಅವರು ಇನ್ನು ಮುಂದೆ ಪರಿಪೂರ್ಣರಾಗಿರಲಿಲ್ಲ ಏಕೆಂದರೆ ಪರಿಪೂರ್ಣತೆ ಮತ್ತು ಜೀವದ ಮೂಲನಾದ ಯೆಹೋವ ದೇವರಿಂದ ಅವರು ದೂರ ಹೋದರು. ಹೀಗೆ ರೋಮಾಪುರ 5:12 ರಲ್ಲಿ ಬೈಬಲು ಏನನ್ನುತ್ತದೋ ಅದಕ್ಕೆ ಹೊಂದಿಕೆಯಲ್ಲಿ, ಅಂದಿನಿಂದ ಜನಿಸಿದ ಪ್ರತಿಯೊಬ್ಬನು ಅಸಂಪೂರ್ಣತೆಯಲ್ಲಿ ಜನಿಸಿದನು, ಮತ್ತು ಅಸೌಖ್ಯ, ವೃದ್ಧಾಪ್ಯ ಮತ್ತು ಮರಣದ ಪ್ರವೃತ್ತಿಯುಳ್ಳವನಾಗಿದ್ದಾನೆ. ಆದರೆ ಇದಕ್ಕಾಗಿ ದೇವರನ್ನು ದೂರಸಾಧ್ಯವಿಲ್ಲ. ಧರ್ಮೋಪದೇಶಕಾಂಡ 32:5 ಅನ್ನುವುದು: “ಅವರು ತಮ್ಮಲ್ಲಿ ತಾವೇ ದ್ರೋಹಿಗಳಾಗಿ ವರ್ತಿಸಿದ್ದಾರೆ; ಅವರು ಆತನ ಮಕ್ಕಳಲ್ಲ; ಇದು ಅವರ ದೋಷವು.” ಮತ್ತು ಪ್ರಸಂಗಿ 7:29 ಗಮನಿಸಿದ್ದು: “ಸತ್ಯದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು. ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ.”

20. ಕೆಲವೇ ಜನರ ತಪ್ಪುಗಳು ಅಷ್ಟು ಹೆಚ್ಚು ಜನರಿಗೆ ಹಾನಿಯಲ್ಲಿ ಪರಿಣಮಿಸುವುದು ಹೇಗೆ?

20 ಆದರೆ ಕೇವಲ ಇಬ್ಬರು ವ್ಯಕ್ತಿಗಳಿಂದ ತೋರಿಸಲ್ಪಟ್ಟ ಅವಿಧೇಯತೆಯು ಪ್ರತಿಯೊಬ್ಬರಿಗೆ ಅಂಥ ದುರಂತ ಫಲಿತಾಂಶದಲ್ಲಿ ಪರಿಣಮಿಸಿರುವುದು ನ್ಯಾಯಸಮ್ಮತವೂ? ಒಳ್ಳೇದು, ಕಟ್ಟಡವೊಂದರ ಕಟ್ಟುವಿಕೆಯಲ್ಲಿ ಒಂದು ಚಿಕ್ಕ ಸುರಕ್ಷೆಯ ಕೆಲಸವನ್ನು ನಿರ್ವಹಿಸುವುದಕ್ಕೆ—ಕೇವಲ ಒಬ್ಬ ವ್ಯಕ್ತಿಯು ತೋರಿಸುವ ದುರ್ಲಕ್ಷ್ಯದಿಂದಾಗಿ ಉಂಟಾಗುವ ವಿಪತ್ತಿನಲ್ಲಿ ಅನೇಕ ಜನರ ಪ್ರಾಣ ನಷ್ಟವಾಗುತ್ತದೆಂದು ನಮಗೆ ತಿಳಿದಿದೆ. ಅಣೆಕಟ್ಟೊಂದರಲ್ಲಿ ತದ್ರೀತಿಯ ವೈಶಿಷ್ಟ್ಯವೊಂದಕ್ಕೆ ಗಮನಕೊಡಲು ತಪ್ಪುವುದರಿಂದಾಗಿ ಅದು ಬಿರಿದು ಹೋಗಸಾಧ್ಯವಿದೆ ಮತ್ತು ನೆರೆಯುಂಟಾಗಿ ಮಹತ್ತಾದ ನಾಶನವು ಸಂಭವಿಸಸಾಧ್ಯವಿದೆ. ಅಧಿಪತಿಯೊಬ್ಬನಿಂದ ನಡಿಸಲ್ಪಡುವ ಭ್ರಷ್ಟಾಚಾರದ ಒಂದೇ ಒಂದು ಕೃತ್ಯವು ಸರ್ಕಾರದಲ್ಲಿ ಕೆಟ್ಟತನದ ಒಂದು ಸರಪಣಿ ಪ್ರತಿಕ್ರಿಯೆಗೆ ದಾರಿ ತೆರೆದು ಮಿಲ್ಯಾಂತರ ಜನರಿಗೆ ಮಹಾ ಹಾನಿಯನ್ನುಂಟುಮಾಡಬಹುದು. ಕುಟುಂಬವೊಂದರಲ್ಲಿ ತಂದೆ ಮತ್ತು ತಾಯಿಯು ಒಂದು ತಪ್ಪಾದ ಆಯ್ಕೆಯನ್ನು ಮಾಡುವಾಗ ಅವರ ಮಕ್ಕಳು ಗಂಭೀರವಾದ ಪರಿಣಾಮಗಳನ್ನು ಅನುಭವಿಸಬಹುದು. ನಮ್ಮ ಪ್ರಥಮ ಹೆತ್ತವರೂ ತಪ್ಪಾದ ಆಯ್ಕೆ ಮಾಡಿದರು. ಫಲಿತಾಂಶವಾಗಿ ಇಡೀ ಮಾನವ ಕುಟುಂಬವೇ ಅಸಂಪೂರ್ಣತೆ ಮತ್ತು ವಿನಾಶದೊಳಗೆ ಧುಮುಕಿತು.

21. ದೇವರು ಮರಣ ಶಿಕ್ಷೆಯನ್ನು ಸಮರ್ಥಿಸಿದ್ದು ಹೇಗೆ, ಆದರೂ ಆತನ ಕರುಣೆಯು ಹೇಗೆ ತೋರಿಸಲ್ಪಟ್ಟಿತು?

21 ದೇವರ ನಿಯಮವು ಮತ್ತು ಆತನ ಯಥಾರ್ಥತೆಯು ಸಹ ಅದರಲ್ಲಿ ಒಳಗೂಡಿದರ್ದಿಂದ ತಪ್ಪಿಗೆ ಆ ನಿಯಮವನ್ನು ಅನ್ವಯಿಸದ ಹೊರತು ಬಿಟ್ಟುಬಿಡಲು ಆತನಿಗೆ ಸಾಧ್ಯವಿರಲಿಲ್ಲ. ಆ ಕುರಿತು ಆತನೇನೂ ಮಾಡದೆ ಇದ್ದರೆ ಆತನಿಗಾಗಲಿ ಆತನ ನಿಯಮಕ್ಕಾಗಲಿ ಜನರಿಗೆ ಯಾವ ಗೌರವವಿದ್ದೀತು? ತಮ್ಮ ಸ್ವಂತ ನಿಯಮಗಳಿಗೆ ತಾವೇ ವಿಧೇಯರಾಗದಿರುವ ಅಥವಾ ನಿರ್ದಿಷ್ಟ ಜನರು ಅವನ್ನು ಬುದ್ಧಿಪೂರ್ವಕವಾಗಿ ಮುರಿದರೂ ಶಿಕ್ಷೆಕೊಡದಿರುವ ಅಧಿಪತಿಗಳನ್ನು ನಾವಿಂದು ಗೌರವಿಸುವೆವೂ? ಆದಕಾರಣ, ದೇವರು ತಿಳಿಸಿದ ಪ್ರಕಾರವೇ ಅವಿಧೇಯತೆಗೆ ಶಿಕ್ಷೆಯಾಗಿದ್ದ ಮರಣವನ್ನು ನಿರ್ವಹಿಸಲಾಯಿತು. ಆದರೆ ಮೊದಲನೆ ಜೊತೆಯು ಮಕ್ಕಳನ್ನು ಪಡೆಯುವಂತೆ ದೇವರು ಕರುಣೆಯಿಂದ ಬಿಟ್ಟುಕೊಟ್ಟನು, ಅದನ್ನು ನಾವು ಗಣ್ಯಮಾಡಬೇಕು. ಇಲ್ಲವಾದರೆ ನಾವು ಎಂದೂ ಹುಟ್ಟುತ್ತಿರಲಿಲ್ಲ ಮತ್ತು ಆದಾಮಹವ್ವರ ತಪ್ಪಿನ ಕಾರಣದಿಂದಾಗಿ ನಾವು ಅಸಂಪೂರ್ಣರಾಗಿದ್ದರೂ, ಸತ್ತಿರುವ ಬದಲಾಗಿ ಜೀವದಿಂದಿರುವುದನ್ನು ನಾನು ಇಷ್ಟಪಡುವುದಿಲ್ಲವೋ?

22. ದುಷ್ಟತನಕ್ಕೆ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಬೇರೆ ಯಾರು ಹೊತ್ತಿರುತ್ತಾನೆ? (ಮತ್ತಾಯ 4:1-11; ಎಫೆಸ 6:12)

22 ಹಾಗಾದರೆ ದುಷ್ಟತನವು ಪೂರ್ಣವಾಗಿ ಮನುಷ್ಯರಿಂದಲೇ ಆರಂಭಿಸಿತೆಂದು ಇದು ಹೇಳುತ್ತದೋ? ಇಲ್ಲ, ಅದಕ್ಕೆ ಹೆಚ್ಚಿನದ್ದು ಅಲ್ಲಿದೆ. ಬುದ್ಧಿಶಕ್ತಿಯುಳ್ಳ ಜೀವಿಗಳ ದೇವರ ಸೃಷ್ಟಿಯು ಕೇವಲ ಮಾನವರಿಗೆ ಪರಿಮಿತಿಯುಳ್ಳದ್ದಲ್ಲ. ಆ ಮೊದಲೇ ಆತನು ಪರಲೋಕದಲ್ಲಿ ಇತರ ಅಸಂಖ್ಯಾತ ಬುದ್ಧಿಶಕ್ತಿಯುಳ್ಳ ಪುತ್ರರನ್ನು ಆತ್ಮಿಕ ಜೀವಿಗಳಾಗಿ ನಿರ್ಮಿಸಿದ್ದನು. ಅವರು ಸಹ ಕ್ರಿಯಾ ಸ್ವಾತಂತ್ರ್ಯದೊಂದಿಗೆ ನಿರ್ಮಿಸಲ್ಪಟ್ಟರೂ ಜೀವಿತರಾಗಿ ಉಳಿಯಬೇಕಾದರೆ ದೇವರ ಒಳ್ಳೆಯ ಹಾಗೂ ನ್ಯಾಯಯುಕ್ತ ನಿಯಮಗಳಿಗೆ ಅಧೀನರಾಗಿರಬೇಕಿತ್ತು. ಆದಾಗ್ಯೂ ಈ ಆತ್ಮಿಕ ಜೀವಿಗಳಲ್ಲಿ ಒಬ್ಬನು ಕೆಟ್ಟ ವಿಚಾರಗಳನ್ನು ಮನನ ಮಾಡತೊಡಗಿದನು. ಮತ್ತು ವ್ಯಕ್ತಿಯೊಬ್ಬನು ತಪ್ಪಾದ ವಿಷಯವನ್ನು ಮನನ ಮಾಡುವುದಾದರೆ ಅದು ಬೆಳೆಯುತ್ತಾ ಮುಂದರಿದು ಅವನು ಯೋಚಿಸುತ್ತಿರುವ ವಿಷಯವನ್ನು ಮಾಡುವಷ್ಟರ ಮಟ್ಟಿಗೆ ನಡಿಸುತ್ತದೆ. ಈ ಆತ್ಮಿಕ ಜೀವಿಯ ವಿಷಯದಲ್ಲೂ ಹಾಗೆಯೇ. ಅವನು ತನ್ನಲ್ಲಿ ಹೆಬ್ಬಯಕೆಯನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಂಡನೆಂದರೆ ಅದು ಅವನನ್ನು ದೇವರ ಕ್ರಿಯೆಗಳನ್ನು ಪ್ರತಿಭಟಿಸುವಷ್ಟರ ತನಕವೂ ನಡಿಸಿತು. ದೇವರಿಗೆ ಅವಿಧೇಯರಾಗಬಹುದೆಂದು ಅವನು ಆದಾಮನ ಹೆಂಡತಿಯಾದ ಹವ್ವಳಿಗೆ ತಿಳಿಸಿದನು ಮತ್ತು ಹಾಗೆ ಮಾಡಿದರೂ “ನೀವು ನಿಶ್ಚಯವಾಗಿಯೂ ಸಾಯುವುದಿಲ್ಲ” ಎಂದು ಹೇಳಿದನು. (ಆದಿಕಾಂಡ 3:4) ನಿರಂತರದ ಜೀವ ಮತ್ತು ಸಂತೋಷಕ್ಕಾಗಿ ನಿರ್ಮಾಣಿಕನ ಮೇಲೆ ಆತುಕೊಳ್ಳುವ ಅವರ ಅಗತ್ಯವನ್ನು ಸಂದೇಹಕ್ಕೊಳಪಡಿಸಿದನು. ವಾಸ್ತವದಲ್ಲಿ, ಅವಿಧೇಯತೆಯು ನಿಜವಾಗಿಯೂ ವಿಷಯಗಳನ್ನು ಅವರಿಗಾಗಿ ಸುಧಾರಿಸುವುದು, ಅವರನ್ನು ದೇವರಂತಾಗ ಮಾಡುವುದು ಎಂದೂ ಅವನು ಅವರಿಗಂದನು. ಹೀಗೆ ದೇವರ ಸತ್ಯಪೂರ್ಣತೆಯನ್ನು ಅವನು ಸಂದೇಹಕ್ಕೊಳಪಡಿಸಿದನು. ಮತ್ತು ದೇವರ ನಿಯಮದ ಔಚಿತ್ಯದ ಕುರಿತು ಸಂದೇಹ ಎತ್ತಿದ ಮೂಲಕ ದೇವರ ಆಡಳಿತಾ ವಿಧಾನದ ಮೇಲೆ—ವಾಸ್ತವವಾಗಿ ಆಳುವುದಕ್ಕೆ ದೇವರಿಗಿರುವ ಹಕ್ಕಿನ ಮೇಲೆ ಆಕ್ಷೇಪ ಹಾಕಿದನು. ಇದಕ್ಕಾಗಿ ಅವನನ್ನು ಪ್ರತಿಭಟಕನೆಂಬ ಅರ್ಥವುಳ್ಳ ಸೈತಾನನೆಂತಲೂ ನಿಂದಕನೆಂಬ ಅರ್ಥವುಳ್ಳ ಪಿಶಾಚನೆಂತಲೂ ಕರೆಯಲಾಯಿತು.

ಇಷ್ಟು ಸಮಯದ ತನಕ ಅದಕ್ಕೆ ಅನುಮತಿ ಕೊಡಲ್ಪಟ್ಟದ್ದೇಕೆ?

23, 24. ಪ್ರಶ್ನೆಗಳು ಇತ್ಯರ್ಥಗೊಳಿಸಲ್ಪಡಲು ಸಮಯ ತಗಲುತ್ತದೇಕೆ?

23 ದೇವರು ಎಷ್ಟೋ ಅಧಿಕ ಬಲಶಾಲಿಯಾಗಿರುವುದರಿಂದ, ಈ ಮಾನವ ಮತ್ತು ಆತ್ಮಿಕ ದಂಗೆಕೋರರನ್ನು ಆರಂಭದಲ್ಲೀ ಸುಲಭವಾಗಿ ಅಳಿಸಿಬಿಡಶಕ್ತನಿದ್ದನು. ಆದರೆ ಅದು ವಿಷಯಗಳನ್ನು ತೃಪ್ತಿಕರವಾಗಿ ಇತ್ಯರ್ಥಗೊಳಿಸಲಿಕ್ಕಿಲ್ಲ. ಏಕಿಲ್ಲ? ಏಕೆಂದರೆ ಪ್ರತಿಭಟನೆಯು ದೇವರ ಶಕ್ತಿಯ ವಿಷಯದಲ್ಲಿರಲಿಲ್ಲ. ಎಬ್ಬಿಸಲ್ಪಟ್ಟಿದ್ದ ಪ್ರಶ್ನೆಗಳು ನೈತಿಕವಾಗಿದ್ದವು. ಮತ್ತು ಅವುಗಳಲ್ಲಿ ಒಂದು ಮಹತ್ವದ ಪ್ರಶ್ನೆಯು ಇದಾಗಿತ್ತು; ಏನೆಂದರೆ ದಂಗೆಯ ಮುನ್ನಡೆಯು ಯಶಸ್ವಿಯೆಂದು ರುಜುವಾಗುವುದೋ? ದೇವರನ್ನು ಅಸಡ್ಡೆಮಾಡಿದ ಆಡಳಿತೆಯು ಇಡೀ ಮಾನವ ಕುಟುಂಬಕ್ಕೆ ಬಾಳುವ ಪ್ರಯೋಜನಗಳನ್ನು ತರುವುದೋ? ಜನರನ್ನು ದೇವರು ಆಳುವುದು ಅವರಿಗೆ ಒಳ್ಳೆಯದೋ ಅಥವಾ ಮನುಷ್ಯನ ಆಡಳಿತೆಯು ಅವರಿಗೆ ಒಳ್ಳೆಯದೋ? ಇದನ್ನು ಮತ್ತು ಎಬ್ಬಿಸಲ್ಪಟ್ಟ ಇತರ ಮುಖ್ಯ ಪ್ರಶ್ನೆಗಳನ್ನು ಇತ್ಯರ್ಥಗೊಳಿಸಲು ಸಮಯ ತಗಲುವುದೆಂದು ದೇವರು ತನ್ನ ವಿವೇಕದಿಂದ ತಿಳಿದುಕೊಂಡಿದ್ದನು. ಆದ್ದರಿಂದ ಮಾನವರು ತಮ್ಮ ರಾಜಕೀಯ, ಸಾಮಾಜಿಕ, ಔದ್ಯೋಗಿಕ ಮತ್ತು ವೈಜ್ಞಾನಿಕ ಕಾರ್ಯಸಿದ್ಧಿಯ ಉಚ್ಚ ಬಿಂದುವಿಗೆ ಆಗಮಿಸುವಂತೆ ಹೇರಳವಾದ ಸಂದರ್ಭವನ್ನೀಯುವ ಒಂದು ನಿರ್ದಿಷ್ಟ ಕಾಲಾವಧಿಯನ್ನು ಆತನು ಬಿಟ್ಟುಕೊಟ್ಟನು.

24 ಆ ಕಾಲಾವಧಿಯು ಕೇವಲ ಕೆಲವು ದಿನಗಳ ಅಥವಾ ವರ್ಷಗಳ ಅವಧಿಯಾಗಿರಸಾಧ್ಯವಿಲ್ಲ. ನ್ಯಾಯಸಮ್ಮತವಾದ ಯಾವ ಸಂದೇಹಕ್ಕೆಡೆಗೊಡದೇ ಆ ಉತ್ತರವು ಪ್ರದರ್ಶಿಸಲ್ಪಡಬೇಕಾದರೆ ಅನೇಕ ಶತಮಾನಗಳು ತಗಲುವವು. ಕೇವಲ ಇಬ್ಬರೇ ಜನರು ಒಳಗೂಡಿರುವಾಗಲೂ ಕೋರ್ಟ್‌ ಕೇಸ್‌ಗಳು ವಾರಗಳು ಅಥವಾ ತಿಂಗಳುಗಳಷ್ಟು ಉದ್ದ ಎಳೆಯಲ್ಪಡುತ್ತವೆ. ದೇವರ ಆಡಳಿತೆಗೆ ಸಂಬಂಧಿಸಿದ ಮಹಾ ಪ್ರಶ್ನೆಗಳು ಇಲ್ಲಿ ಪಣದಲ್ಲಿರುವುದರಿಂದ ಒಂದು ಸಂಪೂರ್ಣ ಉತ್ತರವನ್ನು ಒತ್ತಾಯಿಸಿ ಕೇಳುತ್ತದೆ. ಅರ್ಧ ರೀತಿಯ ಇತ್ಯರ್ಥವನ್ನಲ್ಲ. ಈ ರೀತಿಯಲ್ಲಿ ಈ ಪ್ರಶ್ನೆಗಳ ಇತ್ಯರ್ಥವನ್ನು ಭವಿಷ್ಯತ್ತಿನ ಯಾವುದೇ ಸಮಯದಲ್ಲಿ ಎಂದೂ ಪುನರಾವರ್ತಿಸುವ ಅಗತ್ಯವಿರುವುದಿಲ್ಲ. ಪ್ರೀತಿಯುಳ್ಳ ದೇವರು ಪೂರ್ಣ ಇತ್ಯರ್ಥಕ್ಕಿಂತ ಕೊಂಚವೂ ಕಡಿಮೆಯನ್ನು ಸ್ವೀಕರಿಸಲಾರನು. ಮತ್ತು ಇದು ಹೀಗಿದದ್ದಕ್ಕಾಗಿ ನಾವು ಸಂತೋಷಪಡಬೇಕು ಯಾಕಂದರೆ ಅಂಥ ಒಂದು ಇತ್ಯರ್ಥವು ಮಾತ್ರವೇ ಭೂಪರಲೋಕದಲ್ಲಿರುವ ದೇವರ ವಿಶ್ವ ಕುಟುಂಬದವರೆಲರ್ಲಿಗೆ ಅನಂತ ಶಾಂತಿ ಮತ್ತು ಭದ್ರತೆಗೆ ದಾರಿಯನ್ನು ತೆರೆಯಶಕ್ತವಾಗಿದೆ.

25. ಭೌತಿಕ ಪ್ರಗತಿಯ ಮಧ್ಯೆಯೂ ದೇವರಿಂದ ಮನುಷ್ಯನ ಸ್ವತಂತ್ರತೆಯು ನಿಜಶಾಂತಿ ಮತ್ತು ಸಂತೋಷವನ್ನು ತಂದಿರುತ್ತದೋ?

25 ಪ್ರಶ್ನೆಯು ಮೊದಲಾಗಿ ಎಬ್ಬಿಸಲ್ಪಟ್ಟಂದಿನಿಂದ ಈಗ ಸುಮಾರು 6,000 ವರ್ಷಗಳು ದಾಟಿಹೋಗಿವೆ. ದೇವರಾಳಿಕೆಯಿಂದ ಸ್ವತಂತ್ರತೆಯ ಫಲಿತಾಂಶವೇನಾಗಿದೆ? ಸಕಲ ವಿಧದ ಸರಕಾರಗಳನ್ನು, ಎಲ್ಲಾ ರೀತಿಯ ಸಾಮಾಜಿಕ ಕ್ರಮಗಳನ್ನು, ಎಲ್ಲಾ ವಿಧದ ಆರ್ಥಿಕ ವ್ಯವಸ್ಥೆಗಳನ್ನು ಮತ್ತು ಎಲ್ಲಾ ರೀತಿಯ ಧರ್ಮ ಪಂಗಡಗಳನ್ನು ಪ್ರಯತ್ನಿಸಿ ನೋಡಿಯಾಯಿತು. ಆದರೆ ನಿಜ ಶಾಂತಿಯನ್ನಾಗಲಿ, ಭದ್ರತೆಯನ್ನಾಗಲಿ, ಬಾಳುವ ಸೌಖ್ಯ ಸಂತೋಷಗಳನ್ನಾಗಲಿ ಯಾವುದೂ ತಂದಿರುವುದಿಲ್ಲ. ಎರಡನೇ ಲೋಕ ಯುದ್ಧವೊಂದೇ ಐವತ್ತು ಮಿಲಿಯಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿ ತಕ್ಕೊಂಡಿರುವಾಗ ಭೌತಿಕ ಪ್ರಗತಿಯ ವಿಷಯದಲ್ಲಿ ಒಬ್ಬನು ಹೆಚ್ಚಳ ಪಡಬಹುದೇ? ಯಾವಾಗ ಅವೇ ರಾಕೆಟ್‌ಗಳು ಅಣುಯುದ್ಧ ಶಸ್ತ್ರಗಳೊಂದಿಗೆ ಮಾನವಕುಲವನ್ನೇ ನಾಶಗೊಳಿಸಸಾಧ್ಯವಿರುವಾಗ ಮನುಷ್ಯನನ್ನು ಚಂದ್ರಲೋಕಕ್ಕೆ ಕಳುಹಿಸುವುದನ್ನು ಇಲ್ಲವೇ ಮನುಷ್ಯರು ಚಂದ್ರನ ಮೇಲೆ ನಡೆದಾಡಿದ ಅದೇ ಸಮಯದಲ್ಲಿ ಇಲ್ಲಿ ಭೂಮಿಯ ಮೇಲೆ ನೂರಾರು ಮಿಲಿಯ ಜನರು ಹಸಿವೆಯಿಂದಲೂ ಬಡತನದಿಂದಲೂ ಬಾಧೆಪಡುವುದು ಪ್ರಗತಿಯೆನ್ನಬಹುದೇ? ಕುಟುಂಬಗಳು ವಾಗ್ವಾದಗಳಿಂದ ಇಬ್ಭಾಗವಾಗಿ ಛಿದ್ರವಾಗಿರುವಾಗ, ವಿವಾಹ ವಿಚ್ಛೇದನೆಗಳ ಸಂಖ್ಯೆಯು ಎಡೆಬಿಡದೆ ವೃದ್ಧಿಯಾಗುತ್ತಿರುವಾಗ, ನೆರೆಹೊರೆಯಲ್ಲಿ ದುಷ್ಕರ್ಮದ ಭೀತಿಯು ಹಬ್ಬುತ್ತಿರುವಾಗ, ಮಲಿನತೆಯೂ ಹೊಲಸುಕೇರಿಗಳೂ ಹೆಚ್ಚುತ್ತಾ ಬರುತ್ತಿರುವಾಗ, ಆರ್ಥಿಕ ಮುಗ್ಗಟ್ಟುಗಳು ಮಿಲ್ಯಾಂತರ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡುವಾಗ, ದೊಂಬಿಗಳು ಮತ್ತು ಪ್ರಜಾ ಸಮರಗಳು ಮತ್ತು ಸರ್ಕಾರಗಳ ದೊಬ್ಬಾಟಗಳು ವರ್ಷವರ್ಷವೂ ನಡಿಯುತ್ತಿದ್ದು ಮನುಷ್ಯನ ಮನೆಗೆ ಮತ್ತು ಜೀವಿತಕ್ರಮಕ್ಕೆ ಬೆದರಿಕೆ ಹಾಕುತ್ತಿರುವಾಗ ಅನೇಕಾನೇಕ ಸೌಲಭ್ಯಗಳಿರುವ ಒಂದು ಮನೆಯಿದ್ದು ಪ್ರಯೋಜನವೇನು?

26. ಕೊಡಲ್ಪಟ್ಟ ಕಾಲಾವಧಿಯು ದೇವರಿಂದ ಮನುಷ್ಯನ ಸ್ವತಂತ್ರ ವರ್ತನೆಯ ಕುರಿತು ಏನನ್ನು ಬಯಲುಪಡಿಸಿದೆ? (ಕೀರ್ತನೆ 127:1)

26 ಸತ್ಯವು ಸಂಯುಕ್ತ ರಾಷ್ಟ್ರ ಸಂಘದ ಸೆಕ್ರಿಟರಿ ಜನರಲ್‌ ಕರ್ಟ್‌ ವಾಲಿಮ್ಡ್‌ರವರು ಅಂಗೀಕರಿಸಿದಂತೆಯೇ ಇದೆ: “ಭೌತಿಕ ಪ್ರಗತಿಯು ಉಂಟಾಗಿರುವುದಾಗ್ಯೂ, ಮಾನವ ಜೀವವು ಇಂದು ಅನುಭವಿಸುತ್ತಿರುವುದಕ್ಕಿಂತ ಹೆಚ್ಚಿನ ಅಭದ್ರ ಸ್ಥಿತಿಯನ್ನು ಹಿಂದೆಂದೂ ಅನುಭವಿಸಿಲ್ಲ.” * ಎನ್‌ವೈರನ್‌ಮೆಂಟಲ್‌ ಎಥಿಕ್ಸ್‌ ಪುಸ್ತಕವು ಸಹ ಹೇಳುವುದು: “ಶುದ್ಧವಾದ ಗಾಳಿಯನ್ನು ಉಸಿರಾಡುವಂತೆ, ಶುದ್ಧವಾದ ನೀರನ್ನು ಕುಡಿದು ಆನಂದಿಸುವಂತೆ ಮತ್ತು ತನ್ನ ಸುತ್ತಮುತ್ತಲಿನ ನೈಸರ್ಗಿಕ ಸಾಹಸತನದಲ್ಲಿ ಆನಂದಿಸುವಂತೆ ನಿರ್ಮಿಸಲ್ಪಟ್ಟಿರುವ ಮನುಷ್ಯನು ತನ್ನ ಹೊರವಲಯವನ್ನು ಬದಲಾಯಿಸಿದ್ದಾನೆ ಮತ್ತು ಅದಕ್ಕೆ ಹೊಂದಿಸಿಕೊಳ್ಳಲಾಗದೆ ಇದ್ದಾನೆ. ತನ್ನ ಸ್ವಂತ ಕಗ್ಗೊಲೆಯನ್ನು ತಯಾರಿಸುತ್ತಿದ್ದಾನೆ.” * ನಿಜವಾಗಿಯೂ ದುಷ್ಟತನಕ್ಕೆ ದೀರ್ಘ ಅನುಮತಿಯು ವಿವೇಚನೆಯುಳ್ಳ ಜನರೆಲ್ಲರಿಗೆ ಪ್ರದರ್ಶಿಸಬೇಕು ಏನೆಂದರೆ ಮನುಷ್ಯರು ತಮ್ಮ ಕಾರ್ಯಾಧಿಗಳನ್ನು ದೇವರ ಮಾರ್ಗದರ್ಶನೆಯ ಹೊರತು ಯಶಸ್ವಿಯಾಗಿ ನಡಿಸುವ ಶಕ್ತಿಯೊಂದಿಗೆ ನಿರ್ಮಿಸಲ್ಪಡಲಿಲ್ಲ ಎಂಬದನ್ನೇ. ಮತ್ತು ಆರು ಸಾವಿರ ವರ್ಷದ ಮಾನವ ಅಪಯಶಸ್ಸಿನ ಪುರಾವೆಯಿರುವಾಗ, ಮನುಷ್ಯರಿಗೆ ಪ್ರಯತ್ನಿಸಿ ನೋಡಲು ಸಾಕಷ್ಟು ಸಮಯವನ್ನೀಯಲಿಲ್ಲವೆಂದು ಯಾವನಾದರೂ ನ್ಯಾಯವಾಗಿ ಎಂದೂ ದೇವರ ಮೇಲೆ ತಪ್ಪು ಹೊರಿಸಶಕ್ತನಲ್ಲ. ದೇವರ ವಿರುದ್ಧವಾದ ದಂಗೆಯ ಮಾರ್ಗವು ಖಂಡಿತವಾಗಿಯೂ ವಿಪತ್ಕಾರಕವೆಂದು ರುಜುಪಡಿಸುವುದಕ್ಕೆ ಕೊಡಲ್ಪಟ್ಟ ಸಮಯವು ಸಾಕಷ್ಟಾಗಿತ್ತು.

ದುಷ್ಟತನವು ಬೇಗನೇ ಅಂತ್ಯವಾಗಲಿದೆ

27. ಎಷ್ಟು ವಿಸ್ತಾರವಾದ ಬದಲಾವಣೆಯೊಂದನ್ನು ದೇವರು ಉದ್ದೇಶಿಸಿದ್ದಾನೆ? (ಜ್ಞಾನೋಕ್ತಿ 2:21, 22; ರೋಮಾಪುರ 16:20)

27 ಮಾನವ ಕುಟುಂಬಕ್ಕೆ ಬದಲಾವಣೆಯು ಒಳ್ಳೇದಕ್ಕಾಗಿ ಅತ್ಯಾವಶ್ಯಕವಾಗಿ ಬೇಕಾಗಿದೆ. ವಾಸ್ತವದಲ್ಲಿ, ನಮಗೆ ಒಂದು ಪೂರ್ಣ ಹೊಸತಾದ ವ್ಯವಸ್ಥೆಯ ಅಗತ್ಯವಿದೆ. ಸಮಾಜ ವಿಜ್ಞಾನಿ ಎರಿಕ್‌ ಪ್ರಮ್ಮ್‌ರವರು ಅಂಗೀಕರಿಸಿದ್ದ ಪ್ರಕಾರ “ಕಳೆದ 6,000 ವರ್ಷಗಳ ಇತಿಹಾಸದಲ್ಲಿ ನಿಂತಿರುವ ಇಡೀ ವ್ಯವಸ್ಥೆಯು ಇನ್ನೊಂದು ಬುಡಮುಟ್ಟ ವ್ಯತ್ಯಾಸದ ವ್ಯವಸ್ಥೆಯಿಂದ ಸ್ಥಾನಪಲ್ಲಟ ಹೊಂದಸಾಧ್ಯವಿದ್ದರೆ ಮಾತ್ರ” ಸಮಾಜದ ಕೆಟ್ಟತನಗಳು ಸರಿಪಡಿಸಲ್ಪಡಬಹುದು. * ಅಂಥಾದ್ದೇ ಒಂದು ವಿಷಯವು ದೇವರ ಮನಸ್ಸಿನಲ್ಲಿ ಇದೆ! ಆತನು ಅನುಮತಿಯಿತ್ತ ಕಾಲಾವಧಿಯು ಕೊನೆಗೊಂಡಾಗ, ಸದ್ಯದ ಸಮಸ್ತ ದುಷ್ಟ ವ್ಯವಸ್ಥೆಯನ್ನು, ಅದರಲ್ಲಿ ಇಷ್ಟಪಡುವವರೆಲ್ಲರೊಂದಿಗೆ ನಿರ್ಮೂಲಗೊಳಿಸುವನೆಂಬ ಖಾತ್ರಿಯನ್ನು ದೇವರಿತ್ತಿದ್ದಾನೆ. “ಎಲ್ಲಾ ದುಷ್ಟರನ್ನು ಆತನು ಸಂಹರಿಸುವನು.”—ಕೀರ್ತನೆ 145:20.

28. ನಾವು ಜೀವಿಸುತ್ತಿರುವ ಸಮಯವನ್ನು ಬೈಬಲು ಏನೆಂದು ಕರೆದಿದೆ ಮತ್ತು ಏಕೆ? (2 ತಿಮೊಥೆಯ 3:1-5, 12, 13; ಮತ್ತಾಯ 24:3-14)

28 ಇದು ಯಾವಾಗ ಸಂಭವಿಸಲಿದೆ? ಶೀಘ್ರದಲ್ಲೀ, ಯಾಕೆಂದರೆ 1914ರಲ್ಲಿ ಆರಂಭಿಸಿದ ಒಂದನೇ ಲೋಕ ಯುದ್ಧದಂದಿನಿಂದ ಮಾನವ ಕುಟುಂಬವನ್ನು ಬಾಧಿಸಿರುವ ಅಭೂತಪೂರ್ವ ತೊಂದರೆಗಳು ಯಾವುದನ್ನು ಬೈಬಲು “ಕಡೇ ದಿವಸ”ಗಳೆಂದು ಕರೆಯುತ್ತದೋ ಅದನ್ನು ಗುರುತಿಸುವ ಸೂಚನೆಯಲ್ಲಿ ಒಳಗೂಡಿವೆ. ಈ “ಕಡೇ ದಿವಸಗಳಲ್ಲಿ” ಲೋಕ ಯುದ್ಧಗಳೂ ದುಷ್ಕರ್ಮದ ವೃದ್ಧಿಯೂ, ಹಸಿವೆ, ಸಾಂಕ್ರಾಮಿಕ ರೋಗಗಳು, ಅಧಿಕ ಸಂಖ್ಯಾತರಿಂದ ವಿಪರೀತ ಭೋಗಾಸಕ್ತಿ, ದೇವರಲ್ಲಿ ನಂಬಿಕೆಯಿಂದ ದೂರ ತೊಲಗುವಿಕೆ, ಧಾರ್ಮಿಕ ಕಪಟತನ ಮತ್ತು ಅಧೋಗತಿ ಮತ್ತು ಇತರ ಅನೇಕ ಘಟನೆಗಳು ಸಂಭವಿಸುವವೆಂದು ಬೈಬಲು ಮುಂತಿಳಿಸಿದೆ. ಇವು ಬೆರಳೊತ್ತಿನ ರೇಖೆಗಳಂತಿದ್ದು, ನಮ್ಮೀ ಸಂತತಿಯು ಅಂಥ ಭೀಕರ ಪರಿಸ್ಥಿತಿಗಳನ್ನು ದೇವರು ಸಹಿಸಲಿರುವ ಕೊನೆಯ ಸಂತತಿಯೆಂಬದನ್ನು ಖಂಡಿತವಾಗಿ ಗುರುತಿಸುತ್ತದೆ. ನಮ್ಮ ಕಾಲವು ನಿಶ್ಚಯವಾಗಿಯೂ ಈಗ ಭೂಮಿಯ ಮೇಲೆ ಪ್ರಭುತ್ವ ನಡಿಸುವ ವ್ಯವಸ್ಥೆಯ ಅಂತ್ಯವನ್ನು ಕಾಣುವುದು ಎಂದು ಯೇಸುವು ಪ್ರವಾದನೆ ನುಡಿದಿದ್ದಾನೆ.

29. ಈ ವ್ಯವಸ್ಥೆಯ ಅಂತ್ಯವು ಸಮೀಪವಿದೆ ಎಂದು ನಮಗೆ ತಿಳಿದಿರುವುದು ಹೇಗೆ?

29 1914ರಲ್ಲಿ ಆ “ಕಡೇ ದಿವಸಗಳ” ಆರಂಭವನ್ನು ಕಂಡ ಸಂತತಿಯ ಕುರಿತಾಗಿಯೂ ಯೇಸು ಅಂದದ್ದು: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 24:34) ಇದರ ಅರ್ಥವೇನಂದರೆ 1914ರಲ್ಲಿ ಒಂದನೇ ಲೋಕ ಯುದ್ಧವು ಆರಂಭಿಸಿದಾಗ ಜೀವಿತರಾಗಿದ್ದ ಜನರಲ್ಲಿ ಕೆಲವರು ಸದ್ಯದ ವಿಷಯ ವ್ಯವಸ್ಥೆಯ ಅಂತ್ಯವನ್ನು ಕಣ್ಣಾರೆ ಕಾಣುವುದಕ್ಕೆ ಇನ್ನೂ ಜೀವಿತರಾಗಿರುವರು ಎಂಬದೇ. ಈ ಒಂದನೇ ಲೋಕ ಯುದ್ಧದ ಸಂತತಿಯು ಈಗ ಅತಿ ಮುದಿಯಾಗುತ್ತಾ ಬರುತ್ತಿದೆ, ಮತ್ತು ಇದು ದುಷ್ಟತನದ ಅಂತ್ಯವು ತೀವ್ರವಾಗಿ ಬರಲಿದೆ ಎಂಬದಕ್ಕೆ ಬಲವಾದ ಪುರಾವೆಯಾಗಿದೆ.

30. ಈಗ ಭೂಮಿಯ ಮೇಲೆ ಪ್ರಭುತ್ವ ನಡಿಸುತ್ತಿರುವ ಮಾನವನಾಳಿಕೆಯ ವ್ಯವಸ್ಥೆಗೆಲ್ಲಾ ಏನು ಸಂಭವಿಸಲಿದೆ? (ಚೆಫನ್ಯ 3:8; ಯೆಶಾಯ 1:28)

30 ಅಂತ್ಯವು ಬಂದಾಗ, ದೇವರು ತನ್ನ ಪ್ರಚಂಡ ಶಕ್ತಿಯನ್ನು ಪ್ರದರ್ಶಿಸಿ ಮನುಷ್ಯನ ಕಾರ್ಯಾಧಿಗಳಲ್ಲಿ ನೇರವಾಗಿ ಕೈಹಾಕುವನು. ಆತನಿಗೆ ವಿರುದ್ಧವಾಗಿರುವ ಮಾನವ ವ್ಯವಸ್ಥೆಗಳೆಲ್ಲವು ನುಚ್ಚುನೂರಾಗಿ ಹೋಗುವುವು. ಈ ಕುರಿತು ದಾನಿಯೇಲ 2ನೇ ಅಧ್ಯಾಯ 44 ನೇ ವಚನವು ಅನ್ನುವುದು: “ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಗಳಿಗೆ ಕದಲಿ ಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವುದು.” (ರಿವೈಸ್ಡ್‌ ಸ್ಟಾಂಡರ್ಡ್‌ ವರ್ಷನ್‌) ಹಾನಿಕಾರಕ ಮಾನವ ವ್ಯವಸ್ಥೆಗಳೆಲ್ಲಾ ತೆಗೆದು ಹಾಕಲ್ಪಟ್ಟ ಮೇಲೆ ಭೂಮಿಯ ಮೇಲೆ ದೇವರಾಳಿಕೆಯು ಪೂರ್ಣಾಧಿಕಾರವನ್ನು ವಹಿಸುವುದು.

31. ಸಮಸ್ತ ಮಾನವರಿಗೆ ದೇವರು ಯಾವ ಸರಕಾರವನ್ನು ಒದಗಿಸುವನು? (ಮತ್ತಾಯ 6:9, 10)

31 ಹೀಗೆ ದೇವರಾಳಿಕೆಯು ಒಂದು ಹೊಸ ಸರಕಾರದಿಂದ, ಸ್ವರ್ಗೀಯ ಸರಕಾರವಾದ ದೇವರ ರಾಜ್ಯದಿಂದ ನಡಿಸಲ್ಪಡುವುದು. ಯೇಸು ಕ್ರಿಸ್ತನು ತನ್ನ ಕಲಿಸುವಿಕೆಯ ಮುಖ್ಯ ವಿಷಯವನ್ನಾಗಿ ಮಾಡಿದ್ದ ಸರಕಾರವೇ ಅದಾಗಿದೆ. ತಕ್ಕ ಕಾಲದಲ್ಲಿ ಅದೊಂದೇ ಸಮಸ್ತ ಭೂಮಿಯನ್ನು ಅಧೀನದಲ್ಲಿಡುವುದೆಂದು ಆತನು ಮುಂತಿಳಿಸಿದ್ದನು. ದೇವರಿಂದ ಮಾರ್ಗದರ್ಶನೆ ಪಡೆದು ರಾಜ್ಯವು ಪರಲೋಕದಿಂದ ಆಳಲಿದೆಯಾದರ್ದಿಂದ, ಸ್ವಾರ್ಥಪರ ಜನರಿಂದ ಭ್ರಷ್ಟಗೊಳಿಸಲ್ಪಡುವ ಸಂದರ್ಭವು ಅಲ್ಲಿಲ್ಲ. ಹೀಗೆ ಆಳುವ ಅಧಿಕಾರವು ಮೊದಲಾಗಿ ಎಲ್ಲಿತ್ತೋ ಅಲ್ಲಿ ಅಂದರೆ ಪರಲೋಕದಲ್ಲಿ ದೇವರೊಂದಿಗೆ ಇರುವುದು. ದೇವರಾಳಿಕೆಯು ಭೂಮಿಯ ಮೇಲೆ ಪ್ರಭುತ್ವ ನಡಿಸುತ್ತಿರುವಾಗ “ಭೂನಿವಾಸಿಗಳು ನಿಶ್ಚಯವಾಗಿಯೂ ನೀತಿಯನ್ನು ಕಲಿತುಕೊಳ್ಳುವರು” ಎಂದು ಆತನು ವಾಗ್ದಾನಿಸಿರುತ್ತಾನೆ. (ಯೆಶಾಯ 26:9) ಸುಳ್ಳು ಧರ್ಮದಿಂದಲೂ ಯಾರೂ ಮೋಸದ ದಾರಿಗೆ ಎಳೆಯಲ್ಪಡರು ಯಾಕೆಂದರೆ ಅಲ್ಲಿ ಅದೊಂದೂ ಇರದು. ಜೀವಿಸುವ ಪ್ರತಿಯೊಬ್ಬನಿಗೆ ದೇವರ ಮತ್ತು ಆತನ ಉದ್ದೇಶದ ಕುರಿತಾದ ಸತ್ಯವು ಕಲಿಸಲ್ಪಡುವುದು, ಹೀಗೆ ಪೂರ್ಣಾರ್ಥದಲ್ಲಿ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:9.

ನೀತಿಯುಳ್ಳ ಒಂದು ಹೊಸ ವ್ಯವಸ್ಥೆ

32. ದೇವರ ರಾಜ್ಯದಾಳಿಕೆಯ ಕೆಳಗೆ ಶಾಂತಿಯು ಎಷ್ಟು ವಿಸ್ತಾರವಾಗಿ ನೆಲೆಸಿರುವುದು? (ಯೆಶಾಯ 2:2-4)

32 ದೇವರ ರಾಜ್ಯದಾಳಿಕೆಯ ಕೆಳಗೆ ದೇವಜನರಿಂದ ಕೂಡಿರುವ ಒಂದು ಸಮಾಜವು, ಪೂರ್ಣವಾಗಿರುವ ಹೊಸತಾದ ಮಾನವ ಸಮಾಜವೊಂದು ವಿಕಾಸಗೊಳ್ಳುವುದು. ಈ ಹೊಸ ವ್ಯವಸ್ಥೆಯಲ್ಲಿ ದೇವರಿಗೆ ನಮ್ಮ ಕಡೆಗಿರುವ ಮಹಾ ಗಮನವು ಆತನೇನನ್ನು ಮಾಡುತ್ತಾನೋ ಅದರಿಂದ ಪ್ರದರ್ಶಿಸಲ್ಪಡಲಿದೆ. ಒಂದು ವಿಷಯವೇನಂದರೆ, ಆ ಮುಂದೆ ಯುದ್ಧಗಳೆಂದೂ ಮಾನವರ ಶಾಂತಿ ಮತ್ತು ಸಂತೋಷವನ್ನು ಕೆಡಿಸಲಾರವು. ಯಾಕೆ ಇಲ್ಲ? ಏಕೆಂದರೆ ಈ ಸದ್ಯ ದುಷ್ಟಲೋಕದ ಅಂತ್ಯವನ್ನು ಪಾರಾದವರೆಲ್ಲರೂ ಈ ಮೊದಲೇ ಶಾಂತಿಯ ಮಾರ್ಗದಲ್ಲಿ ತರಬೇತಿ ಹೊಂದಿದವರಾಗಿರುವುದರಿಂದ ಹೊಸ ಮಾನವ ಸಮಾಜಕ್ಕೆ ಒಂದು ಶಾಂತಿಭರಿತ ಆರಂಭವು ದೊರೆಯಲಿದೆ. ಅನಂತರ, ಆ ಹೊಸ ವ್ಯವಸ್ಥೆಯಲ್ಲಿ ಜೀವಿಸಲು ಬರುವವರೆಲ್ಲರಿಗೂ ದೇವರ ಚಿತ್ತವನ್ನು ಮಾಡುವುದರಲ್ಲಿ ಅದೇ ಶಿಕ್ಷಣವು ಕೊಡಲ್ಪಡುವುದು. ಆದ್ದರಿಂದಲೇ ಬೈಬಲಿನ ವಾಗ್ದಾನವಾದ, ದೇವರು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ” ಎಂಬದು ಖಂಡಿತವಾಗಿಯೂ ನೆರವೇರುವುದು. (ಕೀರ್ತನೆ 46:8, 9) ಆ ಶಾಂತಿಯು ಎಷ್ಟು ಪರಿಪೂರ್ಣವಾಗಿ ಇರುವುದು? ದೇವರ ಪ್ರವಾದನಾ ವಾಕ್ಯವು ಅನ್ನುವುದು: “ದೀನರು ದೇಶವನ್ನು ಅನುಭವಿಸುವರು; ಅವರು ಹೇರಳವಾದ ಶಾಂತಿಯಲ್ಲಿ ತಮ್ಮ ಅತ್ಯಂತ ಉತ್ಕೃಷ್ಟವಾದ ಆನಂದವನ್ನು ನಿಶ್ಚಯವಾಗಿ ಕಂಡುಕೊಳ್ಳುವರು.”ಕೀರ್ತನೆ 37:11, NW.

33. ಭೂಮಿಯು ಯಾವ ಮಾರ್ಪಾಟವನ್ನು ಹೊಂದುವುದು?

33 ಅದಲ್ಲದೆ, ಆ ಹೊಸ ವ್ಯವಸ್ಥೆಯಲ್ಲಿ ಜೀವಿಸುವವರು ಭೂಮಿಯನ್ನು ದೇವರು ಅದಕ್ಕೆ ಆರಂಭದಲ್ಲಿ ಉದ್ದೇಶಿಸಿದ್ದ ಪ್ರಕಾರವೇ ಒಂದು ಪರದೈಸವಾಗಿ ಮಾರ್ಪಡಿಸುವರು. ಅದು ಮಾನವಕುಲಕ್ಕೆ ಎಂಥಾ ಒಂದು ತೃಪ್ತಿಕರವಾದ ಕೆಲಸವಾಗಲಿದೆ! ಮತ್ತು ಪರದೈಸದ ಪುನಃಸ್ಥಾಪನೆಯೊಂದಿಗೆ ಜನರು ಸರೋವರ, ನದಿ, ಸಾಗರಗಳಲ್ಲಿ; ಗುಡ್ಡ, ಬೆಟ್ಟ, ಬಯಲು, ತಗ್ಗುಗಳಲ್ಲಿ; ಅಂದವಾದ ಹೂಗಳು, ಸಸಿಗಳು ಮತ್ತು ವೃಕ್ಷಗಳಲ್ಲಿ ಹಾಗೂ ಆಸಕ್ತಿಭರಿತ ಪಶುಗಳಲ್ಲಿ ಪೂರ್ಣವಾಗಿ ಆನಂದಿಸಲು ಶಕ್ತರಾಗುವರು. ಅಷ್ಟು ಮಾತ್ರವಲ್ಲ ಆಹಾರದ ಅಭಾವವೆಂದೂ ಸಂಭವಿಸಲಾರದು ಯಾಕೆಂದರೆ “ಭೂಮಿಯು ನಿಶ್ಚಯವಾಗಿ ಒಳ್ಳೇ ಬೆಳೆಯನ್ನು ಕೊಡಲಿದೆ. ದೇವರು ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.” ಹೌದು, “ಭೂಮಿಯಲ್ಲೆಲ್ಲಾ ಬೆಳೆಯು ಸಮೃದ್ಧಿಯಾಗಿರುವುದು. ಬೆಟ್ಟಗಳ ಮೇಲೆಲ್ಲಾ ತುಂಬಿ ತುಳುಕುವುದು.”—ಕೀರ್ತನೆ 67:6; 72:16.

34. ಯಾವ ಶಾರೀರಿಕ ವಾಸಿ ಮಾಡುವಿಕೆಯು ಅಲ್ಲಿ ಸಂಭವಿಸಲಿದೆ?

34 ನಿತ್ಯಶಾಂತಿ ಮತ್ತು ಹೇರಳವಾದ ಆಹಾರ ಸಮೃದ್ಧಿಯೊಂದಿಗೆ ಸುದೃಢ ಆರೋಗ್ಯವೂ ಲಭಿಸುವುದು. ಮನುಷ್ಯನನ್ನು ದೇವರು ನಿರ್ಮಿಸಿದಾತನಾದ ಕಾರಣ, ಕುಂಟರನ್ನು ಗುಣಪಡಿಸುವುದು ಹೇಗೆಂದೂ ಕುರುಡರಿಗೆ ಕಣ್ಣುಗಳನ್ನೂ ಕಿವುಡರಿಗೆ ಕಿವಿಗಳನ್ನೂ ಕೊಡುವುದು ಮತ್ತು ಅಸೌಖ್ಯ, ವೃದ್ಧಾಪ್ಯ ಮತ್ತು ಮರಣವನ್ನು ತೆಗೆದುಬಿಡುವುದು ಹೇಗೆಂದು ಯಾವುದೇ ಒಬ್ಬ ಡಾಕ್ಟರರಿಗಿಂತ ಅಧಿಕ ಉತ್ತಮವಾಗಿ ಆತನಿಗೆ ತಿಳಿದಿದೆ. ಇದನ್ನು ಮಾಡಲು ದೇವರಿಗಿರುವ ಶಕ್ತಿಯು ಯೇಸು ಕ್ರಿಸ್ತನಿಂದ ಒಂದು ಸೂಚಕವಾಗಿ ಅಥವಾ ಚಿಕ್ಕ ಪ್ರಮಾಣದಲ್ಲಿ ಭೂಮಿಯಲ್ಲಿರುವಾಗ ಪ್ರದರ್ಶಿಸಲ್ಪಟ್ಟಿತ್ತು. ಬೈಬಲು ನಮಗನ್ನುವುದು: “ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು, ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿ ಮಾಡಿದನು. ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲು ಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟರು.”—ಮತ್ತಾಯ 15:30, 31.

35, 36. ದೇವರ ಹೊಸ ವ್ಯವಸ್ಥೆಯಲ್ಲಿ ಜೀವಿಸುವ ಸಂದರ್ಭವು ಸತ್ತವರಿಗೆ ಹೇಗೆ ಕೊಡಲ್ಪಡುವುದು? (ಯೋಹಾನ 5:28, 29; ಲೂಕ 7:11-15)

35 ಯೇಸು ಈ ಭೂಪರದೈಸದ ಕುರಿತಾಗಿ ತನ್ನ ಪಕ್ಕದಲ್ಲಿ ತೂಗ ಹಾಕಲ್ಪಟ್ಟಿದ್ದ ಮನುಷ್ಯನೊಬ್ಬನಿಗೆ ನಿರ್ದೇಶಿಸುತ್ತಾ ಅಂದದ್ದು: “ನೀನು ನನ್ನ ಸಂಗಡ ಪರದೈಸದಲ್ಲಿರುವಿ.” (ಲೂಕ 23:43) ಆದರೆ ಆ ಮನುಷ್ಯನು ಸತ್ತನು. ಹೀಗಿರಲಾಗಿ ಅವನು ಪರದೈಸವನ್ನು ಪ್ರವೇಶಿಸುವುದು ಹೇಗೆ ಸಾಧ್ಯ? ಹೇಗೆಂದರೆ ದೇವರೆಷ್ಟು ಲಕ್ಷ್ಯ ಕೊಡುತ್ತಾನೆಂದು ತೋರಿಸುವ ಇನ್ನೊಂದು ವಿಸ್ಮಯಕರ ಒದಗಿಸುವಿಕೆಯ ಮೂಲಕ—ಸತ್ತವರೊಳಗಿಂದ ಪುನರುತ್ಥಾನದ ಮೂಲಕವೇ. ಅಪೊಸ್ತಲರ ಕೃತ್ಯ 24:15 ರಲ್ಲಿ ಬೈಬಲು ಅನ್ನುವುದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗಲಿದೆ.” ತನ್ನ ರಾಜ್ಯದ ಕೆಳಗೆ ಇದನ್ನು ಮಾಡಲು ದೇವರಿಗಿರುವ ಶಕ್ತಿಯನ್ನು ಪ್ರದರ್ಶಿಸುವುದಕ್ಕಾಗಿ ಯೇಸುವು ಭೂಮಿಯಲ್ಲಿರುವಾಗ ಸತ್ತ ವ್ಯಕ್ತಿಗಳನ್ನು ಪುನರುತ್ಥಾನಗೊಳಿಸಿದ್ದನು.

36 ಪುನರುತ್ಥಾನದ ವಿಚಾರವು ನಂಬಲು ಕಷ್ಟವೆಂಬದಾಗಿ ನಿಮಗೆ ಕಾಣುತ್ತದೋ? ಆದರೆ ಈಗಲೂ ನೀವು ಟೆಲಿವಿಷನ್‌ ಕಾರ್ಯಕ್ರಮಗಳಲ್ಲಿ ಎಷ್ಟೋ ಕಾಲದ ಹಿಂದೆ ಸತ್ತವರನ್ನು ಕಾಣಶಕ್ತರಾಗಿದ್ದೀರಿ. ಅವರ ಸರ್ವಗಳನ್ನು ಕೇಳುತ್ತೀರಿ. ಅವರ ಅಭಿನಯಗಳನ್ನು ಅವಲೋಕಿಸುತ್ತೀರಿ ಮತ್ತು ಅವರ ಗುಣ ಲಕ್ಷಣಗಳನ್ನು ಗಮನಿಸುತ್ತೀರಿ. ಅಂಥ ವಿಷಯಗಳನ್ನು ಟೆಲಿವಿಷನ್‌ ಟೇಪುಗಳಲ್ಲಿ ಮನುಷ್ಯ ಮಾತ್ರದವರು ಕಾಪಾಡಿ ಉಳಿಸಶಕ್ತರಾಗಿದ್ದಾರೆಂದ ಮೇಲೆ ಸರ್ವಜ್ಞಾನಿಯಾದ ದೇವರಿಗೆ ತಾನು ಪುನಃ ನಿರ್ಮಿಸಬಯಸುವ ಪ್ರತಿಯೊಬ್ಬ ಮನುಷ್ಯ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣ ಲಕ್ಷಣಗಳ ಸವಿಸ್ತಾರ ಅಚ್ಚೊತ್ತನ್ನು ತನ್ನ ಜ್ಞಾಪಕದಲ್ಲಿ ಉಳಿಸಿಕೊಳ್ಳಲು ಕಷ್ಟವಾಗಲಾರದು. ಇದನ್ನು ಆತನು ಮಾಡಿದ್ದಾನೆ, ಮತ್ತು ಸತ್ತವರನ್ನು ಪುನಃ ಜೀವಿತಕ್ಕೆ ಆತನು ಎಬ್ಬಿಸಲಿದ್ದಾನೆ. ಈ ರೀತಿಯಲ್ಲಿ ಅವರಿಗೂ ದೇವರ ಹೊಸ ವ್ಯವಸ್ಥೆಯಲ್ಲಿ ಜೀವವನ್ನು ಆನಂದಿಸುವ ಸಂದರ್ಭ ದೊರೆಯುವದು. ಮತ್ತು ಸಮಾಧಿಗಳನ್ನು ಬರಿದು ಮಾಡುವ ಮೂಲಕ, ಮತ್ತು ಬಾಧ್ಯತೆಯಾಗಿ ಬಂದ ಅಸೌಖ್ಯ, ವೃದ್ಧಾಪ್ಯ ಮತ್ತು ಮರಣದಿಂದ ಜನರನ್ನು ಮುಕ್ತಗೊಳಿಸುವ ಮೂಲಕ ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು.” (ಯೆಶಾಯ 25:8) ಹೀಗೆ ಜನರು ನಿರಂತರವಾಗಿ ಜೀವಿಸಲು ಶಕ್ತರಾಗುವರು!

37 ತನ್ನ ರಾಜ್ಯದ ಮೂಲಕವಾಗಿ, ದೇವರು ಇಷ್ಟು ಕಾಲದ ತನಕ ನೆಲೆಸಿದ ಕೆಟ್ಟ ಪರಿಸ್ಥಿತಿಯನ್ನು ಪೂರ್ಣವಾಗಿ ವಿಪರ್ಯಸ್ತಗೊಳಿಸುವನು! ಗತಕಾಲದಲ್ಲಿ ನಾವು ಅನುಭವಿಸಿರಬಹುದಾದ ಯಾವುದೇ ಹಾನಿಗಾಗಿ ಎಷ್ಟೋ ಪಾಲಷ್ಟು ಹೆಚ್ಚು ಸುಖದ ಆಶೀರ್ವಾದಗಳನ್ನು ಸುರಿಸುವ ಮೂಲಕ ಯುಗಯುಗಾಂತರಗಳಲ್ಲಿ ತನ್ನ ಮಹಾ ಪರಾಮರಿಕೆಯನ್ನು ತೋರಿಸಿಕೊಡುವನು. ಈ ಸದ್ಯದ ವ್ಯವಸ್ಥೆಯಲ್ಲಿ ನಾವು ಅನುಭವಿಸಿದ ಆ ಪೂರ್ವದ ತೊಂದರೆಗಳನ್ನು ಒಂದು ವೇಳೆ ನಾವು ಜ್ಞಾಪಿಸಬಯಸಿದರೂ, ಅವು ಆಗ ಮಬ್ಬಾದ ಜ್ಞಾಪಕಕ್ಕೆ ಕಂದಿ ಹೋಗಿರುವುವು. ದೇವರ ವಾಗ್ದಾನವು ಹೀಗಿದೆ: “ಇಗೋ, ನೂತನಾಕಾಶವನ್ನೂ (ಮಾನವರೆಲ್ಲರ ಮೇಲಿನ ಒಂದು ಹೊಸ ಸ್ವರ್ಗೀಯ ಸರಕಾರ) ನೂತನ ಭೂಮಿಯನ್ನೂ (ಒಂದು ನೀತಿಯುಳ್ಳ ಮಾನವ ಸಮಾಜ) ಸೃಷ್ಟಿಸುವೆನು. ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ಹೃದಯಕ್ಕೆ ಬಾರದು. ನಾನು ಮಾಡುವ ಸೃಷ್ಟಿ ಕಾರ್ಯದಲ್ಲಿಯೇ ಹರ್ಷಗೊಂಡು, ಜನರೇ, ಸದಾ ಉಲ್ಲಾಸಿಸಿರಿ.” (ಯೆಶಾಯ 65:17, 18) ಅಂಥ ಮಹಾ ಆಶೀರ್ವಾದಗಳು ನಮ್ಮ ಮುಂದೆಯೇ ಇರುವಾಗ, ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿ ಬಿಡುವನು” ಎಂದು ಬೈಬಲು ಹೇಳುವುದೇಕೆಂದು ನೀವು ಕಾಣಸಾಧ್ಯವಿದೆ ಮತ್ತು ಏಕೆ ಹೇಳಬಾರದು? ಏಕೆಂದರೆ “ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4

ದೇವರು ಲಕ್ಷಿಸುತ್ತಾನೆ—ನಾವೂ?

38. ಯಾವ ರೀತಿಯ ಜನರನ್ನು ದೇವರು ತನ್ನ ಹೊಸ ವ್ಯವಸ್ಥೆಯಲ್ಲಿ ಬಯಸುತ್ತಾನೆ? (ಕೀರ್ತನೆ 37:37, 38)

38 ದೇವರು ಬೇಗನೇ ದುಷ್ಟತನವನ್ನು ನಾಶಮಾಡಿ ಒಂದು ಉಲ್ಲಾಸಕರವಾದ ಹೊಸ ವ್ಯವಸ್ಥೆಯನ್ನು ಬರಮಾಡುವನೆಂಬ ನಿಜತ್ವವು ಆತನು ನಿಜವಾಗಿಯೂ ನಮ್ಮನ್ನು ಲಕ್ಷಿಸುತ್ತಾನೆಂದು ತೋರಿಸುತ್ತದೆ. ಆದರೆ ನಾವು ಆತನನ್ನು ಲಕ್ಷಿಸುತ್ತೇವೂ? ಹಾಗೆ ಮಾಡುವುದಾದರೆ ನಾವದನ್ನು ತೋರಿಸುವ ಅಗತ್ಯವಿದೆ. ನಾವೇನನ್ನು ಮಾಡಬೇಕು? ಬೈಬಲು ಅನ್ನುವುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತದೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ತನ್ನ ಚಿತ್ತವನ್ನು ಮಾಡುವವರೂ ಮತ್ತು ತನ್ನ ನೀತಿಯುಳ್ಳ ಆಡಳಿತೆಗೆ ಅಧೀನರಾಗುವವರೂ ಆದಂಥ ಜನರನ್ನೇ ದೇವರು ತನ್ನ ಹೊಸ ವ್ಯವಸ್ಥೆಯಲ್ಲಿ ಬಯಸುತ್ತಾನೆ. ಈ ರೀತಿಯ ಜನರು ಆತನ ನಿಯಮಗಳಿಗೆ ವಿಧೇಯರಾಗುತ್ತಾ “ನೂತನ ಭೂಮಿ”ಯನ್ನು ಜೀವಿಸಲು ಒಳ್ಳೇ ಸ್ಥಳವನ್ನಾಗಿ ಮಾಡುವುದಕ್ಕೆ ಸಹಾಯ ಮಾಡುವವರಾಗಿದ್ದಾರೆ. ದೇವರಾಳಿಕೆಯನ್ನು ವಿರೋಧಿಸುವವರು ಮಾತ್ರವೇ ತೊಂದರೆಗಾರರಾದರ್ದಿಂದ ಅವರಿಗೆ ಅಲ್ಲಿ ಜೀವಿಸಲು ಅನುಮತಿ ಕೊಡಲ್ಪಡದು.

39. ನಿತ್ಯಜೀವವು ನಿಮಗೆ ಬೇಕಾದರೆ ಯಾವ ಹುಡುಕುವಿಕೆಯನ್ನು ನೀವು ಮಾಡಲೇಬೇಕು? (ಜ್ಞಾನೋಕ್ತಿ 2:1-6)

39 ದೇವರ ನೀತಿಯುಳ್ಳ ನೂತನ ವ್ಯವಸ್ಥೆಯಲ್ಲಿ ನೀವು ಜೀವಿಸಬಯಸುತ್ತೀರೋ? ಹಾಗಾದರೆ ಮಾಡತಕ್ಕ ಮೊದಲನೆ ವಿಷಯವು ಯಾವುದೆಂದರೆ ಜೀವಕ್ಕಾಗಿ ದೇವರ ಆವಶ್ಯಕತೆಗಳಾವುವೆಂದು ಕಲಿಯುವುದೇ. ಇದು ಬಹಳ ಹೆಚ್ಚಿನ ಕೇಳಿಕೆಯೋ? ಉದ್ಯಾನವನದಂಥಾ ಸುತ್ತುಮುತ್ತಲಿನಲ್ಲಿ ಒಂದು ಸುಂದರವಾದ ಮನೆಯು ಉಚಿತವಾಗಿ ನಿಮಗೆ ಕೊಡಲ್ಪಟ್ಟಲ್ಲಿ, ಅದಕ್ಕೆ ಯೋಗ್ಯರಾಗಲಿಕ್ಕೆ ನೀವೇನು ಮಾಡಬೇಕೆಂದು ತಿಳಿಯಲು ಸಮಯ ತಕ್ಕೊಳ್ಳಲಾರಿರೋ? ದೇವರ ವಾಕ್ಯವು ಎಷ್ಟೋ ಹೆಚ್ಚಿನದ್ದನ್ನು—ಪರದೈಸ ಭೂಮಿಯಲ್ಲಿ ನಿತ್ಯ ಜೀವವನ್ನು ನೀಡಿರುತ್ತದೆ. ನಾವಾತನ ಚಿತ್ತವೇನೆಂದು ಹುಡುಕಿ ಅದನ್ನು ಮಾಡಿದರೆ ಮಾತ್ರವೇ. ಬೈಬಲು ಅನ್ನುವುದು: “ಒಬ್ಬನೇ ಸತ್ಯ ದೇವರಾದ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.”—ಯೋಹಾನ 17:3.

40. ಬೈಬಲು ನಮಗೀಗ ಯಾವ ಅಧಿಕ ಪ್ರಯೋಜನಗಳನ್ನು ಕೊಡುತ್ತದೆ? (2 ತಿಮೊಥೆಯ 3:16, 17)

40 ಬೈಬಲಿನಿಂದ ಕಲಿಯುವಿಕೆಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ತೊಂದರೆಯ ಕಾಲದಲ್ಲಿ ವ್ಯಾವಹಾರಿಕ ಮಾರ್ಗದರ್ಶನೆಯನ್ನೂ ಕೊಡುವುದು. ಅದಲ್ಲದೆ ಪರಿಸ್ಥಿತಿಗಳೇಕೆ ಇಷ್ಟು ಕೆಟ್ಟದ್ದು ಮತ್ತು ಭವಿಷ್ಯತ್ತಿನಲ್ಲೀನು ಕಾದಿರಿಸಿದೆ ಎಂದು ಅದು ನಮಗೆ ತಿಳಿಸುವುದರಿಂದ ನಮಗೆ ನಿಜ ಮನಶ್ಶಾಂತಿಯನ್ನು ಒದಗಿಸುತ್ತದೆ. ಅತಿ ಮಹತ್ವವಾದದ್ದೇನಂದರೆ, ದೇವರನ್ನು “ಯಥಾರ್ಥವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬದನ್ನು ಕಾಣುವಾಗ ದೇವರ ಕಡೆಗೆ ನಿಜ ಪ್ರೀತಿಯನ್ನು ವಿಕಾಸಿಸುವುದಕ್ಕೆ ಅದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.—ಇಬ್ರಿಯ 11:6.

41. ಯಾವ ಸಹಾಯವನ್ನು ಯೆಹೋವನ ಸಾಕ್ಷಿಗಳು ನಿಮಗೆ ಉಚಿತವಾಗಿ ಒದಗಿಸುವರು?

41 ದೇವರ ಹೊಸ ವ್ಯವಸ್ಥೆಯಲ್ಲಿ ಜೀವಕ್ಕಾಗಿ ಆತನ ಒದಗಿಸುವಿಕೆಗಳ ಕುರಿತು ಹೆಚ್ಚನ್ನು ಕಲಿಯಲು ನಿಮ್ಮ ಸಹಾಯಕ್ಕಾಗಿ ಯೆಹೋವನ ಸಾಕ್ಷಿಗಳು ಸಂತೋಷದಿಂದ ಮತ್ತು ಉಚಿತವಾಗಿ ತಮ್ಮ ಸಮಯವನ್ನು ಕೊಡುತ್ತಾರೆ. ದೇವರು ಮತ್ತು ಬೈಬಲಿನ ಕುರಿತಾದ ಬೇರೆ ಪ್ರಶ್ನೆಗಳೂ ನಿಮಗಿರಬಹುದೆಂಬದಕ್ಕೆ ಸಂದೇಹವಿಲ್ಲ. ಈ ವಿಷಯಗಳನ್ನು ನಿಮ್ಮೊಂದಿಗೆ ನಿಮ್ಮ ಸ್ವಂತ ಮನೆಯಲ್ಲಿ ನಿಮ್ಮ ಸ್ವಂತ ಬೈಬಲಿನಿಂದ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುತ್ತಾರೆ. ಆದ್ದರಿಂದ ಒಂದು ಸ್ವತಂತ್ರ ಜೀವಿತ ಮಾರ್ಗವನ್ನು ಅನುಸರಿಸುವ ಬದಲಿಗೆ ಅಥವಾ ಅಸಂಪೂರ್ಣ ಮಾನವರ ಆಲೋಚನೆಯಲ್ಲಿ ಆತುಕೊಳ್ಳುವ ಬದಲಿಗೆ, ಇಂದು ದೊರೆಯುವ ಅತ್ಯುತ್ತಮ ಸಮಾಚಾರದಿಂದ ನೀವು ಮಾರ್ಗದರ್ಶಿಸಲ್ಪಡಬಹುದು. ಆದಕಾರಣ ಇನ್ನೂ ಸಮಯವಿರುವಾಗಲೆ ದೇವರ ವಾಕ್ಯದ ಪ್ರೇರಿತ ಸೂಚನೆಯು ಹೇಳುವ ಪ್ರಕಾರ ಮಾಡುವಂತೆ ನಿಮ್ಮನ್ನು ಪ್ರೋತ್ಸಾಹಿಸಲಾಗುತ್ತದೆ: “ಹೀಗಿರುವುದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಯಾಕಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:6, 7.

[ಪಾದಟಿಪ್ಪಣಿಗಳು]

^ ಪ್ಯಾರ. 5 ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ ಈ ಪ್ರಕಾಶನದಲ್ಲಿರುವ ಶಾಸ್ತ್ರ ವಚನದ ಉಲ್ಲೀಖಗಳು ಆಧುನಿಕ ಭಾಷೆಯ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ರಿಪ್ಚರ್ಸ್‌ನಿಂದ ಭಾಷಾಂತರಿಸಿ ಬರೆಯಲಾಗಿದೆ. ಕೆಲವು ಉಲ್ಲೀಖಗಳನ್ನು ಬಿ.ಎಫ್‌.ಬಿ.ಎಸ್‌.ನವರ 1865ರ ಕನ್ನಡ ಸತ್ಯವೇದದಿಂದ ತೆಗೆಯಲಾಗಿದೆ.

^ ಪ್ಯಾರ. 26 ನ್ಯೂ ಯಾರ್ಕ್‌ ಟೈಮ್ಸ್‌, ನವಂಬರ 6, 1972 ಪುಟ 5.

^ ಪ್ಯಾರ. 26 ಎನ್‌ವೈರನ್‌ಮೆಂಟಲ್‌ ಎಥಿಕ್ಸ್‌, ಡಾನಲ್‌ ಆರ್‌. ಸ್ಕೋಬಿಯವರ ಸಂಪಾದಕತ್ವ, 1971, ಪುಟ 17.

^ ಪ್ಯಾರ. 27 ನ್ಯೂ ಯಾರ್ಕ್‌ ಪೋಸ್ಟ್‌, ಮಾರ್ಚ್‌ 30, 1974, ಪುಟ 35.

[ಅಧ್ಯಯನ ಪ್ರಶ್ನೆಗಳು]

37. ಜನರು ಅನ್ಯಾಯವಾಗಿ ಅನುಭವಿಸಿದಂಥ ಯಾವುದೇ ಹಾನಿಯನ್ನು ದೇವರು ಎಷ್ಟೋ ಹೆಚ್ಚಾಗಿ ಬಗೆಹರಿಸಿಬಿಡುವನೆಂದು ಏಕೆ ಹೇಳಸಾಧ್ಯವಿದೆ?

[ಪುಟ 22ರಲ್ಲಿರುವ ಚಾರ್ಟು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಒಂದು ಸಂತತಿಯ ಒಳಗೆ

1914

ಲೋಕ ಯುದ್ಧಗಳು

ಅಧಿಕ ಪ್ರಮಾಣದ ಬರಗಳು

ಸಾಂಕ್ರಾಮಿಕ ರೋಗಗಳು

ಹಿಂಸಾತ್ಮಕ ಪಾತಕಗಳು

ಭೌಗೋಲಿಕ ಮಾಲಿನ್ಯ

ಈ ವ್ಯವಸ್ಥೆಯ ಅಂತ್ಯ

[ಪುಟ 6ರಲ್ಲಿರುವ ಚಿತ್ರ]

ಮಾನವ ಬಡತನ ಮತ್ತು ದಾರಿದ್ರ್ಯಕ್ಕಾಗಿ ದೇವರ ಮೇಲೆ ತಪ್ಪು ಹೊರಿಸುವುದಾದರೆ.  . .

[ಪುಟ 7ರಲ್ಲಿರುವ ಚಿತ್ರ]

. . . ಭೂಮಿಯ ಸೌಂದರ್ಯ ಮತ್ತು ಫಲಭರಿತ ಹೊಲಗಳಿಗಾಗಿ ಪ್ರಶಸ್ತಿಯು ಯಾರಿಗೆ ಕೊಡಲ್ಪಡಬೇಕು?

[ಪುಟ 9ರಲ್ಲಿರುವ ಚಿತ್ರ]

ಭೂಮಿಯು ಯಾವುದೇ ಮನೆಗಿಂತ ಜೀವ ಪೋಷಣೆಗಾಗಿ ಎಷ್ಟೋ ಉತ್ತಮವಾಗಿ ಸಜ್ಜಿತವಾಗಿದೆ

[ಪುಟ 9ರಲ್ಲಿರುವ ಚಿತ್ರ]

ಪ್ರತಿಯೊಂದು ಮನೆಗೆ ಕಟ್ಟುವಾತನೊಬ್ಬನು ಇರಲಾಗಿ, ಭೂಮಿಗಾದರೋ ಎಷ್ಟು ಹೆಚ್ಚಾಗಿ ಹಾಗಿರಬೇಕು!

[ಪುಟ 13ರಲ್ಲಿರುವ ಚಿತ್ರ]

ಮಾನವರ ನಿತ್ಯ ಆನಂದಕ್ಕಾಗಿ ಇಡೀ ಭೂಮಿಯನ್ನು ಒಂದು ಸುಂದರವಾದ ಉದ್ಯಾನವನ, ಒಂದು ಪರದೈಸವಾಗಿ ಮಾಡುವುದೇ ದೇವರ ಉದ್ದೇಶವಾಗಿತ್ತೆಂದು ಬೈಬಲು ತೋರಿಸುತ್ತದೆ

[ಪುಟ 14ರಲ್ಲಿರುವ ಚಿತ್ರ]

ಒಂದು ಫ್ಯಾನ್‌ ಅದರ ಶಕ್ತಿಯ ಮೂಲದಿಂದ ಕಡಿಯಲ್ಪಟ್ಟಾಗ, ಅದು ನಿಧಾನಿಸುತ್ತಾ ನಂತರ ನಿಂತುಹೋಗುತ್ತದೆ. ತದ್ರೀತಿಯಲ್ಲಿ ಮಾನವಕುಲವು ದೇವರಿಂದ ದೂರ ತೊಲಗಿದಾಗ, ಅಧೋಗತಿಯು ಫಲಿಸಿತು

[ಪುಟ 16ರಲ್ಲಿರುವ ಚಿತ್ರ]

ಒಂದು ಚಿಕ್ಕ ಸುರಕ್ಷಾ ಕೆಲಸವು ಅಲಕ್ಷಿಸಲ್ಪಟ್ಟಾಗ, ಒಂದು ಮಹಾ ಅಣೆಕಟ್ಟು ಸಹ ಕುಸಿದು ಬೀಳಬಹುದು. ನಮ್ಮ ಪ್ರಥಮ ಹೆತ್ತವರು ದೇವರ ನಿಯಮವನ್ನು ಮುರಿದಾಗ, ದುಷ್ಟತನ ಮತ್ತು ಕಷ್ಟಾನುಭವದ ಪ್ರವಾಹವು ಆರಂಭಿಸಿತು

[ಪುಟ 19ರಲ್ಲಿರುವ ಚಿತ್ರ]

ಒಂದು ಕೋರ್ಟ್‌ ಕೇಸ್‌ನಲ್ಲಿ ಕೇವಲ ಇಬ್ಬರೇ ಜನರು ಒಳಗೂಡಿರುವಾಗಲೂ ವಾರಗಳು ತಗಲುತ್ತದೆ. ದೇವರ ಆಡಳಿತೆಯಲ್ಲಿ ಒಳಗೂಡಿರುವ ಪ್ರಶ್ನೆಗಳು ಪೂರ್ಣವಾಗಿ ಮತ್ತು ಸದಕಾಲಕ್ಕಾಗಿ ಇತ್ಯರ್ಥಗೊಳಿಸಲ್ಪಡಲೇಬೇಕು, ಮತ್ತು ಇದಕ್ಕೆ ಸಾಕಷ್ಟು ಸಮಯದ ಅಗತ್ಯವಿದೆ

[ಪುಟ 24ರಲ್ಲಿರುವ ಚಿತ್ರ]

ದೇವರ ಹೊಸ ವ್ಯವಸ್ಥೆಯಲ್ಲಿ ಯುದ್ಧವಿರಲಾರದು, ಏಕೆಂದರೆ ಆತನು “ಯುದ್ಧಗಳನ್ನು ನಿಲ್ಲಿಸಿಬಿಡುವನು”

[ಪುಟ 25ರಲ್ಲಿರುವ ಚಿತ್ರ]

ಪುನಃ ಇನ್ನೆಂದೂ ಮಾನವಕುಲವು ಹಸಿವೆಯಿಂದ ಬಾಧೆಪಡದು

[ಪುಟ 25ರಲ್ಲಿರುವ ಚಿತ್ರ]

ಭೂಮಿಯು ದೇವರ ಆಶೀರ್ವಾದದಿಂದ ಹೇರಳವಾಗಿ ಫಲ ಕೊಡುವುದು

[ಪುಟ 26ರಲ್ಲಿರುವ ಚಿತ್ರ]

ವೃದ್ಧ ಜನರು ಯೌವನ ಮತ್ತು ಪರಿಪೂರ್ಣ ಆರೋಗ್ಯದೊಂದಿಗೆ ಬರುವಂಥ ಚೈತನ್ಯಕ್ಕೆ ಪುನಃ ಸ್ಥಾಪಿಸಲ್ಪಡುವರು

[ಪುಟ 27ರಲ್ಲಿರುವ ಚಿತ್ರ]

ದೇವರ ಜ್ಞಾಪಕದಲ್ಲಿಡಲ್ಪಟ್ಟ ಮೃತರೆಲ್ಲರು ಜೀವಕ್ಕಾಗಿ ಪುನಃ ಸ್ಥಾಪಿಸಲ್ಪಡುವರು ಮತ್ತು ತಮ್ಮ ಪ್ರಿಯ ಜನರೊಂದಿಗೆ ಒಂದುಗೂಡಿಸಲ್ಪಡುವರು

[ಪುಟ 29ರಲ್ಲಿರುವ ಚಿತ್ರ]

ದೇವರ ರಾಜ್ಯದ ಆಳಿಕೆಯ ಕೆಳಗೆ ಜೀವಿತವೆಷ್ಟು ಉಲ್ಲಾಸಕರವಾಗಲಿದೆಯೆಂದರೆ ನಾವೀಗ ಅನ್ಯಾಯವಾಗಿ ಅನುಭವಿಸಿರುವ ಯಾವುದೇ ಹಾನಿಗಾಗಿ ಎಷ್ಟೋ ಪಾಲಷ್ಟು ಹೆಚ್ಚು ಸುಖವಿರುವುದು

[ಪುಟ 31ರಲ್ಲಿರುವ ಚಿತ್ರ]

ಹಿತಕರವಾದ ಸುತ್ತುಮುತ್ತಲಿನಲ್ಲಿ ಜೀವಿತವು ನೀಡಲ್ಪಟ್ಟಲ್ಲಿ, ಅದಕ್ಕೆ ಯೋಗ್ಯರಾಗುವುದು ಹೇಗೆಂದು ತಿಳಿಯಲು ನೀವು ಬಯಸಲಾರಿರೋ? ದೇವರ ಹೊಸ ವ್ಯವಸ್ಥೆಯು ಎಷ್ಟೋ ಹೆಚ್ಚನ್ನು ನೀಡುತ್ತದೆ, ಆದರೆ ಅದಕ್ಕೆ ಯೋಗ್ಯರಾಗುವುದು ಹೇಗೆಂದು ಕಲಿಯಲು ನಾವು ಸಮಯ ತಕ್ಕೊಳ್ಳಲೇಬೇಕು