ಮಾಹಿತಿ ಇರುವಲ್ಲಿ ಹೋಗಲು

ಮುಂದೆ ಈ ಲೋಕ ಹೇಗಿರುತ್ತದೆ?

ಮುಂದೆ ಈ ಲೋಕ ಹೇಗಿರುತ್ತದೆ?

ನಿಮಗೇನು ಅನಿಸುತ್ತದೆ . . .

  • ಇದ್ದ ಹಾಗೇ ಇರುತ್ತೆ?

  • ಇನ್ನೂ ಹದಗೆಡುತ್ತೆ?

  • ಸುಧಾರಣೆ ಆಗುತ್ತೆ?

ಪವಿತ್ರ ಗ್ರಂಥ ಏನು ಹೇಳುತ್ತದೆ?

“ದೇವರು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:3, 4, ನೂತನ ಲೋಕ ಭಾಷಾಂತರ.

ಇದರರ್ಥ . . .

ಬದುಕಿಗೆ ಅರ್ಥ ತುಂಬುವ, ತೃಪ್ತಿಕರ ಕೆಲಸ ಇರುತ್ತದೆ.—ಯೆಶಾಯ 65:21-23.

ಯಾವ ಕಷ್ಟನೂ ಇರಲ್ಲ. ಯಾವ ಕಾಯಿಲೆನೂ ನಮ್ಮನ್ನು ಕಾಡಲ್ಲ.—ಯೆಶಾಯ 25:8; 33:24.

ಬಂಧುಬಳಗದ ಜತೆ ಸುಖ ನೆಮ್ಮದಿಯಿಂದ ಬದುಕುತ್ತೇವೆ. ಶಾಶ್ವತ ಜೀವನ ನಡೆಸುತ್ತೇವೆ.—ಕೀರ್ತನೆ 37:11, 29.

ಪವಿತ್ರ ಗ್ರಂಥ ಹೇಳುವುದನ್ನು ನಂಬಬಹುದಾ?

ಖಂಡಿತ ನಂಬಬಹುದು. ಯಾಕೆ ಅಂತ ಮೂರು ಕಾರಣಗಳನ್ನು ನೋಡೋಣ:

  • ಹೇಳಿದಂತೆ ಮಾಡುವ ಸಾಮರ್ಥ್ಯ ದೇವರಿಗಿದೆ. ಯೆಹೋವ ದೇವರಿಗೆ ಅಪರಿಮಿತ ಶಕ್ತಿಯಿರುವ ಕಾರಣ ಆತ ಮಾತ್ರ ಸರ್ವಶಕ್ತ ಅಂತ ಬೈಬಲ್‌ ಹೇಳುತ್ತದೆ. (ಪ್ರಕಟನೆ 15:3) ಹಾಗಾಗಿ ಈ ಜಗತ್ತಿನ ಅಸ್ತವ್ಯಸ್ತತೆಗಳನ್ನೆಲ್ಲ ಸರಿಮಾಡುವ ಶಕ್ತಿ ದೇವರಿಗೆ ಖಂಡಿತ ಇದೆ. ಬೈಬಲ್‌ ಹೇಳುವಂತೆ “ದೇವರಿಗೆ ಎಲ್ಲವೂ ಸಾಧ್ಯ.”—ಮತ್ತಾಯ 19:26.

  • ಕೊಟ್ಟ ಮಾತನ್ನು ಈಡೇರಿಸುವ ಹಂಬಲ ದೇವರಿಗಿದೆ. ಇದಕ್ಕೊಂದು ಉದಾಹರಣೆ, ಮೃತಪಟ್ಟಿರುವ ಜನರಿಗೆ ಪುನಃ ಜೀವಕೊಡಬೇಕನ್ನುವ ಹಂಬಲ ದೇವರಿಗಿದೆ ಅಂತ ಬೈಬಲ್‌ ಹೇಳುತ್ತದೆ.—ಯೋಬ 14:14, 15.

    ಅದೂ ಅಲ್ಲದೆ ದೇವರ ಮಗ ಯೇಸು ಕಾಯಿಲೆಬಿದ್ದವರನ್ನು ವಾಸಿಮಾಡಿದ್ದರ ಬಗ್ಗೆ ಬೈಬಲ್‌ ಹೇಳುತ್ತದೆ. ವಾಸಿಮಾಡಲು ಕಾರಣವೇನು? ಯೇಸುವಿಗೆ ವಾಸಿಮಾಡುವ ಮನಸ್ಸಿತ್ತು. (ಮಾರ್ಕ 1:40, 41) ಈ ವಿಷಯದಲ್ಲಿ ಯೇಸು ಅನುಕರಿಸಿದ್ದು ತನ್ನ ತಂದೆಯನ್ನು. ಇದರರ್ಥ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಯೆಹೋವ ದೇವರಲ್ಲೂ ಇದೆ.—ಯೋಹಾನ 5:19.

    ಇದನ್ನೆಲ್ಲ ನೋಡುವಾಗ, ಮನುಷ್ಯರು ಸುಖಶಾಂತಿಯ ಬಾಳ್ವೆ ನಡೆಸಬೇಕು, ಒಳ್ಳೇ ಭವಿಷ್ಯ ಅವರದ್ದಾಗಬೇಕು ಎನ್ನುವ ಹಂಬಲ ಯೆಹೋವ ದೇವರು ಮತ್ತು ಯೇಸು ಕ್ರಿಸ್ತರಿಬ್ಬರಿಗೂ ಇದೆ ಅಂತ ಗೊತ್ತಾಗುತ್ತದೆ.—ಕೀರ್ತನೆ 72:12-14; 145:16; 2 ಪೇತ್ರ 3:9.

ಯೋಚಿಸಿ

ದೇವರು ಈ ಲೋಕವನ್ನು ಹೇಗೆ ಸರಿಮಾಡಬಹುದು?

ಉತ್ತರ ಪವಿತ್ರ ಗ್ರಂಥದ ಈ ಭಾಗದಲ್ಲಿದೆ: ಮತ್ತಾಯ 6:9, 10; ದಾನಿಯೇಲ 2:44.