ಆದಿಕಾಂಡ 10:1-32

  • ಜನಾಂಗಗಳ ಪಟ್ಟಿ (1-32)

    • ಯೆಫೆತನ ವಂಶ (2-5)

    • ಹಾಮನ ವಂಶ (6-20)

      • ನಿಮ್ರೋದ ಯೆಹೋವನನ್ನ ವಿರೋಧಿಸಿದ (8-12)

    • ಶೇಮನ ವಂಶ (21-31)

10  ಇದು ನೋಹನ ಮಕ್ಕಳಾದ ಶೇಮ್‌,+ ಹಾಮ್‌, ಯೆಫೆತನ ಚರಿತ್ರೆ. ಜಲಪ್ರಳಯ ಆದ್ಮೇಲೆ ಅವರಿಗೆ ಮಕ್ಕಳು ಹುಟ್ಟಿದ್ರು.+  ಯೆಫೆತನ ಮಕ್ಕಳು ಗೋಮೆರ್‌,+ ಮಾಗೋಗ್‌,+ ಮಾದಯ್‌, ಯಾವಾನ್‌, ತೂಬಲ್‌,+ ಮೇಷೆಕ್‌,+ ತೀರಾಸ್‌.+  ಗೋಮೆರನ ಮಕ್ಕಳು ಅಷ್ಕೆನಸ್‌,+ ರೀಫತ್‌, ತೋಗರ್ಮ.+  ಯಾವಾನನ ಮಕ್ಕಳು ಎಲೀಷಾ,+ ತಾರ್ಷೀಷ್‌,+ ಕಿತ್ತೀಮ್‌,+ ದೋದಾನೀಮ್‌.  ಇವರ ವಂಶದವರು ತಮ್ಮತಮ್ಮ ಭಾಷೆ, ಕುಟುಂಬ, ಜನಾಂಗದ ಪ್ರಕಾರ ಚದರಿ ದ್ವೀಪಗಳಲ್ಲಿ ವಾಸ ಮಾಡಿದ್ರು.  ಹಾಮನ ಮಕ್ಕಳು ಕೂಷ್‌, ಮಿಚ್ರಯಿಮ್‌,+ ಪೂಟ್‌,+ ಕಾನಾನ್‌.+  ಕೂಷನ ಮಕ್ಕಳು ಸೆಬಾ,+ ಹವೀಲಾ, ಸಬ್ತಾ, ರಮ್ಮ,+ ಸಬ್ತಕಾ. ರಮ್ಮನ ಮಕ್ಕಳು ಶೆಬ, ದೆದಾನ್‌.  ಕೂಷನಿಗೆ ನಿಮ್ರೋದ ಹುಟ್ಟಿದ. ನಿಮ್ರೋದ ಭೂಮಿಯಲ್ಲಿ ಮೊದಲ ಶಕ್ತಿಶಾಲಿ ವ್ಯಕ್ತಿ.  ಬಲಿಷ್ಠ ಬೇಟೆಗಾರನಾಗಿದ್ದ ಅವನು ಯೆಹೋವನನ್ನ ವಿರೋಧಿಸಿದ. ಈ ಕಾರಣಕ್ಕೆನೇ ಕೆಲವೊಮ್ಮೆ ಜನ್ರು ಬೇರೆಯವರನ್ನ ನಿಮ್ರೋದನಿಗೆ ಹೋಲಿಸಿ “ಇವನು ಯೆಹೋವನನ್ನ ವಿರೋಧಿಸಿದ ಬಲಿಷ್ಠ ಬೇಟೆಗಾರ ನಿಮ್ರೋದನ ಹಾಗೆನೇ ಇದ್ದಾನೆ” ಅಂತಾರೆ. 10  ಅವನು ಮೊದಮೊದಲು ಆಳಿದ ಪಟ್ಟಣಗಳು: ಬಾಬೆಲ್‌,+ ಯೆರೆಕ್‌,+ ಅಕ್ಕದ್‌, ಕಲ್ನೇ. ಇವು ಶಿನಾರ್‌+ ಪ್ರದೇಶದಲ್ಲಿ ಇದೆ. 11  ಅವನು ಆ ಪ್ರದೇಶದಿಂದ ಹೊರಟು ಅಶ್ಶೂರ್‌+ ದೇಶಕ್ಕೆ ಬಂದು ಅಲ್ಲಿ ಕಟ್ಟಿದ ಪಟ್ಟಣಗಳು ಯಾವುದಂದ್ರೆ ನಿನೆವೆ,+ ರೆಹೋಬೋತೀರ್‌, ಕೆಲಹ, 12  ನಿನೆವೆಗೂ ಕೆಲಹಕ್ಕೂ ಮಧ್ಯ ಇರೋ ರೆಸೆನ್‌. ಇದು* ದೊಡ್ಡ ಪಟ್ಟಣ. 13  ಮಿಚ್ರಯಿಮನ ಮಕ್ಕಳು ಲೂದ್ಯ,+ ಅನಾಮ್‌, ಲೆಹಾಬ್‌, ನಫ್ತುಹ್ಯ,+ 14  ಪತ್ರುಸ್ಯ,+ ಕಸ್ಲುಹ್ಯ, ಕಫ್ತೋರ್ಯ.+ ಕಸ್ಲುಹ್ಯನ ವಂಶದವರೇ ಫಿಲಿಷ್ಟಿಯರು.+ 15  ಕಾನಾನನ ಮೊದಲನೇ ಮಗ ಸೀದೋನ್‌.+ ಆಮೇಲೆ ಹೇತ್‌+ ಹುಟ್ಟಿದ. 16  ಅಷ್ಟೇ ಅಲ್ಲ ಯೆಬೂಸಿಯರು,+ ಅಮೋರಿಯರು,+ ಗಿರ್ಗಾಷಿಯರು, 17  ಹಿವ್ವಿಯರು,+ ಅರ್ಕಿಯರು, ಸೀನಿಯರು, 18  ಅರ್ವಾದಿಯರು,+ ಚೆಮಾರಿಯರು, ಹಾಮಾತ್ಯರು+ ಕಾನಾನನಿಂದ ಹುಟ್ಟಿದ್ರು. ಆಮೇಲೆ ಕಾನಾನನ ಕುಟುಂಬಗಳು ಬೇರೆಬೇರೆ ಜಾಗಕ್ಕೆ ಚೆಲ್ಲಾಪಿಲ್ಲಿ ಆಯ್ತು. 19  ಕಾನಾನ್ಯರ ಪ್ರದೇಶದ ಗಡಿ ಸೀದೋನಿಂದ ದೂರದ ಗಾಜಾಕ್ಕೆ+ ಹತ್ರ ಇರೋ ಗೆರಾರಿನ+ ತನಕ, ಲೆಷಾಕ್ಕೆ ಹತ್ರ ಇರೋ ಸೊದೋಮ್‌, ಗೊಮೋರ,+ ಅದ್ಮಾ, ಚೆಬೋಯೀಮ್‌+ ತನಕ ಇತ್ತು. 20  ಇವರೇ ಹಾಮನ ವಂಶದವರು. ಇವರನ್ನ ಅವರವರ ಕುಟುಂಬ, ಭಾಷೆ, ಪ್ರದೇಶ ಮತ್ತು ಜನಾಂಗದ ಪ್ರಕಾರ ಪಟ್ಟಿಮಾಡಲಾಗಿದೆ. 21  ಯೆಫೆತನ ತಮ್ಮನಾದ* ಶೇಮನಿಗೆ ಕೂಡ ಮಕ್ಕಳಾದ್ರು. ಶೇಮ ಎಬೆರನ+ ಎಲ್ಲ ಮಕ್ಕಳ ಪೂರ್ವಜ. 22  ಶೇಮನ ಮಕ್ಕಳು ಏಲಾಮ್‌,+ ಅಶ್ಶೂರ್‌,+ ಅರ್ಪಕ್ಷದ,+ ಲೂದ್‌, ಅರಾಮ್‌.+ 23  ಅರಾಮನ ಮಕ್ಕಳು ಊಚ್‌, ಹೂಲ್‌, ಗೆತೆರ್‌, ಮಷ್‌. 24  ಅರ್ಪಕ್ಷದನಿಗೆ ಶೆಲಹ+ ಹುಟ್ಟಿದ. ಶೆಲಹನಿಗೆ ಎಬೆರ ಹುಟ್ಟಿದ. 25  ಎಬೆರನಿಗೆ ಇಬ್ರು ಮಕ್ಕಳು ಹುಟ್ಟಿದ್ರು. ಒಬ್ಬನ ಹೆಸ್ರು ಪೆಲೆಗ.*+ ಯಾಕಂದ್ರೆ ಅವನ ಕಾಲದಲ್ಲಿ ಭೂಮಿಯಲ್ಲಿದ್ದ ಜನ ಚದರಿಹೋದ್ರು. ಇನ್ನೊಬ್ಬ ಮಗನ ಹೆಸ್ರು ಯೊಕ್ತಾನ್‌.+ 26  ಯೊಕ್ತಾನನಿಗೆ ಹುಟ್ಟಿದ ಮಕ್ಕಳು ಅಲ್ಮೋದಾದ್‌, ಶೆಲೆಫ್‌, ಹಚರ್ಮಾವೆತ್‌, ಯೆರಹ,+ 27  ಹದೋರಾಮ್‌, ಊಜಾಲ್‌, ದಿಕ್ಲಾ, 28  ಓಬಾಲ್‌, ಅಬೀಮಯೇಲ್‌, ಶೆಬ, 29  ಓಫೀರ್‌,+ ಹವೀಲಾ, ಯೋಬಾಬ್‌. ಇವರೆಲ್ಲ ಯೊಕ್ತಾನನ ಮಕ್ಕಳು. 30  ಅವರು ವಾಸಿಸ್ತಿದ್ದ ಪ್ರದೇಶ ಮೇಶಾದಿಂದ ಹಿಡಿದು ಪೂರ್ವದ ಬೆಟ್ಟ ಪ್ರದೇಶವಾದ ಸೆಫಾರ್‌ ತನಕ ಇತ್ತು. 31  ಇವರೇ ಶೇಮನ ವಂಶದವರು. ಇವರನ್ನ ಅವರವರ ಕುಟುಂಬ, ಭಾಷೆ, ಪ್ರದೇಶ ಮತ್ತು ಜನಾಂಗದ ಪ್ರಕಾರ ಪಟ್ಟಿಮಾಡಲಾಗಿದೆ.+ 32  ಇವು ನೋಹನ ಮಕ್ಕಳ ಕುಟುಂಬಗಳು. ಇವರನ್ನ ಅವರವರ ವಂಶ ಮತ್ತು ಜನಾಂಗಗಳ ಪ್ರಕಾರ ಪಟ್ಟಿಮಾಡಲಾಗಿದೆ. ಜಲಪ್ರಳಯ ಆದ್ಮೇಲೆ ಭೂಮಿ ತುಂಬ ಹರಡಿದ್ದ ಜನ್ರು ಬಂದದ್ದು ಈ ಕುಟುಂಬಗಳಿಂದಾನೇ.+

ಪಾದಟಿಪ್ಪಣಿ

ಬಹುಶಃ ನಿನೆವೆ, ರೆಹೋಬೋತೀರ್‌, ಕೆಲಹ ಮತ್ತು ರೆಸೆನ್‌ ಇದೆಲ್ಲ ಸೇರಿ ಒಂದು ದೊಡ್ಡ ಪಟ್ಟಣ ಆಗಿತ್ತು.
ಬಹುಶಃ “ಯೆಫೆತನ ಅಣ್ಣನಾದ.”
ಅರ್ಥ “ಚೆದರು.”