ಒಂದನೇ ಪೂರ್ವಕಾಲವೃತ್ತಾಂತ 9:1-44

  • ಬಾಬೆಲಿಂದ ವಾಪಸ್‌ ಬಂದ ಮೇಲೆ ವಂಶಾವಳಿ ಪಟ್ಟಿ (1-34)

  • ಸೌಲನ ವಂಶಾವಳಿಯ ಪುನರಾವರ್ತನೆ (35-44)

9  ಎಲ್ಲ ಇಸ್ರಾಯೇಲ್ಯರ ಹೆಸ್ರುಗಳನ್ನ ಅವ್ರವ್ರ ಮನೆತನಗಳ ಪ್ರಕಾರ ವಂಶಾವಳಿ ಪಟ್ಟಿಯಲ್ಲಿ ಬರೆದಿತ್ತು. ಆ ವಂಶಾವಳಿ ಪಟ್ಟಿ ಇಸ್ರಾಯೇಲ್‌ ರಾಜರ ಪುಸ್ತಕದಲ್ಲಿದೆ. ಯೆಹೂದದ ಜನ್ರು ದೇವರಿಗೆ ನಂಬಿಕೆದ್ರೋಹ ಮಾಡಿದ್ರಿಂದ ಅವ್ರನ್ನ ಬಂಧಿಸಿ ಬಾಬೆಲಿಗೆ ಕರ್ಕೊಂಡು ಹೋಗಿದ್ರು.+  ತಂತಮ್ಮ ಪಟ್ಟಣಗಳಿಗೆ ಅಂದ್ರೆ ಅವ್ರ ಆಸ್ತಿ ಇದ್ದಲ್ಲಿಗೆ ಮೊದ್ಲು ವಾಪಸ್‌ ಬಂದವ್ರಲ್ಲಿ ಕೆಲವು ಇಸ್ರಾಯೇಲ್ಯರು, ಪುರೋಹಿತರು, ಲೇವಿಯರು, ದೇವಾಲಯದ ಸೇವಕರು* ಇದ್ರು.+  ಯೆಹೂದ,+ ಬೆನ್ಯಾಮೀನ್‌,+ ಎಫ್ರಾಯೀಮ್‌, ಮನಸ್ಸೆಯ ವಂಶಕ್ಕೆ ಸೇರಿದ ಕೆಲವರು ಯೆರೂಸಲೇಮಲ್ಲೇ ಉಳ್ಕೊಂಡ್ರು. ಯಾರಂದ್ರೆ  ಬಾನಿಯ ಮಗ ಇಮ್ರಿ, ಇಮ್ರಿಯ ಮಗ ಒಮ್ರಿ, ಒಮ್ರಿಯ ಮಗ ಅಮ್ಮೀಹೂದ, ಅಮ್ಮೀಹೂದನ ಮಗ ಊತೈ. ಬಾನಿ ಯೆಹೂದನ ಮಗ ಪೆರೆಚನ+ ವಂಶದವ.  ಶೀಲೋನವನಾದ ಅಸಾಯ, ಅವನ ಗಂಡು ಮಕ್ಕಳು. ಇವನು ತನ್ನ ತಂದೆ ಮನೆತನದಲ್ಲಿ ಮೊದಲ್ನೇ ಮಗ.  ಅಷ್ಟೇ ಅಲ್ಲ ಜೆರಹನ+ ಗಂಡು ಮಕ್ಕಳಲ್ಲಿ ಯೆಯೂವೇಲ್‌, ಅವ್ರ 690 ಸಹೋದರರು.  ಬೆನ್ಯಾಮೀನನ ವಂಶದವರು ಯಾರಂದ್ರೆ ಮೆಷುಲ್ಲಾಮನ ಮಗನೂ ಹೋದವ್ಯನ ಮೊಮ್ಮಗನೂ ಹಸ್ಸೆನೂವನ ಮರಿಮಗನೂ ಆದ ಸಲ್ಲು,  ಯೆರೋಹಾಮನ ಮಗ ಇಬ್ನೆಯಾಹ, ಉಜ್ಜಿಯ ಮಗನೂ ಮಿಕ್ರಿಯ ಮೊಮ್ಮಗನೂ ಆದ ಏಲಾ, ಶೆಫಟ್ಯನ ಮಗನೂ ರೆಗೂವೇಲನ ಮೊಮ್ಮಗನೂ ಇಬ್ನಿಯಾಹನ ಮರಿಮಗನೂ ಆದ ಮೆಷುಲ್ಲಾಮ.  ಇವ್ರ ವಂಶಾವಳಿ ಪಟ್ಟಿ ಪ್ರಕಾರ ಇವ್ರ ಸಹೋದರರ ಒಟ್ಟು ಸಂಖ್ಯೆ 956. ಇವ್ರೆಲ್ಲ ತಮ್ಮತಮ್ಮ ಕುಲಗಳ ಮುಖ್ಯಸ್ಥರು ಆಗಿದ್ರು. 10  ಪುರೋಹಿತರು ಯಾರಂದ್ರೆ ಯೆದಾಯ, ಯೆಹೋಯಾರೀಬ್‌, ಯಾಕೀನ್‌,+ 11  ಹಿಲ್ಕೀಯನ ಮಗ ಅಜರ್ಯ, ಹಿಲ್ಕೀಯ ಮೆಷುಲ್ಲಾಮನ ಮಗ, ಮೆಷುಲ್ಲಾಮ ಚಾದೋಕನ ಮಗ, ಚಾದೋಕ ಮೆರಾಯೋತನ ಮಗ, ಮೆರಾಯೋತ ಸತ್ಯ ದೇವರ ಆಲಯದಲ್ಲಿ ಅಧಿಪತಿಯಾಗಿದ್ದ ಅಹೀಟೂಬನ ಮಗ, 12  ಯೆರೋಹಾಮನ ಮಗನೂ ಪಷ್ಹೂರನ ಮೊಮ್ಮಗನೂ ಮಲ್ಕೀಯನ ಮರಿಮಗನೂ ಆದ ಅದಾಯ, ಅದೀಯೇಲನ ಮಗ ಮಾಸೈ, ಅದೀಯೇಲ್‌ ಯಹ್ಜೇರನ ಮಗ, ಯಹ್ಜೇರ್‌ ಮೆಷುಲ್ಲಾಮನ ಮಗ, ಮೆಷುಲ್ಲಾಮ ಮೆಷಿಲ್ಲೇಮಿತನ ಮಗ, ಮೆಷಿಲ್ಲೇಮಿತ್‌ ಇಮ್ಮೇರನ ಮಗ, 13  ಜೊತೆಗೆ ಇವ್ರೆಲ್ಲರ ಸಹೋದರರು ಒಟ್ಟು 1,760 ಜನ ಇದ್ರು. ಇವ್ರೆಲ್ಲ ಬಲಿಷ್ಠರು, ತಮ್ಮತಮ್ಮ ಕುಲಗಳ ಮುಖ್ಯಸ್ಥರು ಆಗಿದ್ರು. ಸತ್ಯದೇವರ ಆಲಯದಲ್ಲಿ ಸೇವೆ ಮಾಡೋಕೆ ಯಾವಾಗ್ಲೂ ತಯಾರಾಗಿ ಇರ್ತಿದ್ರು. 14  ಲೇವಿಯರು ಯಾರಂದ್ರೆ, ಹಷ್ಷೂಬನ ಮಗನೂ ಅಜ್ರೀಕಾಮನ ಮೊಮ್ಮಗನೂ ಹಷಬ್ಯನ ಮರಿಮಗನೂ ಆದ ಶೆಮಾಯ.+ ಇವನು ಮೆರಾರೀ ವಂಶದವ. 15  ಬಕ್ಬಕ್ಕರ್‌, ಹೆರೆಷ್‌, ಗಾಲಾಲ್‌, ಮೀಕನ ಮಗನೂ ಜಿಕ್ರಿಯ ಮೊಮ್ಮಗನೂ ಆಸಾಫನ ಮರಿಮಗನೂ ಆದ ಮತ್ತನ್ಯ, 16  ಶೆಮಾಯನ ಮಗನೂ ಗಾಲಾಲನ ಮೊಮ್ಮಗನೂ ಯೆದುತೂನನ ಮರಿಮಗನೂ ಆದ ಓಬದ್ಯ, ಆಸನ ಮಗನೂ ಎಲ್ಕಾನನ ಮೊಮ್ಮಗನೂ ಆದ ಬೆರೆಕ್ಯ. ಇವನು ನೆಟೋಫಾತ್ಯರ+ ಹಳ್ಳಿಗಳಲ್ಲಿ ವಾಸಿಸ್ತಿದ್ದ. 17  ಬಾಗಿಲು ಕಾಯುವವರು+ ಯಾರಂದ್ರೆ ಶಲ್ಲೂಮ, ಅಕ್ಕೂಬ್‌, ಟಲ್ಮೋನ್‌, ಅಹೀಮನ್‌. ಇವ್ರಲ್ಲಿ ಶಲ್ಲೂಮ ಮುಖ್ಯಸ್ಥ ಆಗಿದ್ದ. 18  ಆದ್ರೆ ಪೂರ್ವದಲ್ಲಿದ್ದ ರಾಜನ ಬಾಗಿಲನ್ನ ಇದಕ್ಕಿಂತ ಮುಂಚೆ ಶಲ್ಲೂಮ ಕಾಯ್ತಿದ್ದ.+ ಇವ್ರೆಲ್ಲ ಲೇವಿಯರ ಪಾಳೆಯಗಳ ಬಾಗಿಲು ಕಾಯುವವರು ಆಗಿದ್ರು. 19  ಕೋರೆಯ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮ, ಅವನ ಕುಲಕ್ಕೆ ಸೇರಿದ ಕೋರಹಿಯರಾದ ಅವನ ಸಹೋದರರು ಡೇರೆಯ ಬಾಗಿಲು ಕಾಯುವವರು ಆಗಿದ್ರು. ಹಾಗಾಗಿ ಸೇವೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ ನೋಡ್ಕೊಳ್ತಿದ್ರು. ಅವ್ರ ತಂದೆಯಂದಿರು ಬಾಗಿಲಲ್ಲಿ ಕಾವಲಿದ್ದು ಯೆಹೋವನ ಪಾಳೆಯವನ್ನ ನೋಡ್ಕೊಳ್ತಿದ್ರು. 20  ಈ ಮುಂಚೆ ಎಲ್ಲಾಜಾರನ+ ಮಗ ಫೀನೆಹಾಸ+ ಅವ್ರ ನಾಯಕನಾಗಿದ್ದ, ಯೆಹೋವ ಅವನ ಜೊತೆ ಇದ್ದ. 21  ಮೆಷೆಲೆಮ್ಯನ ಮಗ ಜೆಕರ್ಯ+ ದೇವದರ್ಶನದ ಡೇರೆಯ ಪ್ರವೇಶ ಸ್ಥಳದ ಬಾಗಿಲು ಕಾಯುವವನು ಆಗಿದ್ದ. 22  ಬಾಗಿಲು ಕಾಯುವವರ ಒಟ್ಟು ಸಂಖ್ಯೆ 212 ಆಗಿತ್ತು. ವಂಶಾವಳಿ ಪಟ್ಟಿಯಲ್ಲಿ ಹೆಸ್ರುಗಳನ್ನ ಪಟ್ಟಿಮಾಡಿದ+ ಪ್ರಕಾರನೇ ಅವರು ತಮ್ಮತಮ್ಮ ಹಳ್ಳಿಗಳಲ್ಲಿ ಇದ್ರು. ಅವರು ತುಂಬ ನಂಬಿಗಸ್ತ ಜನ್ರಾಗಿದ್ರು. ಹಾಗಾಗಿ ದಾವೀದ ಮತ್ತು ದಿವ್ಯದೃಷ್ಟಿಯಿದ್ದ+ ಸಮುವೇಲ ಅವ್ರನ್ನ ಈ ಕೆಲಸಗಳ ಮೇಲೆ ನೇಮಿಸಿದ್ರು. 23  ಅವ್ರಿಗೆ, ಅವ್ರ ಗಂಡು ಮಕ್ಕಳಿಗೆ ಯೆಹೋವನ ಆಲಯದ ಅಂದ್ರೆ ಡೇರೆಯ ಬಾಗಿಲು ಕಾವಲುಗಾರರ ಕೆಲಸ ಕೊಟ್ಟಿದ್ರು.+ 24  ಕಾವಲುಗಾರರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹೀಗೆ ನಾಲ್ಕು ದಿಕ್ಕಲ್ಲೂ ಇರ್ತಿದ್ರು.+ 25  ಆಗಾಗ ಅವ್ರ ಸಹೋದರರು ತಮ್ಮತಮ್ಮ ಹಳ್ಳಿಗಳಿಂದ ಬಂದು ಏಳು ದಿನ ಅವ್ರ ಜೊತೆ ಸೇರಿ ಸೇವೆ ಮಾಡಬೇಕಿತ್ತು. 26  ನಾಲ್ಕು ಜನ್ರನ್ನ ಮುಖ್ಯ* ಬಾಗಿಲು ಕಾಯುವವರಾಗಿ ಇಟ್ಟಿದ್ರು. ಅವರು ಲೇವಿಯರಾಗಿದ್ರು, ಅವ್ರಿಗೆ ಸತ್ಯ ದೇವರ ಆಲಯದ ಕೊಠಡಿಗಳನ್ನ,* ಖಜಾನೆಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಕೊಟ್ರು.+ ಯಾಕಂದ್ರೆ ಅವರು ತುಂಬ ನಂಬಿಗಸ್ತರಾಗಿದ್ರು. 27  ಅವರು ಸತ್ಯ ದೇವರ ಆಲಯದ ಸುತ್ತ ತಮ್ಮತಮ್ಮ ಜಾಗದಲ್ಲಿ ನಿಂತು ಇಡೀ ರಾತ್ರಿ ಕಾಯ್ತಿದ್ರು. ಅದೇ ಅವ್ರ ಕರ್ತವ್ಯ ಆಗಿತ್ತು, ಬೀಗದ ಕೈ ಅವ್ರ ಹತ್ರ ಇತ್ತು. ಪ್ರತಿದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರಿತಿದ್ರು. 28  ಅವ್ರಲ್ಲಿ ಕೆಲವ್ರಿಗೆ ದೇವಾಲಯದ ಪಾತ್ರೆಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಇತ್ತು.+ ಅವರು ಅದನ್ನ ಒಳಗೆ ಹೊರಗೆ ತಗೊಂಡು ಹೋಗುವಾಗ ಲೆಕ್ಕ ಮಾಡ್ತಿದ್ರು. 29  ಅವ್ರಲ್ಲಿ ಇನ್ನು ಕೆಲವ್ರಿಗೆ ಬೇರೆ ಪಾತ್ರೆಗಳನ್ನ, ಎಲ್ಲ ಪವಿತ್ರ ಪಾತ್ರೆಗಳನ್ನ,+ ನುಣ್ಣಗಿನ ಹಿಟ್ಟು,+ ದ್ರಾಕ್ಷಾಮದ್ಯ,+ ಎಣ್ಣೆ,+ ಸಾಂಬ್ರಾಣಿ,+ ಸುಗಂಧ ತೈಲವನ್ನ+ ನೋಡ್ಕೊಳ್ಳೋ ಜವಾಬ್ದಾರಿ ಇತ್ತು. 30  ಪುರೋಹಿತರ ಗಂಡು ಮಕ್ಕಳಲ್ಲಿ ಕೆಲವರು ಸುಗಂಧ ತೈಲದಿಂದ ಮಿಶ್ರಣ ತಯಾರಿಸ್ತಿದ್ರು. 31  ಬಾಂಡ್ಲಿ ಮೇಲೆ ಸುಡೋ ಪದಾರ್ಥಗಳ+ ಜವಾಬ್ದಾರಿಯನ್ನ ಮತ್ತಿತ್ಯನಿಗೆ ಕೊಟ್ಟಿದ್ರು. ಯಾಕಂದ್ರೆ ಲೇವಿಯರಲ್ಲಿ ಅವನು ನಂಬಿಗಸ್ತನಾಗಿದ್ದ. ಅವನು ಕೋರಹಿಯನಾದ ಶಲ್ಲೂಮನ ಮೊದಲ್ನೇ ಮಗ. 32  ಕೆಹಾತ್ಯರಾಗಿದ್ದ ಅವನ ಕೆಲವು ಸಹೋದರರಿಗೆ ಅರ್ಪಣೆಯ ರೊಟ್ಟಿಗಳನ್ನ ಮಾಡೋ ಕೆಲಸ ಕೊಟ್ಟಿದ್ರು.+ ಅವರು ಪ್ರತಿ ಸಬ್ಬತ್‌ ದಿನ ಈ ರೊಟ್ಟಿಗಳನ್ನ ಮಾಡ್ತಿದ್ರು.+ 33  ಲೇವಿಯರ ಕುಲದ ಮುಖ್ಯಸ್ಥರಾಗಿದ್ದ ಇವರು ಗಾಯಕರು. ಇವರು ಆಲಯದ ಕೊಠಡಿಗಳಲ್ಲಿ* ಇರ್ತಿದ್ರು. ಇವರು ಹಗಲೂರಾತ್ರಿ ತಮ್ಮ ಕೆಲಸದಲ್ಲೇ ಮುಳುಗಿರುತಿದ್ರು. ಹಾಗಾಗಿ ಇವ್ರಿಗೆ ಬೇರೆ ಯಾವ ಕೆಲಸನೂ ಕೊಡ್ತಿರಲಿಲ್ಲ. 34  ಇವರು ತಮ್ಮತಮ್ಮ ವಂಶಾವಳಿ ಪ್ರಕಾರ ಲೇವಿ ಕುಲದ ಮುಖ್ಯಸ್ಥರಾಗಿದ್ರು. ಇವ್ರೆಲ್ಲ ಯೆರೂಸಲೇಮಲ್ಲಿ ವಾಸಿಸ್ತಿದ್ರು. 35  ಗಿಬ್ಯೋನನ ತಂದೆ ಯೆಗೀಯೇಲ ಗಿಬ್ಯೋನಲ್ಲಿ+ ಇದ್ದ. ಅವನ ಹೆಂಡತಿ ಹೆಸ್ರು ಮಾಕಾ. 36  ಅವನ ಮೊದಲ್ನೇ ಮಗ ಅಬ್ದೋನ್‌. ಅವನಾದ ಮೇಲೆ ಚೂರ್‌, ಕೀಷ, ಬಾಳ್‌, ನೇರ, ನಾದಾಬ್‌, 37  ಗೆದೋರ್‌, ಅಹಿಯೋವ, ಜೆಕರ್ಯ, ಮಿಕ್ಲೋತ. 38  ಮಿಕ್ಲೋತನಿಗೆ ಶಿಮಾಮ ಹುಟ್ಟಿದ. ಇವ್ರೆಲ್ಲ ತಮ್ಮ ಸಹೋದರರ ಜೊತೆ ಯೆರೂಸಲೇಮಲ್ಲಿ ವಾಸ ಇದ್ರು. ಇವ್ರ ಜೊತೆ ಇವ್ರ ಬೇರೆ ಸಹೋದರರು ಕೂಡ ಇದ್ರು. 39  ನೇರನ+ ಮಗ ಕೀಷ, ಕೀಷನ ಮಗ ಸೌಲ,+ ಸೌಲನ ಮಕ್ಕಳು ಯೋನಾತಾನ,+ ಮಲ್ಕೀಷೂವ,+ ಅಬೀನಾದಾಬ,+ ಎಷ್ಬಾಳ. 40  ಯೋನಾತಾನನ ಮಗ ಮೆರೀಬ್ಬಾಳ,+ ಮೆರೀಬ್ಬಾಳನ ಮಗ ಮೀಕ.+ 41  ಮೀಕನ ಗಂಡು ಮಕ್ಕಳು ಯಾರಂದ್ರೆ ಪೀತೋನ್‌, ಮೆಲೆಕ್‌, ತಹ್ರೇಯ, ಆಹಾಜ್‌. 42  ಆಹಾಜನ ಮಗ ಯಗ್ರಾಹ, ಯಗ್ರಾಹನ ಮಕ್ಕಳು ಆಲೆಮೆತ, ಅಜ್ಮಾವೇತ, ಜಿಮ್ರಿ. ಜಿಮ್ರಿಯ ಮಗ ಮೋಚ. 43  ಮೋಚನ ಮಗ ಬಿನ್ನ, ಬಿನ್ನನ ಮಗ ರೆಫಾಯ, ರೆಫಾಯನ ಮಗ ಎಲ್ಲಾಸಾನ, ಎಲ್ಲಾಸಾನ ಮಗ ಆಚೇಲ. 44  ಆಚೇಲನಿಗೆ ಆರು ಗಂಡು ಮಕ್ಕಳು ಅಜ್ರೀಕಾಮ್‌, ಬೋಕೆರೂ, ಇಷ್ಮಾಯೇಲ, ಶೆಯರ್ಯ, ಓಬದ್ಯ, ಹಾನಾನ್‌. ಇವ್ರೆಲ್ಲ ಆಚೇಲನ ಗಂಡು ಮಕ್ಕಳು.

ಪಾದಟಿಪ್ಪಣಿ

ಅಥವಾ “ನೆತಿನಿಮ್‌.” ಅಕ್ಷ. “ಕೊಡಲಾಗಿರುವ ಜನ್ರು.”
ಅಥವಾ “ಊಟದ ಕೋಣೆಗಳನ್ನ.”
ಅಕ್ಷ. “ಬಲಿಷ್ಠ.”
ಅಥವಾ “ಊಟದ ಕೋಣೆಗಳಲ್ಲಿ.”