ಬೈಬಲ್ ವಿಡಿಯೋಗಳು—ಪ್ರಾಮುಖ್ಯ ಪಾಠಗಳು
ಈ ಚಿಕ್ಕ ವಿಡಿಯೋಗಳು ಪ್ರಾಮುಖ್ಯವಾದ ಬೈಬಲ್ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಸುತ್ತವೆ. ಅದು ಯಾವುದಂದ್ರೆ, ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ಸತ್ತ ಮೇಲೆ ಏನಾಗುತ್ತದೆ? ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?
ವಿಶ್ವದ ರಚನೆ ಹೇಗಾಯ್ತು?
ಸೃಷ್ಟಿಯ ಬಗ್ಗೆ ಬೈಬಲ್ ಹೇಳೋದನ್ನ ಕೆಲವರು ತಪ್ಪರ್ಥ ಮಾಡ್ಕೊಂಡಿದ್ದಾರೆ ಅಥವಾ ಅದನ್ನ ಕಟ್ಟು ಕಥೆ ಅಂತ ಹೇಳ್ತಾರೆ. ಹಾಗಾದ್ರೆ ಬೈಬಲ್ ಹೇಳೋದನ್ನ ನಾವು ನಂಬಬಹುದಾ?
ದೇವರು ನಿಜವಾಗ್ಲೂ ಇದ್ದಾನಾ?
ದೇವರು ನಿಜವಾಗ್ಲೂ ಇದ್ದಾನಾ, ಇಲ್ವಾ ಅನ್ನೋದಕ್ಕೆ ಕೊಟ್ಟಿರೋ ಆಧಾರಗಳನ್ನ ಪರೀಕ್ಷಿಸಿ ನೋಡಿ.
ದೇವರಿಗೊಂದು ಹೆಸರಿದೆಯಾ?
ದೇವರಿಗೆ ಅನೇಕ ಬಿರುದುಗಳಿವೆ. ಸರ್ವಶಕ್ತ, ಸೃಷ್ಟಿಕರ್ತ ಮತ್ತು ಪ್ರಭು ಇತ್ಯಾದಿ. ಆದರೆ ದೇವರಿಗೆ ಒಂದು ಹೆಸರಿದೆ. ಆ ಹೆಸರು ಬೈಬಲಿನಲ್ಲಿ 7,000ಕ್ಕಿಂತಲೂ ಹೆಚ್ಚು ಬಾರಿ ಇದೆ.
ದೇವರ ಜೊತೆ ಸ್ನೇಹ ಸಾಧ್ಯನಾ?
ಸಾವಿರಾರು ವರ್ಷಗಳಿಂದ, ಜನ ತಮ್ಮ ಸೃಷ್ಟಿಕರ್ತನು ಯಾರು ಅಂತ ಹುಡುಕುತ್ತಿದ್ದಾರೆ. ದೇವರ ಸ್ನೇಹಿತರಾಗೋಕೆ ಬೈಬಲ್ ನಮಗೆ ಸಹಾಯ ಮಾಡುತ್ತೆ. ಆ ಸ್ನೇಹ, ದೇವರ ಹೆಸರನ್ನ ತಿಳಿದುಕೊಳ್ಳೋ ಮೂಲಕ ಶುರು ಆಗುತ್ತೆ.
ಬೈಬಲನ್ನು ಯಾರು ಬರೆಸಿದರು?
ಬೈಬಲನ್ನು ಮನುಷ್ಯರು ಬರೆದಿರುವುದಾದರೆ ಅದನ್ನು ದೇವರ ವಾಕ್ಯ ಎಂದು ಏಕೆ ಕರೆಯುತ್ತಾರೆ? ಅವರು ಬೈಬಲಲ್ಲಿ ತಮ್ಮ ಸ್ವಂತ ಯೋಚನೆಗಳನ್ನು ಬರೆದರಾ ಅಥವಾ ಯಾರ ಯೋಚನೆಗಳನ್ನು ಬರೆದರು?
ಬೈಬಲ್ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?
ನಿಜವಾಗಿಯೂ ಬೈಬಲನ್ನು ದೇವರೇ ಬರೆಸಿದ್ದರೆ ಅದು ಬೇರೆಲ್ಲಾ ಪುಸ್ತಕಗಳಿಗಿಂತ ಭಿನ್ನವಾಗಿರಬೇಕು.
ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು?
ನಮ್ಮ ಭೂಮಿ ತುಂಬ ಸುಂದರವಾಗಿದೆ. ಸೂರ್ಯನಿಂದ ಸರಿಯಾದ ದೂರದಲ್ಲಿ ಇದೆ ಮತ್ತು ತನ್ನ ಕಕ್ಷೆಯಲ್ಲೇ ಸರಿಯಾದ ವೇಗದಲ್ಲಿ ಸುತ್ತುವಂತೆ ಮಾಡಿದ್ದಾನೆ. ದೇವರು ಯಾಕಿಷ್ಟು ಶ್ರಮಪಟ್ಟು ಭೂಮಿಯನ್ನು ಮಾಡಿದ್ದಾನೆ?
ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ನಿಮಗೆ ಉತ್ತರ ಎಲ್ಲಿ ಸಿಗುತ್ತೆ?
ನಿಮಗೆ ಜೀವನ, ಸಾವು ಅಥವಾ ಭವಿಷ್ಯದ ಬಗ್ಗೆ ಪ್ರಶ್ನೆಗಳಿದ್ಯಾ? ಈ ಪ್ರಶ್ನೆಗಳಿಗೆ ಹಾಗೂ ಬೇರೆ ಪ್ರಶ್ನೆಗಳಿಗೂ ತೃಪ್ತಿಕರ ಉತ್ತರ ಸಿಗುತ್ತೆ! ಆದರೆ ಉತ್ತರ ಎಲ್ಲಿ ಸಿಗುತ್ತೆ?
ಸತ್ತ ಮೇಲೆ ಏನಾಗುತ್ತದೆ?
ಲಾಜರನಂತೆ ಸತ್ತ ಅನೇಕ ಜನರು ಜೀವಂತವಾಗಿ ಎದ್ದು ಬರುವ ಕಾಲ ಬರಲಿದೆ ಎಂದು ಬೈಬಲ್ ಮಾತು ಕೊಡುತ್ತದೆ.
ಯೇಸು ಕ್ರಿಸ್ತನು ದೇವರಾ?
ಯೇಸು ಕ್ರಿಸ್ತ ಸರ್ವಶಕ್ತ ದೇವರಿಗೆ ಸಮಾನನಾ? ಅಥವಾ ಅವರಿಬ್ಬರೂ ಬೇರೆ ಬೇರೆನಾ?
ಯೇಸು ಏಕೆ ಜೀವಕೊಟ್ಟನು?
ಯೇಸು ನಮ್ಮ ಪಾಪ ಪರಿಹಾರಕ್ಕಾಗಿ ಜೀವ ಕೊಟ್ಟನು ಅಂತ ನೀವು ಕೇಳಿರಬಹುದು. ಆದ್ರೆ ಯೇಸು ಮಾಡಿದ ತ್ಯಾಗದಿಂದ ಕೋಟ್ಯಂತರ ಜನ್ರಿಗೆ ಪ್ರಯೋಜನ ಆಗುತ್ತಾ?
ದೇವರ ರಾಜ್ಯ ಅಂದರೇನು?
ಯೇಸು ಸುವಾರ್ತೆ ಸಾರಿದಷ್ಟು ಕಾಲ, ಬೇರೆಲ್ಲದಕ್ಕಿಂತ ಹೆಚ್ಚಾಗಿ ದೇವರ ರಾಜ್ಯದ ಬಗ್ಗೆ ಸಾರಿದನು. ನೂರಾರು ವರ್ಷಗಳಿಂದ ಆತನ ಹಿಂಬಾಲಕರು ಆ ರಾಜ್ಯ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ನೈಸರ್ಗಿಕ ವಿಪತ್ತುಗಳು ದೇವರ ಕೈಕೆಲಸನಾ?
ನೈಸರ್ಗಿಕ ವಿಪತ್ತುಗಳಿಗೆ ತುತ್ತಾದ ಇಬ್ಬರು ಬೈಬಲ್ನಿಂದ ಏನು ಕಲಿತರು ಅಂತ ವಿವರಿಸ್ತಾರೆ.
ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?
ಬೈಬಲ್ ಸಂತೃಪ್ತಿಕರವಾದ ಮತ್ತು ಸಾಂತ್ವನ ನೀಡುವ ಉತ್ತರ ಕೊಡುತ್ತದೆ.
ದೇವರು ಎಲ್ಲಾ ರೀತಿಯ ಆರಾಧನೆಗಳನ್ನು ಸ್ವೀಕರಿಸುತ್ತಾನಾ?
ನೀವು ಯಾವ ಧರ್ಮದಲ್ಲಿದ್ದರೂ ಪರ್ವಾಗಿಲ್ಲ ಅಂತ ಅನೇಕರು ಹೇಳುತ್ತಾರೆ.
ದೇವರು ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ಕೇಳುತ್ತಾನಾ?
ಕೆಲವ್ರು ಸ್ವಾರ್ಥದಿಂದ ಪ್ರಾರ್ಥನೆ ಮಾಡಿದರೆ, ಆಗೇನು? ಒಬ್ಬ ಗಂಡ ತನ್ನ ಹೆಂಡತಿಯನ್ನು ಹೊಡೆದು, ನಂತರ ದೇವರ ಹತ್ತಿರ ಆಶೀರ್ವದಿಸು ಅಂತ ಬೇಡುತ್ತಾನೆ, ಆಗೇನು?
ಮದುವೆಯಾದವರು ಹೇಗಿರಬೇಕಂತ ದೇವರು ಇಷ್ಟಪಡ್ತಾನೆ?
ಮದುವೆ ಜೀವನ ಚೆನ್ನಾಗಿರಬೇಕಂತ ದೇವರು ಇಷ್ಟಪಡ್ತಾನೆ. ತುಂಬ ದಂಪತಿಗಳಿಗೆ ಬೈಬಲಿನಲ್ಲಿರೋ ಸಲಹೆ ಸಹಾಯ ಮಾಡಿದೆ.
ಅಶ್ಲೀಲ ವಿಷಯಗಳನ್ನ ನೋಡೋದರ ಬಗ್ಗೆ ದೇವರಿಗೆ ಹೇಗನಿಸುತ್ತೆ?
“ಪೊರ್ನೊಗ್ರಫಿ” ಅಥವಾ “ಅಶ್ಲೀಲ ಚಿತ್ರ” ಅನ್ನೋ ಪದಗಳು ಬೈಬಲ್ನಲ್ಲಿ ಇದೆಯಾ? ಅಶ್ಲೀಲ ವಿಷಯಗಳ ಬಗ್ಗೆ ದೇವರಿಗೆ ಹೇಗೆ ಅನಿಸುತ್ತೆ?