ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ಪರಿಚಯ

ಇವತ್ತು ನಮಗೆ ದೇವರು ತಿಳಿಸೋಕೆ ಇಷ್ಟಪಡೋ ಸಂದೇಶ ಬೈಬಲಲ್ಲಿದೆ. ನಾವು ಜೀವನ​ದಲ್ಲಿ ಸಂತೋಷವಾಗಿ ಇರಬೇಕಂದ್ರೆ ಏನು ಮಾಡಬೇಕು, ದೇವರು ನಮ್ಮನ್ನ ನೋಡಿ ಖುಷಿಪಡಬೇಕಂದ್ರೆ ಏನು ಮಾಡಬೇಕು ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ ಕೆಳಗಿರೋ ಪ್ರಶ್ನೆಗಳಿಗೂ ಉತ್ತರ ಕೊಡುತ್ತೆ:

  1. 1 ದೇವರು ಯಾರು?

  2. 2 ದೇವರ ಬಗ್ಗೆ ತಿಳ್ಕೊಳ್ಳೋದು ಹೇಗೆ?

  3. 3 ಬೈಬಲನ್ನ ಬರೆದವರು ಯಾರು?

  4. 4 ಬೈಬಲ್‌ ವಿಜ್ಞಾನದ ಬಗ್ಗೆ ಹೇಳೋ ವಿಷ್ಯಗಳು ಸರಿಯಾಗಿದ್ಯಾ?

  5. 5 ಬೈಬಲಲ್ಲಿರೋ ಮುಖ್ಯ ಸಂದೇಶ ಏನು?

  6. 6 ಮೆಸ್ಸೀಯನ ಬಗ್ಗೆ ಬೈಬಲ್‌ ಮುಂಚೆನೇ ಏನು ಹೇಳಿತ್ತು?

  7. 7 ನಮ್ಮ ಕಾಲದ ಬಗ್ಗೆ ಬೈಬಲ್‌ ಮುಂಚೆನೇ ಏನು ಹೇಳಿದೆ?

  8. 8 ನಾವು ಅನುಭವಿಸ್ತಿರೋ ಕಷ್ಟಗಳಿಗೆ ದೇವರು ಕಾರಣನಾ?

  9. 9 ಮನುಷ್ಯರಿಗೆ ಯಾಕೆ ಇಷ್ಟೊಂದು ಕಷ್ಟ?

  10. 10 ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

  11. 11 ಸತ್ತ ಮೇಲೆ ಏನಾಗುತ್ತೆ?

  12. 12 ಸತ್ತು ಹೋದವರನ್ನ ಮತ್ತೆ ನೋಡಕ್ಕಾಗುತ್ತಾ?

  13. 13 ಕೆಲಸದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

  14. 14 ಹಣ-ಆಸ್ತಿ ಕಡೆ ಯಾವ ಮನೋಭಾವ ಇರಬೇಕು?

  15. 15 ಸಂತೋಷ ಎಲ್ಲಿ ಸಿಗುತ್ತೆ?

  16. 16 ಚಿಂತೆಯಿಂದ ಹೊರಗೆ ಬರೋದು ಹೇಗೆ?

  17. 17 ಕುಟುಂಬದಲ್ಲಿ ಪ್ರತಿಯೊಬ್ಬರಿಗೆ ದೇವರು ಏನು ಹೇಳ್ತಾನೆ?

  18. 18 ದೇವರ ಸ್ನೇಹಿತರಾಗೋಕೆ ಏನು ಮಾಡಬೇಕು?

  19. 19 ಬೈಬಲಲ್ಲಿ ಏನೆಲ್ಲ ಮಾಹಿತಿ ಇದೆ?

  20. 20 ಜಾಸ್ತಿ ಪ್ರಯೋಜನ ಸಿಗಬೇಕಂದ್ರೆ ಬೈಬಲನ್ನ ಹೇಗೆ ಓದಬೇಕು?

ಬೈಬಲಲ್ಲಿ ವಚನಗಳನ್ನ ಹುಡುಕಿ ತೆಗಿಯೋದು ಹೇಗೆ?

ಬೈಬಲಲ್ಲಿ 66 ಚಿಕ್ಕ ಚಿಕ್ಕ ಪುಸ್ತಕಗಳಿವೆ. ಬೈಬಲಲ್ಲಿ ಎರಡು ಭಾಗಗಳಿವೆ. ಒಂದು, ಹೀಬ್ರು-ಅರಾಮಿಕ್‌ ಪುಸ್ತಕಗಳು (“ಹಳೇ ಒಡಂಬಡಿಕೆ”). ಇನ್ನೊಂದು, ಗ್ರೀಕ್‌ ಪುಸ್ತಕಗಳು (“ಹೊಸ ಒಡಂಬಡಿಕೆ”). ಇದ್ರಲ್ಲಿ ಒಂದೊಂದು ಪುಸ್ತಕದಲ್ಲೂ ಅಧ್ಯಾಯಗಳಿವೆ, ಆ ಅಧ್ಯಾಯಗಳಲ್ಲಿ ವಚನಗಳಿವೆ. ಬೈಬಲ್‌ ವಚನಗಳನ್ನ ಬರೆಯುವಾಗ ಪುಸ್ತಕದ ಹೆಸ್ರಿನ ಪಕ್ಕದಲ್ಲಿ ಸಂಖ್ಯೆಗಳು ಇರುತ್ತೆ. ಮೊದಲ ಸಂಖ್ಯೆ ಅಧ್ಯಾಯವನ್ನ ಸೂಚಿಸುತ್ತೆ. ಅದ್ರ ನಂತ್ರ ಇರೋ ಸಂಖ್ಯೆ ವಚನವನ್ನ ಸೂಚಿಸುತ್ತೆ. ಉದಾಹರಣೆಗೆ, ಆದಿಕಾಂಡ 1:1 ಅಂದ್ರೆ ಆದಿಕಾಂಡ ಪುಸ್ತಕದ ಒಂದನೇ ಅಧ್ಯಾಯದ ಒಂದನೇ ವಚನ ಅಂತ ಅರ್ಥ.