ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 11

ಸತ್ತ ಮೇಲೆ ಏನಾಗುತ್ತೆ?

“ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ. ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.”

ಕೀರ್ತನೆ 146:4

“ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ. ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ. . . ನಿನ್ನ ಕೈಯಿಂದ ಆಗೋ ಕೆಲಸನೆಲ್ಲ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಯಾಕಂದ್ರೆ ನೀನು ಸಮಾಧಿ ಸೇರಿದ ಮೇಲೆ ಅಲ್ಲಿ ಯಾವುದೇ ಕೆಲಸ ಮಾಡಕ್ಕಾಗಲ್ಲ, ಯೋಚ್ನೆ ಮಾಡಕ್ಕಾಗಲ್ಲ, ಜ್ಞಾನ ಆಗ್ಲಿ ವಿವೇಕ ಆಗ್ಲಿ ಪಡಿಯೋಕೆ ಆಗಲ್ಲ.”

ಪ್ರಸಂಗಿ 9:​5, 10

“[ಯೇಸು] ‘ನಮ್ಮ ಗೆಳೆಯ ಲಾಜರ ನಿದ್ದೆ ಮಾಡ್ತಿದ್ದಾನೆ. ಅವನನ್ನ ಎಬ್ಬಿಸೋಕೆ ನಾನು ಹೋಗ್ತಾ ಇದ್ದೀನಿ’ ಅಂದನು. ಲಾಜರ ಸತ್ತುಹೋಗಿದ್ದಾನೆ ಅಂತ ಯೇಸು ಹೇಳೋಕೆ ಬಯಸಿದನು. ಆದ್ರೆ ನಿದ್ದೆ ಮಾಡ್ತಾ ಇರೋದರ ಬಗ್ಗೆ ಯೇಸು ಹೇಳ್ತಿದ್ದಾನೆ ಅಂತ ಶಿಷ್ಯರು ಅಂದ್ಕೊಂಡ್ರು. ಆಗ ಯೇಸು ನೇರವಾಗಿ ‘ಲಾಜರ ಸತ್ತುಹೋಗಿದ್ದಾನೆ’ ಅಂದನು.”

ಯೋಹಾನ 11:​11, 13, 14