ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಬ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಯೋಬನ ನಿಯತ್ತು ಮತ್ತು ಸಂಪತ್ತು (1-5)

    • ಯೋಬನ ಮೇಲೆ ಸೈತಾನನ ಸವಾಲು (6-12)

    • ಯೋಬ ಸಂಪತ್ತನ್ನೂ ಮಕ್ಕಳನ್ನೂ ಕಳ್ಕೊಂಡ (13-19)

    • ಯೋಬ ದೇವರನ್ನ ದೂರಲಿಲ್ಲ (20-22)

  • 2

    • ಯೋಬನ ಮೇಲೆ ಮತ್ತೆ ಸೈತಾನನ ಸವಾಲು (1-5)

    • ಯೋಬನನ್ನ ಪರಿಕ್ಷಿಸೋಕೆ ಅನುಮತಿ (6-8)

    • “ದೇವ್ರಿಗೆ ಶಾಪ ಹಾಕಿ ಸತ್ತುಹೋಗು!” ಅಂದಳು ಹೆಂಡತಿ (9, 10)

    • ಮೂವರು ಸ್ನೇಹಿತರು (11-13)

  • 3

    • ಯಾಕೆ ಹುಟ್ಟಿದೆ ಅಂತ ದುಃಖಿಸಿದ ಯೋಬ (1-26)

      • ತನ್ನ ಕಷ್ಟಗಳಿಗೆ ಕಾರಣ ಕೇಳಿದ (20, 21)

  • 4

    • ಎಲೀಫಜನ ಮೊದಲ ಮಾತುಗಳು (1-21)

      • ಯೋಬನ ನಿಷ್ಠೆ ಬಗ್ಗೆ ಗೇಲಿ (7, 8)

      • ಅದೃಶ್ಯ ಶಕ್ತಿ ಹೇಳಿದ್ದನ್ನ ತಿಳಿಸಿದ್ದು (12-17)

      • ‘ದೇವರಿಗೆ ತನ್ನ ಸೇವಕರಲ್ಲಿ ನಂಬಿಕೆಯಿಲ್ಲ’ (18)

  • 5

    • ಎಲೀಫಜನ ಮಾತು ಮುಂದುವರಿಯುತ್ತೆ (1-27)

      • ‘ವಿವೇಕಿಗಳು ತಮ್ಮ ಕುತಂತ್ರಗಳಲ್ಲೇ ಸಿಕ್ಕಿಹಾಕೊಳ್ಳೋ ಹಾಗೆ ದೇವರು ಮಾಡ್ತಾನೆ’ (13)

      • ದೇವರ ಶಿಕ್ಷೆಯನ್ನ ಬೇಡ ಅನ್ನಬೇಡ (17)

  • 6

    • ಯೋಬನ ಉತ್ತರ (1-30)

      • ತನ್ನ ವಾದಕ್ಕೆ ಕಾರಣ ಇದೆ (2-6)

      • ಸಾಂತ್ವನ ಕೊಡೋಕೆ ಬಂದವರು ನಂಬಿಕೆ ದ್ರೋಹಿಗಳು (15-18)

      • “ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ ಮನಸ್ಸಿಗೆ ನೋವಾಗಲ್ಲ” (25)

  • 7

    • ಯೋಬನ ಉತ್ತರ ಮುಂದುವರಿಯುತ್ತೆ (1-21)

      • ಜೀವನ ಕಡ್ಡಾಯದ ದುಡಿಮೆ (1, 2)

      • ನನ್ನನ್ನ ಯಾಕೆ ಗುರಿಹಲಗೆ ಮಾಡಿದ್ದೀಯ? (20)

  • 8

    • ಬಿಲ್ದದನ ಮೊದಲ ಮಾತುಗಳು (1-22)

      • ಯೋಬನ ಮಕ್ಕಳು ಪಾಪ ಮಾಡಿದ್ದಾರೆ (4)

      • ನೀನು ತಪ್ಪು ಮಾಡದಿದ್ರೆ ದೇವರು ನಿನ್ನನ್ನ ಕಾಪಾಡ್ತಾನೆ (6)

      • ದೇವರನ್ನ ಯೋಬ ಬಿಟ್ಟುಬಿಟ್ಟಿದ್ದಾನೆ (13)

  • 9

    • ಯೋಬನ ಉತ್ತರ (1-35)

      • ದೇವರ ಜೊತೆ ಹೋರಾಡೋಕೆ ಮನುಷ್ಯರಿಗೆ ಆಗಲ್ಲ (2-4)

      • ‘ದೇವರು ಅದ್ಭುತವಾದ ವಿಷ್ಯಗಳನ್ನ ಮಾಡ್ತಾನೆ’ (10)

      • ದೇವರ ಜೊತೆ ವಾದ ಮಾಡೋಕೆ ಆಗಲ್ಲ (32)

  • 10

    • ಯೋಬನ ಉತ್ತರ ಮುಂದುವರಿಯುತ್ತೆ (1-22)

      • ‘ದೇವರು ನನ್ನ ಜೊತೆ ಯಾಕೆ ಜಗಳಕ್ಕೆ ಇಳಿದಿದ್ದಾನೆ?’ (2)

      • ದೇವರಿಗೂ ಯೋಬನಿಗೂ ವ್ಯತ್ಯಾಸ ಇದೆ (4-12)

      • “ನಾನು ಸ್ವಲ್ಪ ನೆಮ್ಮದಿಯಾಗಿ ಇರ್ತಿನಿ” (20)

  • 11

    • ಚೋಫರನ ಮೊದಲ ಮಾತುಗಳು (1-20)

      • ಟೊಳ್ಳು ಮಾತುಗಳನ್ನ ಆಡ್ತಿದ್ದಾನೆ ಅಂತ ಆರೋಪ (2, 3)

      • ಕೆಟ್ಟತನ ಬಿಟ್ಟುಬಿಡೋಕೆ ಯೋಬನಿಗೆ ಸಲಹೆ (14)

  • 12

    • ಯೋಬನ ಉತ್ತರ (1-25)

      • “ನಾನು ನಿಮಗಿಂತ ಕಮ್ಮಿ ಇಲ್ಲ” (3)

      • ‘ನನ್ನ ನೋಡಿ ಗೇಲಿ ಮಾಡ್ತಾರೆ’ (4)

      • ‘ದೇವರಿಗೆ ತುಂಬ ವಿವೇಕವಿದೆ’ (13)

      • ದೇವರು ನ್ಯಾಯಾಧಿಪತಿಗಳಿಗಿಂತ ರಾಜರಿಗಿಂತ ಉನ್ನತ (17, 18)

  • 13

    • ಯೋಬನ ಉತ್ತರ ಮುಂದುವರಿಯುತ್ತೆ (1-28)

      • ‘ನಾನು ದೇವರ ಹತ್ರ ಮಾತಾಡೋದೇ ಒಳ್ಳೇದು’ (3)

      • “ನೀವೆಲ್ಲ ಕೆಲಸಕ್ಕೆ ಬಾರದ ವೈದ್ಯರು” (4)

      • “ನಾನು ತಪ್ಪೇ ಮಾಡಿಲ್ಲ ಅಂತ ನಂಗೊತ್ತು” (18)

      • ದೇವರು ನನ್ನನ್ನ ಯಾಕೆ ಶತ್ರು ತರ ನೋಡ್ತಾನೆ (24)

  • 14

    • ಯೋಬನ ಉತ್ತರ ಮುಂದುವರಿಯುತ್ತೆ (1-22)

      • ಮನುಷ್ಯನ ಆಯಸ್ಸು ಕಮ್ಮಿ ಆದ್ರೂ ತೊಂದ್ರೆಗಳಿಗೆ ಕಮ್ಮಿ ಇಲ್ಲ (1)

      • “ಕಡಿದ ಮರಕ್ಕೂ ನಿರೀಕ್ಷೆ ಇದೆ” (7)

      • ‘ನೀನು ನನ್ನನ್ನ ಸಮಾಧಿಯಲ್ಲಿ ಮುಚ್ಚಿಟ್ರೆ ಎಷ್ಟೋ ಒಳ್ಳೇದು!’ (13)

      • ಒಬ್ಬ ಮನುಷ್ಯ ಸತ್ತರೆ ಮತ್ತೆ ಬದುಕ್ತಾನಾ? (14)

      • ದೇವರು ಕೈಯಾರೆ ಸೃಷ್ಟಿಸಿದವನ ಮತ್ತೆ ನೋಡೋಕೆ ಹಂಬಲಿಸ್ತಾನೆ (15)

  • 15

    • ಎಲೀಫಜನ ಎರಡನೇ ಸಲದ ಮಾತುಗಳು (1-35)

      • ಯೋಬನಿಗೆ ದೇವಭಯ ಇಲ್ಲ (4)

      • ಯೋಬ ಒಬ್ಬ ಅಹಂಕಾರಿ (7-9)

      • ‘ದೇವರಿಗೆ ತನ್ನ ದೇವದೂತರಲ್ಲಿ ನಂಬಿಕೆ ಇಲ್ಲ’ (15)

      • ‘ಕೆಟ್ಟವನು ನೋವನ್ನ ಅನುಭವಿಸ್ತಾನೆ’ (20-24)

  • 16

    • ಯೋಬನ ಉತ್ತರ (1-22)

      • ‘ಸಮಾಧಾನ ಮಾಡದೆ ನೋವು ಜಾಸ್ತಿ ಮಾಡಿದ್ದೀರಿ!’ (2)

      • ದೇವರು ನನ್ನನ್ನ ಗುರಿಹಲಗೆ ಮಾಡಿದ್ದಾನೆ (12)

  • 17

    • ಯೋಬನ ಮಾತು ಮುಂದುವರಿಯುತ್ತೆ (1-16)

      • “ಗೇಲಿ ಮಾಡುವವರು ನನ್ನ ಸುತ್ತ ಇದ್ದಾರೆ” (2)

      • ‘ಜನ್ರು ನನ್ನನ್ನ ನೋಡಿ ನಗೋ ಹಾಗೆ ದೇವರು ಮಾಡಿದ್ದಾನೆ’ (6)

      • ಸಮಾಧಿನೇ ನನ್ನ ಮನೆ (13)

  • 18

    • ಬಿಲ್ದದನ ಎರಡನೇ ಸಲದ ಮಾತುಗಳು (1-21)

      • ಪಾಪಿಗಳಿಗೆ ಸಿಗೋ ಫಲ (5-20)

      • ದೇವರನ್ನ ಯೋಬ ತಿಳ್ಕೊಂಡಿಲ್ಲ ಅಂದ (21)

  • 19

    • ಯೋಬನ ಉತ್ತರ (1-29)

      • ‘ಸ್ನೇಹಿತರು’ ಹೇಳಿದ್ದು ಒಪ್ಪಲ್ಲ (1-6)

      • ಎಲ್ರೂ ತನ್ನನ್ನ ದೂರ ಮಾಡಿದ್ದಾರೆ ಅಂತ ಹೇಳ್ತಾನೆ (13-19)

      • “ನನ್ನ ಕಾಪಾಡುವವನು ಒಬ್ಬನು ಇದ್ದಾನೆ” (25)

  • 20

    • ಚೋಫರನ ಎರಡನೇ ಸಲದ ಮಾತುಗಳು (1-29)

      • ಯೋಬನಿಂದ ಅವಮಾನ ಆಗಿದೆ ಅಂತಾನೆ (2, 3)

      • ಯೋಬ ಕೆಟ್ಟವನು (5)

      • ಪಾಪ ಮಾಡುವುದು ಯೋಬನಿಗೆ ಸಿಹಿ ತರ (12, 13)

  • 21

    • ಯೋಬನ ಉತ್ತರ (1-34)

      • ಕೆಟ್ಟವರು ಯಾಕೆ ಸುಖವಾಗಿ ಬದುಕ್ತಾರೆ? (7-13)

      • ಸಮಾಧಾನ ಮಾಡುವವರ ಬಣ್ಣ ಬಯಲು (27-34)

  • 22

    • ಎಲೀಫಜನ ಮೂರನೇ ಸಲದ ಮಾತುಗಳು (1-30)

      • “ಮನುಷ್ಯನಿಂದ ದೇವರಿಗೇನು ಪ್ರಯೋಜನ?” (2, 3)

      • ಯೋಬ ಅನ್ಯಾಯಗಾರ, ಆಸೆಬುರುಕ ಅಂತ ಆರೋಪ (6-9)

      • ‘ದೇವರ ಹತ್ರ ವಾಪಸ್‌ ಬಂದ್ರೆ ಮುಂಚಿನ ತರ ಆಗ್ತೀಯ’ (23)

  • 23

    • ಯೋಬನ ಉತ್ತರ (1-17)

      • ತನ್ನ ವಾದವನ್ನ ದೇವರ ಮುಂದೆ ಇಡೋ ಆಸೆ (1-7)

      • ಹುಡುಕಿದ್ರೂ ದೇವರು ಸಿಗಲಿಲ್ಲ (8, 9)

      • ದೇವರು ಹೇಳಿದ ದಾರಿ ಬಿಟ್ಟು ನಾನು ಹೋಗಲಿಲ್ಲ (11)

  • 24

    • ಯೋಬನ ಉತ್ತರ ಮುಂದುವರಿಯುತ್ತೆ (1-25)

      • ದೇವರು ಯಾಕೆ ಸಮಯ ಇಟ್ಟಿಲ್ಲ? (1)

      • ಕೆಟ್ಟತನಕ್ಕೆ ದೇವರು ಅನುಮತಿ ಕೊಟ್ಟಿದ್ದಾನೆ ಅಂದ (12)

      • ಪಾಪಿಗಳಿಗೆ ಕತ್ತಲೆ ಇಷ್ಟ (13-17)

  • 25

    • ಬಿಲ್ದದನ ಮೂರನೇ ಸಲದ ಮಾತು (1-6)

      • ‘ಮನುಷ್ಯ ದೇವರ ಮುಂದೆ ನಿರಪರಾಧಿ ಆಗಿರೋಕೆ ಹೇಗೆ ಸಾಧ್ಯ?’ (4)

      • ಮನುಷ್ಯ ನಿಯತ್ತಿಂದ ಇರೋದು ವ್ಯರ್ಥ (5, 6)

  • 26

    • ಯೋಬನ ಉತ್ತರ (1-14)

      • ‘ಬಲ ಇಲ್ಲದವನಿಗೆ ಸಹಾಯ ಮಾಡಿಬಿಟ್ಟೆ!’ (1-4)

      • ‘ದೇವರು ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ’ (7)

      • ‘ಇವೆಲ್ಲ ದೇವರ ಕೆಲಸಗಳಲ್ಲಿ ಬರೀ ಕೆಲವಷ್ಟೇ’ (14)

  • 27

    • ನಿಷ್ಠೆ ಕಾಪಾಡ್ಕೊಳ್ಳೋಕೆ ಯೋಬನ ದೃಢಸಂಕಲ್ಪ (1-23)

      • “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ” (5)

      • ದೇವರನ್ನ ಬಿಟ್ಟುಬಿಟ್ಟವನಿಗೆ ನಿರೀಕ್ಷೆ ಇಲ್ಲ (8)

      • ‘ಅರ್ಥ ಇಲ್ಲದ ಮಾತುಗಳನ್ನ ಯಾಕೆ ಆಡ್ತೀರ?’ (12)

      • ಕೆಟ್ಟವನಿಗೆ ಏನೂ ಸಿಗಲ್ಲ (13-23)

  • 28

    • ಭೂಮಿಯ ನಿಧಿನಿಕ್ಷೇಪಗಳಿಗೂ ವಿವೇಕಕ್ಕೂ ಇರೋ ವ್ಯತ್ಯಾಸ (1-28)

      • ಗಣಿಗಾರಿಕೆಯಲ್ಲಿ ಮನುಷ್ಯನ ಪರಿಶ್ರಮ (1-11)

      • ಮುತ್ತುಗಳಿಗಿಂತಲೂ ವಿವೇಕ ಅಮೂಲ್ಯ (18)

      • ಯೆಹೋವನಿಗೆ ಭಯಪಡೋದೇ ನಿಜವಾದ ವಿವೇಕ (28)

  • 29

    • ಮುಂಚೆಯಿದ್ದ ಸುಖಸಂತೋಷದ ಬಗ್ಗೆ ನೆನಪು (1-25)

      • ಪಟ್ಟಣದ ಬಾಗಿಲ ಹತ್ರ ಸಿಗ್ತಿದ್ದ ಗೌರವ (7-10)

      • ಬೇರೆಯವರಿಗೆ ನ್ಯಾಯ ದೊರಕಿಸಿದ್ದು (11-17)

      • ಅವನ ಸಲಹೆಗಳನ್ನ ಜನ್ರು ಕೇಳ್ತಿದ್ರು (21-23)

  • 30

    • ಬದುಕು ಬದಲಾದ ವಿವರ (1-31)

      • ಅಯೋಗ್ಯರ ಅಪಹಾಸ್ಯ (1-15)

      • ದೇವರು ಸಹಾಯ ಮಾಡ್ತಿಲ್ಲ ಅನಿಸ್ತು (20, 21)

      • ‘ನನ್ನ ಚರ್ಮ ಕಪ್ಪಾಗಿದೆ’ (30)

  • 31

    • ತಾನು ತಪ್ಪು ಮಾಡಿಲ್ಲ ಅಂತ ಯೋಬನ ವಾದ (1-40)

      • “ಕೆಟ್ಟ ದೃಷ್ಟಿಯಿಂದ ನೋಡಲ್ಲ” (1)

      • ತನ್ನನ್ನ ತೂಗಿ ನೋಡುವಂತೆ ದೇವರಲ್ಲಿ ಬಿನ್ನಹ (6)

      • ತಾನು ವ್ಯಭಿಚಾರಿಯಲ್ಲ (9-12)

      • ಹಣದ ಮೋಹ ತನಗಿಲ್ಲ (24, 25)

      • ಮೂರ್ತಿಪೂಜೆ ಮಾಡಲಿಲ್ಲ (26-28)

  • 32

    • ಯುವ ಎಲೀಹು ಮಾತಾಡೋಕೆ ಮುಂದುವರಿಸಿದ (1-22)

      • ಯೋಬನ ಮೇಲೂ ಅವನ ಸ್ನೇಹಿತರ ಮೇಲೂ ಸಿಟ್ಟು (2, 3)

      • ಗೌರವದಿಂದಾಗಿ ಮಾತಾಡದೆ ಸುಮ್ಮನಿದ್ದ (6, 7)

      • ದೊಡ್ಡವರಿಗೆ ಎಲ್ಲ ಗೊತ್ತಿರಬೇಕು ಅಂತಿಲ್ಲ (9)

      • ಮಾತಾಡೋಕೆ ಎಲೀಹುವಿಗೆ ತವಕ (18-20)

  • 33

    • ತಾನೇ ನೀತಿವಂತ ಅಂದಿದ್ದಕ್ಕೆ ಯೋಬನನ್ನ ಎಲೀಹು ಗದರಿಸಿದ (1-33)

      • ಬಿಡುಗಡೆ ಬೆಲೆ ಸಿಕ್ಕಿದೆ (24)

      • ಯೌವನದ ಚೈತನ್ಯ ಮತ್ತೆ ಸಿಗ್ಲಿ (25)

  • 34

    • ದೇವರು ನ್ಯಾಯವಂತ, ಆತನ ಕೆಲಸಗಳು ಸರಿ ಅಂತ ಎಲೀಹು ಸಾಬೀತು ಮಾಡ್ತಾನೆ (1-37)

      • ದೇವರು ಅನ್ಯಾಯ ಮಾಡಿದ್ದಾನೆ ಅಂದ ಯೋಬ (5)

      • ಸತ್ಯ ದೇವರು ಕೆಟ್ಟದ್ದನ್ನ ಮಾಡೋದೇ ಇಲ್ಲ (10)

      • ಯೋಬ ಬುದ್ಧಿಯಿಲ್ಲದೆ ಮಾತಾಡ್ತಾ ಇದ್ದಾನೆ (35)

  • 35

    • ಯೋಬನ ಯೋಚನೆ ತಪ್ಪು ಅಂತ ಎಲೀಹು ಹೇಳಿದ (1-16)

      • ದೇವ್ರಿಗಿಂತ ತಾನೇ ನೀತಿವಂತ ಅಂದ ಯೋಬ (2)

      • ಮಾನವರ ಪಾಪದಿಂದ ದೇವರಿಗೇನೂ ನಷ್ಟವಾಗಲ್ಲ (5, 6)

      • ಯೋಬ ದೇವರಿಗಾಗಿ ಕಾಯಬೇಕು (14)

  • 36

    • ದೇವರ ಮಹಿಮೆ ಬಗ್ಗೆ ಎಲೀಹು ಹೊಗಳ್ತಾನೆ (1-33)

      • ವಿಧೇಯರಾದ್ರೆ ಸುಖಸಮೃದ್ಧಿ, ದೇವರನ್ನ ಬಿಟ್ಟುಬಿಟ್ರೆ ತಿರಸ್ಕಾರ (11-13)

      • ‘ದೇವರ ತರ ಕಲಿಸುವವರು ಬೇರೆ ಯಾರೂ ಇಲ್ಲ’ (22)

      • ಯೋಬ ದೇವರನ್ನ ಹೊಗಳಬೇಕು (24)

      • “ದೇವರು ಎಷ್ಟು ದೊಡ್ಡವನು ಅಂತ ನಮಗೆ ಊಹೆ ಮಾಡಕ್ಕಾಗಲ್ಲ” (26)

      • ಮಳೆ ಮಿಂಚು ದೇವರ ನಿಯಂತ್ರಣದಲ್ಲಿದೆ (27-33)

  • 37

    • ನೈಸರ್ಗಿಕ ಶಕ್ತಿಗಳು ದೇವರ ಮಹಿಮೆಯನ್ನ ತೋರಿಸುತ್ತೆ (1-24)

      • ಮನುಷ್ಯರ ಕೆಲಸಗಳನ್ನ ದೇವರು ನಿಲ್ಲಿಸಿಬಿಡ್ತಾನೆ (7)

      • ‘ದೇವರ ಅದ್ಭುತಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡು’ (14)

      • ದೇವರನ್ನ ಅರ್ಥ ಮಾಡ್ಕೊಳ್ಳೋದು ಮನುಷ್ಯರ ಸಾಮರ್ಥ್ಯಕ್ಕೆ ಮೀರಿದ್ದು (23)

      • ತಾವೇ ಬುದ್ಧಿವಂತರು ಅಂದ್ಕೊಳ್ಳಬಾರದು (24)

  • 38

    • ಮನುಷ್ಯ ಎಷ್ಟು ಅಲ್ಪ ಅಂತ ಯೆಹೋವ ಕಲಿಸ್ತಾನೆ (1-41)

      • ‘ಭೂಮಿಯನ್ನ ಸೃಷ್ಟಿಸಿದಾಗ ನೀನು ಎಲ್ಲಿದ್ದೆ?’ (4-6)

      • ದೇವಮಕ್ಕಳು ಜೈಕಾರ ಮಾಡಿದ್ರು (7)

      • ನಿಸರ್ಗದ ವಿಸ್ಮಯಗಳ ಬಗ್ಗೆ ಪ್ರಶ್ನೆಗಳು (8-32)

      • “ಆಕಾಶಕಾಯಗಳನ್ನ ನಿಯಂತ್ರಿಸೋ ನಿಯಮಗಳು” (33)

  • 39

    • ಪ್ರಾಣಿ ಜಗತ್ತು ಮನುಷ್ಯನಿಗೆ ತಿಳಿದಿರೋದು ತುಂಬ ಕಡಿಮೆ ಅಂತ ತೋರಿಸುತ್ತೆ (1-30)

      • ಬೆಟ್ಟದ ಮೇಕೆಗಳು ಮತ್ತು ಜಿಂಕೆ (1-4)

      • ಕಾಡುಕತ್ತೆ (5-8)

      • ಕಾಡುಕೋಣ (9-12)

      • ಉಷ್ಟ್ರಪಕ್ಷಿ (13-18)

      • ಕುದುರೆ (19-25)

      • ಗಿಡುಗ ಮತ್ತು ಹದ್ದು (26-30)

  • 40

    • ಯೆಹೋವ ಪ್ರಶ್ನೆ ಕೇಳೋದನ್ನ ಮುಂದುವರಿಸ್ತಾನೆ (1-24)

      • ಹೇಳೋಕೆ ಏನೂ ಇಲ್ಲ ಅಂತ ಯೋಬ ಒಪ್ಕೊಳ್ತಾನೆ (3-5)

      • “ನನ್ನ ನ್ಯಾಯವನ್ನೇ ನೀನು ಪ್ರಶ್ನಿಸ್ತೀಯಾ?” (8)

      • ಬೆಹೇಮೋತಿನ ಬಲವನ್ನ ದೇವರು ವಿವರಿಸಿದ (15-24)

  • 41

    • ಬೆರಗುಗೊಳಿಸೋ ಲಿವ್ಯಾತಾನಿನ ಬಗ್ಗೆ ವಿವರಿಸಿದನು (1-34)

  • 42

    • ಯೆಹೋವನಿಗೆ ಯೋಬ ಕೊಟ್ಟ ಉತ್ತರ (1-6)

    • ಮೂವರು ಸ್ನೇಹಿತರನ್ನ ದೇವರು ತಿದ್ದಿದ್ದು (7-9)

    • ಯೆಹೋವ ಯೋಬನಿಗೆ ಮತ್ತೆ ಸುಖಸಮೃದ್ಧಿ ಕೊಟ್ಟನು (10-17)

      • ಯೋಬನ ಮಕ್ಕಳು (13-15)