ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಶಾಯ ಪುಸ್ತಕ

ಅಧ್ಯಾಯಗಳು

ಸಾರಾಂಶ

  • 1

    • ಒಬ್ಬ ತಂದೆ ಮತ್ತು ಅವನ ದಂಗೆಕೋರ ಮಕ್ಕಳು (1-9)

    • ಯೆಹೋವ ಹೊರತೋರಿಕೆಯ ಆರಾಧನೆಯನ್ನ ದ್ವೇಷಿಸ್ತಾನೆ (10-17)

    • “ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ” (18-20)

    • ಚೀಯೋನನ್ನ ಮತ್ತೆ ನಂಬಿಗಸ್ತ ಪಟ್ಟಣವಾಗಿ ಮಾಡಲಾಗುತ್ತೆ (21-31)

  • 2

    • ಯೆಹೋವನ ಬೆಟ್ಟವನ್ನ ಏರಿಸಲಾಗುತ್ತೆ (1-5)

      • ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಾರೆ (4)

    • ಯೆಹೋವನ ದಿನ ಅಹಂಕಾರಿಗಳಿಗೆ ಅವಮಾನ (6-22)

  • 3

    • ಯೆಹೂದದ ಅಧಿಕಾರಿಗಳು ಜನ ತಪ್ಪುದಾರಿ ಹಿಡಿಯೋ ತರ ಮಾಡಿದ್ರು (1-15)

    • ಚೆಲ್ಲಾಟವಾಡ್ತಿದ್ದ ಚೀಯೋನಿನ ಹೆಣ್ಣುಮಕ್ಕಳಿಗೆ ತೀರ್ಪು (16-26)

  • 4

    • ಏಳು ಹೆಂಗಸ್ರಿಗೆ ಒಬ್ಬ ಗಂಡಸು (1)

    • ಯೆಹೋವ ಮೊಳಕೆ ಒಡೆಯೋ ತರ ಮಾಡೋದೆಲ್ಲ ಮಹಿಮಾಭರಿತ ಆಗಿರುತ್ತೆ (2-6)

  • 5

    • ಯೆಹೋವನ ದ್ರಾಕ್ಷಿತೋಟದ ಬಗ್ಗೆ ಹಾಡು (1-7)

    • ಯೆಹೋವನ ದ್ರಾಕ್ಷಿತೋಟಕ್ಕೆ ಆಗೋ ಗತಿ (8-24)

    • ತನ್ನ ಜನ್ರ ಮೇಲೆ ದೇವರ ಕೋಪ (25-30)

  • 6

    • ಯೆಹೋವನ ಆಲಯದಲ್ಲಿ ಆತನ ದರ್ಶನ (1-4)

      • “ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು” (3)

    • ಯೆಶಾಯನ ತುಟಿಗಳನ್ನ ಶುದ್ಧೀಕರಿಸಲಾಯ್ತು (5-7)

    • ಯೆಶಾಯನನ್ನ ನಿಯೋಜಿಸಲಾಯ್ತು (8-10)

      • “ನಾನಿದ್ದೀನಿ! ನನ್ನನ್ನ ಕಳಿಸು!” (8)

    • “ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” (11-13)

  • 7

    • ರಾಜ ಆಹಾಜನಿಗೆ ಸಂದೇಶ (1-9)

      • ಶೆಯಾರ್‌-ಯಾಶೂಬ್‌ (3)

    • ಇಮ್ಮಾನುವೇಲ ಗುರುತಾಗಿ ಇರ್ತಾನೆ (10-17)

    • ನಂಬಿಕೆ ದ್ರೋಹದ ಪರಿಣಾಮಗಳು (18-25)

  • 8

    • ಅಶ್ಶೂರ್ಯರ ದಾಳಿ (1-8)

      • ಮಹೇರ್‌-ಶಾಲಾಲ್‌-ಹಾಷ್‌-ಬಜ್‌ (1-4)

    • ಭಯಪಡಬೇಡಿ⁠—“ದೇವರು ನಮ್ಮ ಜೊತೆ ಇದ್ದಾನೆ!” (9-17)

    • ಒಂದು ಸೂಚನೆ ತರ ಇರೋ ಯೆಶಾಯ ಮತ್ತು ಅವನ ಮಕ್ಕಳು (18)

    • ನಿಯಮ ಪುಸ್ತಕದ ಕಡೆ ತಿರುಗಿ, ಕೆಟ್ಟ ದೇವದೂತರ ಕಡೆಗಲ್ಲ (19-22)

  • 9

    • ಗಲಿಲಾಯದಲ್ಲಿ ಒಂದು ದೊಡ್ಡ ಬೆಳಕು (1-7)

      • ‘ಸಮಾಧಾನದ ಪ್ರಭುವಿನ’ ಜನನ (6, 7)

    • ಯೆಹೋವನ ಕೈ ಇಸ್ರಾಯೇಲ್ಯರ ವಿರುದ್ಧ (8-21)

  • 10

    • ಯೆಹೋವನ ಕೈ ಇಸ್ರಾಯೇಲ್ಯರ ವಿರುದ್ಧ (1-4)

    • ಅಶ್ಶೂರ್‌⁠—​ದೇವರ ಕೋಪದ ದಂಡ (5-11)

    • ಅಶ್ಶೂರ್ಯರಿಗಾದ ಶಿಕ್ಷೆ (12-19)

    • ಯಾಕೋಬನ ಉಳಿಕೆಯವರು ವಾಪಸ್‌ ಬರ್ತಾರೆ (20-27)

    • ದೇವರು ಅಶ್ಶೂರಿಗೆ ತೀರ್ಪು ಕೊಡ್ತಾನೆ (28-34)

  • 11

    • ಇಷಯನ ಕುಡಿಯ ನೀತಿಯ ಆಳ್ವಿಕೆ (1-10)

      • ತೋಳ ಕುರಿಮರಿಯ ಜೊತೆ ವಾಸಿಸುತ್ತೆ (6)

      • ಭೂಮಿ ಯೆಹೋವನ ಜ್ಞಾನದಿಂದ ತುಂಬ್ಕೊಳ್ಳುತ್ತೆ (9)

    • ಉಳಿದವ್ರನ್ನ ವಾಪಸ್‌ ಕರ್ಕೊಂಡು ಬರಲಾಗುತ್ತೆ (11-16)

  • 12

    • ಧನ್ಯವಾದ ಗೀತೆ (1-6)

      • “ಯಾಹು ನನ್ನ ಶಕ್ತಿ” (2)

  • 13

    • ಬಾಬೆಲಿನ ವಿರುದ್ಧ ಸಂದೇಶ (1-22)

      • ಯೆಹೋವನ ದಿನ ಹತ್ರ ಇದೆ! (6)

      • ಮೇದ್ಯರನ್ನ ಬಾಬೆಲಿನ ವಿರುದ್ಧ ಎಬ್ಬಿಸಲಾಗುತ್ತೆ (17)

      • ಬಾಬೆಲಲ್ಲಿ ಇನ್ನು ಯಾವತ್ತೂ ಜನ ವಾಸಿಸಲ್ಲ (20)

  • 14

    • ಇಸ್ರಾಯೇಲ್ಯರನ್ನ ಅವ್ರ ಸ್ವಂತ ದೇಶಕ್ಕೆ ಕರ್ಕೊಂಡು ಹೋಗಲಾಗುತ್ತೆ (1, 2)

    • ಬಾಬೆಲಿನ ರಾಜನ ವಿರುದ್ಧ ಕೊಂಕು (3-23)

      • ಹೊಳೆಯೋ ನಕ್ಷತ್ರ ಆಕಾಶದಿಂದ ಕೆಳಗೆ ಬೀಳುತ್ತೆ (12)

    • ಯೆಹೋವನ ಕೈ ಅಶ್ಶೂರ್ಯರನ್ನ ಜಜ್ಜಿಹಾಕುತ್ತೆ (24-27)

    • ಫಿಲಿಷ್ಟಿಯದ ವಿರುದ್ಧ ಸಂದೇಶ (28-32)

  • 15

    • ಮೋವಾಬಿನ ವಿರುದ್ಧ ಸಂದೇಶ (1-9)

  • 16

    • ಮೋವಾಬಿನ ವಿರುದ್ಧ ಸಂದೇಶ ಮುಂದುವರಿತು (1-14)

  • 17

    • ದಮಸ್ಕದ ವಿರುದ್ಧ ಸಂದೇಶ (1-11)

    • ಯೆಹೋವ ಜನಾಂಗಗಳನ್ನ ಗದರಿಸ್ತಾನೆ (12-14)

  • 18

    • ಇಥಿಯೋಪ್ಯದ ವಿರುದ್ಧ ಸಂದೇಶ (1-7)

  • 19

    • ಈಜಿಪ್ಟಿನ ವಿರುದ್ಧ ಸಂದೇಶ (1-15)

    • ಈಜಿಪ್ಟ್‌ ಯೆಹೋವನನ್ನ ತಿಳ್ಕೊಳ್ಳುತ್ತೆ (16-25)

      • ಈಜಿಪ್ಟಲ್ಲಿ ಯೆಹೋವನಿಗಾಗಿ ಒಂದು ಯಜ್ಞವೇದಿ (19)

  • 20

    • ಈಜಿಪ್ಟಿನ ಮತ್ತು ಇಥಿಯೋಪ್ಯದ ವಿರುದ್ಧ ಗುರುತು (1-6)

  • 21

    • ಕಡಲಡವಿಯ ವಿರುದ್ಧ ಸಂದೇಶ (1-10)

      • ಕಾವಲು ಸ್ಥಾನದಲ್ಲಿ ಕಾವಲು ಕಾಯೋದು (8)

      • “ಬಾಬೆಲ್‌ ನಗರಿ ಬಿದ್ದಳು!” (9)

    • ದೂಮದ ಮತ್ತು ಬಯಲು ಪ್ರದೇಶದ ವಿರುದ್ಧ ಸಂದೇಶ (11-17)

      • “ಕಾವಲುಗಾರನೇ, ರಾತ್ರಿ ಯಾವಾಗ ಮುಗಿಯುತ್ತೆ?” (11)

  • 22

    • ದರ್ಶನದ ಕಣಿವೆ ಬಗ್ಗೆ ಸಿಕ್ಕಿದ ಸಂದೇಶ (1-14)

    • ಅರಮನೆಯ ಮೇಲ್ವಿಚಾರಕನ ಕೆಲಸ ಶೆಬ್ನನಿಂದ ಎಲ್ಯಕೀಮನಿಗೆ (15-25)

      • ಸಾಂಕೇತಿಕ ಗೂಟ (23-25)

  • 23

    • ತೂರಿನ ವಿರುದ್ಧ ಬಂದ ಸಂದೇಶ (1-18)

  • 24

    • ಯೆಹೋವ ದೇಶವನ್ನ ಖಾಲಿ ಮಾಡ್ತಾನೆ (1-23)

      • ಚೀಯೋನಿನ ರಾಜ ಯೆಹೋವ (23)

  • 25

    • ದೇವಜನ್ರ ಮೇಲೆ ಅಪಾರ ಆಶೀರ್ವಾದ (1-12)

      • ಉತ್ತಮ ದ್ರಾಕ್ಷಾಮದ್ಯದ ಯೆಹೋವನ ಔತಣ (6)

      • ಸಾವು ಇರಲ್ಲ (8)

  • 26

    • ನಂಬಿಕೆ ಮತ್ತು ರಕ್ಷಣೆ ಹಾಡು (1-21)

      • ಯಾಹು ಯೆಹೋವ, ಶಾಶ್ವತಕ್ಕೂ ಇರೋ ಬಂಡೆ (4)

      • ಜನ್ರು ನೀತಿ ಅಂದ್ರೆ ಏನಂತ ಅರ್ಥಮಾಡ್ಕೊಳ್ತಾರೆ (9)

      • “ಸತ್ತವರು ಬದುಕಿ ಬರ್ತಾರೆ” (19)

      • ಒಳಗಿನ ಕೋಣೆಗಳಿಗೆ ಹೋಗಿ ಬಚ್ಚಿಟ್ಕೊಳ್ಳಿ (20)

  • 27

    • ಯೆಹೋವ ಲಿವ್ಯಾತಾನನ್ನ ಕೊಲ್ತಾನೆ (1)

    • ಇಸ್ರಾಯೇಲನ್ನ ದ್ರಾಕ್ಷಿತೋಟಕ್ಕೆ ಹೋಲಿಸಿರೋ ಹಾಡು (2-13)

  • 28

    • ಏಫ್ರಾಯೀಮಿನ ಕುಡುಕರಿಗೆ ಆಗೋ ಗತಿ! (1-6)

    • ಯೆಹೂದದ ಪುರೋಹಿತರ ಮತ್ತು ಪ್ರವಾದಿಗಳ ತೂರಾಟ (7-13)

    • “ಮರಣದ ಜೊತೆ ಒಂದು ಒಪ್ಪಂದ” (14-22)

      • ಚೀಯೋನಿನ ಅಮೂಲ್ಯ ಮೂಲೆಗಲ್ಲು (16)

      • ಯೆಹೋವನ ಅಸಾಧಾರಣ ಕೆಲಸ (21)

    • ಯೆಹೋವನ ವಿವೇಕಭರಿತ ಶಿಸ್ತಿನ ಬಗ್ಗೆ ಉದಾಹರಣೆ (23-29)

  • 29

    • ಅರಿಯೇಲಿಗೆ ಬಂದ ಗತಿ! (1-16)

      • ಕೇವಲ ಬಾಯಿಂದ ಮಹಿಮೆಪಡಿಸೋದು ಸರಿಯಲ್ಲ (13)

    • ಕಿವುಡರಿಗೆ ಕಿವಿ ಕೇಳಿಸುತ್ತೆ, ಕುರುಡರಿಗೆ ಕಣ್ಣು ಕಾಣಿಸುತ್ತೆ (17-24)

  • 30

    • ಈಜಿಪ್ಟಿನ ಸಹಾಯದಿಂದ ಏನೂ ಪ್ರಯೋಜನ ಇಲ್ಲ (1-7)

    • ಭವಿಷ್ಯದ ಬಗ್ಗೆ ಸಂದೇಶವನ್ನ ಜನ ಕಡೆಗಣಿಸ್ತಾರೆ (8-14)

    • ಭರವಸೆ ಇಡೋದೇ ಬಲ (15-17)

    • ಯೆಹೋವ ತನ್ನ ಜನ್ರಿಗೆ ಕೃಪೆ ತೋರಿಸ್ತಾನೆ (18-26)

      • ಯೆಹೋವ ಮಹೋನ್ನತ ಬೋಧಕ (20)

      • “ಇದೇ ದಾರಿ” (21)

    • ಯೆಹೋವ ಅಶ್ಶೂರ್ಯರಿಗೆ ತೀರ್ಪು ಕೊಡ್ತಾನೆ (27-33)

  • 31

    • ನಿಜ ಸಹಾಯ ಸಿಗೋದು ಮನುಷ್ಯರಿಂದಲ್ಲ, ದೇವರಿಂದ (1-9)

      • ಈಜಿಪ್ಟಿನ ಕುದುರೆಗಳು ಮಾಮೂಲಿ ಪ್ರಾಣಿಗಳೇ (3)

  • 32

    • ರಾಜ ಮತ್ತು ಅಧಿಪತಿಗಳು ನಿಜವಾದ ನ್ಯಾಯದಿಂದ ಆಳ್ತಾರೆ (1-8)

    • ಚಿಂತೆಯಿಲ್ಲದ ಸ್ತ್ರೀಯರಿಗೆ ನೀಡಿದ ಎಚ್ಚರಿಕೆ (9-14)

    • ಪವಿತ್ರಶಕ್ತಿ ಸುರಿಸಿದಾಗ ಸಿಕ್ಕಿದ ಆಶೀರ್ವಾದಗಳು (15-20)

  • 33

    • ನೀತಿವಂತರಿಗಾಗಿ ನ್ಯಾಯ ಮತ್ತು ನಿರೀಕ್ಷೆ (1-24)

      • ಯೆಹೋವ ನಮ್ಮ ನ್ಯಾಯಾಧೀಶ, ಶಾಸನಕಾರ ಮತ್ತು ರಾಜ (22)

      • “ನನಗೆ ಹುಷಾರಿಲ್ಲ” ಅಂತ ಯಾರೂ ಹೇಳಲ್ಲ (24)

  • 34

    • ಜನಾಂಗಗಳ ಮೇಲೆ ಯೆಹೋವ ಸೇಡು ತೀರಿಸ್ತಾನೆ (1-4)

    • ಎದೋಮ್‌ ಹಾಳುಬೀಳುತ್ತೆ (5-17)

  • 35

    • ಮತ್ತೆ ಪರದೈಸ್‌ ಆಗುತ್ತೆ (1-7)

      • ಕುರುಡನಿಗೆ ಕಣ್ಣು ಕಾಣಿಸುತ್ತೆ, ಕಿವುಡನಿಗೆ ಕಿವಿ ಕೇಳಿಸುತ್ತೆ (5)

    • ಬಿಡುಗಡೆ ಆಗಿರುವವರಿಗಾಗಿ ಪವಿತ್ರತೆಯ ಮಾರ್ಗ (8-10)

  • 36

    • ಸನ್ಹೇರಿಬ ಯೆಹೂದಕ್ಕೆ ಮುತ್ತಿಗೆ ಹಾಕಿದ (1-3)

    • ರಬ್ಷಾಕೆ ಯೆಹೋವನನ್ನ ಅಣಕಿಸಿದ (4-22)

  • 37

    • ಹಿಜ್ಕೀಯ ಯೆಶಾಯನ ಮೂಲಕ ದೇವರ ಸಹಾಯ ಕೇಳ್ತಾನೆ (1-7)

    • ಸನ್ಹೇರಿಬನಿಂದ ಯೆರೂಸಲೇಮಿಗೆ ಬೆದರಿಕೆ (8-13)

    • ಹಿಜ್ಕೀಯನ ಪ್ರಾರ್ಥನೆ (14-20)

    • ದೇವರು ಕೊಟ್ಟ ಉತ್ರವನ್ನ ಯೆಶಾಯ ತಿಳಿಸಿದ (21-35)

    • ಒಬ್ಬ ದೇವದೂತ 1,85,000 ಅಶ್ಶೂರ್ಯರನ್ನ ಸಾಯಿಸ್ತಾನೆ (36-38)

  • 38

    • ಹಿಜ್ಕೀಯ ಹುಷಾರು ತಪ್ತಾನೆ, ವಾಸಿ ಆಗ್ತಾನೆ (1-22)

      • ಧನ್ಯವಾದ ಗೀತೆ (10-20)

  • 39

    • ಬಾಬೆಲಿಂದ ಸಂದೇಶವಾಹಕರು (1-8)

  • 40

    • ದೇವಜನ್ರಿಗೆ ಸಾಂತ್ವನ (1-11)

      • ಕಾಡಲ್ಲಿ ಕೇಳಿ ಬರೋ ಕೂಗು (3-5)

    • ದೇವರ ಶ್ರೇಷ್ಠತೆ (12-31)

      • ಜನಾಂಗಗಳು ಬಕೀಟಿಂದ ತೊಟ್ಟಿಕ್ಕೋ ತುಂತುರಿನ ತರ (15)

      • “ಭೂಗೋಳದ ಮೇಲೆ ದೇವರು ವಾಸಿಸ್ತಾನೆ” (22)

      • ಪ್ರತಿಯೊಂದು ನಕ್ಷತ್ರವನ್ನ ಹೆಸರಿಡಿದು ಕರಿತಾನೆ (26)

      • ದೇವರು ಯಾವತ್ತೂ ದಣಿದು ಹೋಗಲ್ಲ (28)

      • ಯೆಹೋವನಲ್ಲಿ ನಿರೀಕ್ಷೆ ಇಡುವವರು ಹೊಸ ಬಲ ಪಡಿತಾರೆ (29-31)

  • 41

    • ಸೂರ್ಯೋದಯದ ಕಡೆಯಿಂದ ಬರೋ ಜಯಶಾಲಿ (1-7)

    • ಇಸ್ರಾಯೇಲನನ್ನ ದೇವರ ಸೇವಕನಾಗಿ ಆರಿಸ್ಕೊಳ್ಳಲಾಯ್ತು (8-20)

      • “ನನ್ನ ಸ್ನೇಹಿತ ಅಬ್ರಹಾಮ” (8)

    • ಅನ್ಯ ದೇವರುಗಳಿಗೆ ಸವಾಲು ಹಾಕಲಾಯ್ತು (21-29)

  • 42

    • ದೇವರ ಸೇವಕ ಮತ್ತು ಆತನ ನೇಮಕ (1-9)

      • ‘ಯೆಹೋವ ನನ್ನ ಹೆಸ್ರು’ (8)

    • ಯೆಹೋವನನ್ನ ಹೊಗಳೋಕೆ ಹೊಸ ಹಾಡು (10-17)

    • ಇಸ್ರಾಯೇಲಿಗೆ ಕಣ್ಣು ಕಾಣಲ್ಲ ಮತ್ತು ಕಿವಿ ಕೇಳಿಸಲ್ಲ (18-25)

  • 43

    • ಯೆಹೋವ ತನ್ನ ಜನ್ರನ್ನ ಒಟ್ಟುಗೂಡಿಸ್ತಾನೆ (1-7)

    • ದೇವರುಗಳ ಪರೀಕ್ಷೆ (8-13)

      • “ನೀವು ನನ್ನ ಸಾಕ್ಷಿಗಳು” (10, 12)

    • ಬಾಬೆಲಿಂದ ಬಿಡುಗಡೆ (14-21)

    • ‘ನಮ್ಮ ಮಧ್ಯ ಇರೋ ವಿವಾದದ ಬಗ್ಗೆ ಮಾತಾಡೋಣ’ (22-28)

  • 44

    • ದೇವರು ಆರಿಸ್ಕೊಂಡ ಜನ್ರಿಗೆ ಸಿಗೋ ಆಶೀರ್ವಾದಗಳು (1-5)

    • ಯೆಹೋವನನ್ನ ಬಿಟ್ರೆ ಬೇರೆ ಯಾವ ದೇವರೂ ಇಲ್ಲ (6-8)

    • ಮನುಷ್ಯ ಮಾಡಿರೋ ಮೂರ್ತಿಗಳಿಗೆ ಆಗೋ ಅವಮಾನ (9-20)

    • ಯೆಹೋವ ಇಸ್ರಾಯೇಲನ್ನ ಬಿಡುಗಡೆ ಮಾಡಿದವನು (21-23)

    • ಕೋರೆಷನ ಮೂಲಕ ಪುನಃಸ್ಥಾಪನೆ (24-28)

  • 45

    • ಬಾಬೆಲನ್ನ ವಶ ಮಾಡ್ಕೊಳ್ಳೋಕೆ ಕೋರೆಷನ ಅಭಿಷೇಕ (1-8)

    • ಜೇಡಿಮಣ್ಣು ಕುಂಬಾರನ ಜೊತೆ ವಾದಿಸಬಾರದು (9-13)

    • ಬೇರೆ ಜನಾಂಗಗಳು ಇಸ್ರಾಯೇಲನ್ನ ಗುರುತಿಸುತ್ತೆ (14-17)

    • ದೇವರನ್ನ ನಂಬಬಹುದು ಅಂತ ಸೃಷ್ಟಿ ಮತ್ತು ಭವಿಷ್ಯವಾಣಿಗಳಿಂದ ಗೊತ್ತಾಗುತ್ತೆ (18-25)

      • ಭೂಮಿಯನ್ನ ಜನ್ರಿಗಾಗಿ ಸೃಷ್ಟಿ ಮಾಡಲಾಯ್ತು (18)

  • 46

    • ಬಾಬೆಲಿನ ಮೂರ್ತಿಗಳ ಮತ್ತು ಇಸ್ರಾಯೇಲಿನ ದೇವರ ಮಧ್ಯ ಇರೋ ವ್ಯತ್ಯಾಸ (1-13)

      • ಯೆಹೋವ ಭವಿಷ್ಯದಲ್ಲಿ ನಡಿಯೋ ಸಂಗತಿಗಳನ್ನ ಮೊದಲೇ ತಿಳಿಸ್ತಾನೆ (10)

      • ಪೂರ್ವದಿಂದ ಬರೋ ಒಂದು ಹದ್ದು (11)

  • 47

    • ಬಾಬೆಲಿನ ಪತನ (1-15)

      • ಜ್ಯೋತಿಷಿಗಳ ಬಂಡವಾಳ ಬಯಲು (13-15)

  • 48

    • ಇಸ್ರಾಯೇಲಿನ ಖಂಡನೆ ಮತ್ತು ಶುದ್ಧೀಕರಣ (1-11)

    • ಯೆಹೋವ ಬಾಬೆಲಿನ ವಿರುದ್ಧ ಕ್ರಮ ತಗೊಳ್ತಾನೆ (12-16ಎ)

    • ದೇವರ ಬೋಧನೆ ಪ್ರಯೋಜನಕರ (16ಬಿ-19)

    • “ಬಾಬೆಲಿಂದ ಹೊರಡಿ!” (20-22)

  • 49

    • ಯೆಹೋವನ ಸೇವಕರ ನೇಮಕ (1-12)

      • ಜನಾಂಗಗಳ ಬೆಳಕು (6)

    • ಇಸ್ರಾಯೇಲಿಗೆ ಸಾಂತ್ವನ (13-26)

  • 50

    • ಇಸ್ರಾಯೇಲಿನ ಪಾಪಗಳಿಂದಾದ ಸಮಸ್ಯೆಗಳು (1-3)

    • ಯೆಹೋವನ ವಿಧೇಯ ಸೇವಕ (4-11)

      • ಅರಿತುಕೊಳ್ಳುವವರ ನಾಲಿಗೆ ಮತ್ತು ಕಿವಿ (4)

  • 51

    • ಚೀಯೋನ್‌ ಏದೆನ್‌ ತೋಟದ ತರ ಆಗುತ್ತೆ (1-8)

    • ಚೀಯೋನಿನ ಬಲಿಷ್ಠ ರಚಕನಿಂದ ಸಾಂತ್ವನ (9-16)

    • ಯೆಹೋವನ ಕ್ರೋಧದ ಲೋಟ (17-23)

  • 52

    • ಚೀಯೋನೇ, ಎದ್ದೇಳು! (1-12)

      • ಸಿಹಿಸುದ್ದಿ ತರುವವನ ಕಾಲುಗಳು ಸುಂದರ (7)

      • ಚೀಯೋನಿನ ಕಾವಲುಗಾರರೆಲ್ಲ ಒಟ್ಟಾಗಿ ಕೂಗ್ತಾರೆ (8)

      • ಯೆಹೋವನ ಪಾತ್ರೆಗಳನ್ನ ಹೊರುತ್ತಿರುವ​ವರು ಶುದ್ಧರಾಗಿರಬೇಕು (11)

    • ಯೆಹೋವನ ಸೇವಕರನ್ನ ಉನ್ನತಕ್ಕೇರಿಸಲಾಗುತ್ತೆ (13-15)

      • ವಿಕಾರಗೊಂಡಿದ್ದ ಆಕಾರ (14)

  • 53

    • ಯೆಹೋವನ ಸೇವಕನ ಸಂಕಟ, ಸಾವು ಮತ್ತು ಸಮಾಧಿ (1-12)

      • ತಿರಸ್ಕಾರ ಮತ್ತು ದೂರ ಮಾಡೋದು (3)

      • ರೋಗಗಳನ್ನ, ನೋವುಗಳನ್ನ ಹೊತ್ಕೊಳ್ಳೋದು (4)

      • ‘ಬಲಿಯ ಕುರಿಮರಿ ತರ’ (7)

      • ಆತನು ಅನೇಕರ ಪಾಪವನ್ನ ಹೊತ್ಕೊಂಡನು (12)

  • 54

    • ಬಂಜೆಯಾಗಿರೋ ಚೀಯೋನ್‌ಗೆ ತುಂಬ ಮಕ್ಕಳು ಹುಟ್ತಾರೆ (1-17)

      • ಯೆಹೋವ ಚೀಯೋನಿಗೆ ಗಂಡ (5)

      • ಚೀಯೋನಿನ ಮಕ್ಕಳಿಗೆಲ್ಲ ಯೆಹೋವ ಕಲಿಸ್ತಾನೆ (13)

      • ಚೀಯೋನಿನ ವಿರುದ್ಧ ಯಾವುದೇ ಆಯುಧ ಜಯ ಸಾಧಿಸಲ್ಲ (17)

  • 55

    • ಉಚಿತವಾಗಿ ತಿನ್ನೋಕೆ, ಕುಡಿಯೋಕೆ ಆಹ್ವಾನ (1-5)

    • ಯೆಹೋವನಿಗಾಗಿ ಮತ್ತು ಆತನ ಭರವಸಾರ್ಹ ಮಾತುಗಳಿಗಾಗಿ ಹುಡುಕಿ (6-13)

      • ಮನುಷ್ಯನ ಮಾರ್ಗಗಳಿಗಿಂತ ದೇವರ ಮಾರ್ಗಗಳು ಎಷ್ಟೋ ಉನ್ನತ (8, 9)

      • ದೇವರ ಮಾತು ಖಂಡಿತ ನೆರವೇರುತ್ತೆ (10, 11)

  • 56

    • ವಿದೇಶಿಯರಿಗೆ ಮತ್ತು ನಪುಂಸಕರಿಗೆ ಸಿಗೋ ಆಶೀರ್ವಾದಗಳು (1-8)

      • ಎಲ್ರಿಗಾಗಿ ಇರೋ ಪ್ರಾರ್ಥನಾ ಮಂದಿರ (7)

    • ಕುರುಡು ಕಾವಲುಗಾರ, ಮೂಕ ನಾಯಿಗಳು (9-12)

  • 57

    • ನೀತಿವಂತರು, ನಿಷ್ಠಾವಂತರು ಅಳಿದು ಹೋಗಿದ್ದಾರೆ (1, 2)

    • ಇಸ್ರಾಯೇಲ್ಯರ ನಂಬಿಕೆ ದ್ರೋಹ ಬಯಲಾಯ್ತು (3-13)

    • ದೀನರಿಗೆ ಸಿಗೋ ಸಾಂತ್ವನ (14-21)

      • ಕೆಟ್ಟವರು ಅಲ್ಲೋಲಕಲ್ಲೋಲ ಸಮುದ್ರ (20)

      • ಕೆಟ್ಟವ್ರಿಗೆ ಮನಶ್ಶಾಂತಿ ಇರಲ್ಲ (21)

  • 58

    • ಸರಿಯಾದ ಮತ್ತು ತಪ್ಪಾದ ರೀತಿಯ ಉಪವಾಸಗಳು (1-12)

    • ಸಬ್ಬತ್‌ ದಿನ ಆಚರಿಸೋದ್ರಲ್ಲಿ ಸಿಗೋ ಸಂತೋಷ (13, 14)

  • 59

    • ಇಸ್ರಾಯೇಲ್ಯರ ಪಾಪಗಳು ಅವ್ರನ್ನ ದೇವರಿಂದ ದೂರ ಮಾಡಿದವು (1-8)

    • ಪಾಪಗಳನ್ನ ಒಪ್ಕೊಳ್ಳೋದು (9-15ಎ)

    • ಪಶ್ಚಾತ್ತಾಪಪಡುವವರ ಪರವಾಗಿ ಯೆಹೋವ ಹೆಜ್ಜೆ ತಗೊಳ್ತಾನೆ (15ಬಿ-21)

  • 60

    • ಯೆಹೋವನ ಮಹಿಮೆ ಚೀಯೋನಿನ ಮೇಲೆ ಪ್ರಕಾಶಿಸ್ತಿದೆ (1-22)

      • ಗೂಡಿಗೆ ಸೇರ್ಕೊಳ್ಳೋ ಪಾರಿವಾಳಗಳ ತರ (8)

      • ತಾಮ್ರಕ್ಕೆ ಬದಲಾಗಿ ಚಿನ್ನ (17)

      • ಅಲ್ಪನು ಸಾವಿರವಾಗ್ತಾನೆ (22)

  • 61

    • ಸಿಹಿಸುದ್ದಿ ಸಾರೋಕೆ ಅಭಿಷೇ​ಕಿಸಲಾಗುತ್ತೆ (1-11)

      • “ಯೆಹೋವ ತನ್ನ ಪ್ರಸನ್ನತೆಯನ್ನ ತೋರಿಸೋ ವರ್ಷ” (2)

      • ‘ನೀತಿಯ ದೊಡ್ಡದೊಡ್ಡ ಮರಗಳು’ (3)

      • ವಿದೇಶಿಯರು ನೆರವಾಗ್ತಾರೆ (5)

      • ‘ಯೆಹೋವನ ಪುರೋಹಿತರು’ (6)

  • 62

    • ಚೀಯೋನಿನ ಹೊಸ ಹೆಸ್ರು (1-12)

  • 63

    • ಜನಾಂಗಗಳ ಮೇಲೆ ಯೆಹೋವ ಸೇಡು ತೀರಿಸ್ತಾನೆ (1-6)

    • ಯೆಹೋವನ ಶಾಶ್ವತ ಪ್ರೀತಿ (7-14)

    • ಪಶ್ಚಾತ್ತಾಪದ ಪ್ರಾರ್ಥನೆ (15-19)

  • 64

    • ಪಶ್ಚಾತ್ತಾಪದ ಪ್ರಾರ್ಥನೆ ಮುಂದುವರಿತು (1-12)

      • ಯೆಹೋವ “ನಮ್ಮ ಕುಂಬಾರ” (8)

  • 65

    • ಮೂರ್ತಿಯನ್ನ ಆರಾಧಿಸುವವ್ರ ವಿರುದ್ಧ ಯೆಹೋವನ ತೀರ್ಪು (1-16)

      • ಅದೃಷ್ಟ ದೇವರು ಮತ್ತು ವಿಧಿ ದೇವರು (11)

      • “ನನ್ನ ಸೇವಕರು ಊಟ ಮಾಡ್ತಾರೆ” (13)

    • ಹೊಸ ಆಕಾಶ ಮತ್ತು ಹೊಸ ಭೂಮಿ (17-25)

      • ಮನೆಗಳನ್ನ ಕಟ್ತಾರೆ, ದ್ರಾಕ್ಷಿತೋಟಗಳನ್ನ ಮಾಡ್ತಾರೆ (21)

      • ಯಾರ ಶ್ರಮನೂ ವ್ಯರ್ಥ ಆಗಲ್ಲ (23)

  • 66

    • ಸತ್ಯ ಆರಾಧನೆ ಮತ್ತು ಸುಳ್ಳು ಆರಾಧನೆ (1-6)

    • ಚೀಯೋನ್‌ ಅನ್ನೋ ತಾಯಿ ಮತ್ತು ಅವಳ ಗಂಡು ಮಕ್ಕಳು (7-17)

    • ಆರಾಧನೆಗಾಗಿ ಜನ ಯೆರೂಸಲೇಮಲ್ಲಿ ಸೇರಿ ಬಂದ್ರು (18-24)