ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹರ್ಷ ಗೀತೆ ನೀ ಹಾಡು

ಹರ್ಷ ಗೀತೆ ನೀ ಹಾಡು

ಡೌನ್‌ಲೋಡ್‌:

  1. 1. ಸಂಘರ್ಷ ಇದೆ ಬಾಳಲ್ಲಿ

    ಶಾಂತಿ ಇಲ್ಲ ಭೂಮೀಲಿ

    ನಿರೀಕ್ಷೆಯಿಂದ ನೀ ನೋಡು

    ಮನಸ್ಸಿನಲ್ಲಿ ನೀ ಹಾಡು

    (ಪಲ್ಲವಿ)

    ಹುಸಿ ಇರದ ಲೋಕ ಸಂತೋಷ

    ಹೊಸ ಅಧ್ಯಾಯ ಆರಂಭ ಹರ್ಷ

    ಹಸಿ ರುಚಿಯಲ್ಲೂ ಕಾಣು ಸಂತಸಾ

    ಹಾರೈಸೆಮ್ಮ ತಂದೆ, ನಿನ್ನ ಹಾಡು ಉಲ್ಲಾಸ

  2. 2. ಈ ಮೌನಾ ನನಗೆ ಸಾಕಾಯ್ತು

    ಈ ಕಣ್ಣು ತುಂಬ ಮಂಜಾಯ್ತು

    ಈ ಭವ್ಯ ಭೂಮಿ ನೀ ನೋಡು

    ಈ ಹರ್ಷ ಗೀತೆ ನೀ ಹಾಡು

    (ಪಲ್ಲವಿ)

    ಹುಸಿ ಇರದ ಲೋಕ ಸಂತೋಷ

    ಹೊಸ ಅಧ್ಯಾಯ ಆರಂಭ ಹರ್ಷ

    ಹಸಿ ರುಚಿಯಲ್ಲೂ ಕಾಣು ಸಂತಸಾ

    ಹಾರೈಸೆಮ್ಮ ತಂದೆ, ನಮ್ಮ ಮನ ಉಲ್ಲಾಸ

    (BRIDGE)

    ಅತೀವ ವೇದನೆಯು ಸಾಕಿನ್ನು

    ಅಮೋಘ ಜೀವನ ನೀ ಕಾಣು

    (ಪಲ್ಲವಿ)

    ಹುಸಿ ಇರದ ಲೋಕ ಸಂತೋಷ

    ಹೊಸ ಲೋಕದಲ್ಲಿಲ್ಲ ನೀರಸ

    ಹಸಿ ಹಸಿರಲ್ಲೂ ಕಾಣು ಸಂತಸಾ

    ನಿನ್ನಾ ಪ್ರೀತಿಯು ನಿಷ್ಕಲ್ಮಶ

    (ಪಲ್ಲವಿ)

    ಹುಸಿ ಇರದ ಲೋಕ ಸಂತೋಷ

    ಹೊಸ ಲೋಕದಲ್ಲಿಲ್ಲ ನೀರಸ

    ಹಸಿ ರುಚಿಯಲ್ಲೂ ಕಾಣು ಸಂತಸಾ

    ಹಾಡೋ ಹಾಡಲ್ಲಿದೆ ಉಲ್ಲಾಸ