ಕಾಣಿಕೆ ಚಿಕ್ಕದಾದರೂ ಮನಸ್ಸೇ ದೊಡ್ಡದು
1. ಸಾಲಲ್ಲಿ ಕಾಯುತ್ತಾ ನಿಂತಾಕೆ
ಕೈಯಲ್ಲಿ ತೀರಾ ಕಮ್ಮಿ ಮೌಲ್ಯದ ಕಾಣಿಕೆ.
ನೀಡುತ್ತಿರೆ ಜನ ಬೆಳ್ಳಿ ಬಂಗಾರ
ನೋಡುತ್ತಾನಾ ದೇವಾ ಆಕೆ ನೀಡೋ ಕಾಸನ್ನ? ಹಾ...
(ಪಲ್ಲವಿ)
“ಹಿಂಜರಿಬೇಡ, ತುಂಬಾ ಅಮೂಲ್ಯ
ನೀನು ನೀಡೋ ಈ ಕಾಣಿಕೆ.
ಸರ್ವಸ್ವ ನೀಡುವ ಮನವು ಸಾಕಲ್ವ!”
ಎನ್ನುತ್ತಾನೆ ಯೆಹೋವಪ್ಪಾ.
‘ನೀಡು ನೀ!’
2. ಚಿನ್ನ ಬೆಳ್ಳಿ ನೀಡೋ ಆಸೆ ಮನ್ಸಲ್ಲಿ;
ನೀಡೋಕೆ ಈಗ ಇಲ್ಲ ಬೇರೇನೂ ಆಕೆ ಕೈಯಲ್ಲಿ.
ಖುಷೀಲಿ ಬಂದು ಮನ್ಸಾರೆ ನೀಡೋವಾಗ,
ಸ್ವರ್ಗದಲ್ಲಿ ಆ ಸದ್ದು ಪ್ರತಿಧ್ವನಿಸಿ ಕೇಳುತ್ತಿತ್ತು.
(ಪಲ್ಲವಿ)
“ಹಿಂಜರಿಬೇಡ, ತುಂಬಾ ಅಮೂಲ್ಯ
ನೀನು ನೀಡೋ ಈ ಕಾಣಿಕೆ.
ಸರ್ವಸ್ವ ನೀಡುವ ಮನವು ಸಾಕಲ್ವ!”
ಎನ್ನುತ್ತಾನೆ ಯೆಹೋವಪ್ಪಾ.
‘ನೀಡು ನೀ!’
(ಅನುಪಲ್ಲವಿ)
ಕೈಲಾದದ್ದೆಲ್ಲಾ ನೀ ನೀಡುವಾಗ,
ಸ್ವರ್ಗದಿಂದ ಬಾಗುತ್ತಾನೆ ದೇವಾ;
ನೋಡುತ್ತಾನೆ ನಿನ್ನ.
(ಪಲ್ಲವಿ)
“ಹಿಂಜರಿಬೇಡ, ತುಂಬಾ ಅಮೂಲ್ಯ
ನೀನು ನೀಡೋ ಈ ಕಾಣಿಕೆ.
ಸರ್ವಸ್ವ ನೀಡುವ ಮನವು ಸಾಕಲ್ವ!”
ಎನ್ನುತ್ತಾನೆ ಯೆಹೋವಪ್ಪಾ.
‘ನೀಡು ನೀ!
ಚಿಕ್ಕದ್ದಾದರೂ ನೀಡು ನೀ!’