ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನುಕರಣೆಮಾಡುವ ಪಕ್ಷಿಗಳು ಅಪಾಯದಲ್ಲಿವೆ

ಅನುಕರಣೆಮಾಡುವ ಪಕ್ಷಿಗಳು ಅಪಾಯದಲ್ಲಿವೆ

ಅನುಕರಣೆಮಾಡುವ ಪಕ್ಷಿಗಳು ಅಪಾಯದಲ್ಲಿವೆ

ಬ್ರಿಟನ್‌ನ ಎಚ್ಚರ! ಲೇಖಕರಿಂದ

ಗಿಣಿಗಳು “ಭೂಮಿಯಲ್ಲೇ ಅತ್ಯಧಿಕ ಮಟ್ಟದಲ್ಲಿ ಅಪಾಯಕ್ಕೊಳಗಾಗಿರುವ ಪಕ್ಷಿಗಳಲ್ಲಿ ಒಂದಾಗಿವೆ” ಎಂದು, ಅಮೆರಿಕದ ಮೇರಿಲೆಂಡ್‌ ವಿಶ್ವವಿದ್ಯಾನಿಲಯದ ಡಾ. ತಿಮೊಥಿ ರೈಟ್‌ ತಿಳಿಸುತ್ತಾರೆ. ಕಾಂತಿಭರಿತ ಬಣ್ಣದಿಂದ ಕೂಡಿರುವ ಅವುಗಳ ಗರಿಗಳು ಮತ್ತು ಮಾನವರ ಧ್ವನಿಯನ್ನು ಅನುಕರಿಸುವ ಅವುಗಳ ಚಿತ್ತಾಕರ್ಷಕ ಸಾಮರ್ಥ್ಯವೇ, ಅವುಗಳ ವಿನಾಶದ ಅಪಾಯಕ್ಕೆ ಕಾರಣವಾಗಿದೆ ಎಂಬುದು ವಿಷಾದಕರ ಸಂಗತಿ.

ಸಾ.ಶ.ಪೂ. ಐದನೆಯ ಶತಮಾನದ ಒಬ್ಬ ಗ್ರೀಕ್‌ ವೈದ್ಯನು, ಒಂದು ಸಾಕುಗಿಣಿ (ಪ್ಯಾರಕೀಟ್‌)ಯ ಕುರಿತು ಬರೆಯಲ್ಪಟ್ಟಿರುವ ಅತ್ಯಾರಂಭದ ಜ್ಞಾತ ಲಿಖಿತ ವೃತ್ತಾಂತಗಳಲ್ಲೇ ಮೊದಲನೆಯದನ್ನು ಬರೆದನು ಎಂಬುದು ಆಸಕ್ತಿಕರ ವಿಷಯವಾಗಿದೆ. ಆ ಪಕ್ಷಿಯು ತನ್ನ ಸ್ವದೇಶವಾದ ಭಾರತದ ಒಂದು ಭಾಷೆಯಲ್ಲಿ ಕೆಲವು ಮಾತುಗಳನ್ನು ಆಡಿದ್ದಲ್ಲದೆ, ಗ್ರೀಕ್‌ ಪದಗಳನ್ನೂ ಮಾತಾಡತೊಡಗಿದಾಗ ಅವನು ತುಂಬ ಆಶ್ಚರ್ಯಚಕಿತನಾದನು.

ಇಂದು ಗಿಣಿಯ ಅನುಕರಣೆಮಾಡುವ ಸಾಮರ್ಥ್ಯದ ಆಕರ್ಷಣೆಯು, ಸಾಕುಪಕ್ಷಿಯೋಪಾದಿ ಅದರ ಜನಪ್ರಿಯತೆಯನ್ನು ಹೆಚ್ಚಿಸುತ್ತಿದೆ ಮತ್ತು ಅಕ್ರಮ ರೀತಿಯಲ್ಲಿ ಈ ಪಕ್ಷಿಗಳನ್ನು ಅಪಹರಿಸುವ ವ್ಯಾಪಾರವನ್ನು ಹೆಚ್ಚಿಸುತ್ತಿದೆ. ಕಳೆದ 20 ವರ್ಷಗಳಲ್ಲಿ ನಡೆಸಲ್ಪಟ್ಟ ಅಧ್ಯಯನಗಳು, 14 ದೇಶಗಳಲ್ಲಿರುವ 21 ಗಿಣಿ ಜಾತಿಗಳಲ್ಲಿ, ಕಳ್ಳ ಬೇಟೆಗಾರರು 30 ಪ್ರತಿಶತ ಗೂಡುಗಳನ್ನು ಹಾಳುಮಾಡಿಬಿಟ್ಟಿದ್ದಾರೆ ಮತ್ತು 4 ಜಾತಿಗಳಲ್ಲಿ ಇದರ ಸಂಖ್ಯೆಯು 70 ಪ್ರತಿಶತವಾಗಿತ್ತು ಎಂದು ಸೂಚಿಸುತ್ತವೆ. ಈ ಪಕ್ಷಿಗಳ ಸಂತಾನಾಭಿವೃದ್ಧಿ ಪ್ರಮಾಣವು ತೀರ ನಿಧಾನವಾಗಿರುವುದರಿಂದ, ಅಂದರೆ ಸಾಮಾನ್ಯವಾಗಿ ಅವು ಒಂದು ವರ್ಷಕ್ಕೆ ಒಂದು ಗೂಡು ತುಂಬ ಮೊಟ್ಟೆಗಳನ್ನು ಮಾತ್ರ ಇಡುವುದರಿಂದ, ಮತ್ತು ಅದರ ಸ್ವಾಭಾವಿಕ ಇರುನೆಲೆಗಳು ನಾಶಗೊಳಿಸಲ್ಪಡುತ್ತಿರುವುದರಿಂದ, ಇವುಗಳ ಬೆಲೆಗಳು ಏರಿವೆ. ಒಂದು ಗಿಣಿಯು ಎಷ್ಟು ಅಪರೂಪದ್ದಾಗಿರುತ್ತದೋ ಅದರ ಬೆಲೆಯು ಅಷ್ಟೇ ಅಧಿಕವಾಗಿರುತ್ತದೆ.

ಕೆಲವು ಜಾತಿಯ ಗಿಣಿಗಳ ತೀರ ಕಡಿಮೆ ಸಂಖ್ಯೆಯ ವರದಿಗಳಿಂದ, ಈ ಪಕ್ಷಿಗಳ ವಿನಾಶವಾಗುವ ಅಪಾಯವು ಎಷ್ಟು ತೀವ್ರವಾಗಿದೆಯೆಂಬುದು ವ್ಯಕ್ತವಾಗುತ್ತದೆ. ಬ್ರಸಿಲ್‌ನಲ್ಲಿ ಲೆಅರ್ಸ್‌ ಮಕಾ ಗಿಣಿಗಳು 200ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿವೆ ಎಂದು ಅಂದಾಜುಮಾಡಲಾಗಿದೆ. ಪೋರ್ಟ ರೀಕನ್‌ ಗಿಣಿಯ ಸ್ಥಿತಿಯು ಇನ್ನಷ್ಟು ಶೋಚನೀಯವಾಗಿದೆ, ಏಕೆಂದರೆ ಕಾಡಿನಲ್ಲಿ ಈ ಜಾತಿಯ 50ಕ್ಕಿಂತಲೂ ಕಡಿಮೆ ಪಕ್ಷಿಗಳು ಮಾತ್ರ ಜೀವಂತವಾಗಿವೆ. ಕಾಡಿನಲ್ಲಿ ಸಂಪೂರ್ಣವಾಗಿ ನಿರ್ಮೂಲವಾಗಿದೆ ಎಂದು ಒಂದು ಕಾಲದಲ್ಲಿ ಪರಿಗಣಿಸಲಾಗಿದ್ದ ಸ್ಪಿಕ್ಸ್‌ಸ್‌ ಮಕಾ ಗಿಣಿಯ ಸಂರಕ್ಷಣೆಯು, ಬಂಧಿತ-ಸಂತಾನೋತ್ಪತ್ತಿ ಪ್ರಯತ್ನಗಳ ಮೇಲೆ ಬಹಳಷ್ಟು ಮಟ್ಟಿಗೆ ಅವಲಂಬಿಸಿದೆ.

ಕಣ್ಣುಕೋರೈಸುವಷ್ಟು ಸುಂದರವಾಗಿರುವ ಈ ಪಕ್ಷಿಗಳು ಬದುಕಿ ಉಳಿಯುವಷ್ಟು ಸಮಯ, ಅವು ತಮ್ಮ ಅಪೂರ್ವವಾದ ಹೊರತೋರಿಕೆ ಹಾಗೂ ಗಮನಾರ್ಹ ಸಾಮರ್ಥ್ಯಗಳಲ್ಲಿ ಖಂಡಿತವಾಗಿಯೂ ಆನಂದವನ್ನು ಪಡೆದುಕೊಳ್ಳುವಂಥ ಒಬ್ಬ ಸೃಷ್ಟಿಕರ್ತನ ಬಗ್ಗೆ ಸಾಕ್ಷ್ಯನೀಡುತ್ತಿರುವವು. ಮಾನವರ ದುರಾಸೆಯು ಗಿಣಿಗಳನ್ನು ಸಂಪೂರ್ಣವಾಗಿ ನಿರ್ಮೂಲಮಾಡುವುದೋ? ಕಾಲವೇ ಈ ಪ್ರಶ್ನೆಗೆ ಉತ್ತರ ನೀಡುವುದು. ಅಷ್ಟರ ತನಕ, ಈ ಅನುಕರಣೆಮಾಡುವ ಪಕ್ಷಿಗಳು ಅಪಾಯದಲ್ಲೇ ಜೀವಿಸುತ್ತಿರುವವು. (g02 7/22)

[ಪುಟ 31ರಲ್ಲಿರುವ ಚಿತ್ರಗಳು]

ಪೋರ್ಟ ರೀಕನ್‌ ಗಿಣಿ

ಪುಟ್ಟ ಸ್ಪಿಕ್ಸ್‌ಸ್‌ ಮಕಾ ಗಿಣಿ

ಲೆಅರ್ಸ್‌ ಮಕಾ ಗಿಣಿ

[ಕೃಪೆ]

ಪೋರ್ಟ ರೀಕನ್‌ ಗಿಣಿಗಳು: U.S. Geological Survey/Photo by James W. Wiley; ಲೆಅರ್ಸ್‌ ಮಕಾ ಗಿಣಿ: © Kjell B. Sandved/Visuals Unlimited; ಸ್ಪಿಕ್ಸ್‌ಸ್‌ ಮಕಾ ಗಿಣಿಗಳು: Progenies of and courtesy of Birds International, Inc.