ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನು ನನ್ನ ದುಃಖೋಪಶಮನದ ಮೂಲನಾಗಿದ್ದಾನೆ”

“ಯೆಹೋವನು ನನ್ನ ದುಃಖೋಪಶಮನದ ಮೂಲನಾಗಿದ್ದಾನೆ”

“ಯೆಹೋವನು ನನ್ನ ದುಃಖೋಪಶಮನದ ಮೂಲನಾಗಿದ್ದಾನೆ”

ಮೇಲೆ ಕೊಡಲ್ಪಟ್ಟಿರುವ ಮಾತುಗಳು, ಸ್ವೀಡನ್‌ ದೇಶದ ಒಂಬತ್ತನೆಯ ರಾಜ ಚಾರ್ಲ್ಸ್‌ರವರ ಅಧಿಕೃತ ರಾಜವಂಶ ಧ್ಯೇಯಮಂತ್ರದ ಭಾಷಾಂತರವಾಗಿದೆ. ಲ್ಯಾಟಿನ್‌ ಭಾಷೆಯಲ್ಲಿ ಅದು ಹೀಗೆ ಓದುತ್ತದೆ: “ಯೆಹೋವ ಸೋಲಾಟಿಯುಮ್‌ ಮ್ಯೂಮ್‌.” 1560ರಿಂದ 1697ರ ತನಕದ ರಾಜವಂಶಸ್ಥರಲ್ಲಿ ಈ ರಾಜನೂ ಒಬ್ಬನಾಗಿದ್ದನು. ಆ ಕಾಲಾವಧಿಯಲ್ಲಿದ್ದ ರಾಜರು, ನಾಣ್ಯಗಳ, ಪದಕಗಳ, ಅಥವಾ ವೈಯಕ್ತಿಕ ಧ್ಯೇಯಮಂತ್ರಗಳ ಮೇಲೆ ಇಬ್ರಿಯ ಅಥವಾ ಲ್ಯಾಟಿನ್‌ ಭಾಷೆಯಲ್ಲಿ ದೇವರ ಹೆಸರು ಎದ್ದುಕಾಣುವಂತೆ ಮಾಡಿದ್ದರು. ರಾಯಲ್‌ ಆರ್ಡರ್‌ ಆಫ್‌ ಜೆಹೋವ ಎಂಬ ಸಂಘವನ್ನು ಸಹ ಒಂಬತ್ತನೆಯ ಚಾರ್ಲ್ಸ್‌ ಸ್ಥಾಪಿಸಿದ್ದನು. ಇಸವಿ 1607ರಲ್ಲಿ ಅವನ ಕಿರೀಟಧಾರಣೆಯಾದ ದಿವಸ, ಚಾರ್ಲ್ಸ್‌ ಯೆಹೋವ ಹಾರ ಎಂಬುದಾಗಿ ಕರೆಯಲಾದ ಕಂಠಹಾರವನ್ನು ಧರಿಸಿದ್ದನು.

ಇಂಥ ಪದ್ಧತಿಗಳನ್ನು ಅನುಸರಿಸುವಂತೆ ಈ ಚಕ್ರವರ್ತಿಗಳನ್ನು ಯಾವುದು ನಡೆಸಿತು? ಆ ಸಮಯದಲ್ಲಿ ಯೂರೋಪಿನಲ್ಲಿ ನಡೆದ ಕ್ಯಾಲ್ವಿನಿಸ್ಟ್‌ ಚಳವಳಿ ಮತ್ತು ಅದರೊಂದಿಗೆ ಅವರಿಗೆ ಬೈಬಲಿನ ಕಡೆಗೆ ಇದ್ದ ಗೌರವವು, ಅವರನ್ನು ಹೀಗೆ ಮಾಡುವಂತೆ ಪ್ರೇರೇಪಿಸಿತು ಎಂಬುದಾಗಿ ವಿದ್ವಾಂಸರು ನಂಬುತ್ತಾರೆ. ಉತ್ತಮ ವಿದ್ಯಾಭ್ಯಾಸವಿದ್ದ ಚಕ್ರವರ್ತಿಗಳೋಪಾದಿ, ಅವರು ಯೆಹೋವ ಎಂಬ ದೇವರ ವೈಯಕ್ತಿಕ ಹೆಸರನ್ನು ಲ್ಯಾಟಿನ್‌ ಭಾಷೆಯಲ್ಲಿ ತಿಳಿದಿದ್ದರು. ಆ ಹೆಸರು ಆರಂಭದ ಇಬ್ರಿಯ ಬೈಬಲಿನಲ್ಲಿ ಸಾವಿರಾರು ಬಾರಿ ಬರುತ್ತದೆಂದು ಕೆಲವರು ಗ್ರಹಿಸಿದ್ದರು ಎಂಬುದರಲ್ಲಿ ಸಂಶಯವಿಲ್ಲ.

ಯೂರೋಪಿನ ಅನೇಕ ಭಾಗಗಳಲ್ಲಿ 16ನೆಯ ಮತ್ತು 17ನೆಯ ಶತಮಾನದಷ್ಟಕ್ಕೆ ಯೆಹೋವನ ಹೆಸರು ಅನೇಕಬಾರಿ ನಾಣ್ಯಗಳಲ್ಲಿ ಮತ್ತು ಪದಕಗಳಲ್ಲಿ ಕಂಡುಬರುತ್ತಿತ್ತು. ಅಷ್ಟುಮಾತ್ರವಲ್ಲದೆ, ಅದು ಸಾರ್ವಜನಿಕ ಕಟ್ಟಡಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಸಹ ಕಂಡುಬರುತ್ತಿತ್ತು. ವಿಮೋಚನಕಾಂಡ 3:15ರಲ್ಲಿ ಕಂಡುಬರುವ ದೇವರ ಸ್ವಂತ ಮಾತು ಅನೇಕರಿಂದ ಸ್ವೀಕರಿಸಲ್ಪಟ್ಟಿತ್ತು ಮತ್ತು ಗೌರವಿಸಲ್ಪಟ್ಟಿತ್ತು: “ಯೆಹೋವ . . . ಇದು ಸದಾಕಾಲಕ್ಕೂ ನನ್ನ ಹೆಸರು.” (g03 6/22)

[ಪುಟ 13ರಲ್ಲಿರುವ ಚಿತ್ರಗಳು]

ರಾಯಲ್‌ ಆರ್ಡರ್‌ ಆಫ್‌ ಜೆಹೋವ ಎಂಬ ಸಂಘದ ಹಾರ ಮತ್ತು ಬಿಲ್ಲೆ, 1606, ಚಿನ್ನ, ಲೋಹ, ಶಿಲಾಸ್ಫಟಿಕ, ಮತ್ತು ಪದ್ಮರಾಗದಿಂದ ಮಾಡಲ್ಪಟ್ಟದ್ದು

ಹದಿನಾಲ್ಕನೆಯ ರಾಜ ಏರಿಕ್‌ 1560-68

ಒಂಬತ್ತನೆಯ ರಾಜ ಚಾರ್ಲ್ಸ್‌ 1599-1611 (ಹದಿನಾಲ್ಕನೆಯ ರಾಜ ಏರಿಕ್‌ನ ಸಹೋದರ)

ಎರಡನೆಯ ಗಸ್ಟಾವುಸ್‌ ಆಡಾಲ್ಫ್‌ ರಾಜ, 1611-32 (ಒಂಬತ್ತನೆಯ ಚಾರ್ಲ್ಸ್‌ನ ಮಗ)

ರಾಣಿ ಕ್ರಿಸ್ಟೀನ 1644-54 (ಎರಡನೆಯ ಗಸ್ಟಾವುಸ್‌ ಆಡಾಲ್ಫ್‌ನ ಮಗಳು)

[ಕೃಪೆ]

ಹಾರ: Livrustkammaren, Stockholm Sverige; ನಾಣ್ಯಗಳು: Kungl. Myntkabinettet, Sveriges Ekonomiska Museum