ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಸ್ಯಗಳು ಔಷಧಗಳ ಒಂದು ಬೆಲೆಬಾಳುವ ಮೂಲ

ಸಸ್ಯಗಳು ಔಷಧಗಳ ಒಂದು ಬೆಲೆಬಾಳುವ ಮೂಲ

ಸಸ್ಯಗಳು ಔಷಧಗಳ ಒಂದು ಬೆಲೆಬಾಳುವ ಮೂಲ

ಜನರು ಅವಲಂಬಿಸುವ ಆಧುನಿಕ ದಿನದ ಔಷಧಗಳಲ್ಲಿ ಕಾಲುಭಾಗದಷ್ಟು ಔಷಧಗಳು​—⁠ಪೂರ್ಣವಾಗಿ ಅಥವಾ ಭಾಗಶಃ​—⁠ಸಸ್ಯಗಳಲ್ಲಿ ಲಭ್ಯವಿರುವ ರಸಾಯನಗಳಾಗಿ ಆರಂಭಗೊಂಡವು ಎಂಬುದಾಗಿ ತಜ್ಞರು ಅಂದಾಜುಮಾಡುತ್ತಾರೆ. ವಿವಿಧ ಗಿಡಮೂಲಿಕೆ ಔಷಧಗಳನ್ನು ಉತ್ತೇಜಿಸುವವರಿಂದ ಈ ವಾಸ್ತವಾಂಶವನ್ನು ಅನೇಕವೇಳೆ ಉಲ್ಲೇಖಿಸಲಾಗುತ್ತದೆ.

ರೋಗನಿವಾರಕ ಸಸ್ಯಗಳ ಕುರಿತಾದ ಸಂಶೋಧನೆಯಲ್ಲಿ ಹೆಚ್ಚಿನ ಸಂಶೋಧನೆಯು, ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿರುವ ಘಟಕಗಳನ್ನು ಈ ಸಸ್ಯಗಳಿಂದ ಪ್ರತ್ಯೇಕಿಸುವ ಕಡೆಗೆ ನಿರ್ದೇಶಿಸಲಾಗಿದೆ. ಇಂಥ ಘಟಕದ ಉತ್ತಮ ಉದಾಹರಣೆಯು ಆ್ಯಸ್ಪಿರಿನ್‌ ಮಾತ್ರೆಯಾಗಿದೆ. ಇದನ್ನು, ಬಿಳಿ ನೀರುಹಬ್ಬೆ ಗಿಡದ (ವಿಲೋ ಗಿಡ) ತೊಗಟೆಯಲ್ಲಿ ಕಂಡುಬರುವ ಸ್ಯಾಲಿಸಿನ್‌ನಿಂದ ತಯಾರಿಸಲಾಗುತ್ತದೆ.

ಸಸ್ಯದಲ್ಲಿ ಕಂಡುಬರುವ, ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿರುವ ಘಟಕಗಳನ್ನು ಒಮ್ಮೆ ಪ್ರತ್ಯೇಕಿಸಿದ ನಂತರ, ಇದನ್ನು ಸಾಕಷ್ಟು ಮತ್ತು ಸೂಕ್ತವಾದ ಪ್ರಮಾಣದಲ್ಲಿ ಉಪಯೋಗಿಸಸಾಧ್ಯವಿದೆ. ಒಂದು ಪುಸ್ತಕವು ತಿಳಿಸುವುದು: “ಒಂದು ಆ್ಯಸ್ಪಿರಿನ್‌ ಮಾತ್ರೆಯು ನೀಡುವ ಪ್ರಯೋಜನವನ್ನು ಪಡೆದುಕೊಳ್ಳಲು ಸಾಕಷ್ಟು ನೀರುಹಬ್ಬೆ ಗಿಡದ ತೊಗಟೆಯನ್ನು ಸೇವಿಸುವುದು ಅಥವಾ ಡಿಜಿಟೇಲಿಸ್‌ನ ಪೂರ್ಣ ಜೀವರಕ್ಷಕ ಪರಿಣಾಮಗಳನ್ನು ಪಡೆದುಕೊಳ್ಳಲಿಕ್ಕಾಗಿ ಫಾಕ್ಸ್‌ಗ್ಲವ್‌ ಗಿಡದ ಸಾಕಷ್ಟು ಪ್ರಮಾಣವನ್ನು ಸೇವಿಸುವುದಕ್ಕಿಂತಲೂ ಒಂದು ಮಾತ್ರೆಯನ್ನು ಸೇವಿಸುವುದು ಬಹಳ ಸುಲಭ.”

ಇನ್ನೊಂದು ಬದಿಯಲ್ಲಿ, ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿದ ಘಟಕವನ್ನು ರೋಗನಿವಾರಕ ಸಸ್ಯದಿಂದ ಪ್ರತ್ಯೇಕಿಸುವುದರಿಂದ ಕೆಲವು ಸಮಸ್ಯೆಗಳು ಉಂಟಾಗಸಾಧ್ಯವಿದೆ. ಒಂದು ವಿಷಯವೇನೆಂದರೆ, ಸಸ್ಯದಲ್ಲಿರುವ ಇತರ ಪೌಷ್ಟಿಕಾಂಶಗಳ ನಷ್ಟ ಅಥವಾ ಇತರ ಪದಾರ್ಥಗಳಿಂದ ಒದಗಿಸಲ್ಪಡಬಹುದಾದ ಔಷಧೀಯ ಪ್ರಯೋಜನಗಳ ಕಳೆದುಕೊಳ್ಳುವಿಕೆಯನ್ನು ಇದು ಅರ್ಥೈಸಬಹುದು. ಇದಕ್ಕೆ ಕೂಡಿಕೆಯಾಗಿ, ರೋಗವನ್ನು ಉಂಟುಮಾಡುವ ಕೆಲವು ಜೀವಾಣುಗಳು ತಮ್ಮನ್ನು ಕೊಲ್ಲಸಾಧ್ಯವಿರುವ ಔಷಧಗಳನ್ನು ನಿರೋಧಿಸುವ ಸಾಮರ್ಥ್ಯವನ್ನು ಹೊಂದಿವೆ.

ಸಿಂಕೋನ ಗಿಡದ ತೊಗಟೆಯಲ್ಲಿ ದೊರೆಯುವ ಕ್ವಿನೀನ್‌ ಎಂಬ ಔಷಧವು, ರೋಗನಿವಾರಕ ಸಸ್ಯಗಳಿಂದ ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿರುವ ಘಟಕವನ್ನು ಪ್ರತ್ಯೇಕಿಸುವುದರಿಂದ ಬರುವ ಸಮಸ್ಯೆಗೆ ಒಂದು ಉದಾಹರಣೆಯಾಗಿದೆ. ಇದು, ಮಲೇರಿಯವನ್ನು ಉಂಟುಮಾಡುವ ಪರಾವಲಂಬಿ ಜೀವಿಗಳಲ್ಲಿ ಹೆಚ್ಚಿನ ಪ್ರತಿಶತವನ್ನು ನಾಶಮಾಡುತ್ತದಾದರೂ, ನಾಶವಾಗದಿರುವ ಪರಾವಲಂಬಿ ಜೀವಿಗಳು ಇತರ ಪರಾವಲಂಬಿ ಜೀವಿಗಳು ಸತ್ತ ಕಾರಣ ಬಹಳ ತ್ವರಿತವಾಗಿ ಹೆಚ್ಚಾಗುತ್ತವೆ. ಒಂದು ಪುಸ್ತಕವು ವಿವರಿಸುವುದು: “ಇಂಥ ನಿರೋಧಕವು ವೈದ್ಯಕೀಯ ಕ್ಷೇತ್ರದಲ್ಲಿ ಚಿಂತೆಗೀಡುಮಾಡುವ ಸಂಗತಿಯಾಗಿದೆ.” (g03 12/22)

[ಪುಟ 19ರಲ್ಲಿರುವ ಚಿತ್ರಗಳು]

ಈ ಬಿಳಿ ವಿಲೋ ಮರದಿಂದ ಆಸ್ಪಿರಿನ್‌ ದೊರೆಯುತ್ತದೆ

[ಕೃಪೆ]

USDA-NRCS PLANTS Database/Herman, D.E. et al. 1996. North Dakota tree handbook

[ಪುಟ 19ರಲ್ಲಿರುವ ಚಿತ್ರ]

ಕ್ವಿನೀನ್‌ ದೊರೆಯುವ ಸಿಂಕೋನ ಮರ

[ಕೃಪೆ]

Courtesy of Satoru Yoshimoto