ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಹಾನುಭೂತಿಯಿರುವ ಜನರು ಈಗಲೂ ಇದ್ದಾರೆ

ಸಹಾನುಭೂತಿಯಿರುವ ಜನರು ಈಗಲೂ ಇದ್ದಾರೆ

ಸಹಾನುಭೂತಿಯಿರುವ ಜನರು ಈಗಲೂ ಇದ್ದಾರೆ

ಮೆಕ್ಸಿಕೋದಲ್ಲಿರುವ ಎಚ್ಚರ! ಲೇಖಕರಿಂದ

ಬೈಬಲಿನಲ್ಲಿ, ಸಹಾನೂಭೂತಿಯುಳ್ಳ ವ್ಯಕ್ತಿಯಾಗಿದ್ದ ಒಬ್ಬ ಸಮಾರ್ಯದವನ ಕುರಿತಾದ ಕಥೆಯಿದೆ. (ಲೂಕ 10:​29-37) ಈ ಸಾಮ್ಯದಲ್ಲಿ ಯೇಸು ಕ್ರಿಸ್ತನು, ಅಗತ್ಯದಲ್ಲಿದ್ದ ತನ್ನ ಜೊತೆಮಾನವನಿಗೆ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಸಮಾರ್ಯದ ಆ ಮನುಷ್ಯನು ಎಷ್ಟರ ಮಟ್ಟಿಗೆ ಮುಂದುವರಿದನು ಎಂಬುದನ್ನು ತೋರಿಸಿದನು. ಸಹಾನುಭೂತಿಯಿರುವ ಇಂಥ ಜನರು ಈಗಲೂ ಇದ್ದಾರೋ? ಮೆಕ್ಸಿಕೋದ ಈ ವೃತ್ತಾಂತವನ್ನು ಪರಿಗಣಿಸಿರಿ.

ಬೆಟ್ವೆಲ್‌ ಮತ್ತು ಅವನ ಕುಟುಂಬವು ತಮ್ಮ ಪ್ರವಾಸದಿಂದ ಹಿಂದಿರುಗುತ್ತಿದ್ದು, ಮನೆಯನ್ನು ತಲಪಲು ಇನ್ನೇನು ಕೆಲವೇ ಕಿಲೊಮೀಟರ್‌ಗಳಷ್ಟು ಅಂತರವಿದ್ದಾಗ, ಹೆದ್ದಾರಿಯಲ್ಲಿ ನಡೆದ ಒಂದು ಭೀಕರ ವಾಹನ ಅಪಘಾತವನ್ನು ಕಣ್ಣಾರೆ ಕಂಡರು. ಆಗ ಸಹಾಯ ನೀಡಲಿಕ್ಕಾಗಿ ಅವರು ವಾಹನವನ್ನು ನಿಲ್ಲಿಸಿದರು. ಅಪಘಾತದಲ್ಲಿ ಒಳಗೂಡಿದ್ದ ಡ್ರೈವರ್‌ಗಳಲ್ಲಿ ಒಬ್ಬರು ವೈದ್ಯರಾಗಿದ್ದರು. ಚಿಕಿತ್ಸೆಗಾಗಿ ತನ್ನ ಗರ್ಭಿಣಿ ಪತ್ನಿಯನ್ನೂ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನೂ ಸಮೀಪದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೆಟ್ವೆಲ್‌ನನ್ನು ಕೇಳಿಕೊಂಡರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಮತ್ತು ತದನಂತರ ಇನ್ನೂ ಏನಾದರೂ ಹೆಚ್ಚಿನ ಸಹಾಯವನ್ನು ನೀಡಸಾಧ್ಯವಿದೆಯೋ ಎಂದು ನೋಡಲಿಕ್ಕಾಗಿ ಬೆಟ್ವೆಲ್‌ ಅಪಘಾತದ ಸ್ಥಳಕ್ಕೆ ಹಿಂದಿರುಗಿದನು.

ಬೆಟ್ವೆಲ್‌ ತಿಳಿಸುವುದು: “ಅಷ್ಟರಲ್ಲಿ ಫೆಡರಲ್‌ ಹೆದ್ದಾರಿ ಪೊಲೀಸರು ಬಂದಿದ್ದರು, ಮತ್ತು ಅಪಘಾತದಲ್ಲಿ ಒಬ್ಬರ ಸಾವು ಸಂಭವಿಸಿದ್ದರಿಂದ ಆ ವೈದ್ಯನನ್ನು ವಿಚಾರಣೆಗಾಗಿ ಠಾಣೆಯಲ್ಲಿ ಇರಿಸುವ ನಿರ್ಧಾರವಾಯಿತು. ಆಗ, ನಾನೇಕೆ ಅವನಿಗೆ ಸಹಾಯಮಾಡುತ್ತಿದ್ದೇನೆ ಎಂದು ಆ ವೈದ್ಯನು ನನ್ನನ್ನು ಕೇಳಿದಾಗ, ನಾವು ಯೆಹೋವನ ಸಾಕ್ಷಿಗಳಾಗಿದ್ದೇವೆ ಮತ್ತು ನಮ್ಮ ನೆರೆಯವರನ್ನು ಪ್ರೀತಿಸಬೇಕು ಎಂಬುದನ್ನು ಬೈಬಲಿನಿಂದ ಕಲಿತಿದ್ದೇವೆ ಎಂದು ನಾನು ವಿವರಿಸಿದೆ. ಅವನು ತನ್ನ ಪತ್ನಿ ಹಾಗೂ ಮಕ್ಕಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ನಾವು ಅವರನ್ನು ನೋಡಿಕೊಳ್ಳುತ್ತೇವೆ ಎಂದು ನಾನು ಅವನಿಗೆ ಹೇಳಿದೆ. ಕೃತಜ್ಞತಾಭರಿತ ಕಣ್ಣೀರಿನಿಂದ ಅವನು ತನ್ನ ಅಮೂಲ್ಯ ವಸ್ತುಗಳನ್ನು ನನ್ನ ಬಳಿ ಸುರಕ್ಷಿತವಾಗಿ ಇರಿಸಲಿಕ್ಕಾಗಿ ನನಗೆ ಕೊಟ್ಟನು.”

ಬೆಟ್ವೆಲ್‌ ಮತ್ತು ಅವನ ಕುಟುಂಬವು ವೈದ್ಯನ ಕುಟುಂಬವನ್ನು ತಮ್ಮ ಮನೆಗೆ ಕರೆದುಕೊಂಡುಹೋಗಿ, ಅನೇಕ ದಿನಗಳ ವರೆಗೆ ಅವರ ಪರಾಮರಿಕೆಮಾಡಿತು. ಬೆಟ್ವೆಲ್‌ ಈ ಸದವಕಾಶವನ್ನು ಉಪಯೋಗಿಸಿಕೊಂಡು ಅವರೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಿದನು. ಆ ವೈದ್ಯನು ಸೆರೆಯಿಂದ ಬಿಡುಗಡೆಮಾಡಲ್ಪಟ್ಟ ಬಳಿಕ, ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಕೃತಜ್ಞತೆ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದನು. ಅವನು ತನ್ನ ಸ್ಥಳದಲ್ಲಿ ಬೈಬಲ್‌ ಅಧ್ಯಯನವನ್ನು ಮುಂದುವರಿಸುವ ಆಶ್ವಾಸನೆಯನ್ನಿತ್ತನು, ಮತ್ತು ಒಂದುವೇಳೆ ತನ್ನ ಪತ್ನಿ ಗಂಡುಮಗುವಿಗೆ ಜನ್ಮನೀಡುವಲ್ಲಿ ಅದಕ್ಕೆ ಬೆಟ್ವೆಲ್‌ ಎಂದೇ ಹೆಸರಿಡುವೆನೆಂದು ಹೇಳಿದನು. ಬೆಟ್ವೆಲ್‌ ಮುಂದುವರಿಸಿದ್ದು: “ಈಗ, ಅಂದರೆ ಎರಡು ವರ್ಷಗಳ ಬಳಿಕ ಅವರನ್ನು ಸಂದರ್ಶಿಸುವ ಅವಕಾಶ ನಮಗೆ ದೊರಕಿತು. ಆಶ್ಚರ್ಯದ ಸಂಗತಿಯೇನೆಂದರೆ, ಅವರು ಬೈಬಲನ್ನು ಅಧ್ಯಯನಮಾಡುತ್ತಿದ್ದರು, ಮತ್ತು ಅವರ ಪುಟ್ಟ ಮಗನ ಹೆಸರು ಬೆಟ್ವೆಲ್‌ ಎಂದಾಗಿತ್ತು!” (g04 8/8)

[ಪುಟ 29ರಲ್ಲಿರುವ ಚಿತ್ರ]

ಬೆಟ್ವೆಲ್‌