ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಪೂರ್ವಗ್ರಹ “ಪೂರ್ವಗ್ರಹವು ಎಂದಾದರೂ ಅಂತ್ಯಗೊಳ್ಳುವುದೋ?” ಎಂಬ ಲೇಖನಮಾಲೆಗಾಗಿ ಬಹಳ ಧನ್ಯವಾದಗಳು. (ಅಕ್ಟೋಬರ್‌-ಡಿಸೆಂಬರ್‌ 2004) ಅದನ್ನು ಓದಿದಾಗ, ನನ್ನಲ್ಲಿ ಸಹ ಸ್ವಲ್ಪಮಟ್ಟಿಗೆ ಪೂರ್ವಗ್ರಹವಿದೆ ಎಂದು ನಾನು ಗ್ರಹಿಸಿದೆ. ಇದು ಹಾಸ್ಯಾಸ್ಪದ, ಏಕೆಂದರೆ ಯಾರು ಪೂರ್ವಗ್ರಹವನ್ನು ತೋರಿಸುತ್ತಾರೊ ಅಂಥವರನ್ನು ಕಂಡಾಗ ನನಗೆ ಅನೇಕವೇಳೆ ಕೋಪಬರುತ್ತಿತ್ತು. ಈ ಪತ್ರಿಕೆಯು ನನಗೆ ಸಹಾಯಮಾಡಬಲ್ಲದೆಂಬ ಭರವಸೆ ನನಗಿದೆ.

ಎಮ್‌. ಯೂ., ಯುನೈಟೆಡ್‌ ಸ್ಟೇಟ್ಸ್‌

ನಾನು ನನ್ನ ಸ್ವದೇಶದಿಂದ ಬಹಳ ದೂರದಲ್ಲಿ ವಾಸಿಸುತ್ತಿದ್ದೇನಾದರೂ, ನಾನು ಪೂರ್ವಗ್ರಹಕ್ಕೆ ಗುರಿಯಾಗಿದ್ದೇನೆಂದು ನನಗನಿಸುವುದಿಲ್ಲ. ಆದರೆ ಯಾರು ಇದಕ್ಕೆ ಗುರಿಯಾಗಿದ್ದಾರೊ ಅಂಥವರಿಗಾಗಿ ಕನಿಕರವನ್ನು ತೋರಿಸುವಂತೆ ಈ ಲೇಖನವು ನನಗೆ ಸಹಾಯಮಾಡಿತು. ಯೆಹೋವನು ಈ ಸಮಸ್ಯೆಗೆ ಬೇಗನೆ ಅಂತ್ಯವನ್ನು ತರಲಿರುವುದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ.

ಟಿ. ಜಿ., ನಾರ್ವೇ

ಪೂರ್ವಗ್ರಹ ಎಂಬ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಕ್ಕಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ. ಹಾಗಿದ್ದರೂ, ಪುಟ 8 ಮತ್ತು 9ರಲ್ಲಿ ನೀವು ಸಹ ಭೇದಭಾವವನ್ನು ತೋರಿಸಿದ್ದೀರೆಂದು ನಾನು ನೆನಸುತ್ತೇನೆ. ಅಲ್ಲಿ ನೀವು, ಗಾಯಗೊಂಡ ವ್ಯಕ್ತಿಗೆ ಸಹಾಯಮಾಡಲು ಬಯಸದ ಇಬ್ಬರು ಯೆಹೂದಿ ದಾರಿಹೋಕರ ಕುರಿತು ತಿಳಿಸಿದ್ದೀರಿ. ಯಾಕೆ ನೀವು ಯೆಹೂದ್ಯರನ್ನೇ ಆಯ್ಕೆಮಾಡಿದ್ದೀರಿ?

ಏಚ್‌. ಏಚ್‌., ಯುನೈಟೆಡ್‌ ಸ್ಟೇಟ್ಸ್‌ (g05 6/22)

“ಎಚ್ಚರ!” ಪ್ರತಿಕ್ರಿಯಿಸುವುದು: ನೆರೆಯವನಾದ ಸಮಾರ್ಯದವನ ಕುರಿತಾದ ಈ ಸಾಮ್ಯವನ್ನು ಹೇಳಿದವನು ಯೆಹೂದ್ಯನಾದ ಯೇಸುವೇ ಆಗಿದ್ದನು. ಯೇಸುವಿನ ದಿನಗಳಲ್ಲಿ, ಅನೇಕ ಯೆಹೂದ್ಯರು ಸಮಾರ್ಯದವರ ವಿರುದ್ಧ ಪೂರ್ವಗ್ರಹವನ್ನು ಬೆಳೆಸಿಕೊಂಡಿದ್ದರು. ಆದುದರಿಂದ ಇನ್ನೊಂದು ಕುಲಕ್ಕೆ ಸೇರಿದ ಒಬ್ಬ ವ್ಯಕ್ತಿಯು ಯೆಹೂದ್ಯನಿಗೆ ಒಳ್ಳೇ ನೆರೆಯವನಾಗಸಾಧ್ಯವಿದೆ ಎಂದು ತೋರಿಸುವ ಮೂಲಕ ಯೇಸು ತನ್ನ ಯೆಹೂದಿ ಕೇಳುಗರಿಗೆ ಒಂದು ಅತ್ಯಮೂಲ್ಯ ಪಾಠವನ್ನು ಕಲಿಸಿದನು.

ವಿವಾಹಪೂರ್ವ ಸಂಭೋಗ “ಯುವ ಜನರು ಪ್ರಶ್ನಿಸುವುದು . . . ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ?” ಎಂಬ ಲೇಖನವು ನನಗೆ ಬಲದ ಮೂಲವಾಗಿತ್ತು. (ಅಕ್ಟೋಬರ್‌-ಡಿಸೆಂಬರ್‌ 2004) ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಯುವ ಜನರ ಅನಿಸಿಕೆಗಳು ನನ್ನ ಅನಿಸಿಕೆಗಳಂತೆಯೇ ಇವೆ. ನನ್ನನ್ನು ಅತಿಯಾಗಿ ಪ್ರಭಾವಿಸಿದಂಥದ್ದು, ಯೆಹೋವನು ತನ್ನ ಸದ್ಭಕ್ತರಿಗೆ ಯಾವ ಶುಭವನ್ನೂ ದಯಪಾಲಿಸದೆ ಇರುವುದಿಲ್ಲ ಎಂದು ತಿಳಿಸುವ ಕೀರ್ತನೆ 84:11ರ ಮಾತುಗಳಾಗಿವೆ.

ಟಿ. ಯು., ಜರ್ಮನಿ

ಯೌವನಸ್ಥೆಯಾದ ನಾನು ಯೆಹೋವನ ದೃಷ್ಟಿಯಲ್ಲಿ ಯಾವಾಗಲೂ ಶುದ್ಧಳಾಗಿ ಉಳಿಯಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದ್ದೇನಾದರೂ ಕೆಲವೊಮ್ಮೆ ಇದು ಬಹಳ ಕಷ್ಟಕರವಾಗಿರುತ್ತದೆ. ಆದರೆ ಈ ಲೇಖನವು ನನ್ನ ದೃಢನಿಶ್ಚಯವನ್ನು ನವೀಕರಿಸಿತು ಮತ್ತು ಸೈತಾನ ಲೋಕದಿಂದ ಒತ್ತಡವನ್ನು ಎದುರಿಸುತ್ತಿರುವವಳು ನಾನೊಬ್ಬಳೇ ಅಲ್ಲ ಎಂಬುದನ್ನು ಸಹ ನನ್ನ ನೆನಪಿಗೆ ತಂದಿತು. ಯೆಹೋವನು ಯುವ ಜನರ ಬಗ್ಗೆ ಎಷ್ಟೊಂದು ಕಾಳಜಿವಹಿಸುತ್ತಾನೆ ಎಂಬುದನ್ನು ತಿಳಿಯುವುದು ನಿಜವಾಗಿಯೂ ಉತ್ತೇಜನದಾಯಕವಾಗಿದೆ.

ಎಫ್‌. ಬಿ., ಬೋಟ್ಸ್‌ವಾನ (g05 5/22)

“ಯುವ ಜನರು ಪ್ರಶ್ನಿಸುವುದು . . . ವಿವಾಹಪೂರ್ವ ಸಂಭೋಗದಿಂದ ನಾನು ಹೇಗೆ ದೂರವಿರಬಲ್ಲೆ?” (ಆಗಸ್ಟ್‌ 22, 2004) (ಇಂಗ್ಲಿಷ್‌) ಒಬ್ಬ ಶಿಕ್ಷಕಿಯೂ ಸಲಹೆಗಾರ್ತಿಯೂ ಆದ ನನಗೆ ಈ ಲೇಖನವು ಬಹಳ ಆಸಕ್ತಿದಾಯಕವಾಗಿತ್ತು. ತರಗತಿಯ ಚರ್ಚೆಯ ಸಮಯದಲ್ಲಿ, ವಿದ್ಯಾರ್ಥಿಗಳು ಯೆಹೋವ ದೇವರಿಂದ ಪರಿಶುದ್ಧರಾಗಿಯೂ ಯೋಗ್ಯರಾಗಿಯೂ ವೀಕ್ಷಿಸಲ್ಪಡಸಾಧ್ಯವಾಗುವಂತೆ ಮತ್ತು ವಿವಾಹಪೂರ್ವ ಸಂಭೋಗದಿಂದ ದೂರವಿದ್ದು ಅದರಿಂದ ಬರುವ ಸಮಸ್ಯೆಗಳನ್ನು ಎದುರಿಸದೆ ಅವರು ತಮ್ಮ ವಿದ್ಯಾಭ್ಯಾಸದಲ್ಲಿ ಒಳ್ಳೇ ರೀತಿಯಲ್ಲಿ ಪ್ರಗತಿಮಾಡುವಂತೆ ಸಹಾಯಮಾಡಲು ಈ ಪತ್ರಿಕೆಯಲ್ಲಿದ್ದ ಉಪಯುಕ್ತಕರ ಅಂಶಗಳನ್ನು ನಾನು ಅವರಿಗೆ ತಿಳಿಸಿದೆ. ಅನೇಕ ವಿದ್ಯಾರ್ಥಿಗಳು ಆಸಕ್ತಿಯನ್ನು ತೋರಿಸಿದರು ಮತ್ತು ಬೈಬಲಿನ ಕುರಿತು ಹೆಚ್ಚನ್ನು ಕಲಿಯಲು ಬಯಸಿದರು. ಮಾತ್ರವಲ್ಲದೆ ನಾನು ಬೇರೆ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೂ ಇದರ ಕುರಿತು ತಿಳಿಸುವಂತೆ ಇತರ ಅಧ್ಯಾಪಕರು ಈಗ ಕೇಳಿಕೊಳ್ಳುತ್ತಿದ್ದಾರೆ. ಪ್ರತಿವಾರ ನಾನು ನನ್ನ ತರಗತಿಯ ವಿದ್ಯಾರ್ಥಿಗಳೊಂದಿಗೆ ಯುವ ಜನರ ಪ್ರಶ್ನೆಗಳು ಪುಸ್ತಕದಿಂದ ವಿವಿಧ ವಿಷಯಗಳ ಕುರಿತು ಚರ್ಚಿಸುತ್ತೇನೆ.

ಬಿ. ಸಿ., ಮೊಸಾಂಬೀಕ್‌

ನಾನು 25 ವರುಷದವಳು ಮತ್ತು ನೈತಿಕವಾಗಿ ಶುದ್ಧಳಾಗಿ ಉಳಿಯಲು ನಾನು ಇಷ್ಟರ ತನಕ ನನ್ನಿಂದಾಷ್ಟು ಪ್ರಯತ್ನವನ್ನು ಮಾಡುತ್ತಾ ಇದ್ದೇನೆ. ಈಗ ನಾನು, ಒಂದು ಗೌರವಾರ್ಹವಾದ ಮದುವೆ ಜೀವಿತವನ್ನು ಪ್ರವೇಶಿಸುವ ನನ್ನ ನಿರ್ಣಯದಲ್ಲಿ ಇನ್ನಷ್ಟು ದೃಢವಾಗಿದ್ದೇನೆ. ನಿಮ್ಮ ಉತ್ತಮ ಕೆಲಸವನ್ನು ಮುಂದುವರಿಸುತ್ತಾ ಇರಿ.

ಎಫ್‌. ಕೆ., ಯುಗಾಂಡ (g05 6/8)