ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಳಿವಿನ ತಳಿಗೆ ಉಳಿವಿನ ತಾಣ

ಅಳಿವಿನ ತಳಿಗೆ ಉಳಿವಿನ ತಾಣ

ಅಳಿವಿನ ತಳಿಗೆ ಉಳಿವಿನ ತಾಣ

ಸ್ಪೆಯಿನ್‌ನ ಎಚ್ಚರ! ಲೇಖಕರಿಂದ

ಜಗತ್ತಿನಾದ್ಯಂತ ಸಸ್ಯ ಮತ್ತು ಪ್ರಾಣಿವರ್ಗಗಳು ಕಣ್ಮರೆಯಾಗುತ್ತಿರುವ ಭೀತಿ ಹೆಚ್ಚುತ್ತಲಿದೆ. ವರ್ಷಗಳು ಉರುಳಿದಂತೆ ಸಾವಿರಾರು ಸಸ್ಯ ಮತ್ತು ಪ್ರಾಣಿಗಳು ಅಳಿವಿನಂಚಿನಲ್ಲಿವೆ ಎಂಬುದು ಕೆಲವು ವಿಜ್ಞಾನಿಗಳ ಅಭಿಪ್ರಾಯ. ಮುಂಚೆ ವಿಶಾಲ ಕ್ಷೇತ್ರದಲ್ಲಿ ಸಮೃದ್ಧವಾಗಿ ಬದುಕಿದ್ದ ಪ್ರಾಣಿ ಮತ್ತು ಸಸ್ಯಗಳಿಗೆ ಇಂದು ಪರ್ವತಶ್ರೇಣಿಗಳು ಅತ್ಯಾವಶ್ಯಕ ಆಶ್ರಯ ಒದಗಿಸುತ್ತಿರುವುದು ಹಿತಕರ. ಹಾಗಿದ್ದರೂ ಈ ಸುರಕ್ಷಿತ ತಾಣದಲ್ಲಿ ಸಹ ಈ ಜೀವಿಸಂಕುಲಕ್ಕೆ ಮಾಲಿನ್ಯ ಮತ್ತು ಮಾನವಾಕ್ರಮಣದ ಭಯ ತಪ್ಪಿದ್ದಲ್ಲ. ಪ್ರಾಯಶಃ ಇದು ಹೆಚ್ಚು ಪ್ರತ್ಯಕ್ಷವಾಗಿ ತೋರಿಬರುವುದು ಅತ್ಯಂತ ದಟ್ಟ ಜನಸಾಂದ್ರತೆಯುಳ್ಳ ಭೂಭಾಗಗಳಲ್ಲಿ ಒಂದಾದ ಯುರೋಪಿನಲ್ಲೇ.

ಸ್ಪೆಯಿನ್‌ನಿಂದ ಫ್ರಾನ್ಸ್‌ ಅನ್ನು ವಿಭಾಗಿಸುವ ಪರ್ವತಶ್ರೇಣಿಯಾದ ಪೈರನೀಸ್‌ನಲ್ಲಿ ಹಲವಾರು ರಾಷ್ಟ್ರೀಯ ಉದ್ಯಾನವನಗಳು ಸ್ಥಳಿಕ ಸಸ್ಯಸಂಪತ್ತು ಮತ್ತು ಪ್ರಾಣಿಸಂಕುಲಕ್ಕೆ ಆಶ್ರಯ ಒದಗಿಸುತ್ತಲಿವೆ. ಈ ನಿರ್ಭಯ ಪ್ರದೇಶಗಳಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಜೀವಪ್ರಭೇದಗಳನ್ನು ಕಣ್ಣಾರೆ ಕಾಣುವ ಸಂದರ್ಭವು ಸಂದರ್ಶಕರಿಗೆ ದೊರೆಯುತ್ತದೆ. ಈ ಉದ್ಯಾನವನಗಳಲ್ಲಿ ಏನೇನು ಇವೆ ಎಂಬುದರ ಕಿರುನೋಟ ಕೆಳಗಿದೆ.

ಉಳಿವಿಗಾಗಿ ಹೋರಾಡುವ ತಳಿಗಳು

ಪುಷ್ಪಗಳು. ಅತಿ ಸುಂದರವಾದ ಕೆಲವು ಕಾಡುಪುಷ್ಪಗಳು ಸಮುದ್ರ ಮಟ್ಟಕ್ಕಿಂತ 1,500 ಮೀಟರ್‌ಗಳಿಗಿಂತಲೂ ಹೆಚ್ಚು ಉನ್ನತ ಪ್ರದೇಶದಲ್ಲಿ ಬೆಳೆಯುತ್ತವೆ. ಹಿಮ ಕಿರಿಯಾತು (ಸ್ನೊ ಜನ್‌ಷನ್‌) ಮತ್ತು ಹೊಳಪಿನ ನೀಲವರ್ಣದ ದಳಗಳುಳ್ಳ ತುತ್ತೂರಿ ಕಿರಿಯಾತು (1) (ಟ್ರಂಪೆಟ್‌ ಜನ್‌ಷನ್‌) ಎಂಬ ಪುಷ್ಪಗಳು ಮರಗಳಿಲ್ಲದ ಬೆಟ್ಟದ ಇಳಿಜಾರು ಪ್ರದೇಶದಲ್ಲೂ ರತ್ನಗಂಬಳಿಯಂತೆ ಹಾಸಿರುತ್ತವೆ. ಇನ್ನೂ ಕೆಳಗೆ ಇಳಿಜಾರುಗಳಲ್ಲಿ ಬೀಚ್‌ ಮರಗಳ ನಡುವೆ ಅಳಿವಿನಂಚಿನ ಸೀತೆಹೂವಿನ (2) (ಲೇಡಿಸ್‌-ಸ್ಲಿಪರ್ಸ್‌) ತೋಪು ಈಗಲೂ ಕಂಗೊಳಿಸುತ್ತದೆ. ನೂರಾರು ನಿಸರ್ಗ ಪ್ರೇಮಿಗಳು ಪ್ರತಿ ವರ್ಷ ಈ ತೋಪನ್ನು ಸಂದರ್ಶಿಸುತ್ತಿದ್ದಾರೆ. ಆದ್ದರಿಂದ ಸ್ಥಳಿಕ ಅರಣ್ಯಾಧಿಕಾರಿಗಳು ದಿನಕ್ಕೆ 14 ತಾಸು ಪಹರೆ ಮಾಡಿ ಈ ಅಮೂಲ್ಯ ಪುಷ್ಪಗಳನ್ನು ಯಾರೂ ಕೀಳದಂತೆ ಅಥವಾ ಅವಕ್ಕೆ ಯಾವ ಹಾನಿಯೂ ಆಗದಂತೆ ನೋಡಿಕೊಳ್ಳುತ್ತಾರೆ.

ಚಿಟ್ಟೆಗಳು. ಹೇರಳ ಕಾಡಕುಸುಮಗಳಿಂದ ತುಂಬಿದ ಅಂದವಾದ ಆಲ್ಪೈನ್‌ ತೋಪುಗಳು ಬಣ್ಣಬಣ್ಣದ ಚಿಟ್ಟೆಗಳಿಗೆ ಆಶ್ರಯಸ್ಥಾನವನ್ನು ಒದಗಿಸುತ್ತವೆ. ರೆಕ್ಕೆಗಳಲ್ಲಿ ಕಡು ಕೆಂಪು ಚುಕ್ಕೆಗಳುಳ್ಳ ದೊಡ್ಡ ದೊಡ್ಡ ಅಪಲ್ಲೋ ಚಿಟ್ಟೆಗಳು (3) ‘ತಿಸಲ್‌’ ಹೂಗಳನ್ನು ಆಸ್ವಾದಿಸುತ್ತಾ ಪಟಪಟನೆ ಸುಳಿಯುತ್ತವೆ. ಲೈಕೇನಿಡೇ ಪ್ರಭೇದಕ್ಕೆ ಸೇರಿದ ನೀಲ ಚಿಟ್ಟೆ ಮತ್ತು ತಾಮ್ರವರ್ಣದ ಚಿಟ್ಟೆಗಳು (4) ಸದಾ ಚಿಕ್ಕಚಿಕ್ಕ ಹೂಗಳನ್ನು ಹುಡುಕುತ್ತಿರುತ್ತವೆ. ಕಡುಗೆಂಪು ಅಥವಾ ಬಣ್ಣಬಣ್ಣದ ಚಿಟ್ಟೆಗಳು ಮತ್ತು ಆಮೆಚಿಪ್ಪಿನ ಚಿಟ್ಟೆಗಳು ಇಳಿಜಾರುಗಳ ಎತ್ತರಕ್ಕೆ ಹಾರುತ್ತಾ ತ್ವರಿತವಾಗಿ ಗಸ್ತುತಿರುಗುತ್ತವೆ.

ಪ್ರಾಣಿಗಳು. ಯುರೋಪಿನ ಅನೇಕ ದೊಡ್ಡದೊಡ್ಡ ಸಸ್ತನಿ ಪ್ರಾಣಿಗಳು ಒಂದೊಮ್ಮೆ ಆ ಖಂಡದ ವಿಶಾಲ ಪ್ರದೇಶದಲ್ಲೆಲ್ಲೂ ತಿರುಗಾಡುತ್ತಿದ್ದವು. ಆದರೆ ಅವುಗಳಲ್ಲಿ ಕೆಲವು ಅಳಿವಿನಂಚಿಗೆ ಸೇರುವಷ್ಟರ ಮಟ್ಟಿಗೆ ಬೇಟೆಮಾಡಲ್ಪಟ್ಟಿವೆ. ನರಿಗಳು, ಕರಡಿಗಳು, ಹೆಬ್ಬೆಕ್ಕು (5), ಕಾಡುಕೋಣ, ಕಾಡುಜಿಂಕೆ, ಮತ್ತು ಕಾಡುಮೇಕೆಗಳೇ (6) ಮುಂತಾದವುಗಳು ಈಗ ಕೆಲವೇ ಪರ್ವತಶ್ರೇಣಿಗಳಲ್ಲಿ ಅಥವಾ ತೀರಾ ಉತ್ತರ ಭಾಗದಲ್ಲಿ ಪಾರಾಗಿ ಉಳಿದಿವೆ. ಈ ಪೈರೇನಿಯನ್‌ ಉಳಿವಿನ ತಾಣದಲ್ಲಿರುವ ಈ ಘನಗಾಂಭೀರ್ಯದ ಪ್ರಾಣಿಗಳು ಈ ಪರ್ವತಗಳಲ್ಲಿ ಒಮ್ಮೆ ತುಂಬಿತುಳುಕಿದ್ದ ವನ್ಯಜೀವಿಗಳನ್ನು ಸ್ಫುಟವಾಗಿ ನೆನಪಿಗೆ ತರುತ್ತವೆ. ಉಳಿದಿರುವ ಈ ಕೆಲವು ಪ್ರಾಣಿಗಳಿಗೆ ಮುಂದೇನಾಗುವುದೋ ಎಂಬ ಭಯವು ಕೆಲವು ವಿಚಾರಪರ ಸಂದರ್ಶಕರನ್ನು ಕಾಡುತ್ತದೆ.

ಯಾರಿಗೆ ‘ಪರ್ವತ ಶಿಖರಗಳು ಸೇರಿವೆಯೋ’ ಆ ನಿರ್ಮಾಣಿಕನಾದ ಯೆಹೋವ ದೇವರು ಬೆಟ್ಟದ ಶಿಖರಗಳ ವನ್ಯಜೀವಿಗಳನ್ನು ಪರಾಮರಿಸುವನೆಂದು ನಾವು ಭರವಸೆಯಿಡಸಾಧ್ಯವಿದೆ. (ಕೀರ್ತನೆ 95:4) ಯಾಕೆಂದರೆ, ಕೀರ್ತನೆಗಳೊಂದರಲ್ಲಿ ದೇವರು ಅನ್ನುವುದು: “ಕಾಡಿನಲ್ಲಿರುವ ಸರ್ವಮೃಗಗಳೂ ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. ಬೆಟ್ಟಗಳ ಪಕ್ಷಿಗಳನ್ನೆಲ್ಲಾ ಬಲ್ಲೆ; ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು.” (ಕೀರ್ತನೆ 50:10, 11) ಭೂಮಿಯ ಬಗ್ಗೆ ಮತ್ತು ಅದರ ಜೀವಿಗಳ ಬಗ್ಗೆ ಯೆಹೋವನಿಗಿರುವ ಚಿಂತನೆಯು, ಬೆಟ್ಟದ ಪಶುಗಳು ಸಂಪೂರ್ಣವಾಗಿ ನಾಶವಾಗುವಂತೆ ಆತನೆಂದೂ ಬಿಡಲಾರನೆಂದು ನಂಬಲು ನಮಗೆ ಆಧಾರವನ್ನು ಕೊಡುತ್ತದೆ. (g 3/09)

[ಪುಟ 21ರಲ್ಲಿರುವ ಚಿತ್ರವಿವರಣೆ]

1

2

3

4

5

6

[ಪುಟ 21ರಲ್ಲಿರುವ ಚಿತ್ರ ಕೃಪೆ]

La Cuniacha