ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಳಲಿ ಬೆಂಡಾದ ವಿದ್ಯಾರ್ಥಿಗಳು

ಬಳಲಿ ಬೆಂಡಾದ ವಿದ್ಯಾರ್ಥಿಗಳು

ಬಳಲಿ ಬೆಂಡಾದ ವಿದ್ಯಾರ್ಥಿಗಳು

ಅವಳ ಹೆಸರು ಜೆನಿಫರ್‌. ವಯಸ್ಸು ಹದಿನೇಳು. ಓದಿನಲ್ಲಿ ಅವಳು ತುಂಬ ಚೂಟಿ. ಕ್ಲಾಸ್‌ನಲ್ಲಿ ಯಾವಾಗಲೂ ಪ್ರಥಮ ಸ್ಥಾನ. ಅಲ್ಲದೆ ಶಾಲೆಯ ಅನೇಕ ಆಟೋಟ, ಸಂಗೀತ-ನೃತ್ಯ ಸ್ಪರ್ಧೆಗಳಲ್ಲೂ ಅವಳು ಮುಂದು. ಶಿಕ್ಷಕರಿಗೆ, ಸಲಹೆಗಾರರಿಗೆ ಅವಳೆಂದರೆ ಅಚ್ಚುಮೆಚ್ಚು. ಆದರೆ ಪದವಿ ಪಡೆಯುವ ಒಂದು ವರ್ಷಕ್ಕೆ ಮುಂಚೆ ಅವಳಿಗೆ ತೀವ್ರ ತಲೆ ನೋವು, ಓಕರಿಕೆ ಶುರುವಾಯಿತು. ಪಾಠ ಕಲಿಯಲು ತಾನು ಗಂಟೆಗಟ್ಟಲೆ ಓದಿದ್ದು ಮತ್ತು ನಿದ್ರೆಗೆಟ್ಟದ್ದೇ ಇದಕ್ಕೆ ಕಾರಣ ಎಂದವಳ ಅನಿಸಿಕೆ.

ಈ ಸಮಸ್ಯೆ ಜೆನಿಫರ್‌ ಒಬ್ಬಳಿಗೇ ಅಲ್ಲ. ಶಾಲೆಯಲ್ಲಿ ಒತ್ತಡದ ಸುಳಿಗೆ ಸಿಲುಕಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಬರುತ್ತಿದೆ. ಕೆಲವರು ಮನೋವೈದ್ಯರ ಸಹಾಯವನ್ನೂ ಕೋರುತ್ತಿದ್ದಾರೆ. ಫಲಿತಾಂಶವಾಗಿ, ಅಮೆರಿಕನ್‌ ಶಿಕ್ಷಕ ವೃಂದವು ಶಾಲೆಯಲ್ಲಿ ಒತ್ತಡದ ತೀವ್ರ ಬಿಗುಪಿನ ಪರಿಸರವನ್ನು ಸಡಿಲಿಸಲು ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಆ ಕಾರ್ಯಕ್ರಮವನ್ನು ‘ಚ್ಯಾಲೆಂಜ್‌ ಸಕ್ಸಸ್‌’ (ಮಾನಸಿಕ, ದೈಹಿಕ ಸ್ವಾಸ್ಥ್ಯದ ಸವಾಲು) ಎಂದು ಕರೆಯಲಾಯಿತು.

ನೀವೂ ಒಬ್ಬ ವಿದ್ಯಾರ್ಥಿಯಾಗಿರುವಲ್ಲಿ ಬಹುಶಃ ಜೆನಿಫರ್‌ಳಂತೆ ಒತ್ತಡಕ್ಕೆ ಸಿಲುಕಿ ಬಳಲಿ ಬೆಂಡಾಗಿ ಹೋಗಿರಬಹುದು. ಹೆತ್ತವರಾಗಿದ್ದಲ್ಲಿ, ನಿಮ್ಮ ಮಗ ಅಥವಾ ಮಗಳು ಶಾಲೆಯಲ್ಲಿ ಅನುಭವಿಸುತ್ತಿರುವ ತೀವ್ರ ಒತ್ತಡವನ್ನು ನೋಡಿ ಹತಾಶರಾಗುತ್ತಿರಲೂಬಹುದು. ಹೀಗಿರಲಾಗಿ ವಿದ್ಯಾರ್ಥಿಗಳೂ ಹೆತ್ತವರೂ ಮಾರ್ಗದರ್ಶನಕ್ಕಾಗಿ ನೋಡಬಲ್ಲ ಯಶಸ್ವಿಕರ ಮೂಲವು ಎಲ್ಲಿಯಾದರೂ ಇದೆಯೋ? (g 4/09)