ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಧಾರ್ಮಿಕ ನಂಬಿಕೆಯನ್ನು ತಿಳಿಸಲು ಭಯವೇಕೆ?

ನನ್ನ ಧಾರ್ಮಿಕ ನಂಬಿಕೆಯನ್ನು ತಿಳಿಸಲು ಭಯವೇಕೆ?

ಯುವ ಜನರು ಪ್ರಶ್ನಿಸುವುದು

ನನ್ನ ಧಾರ್ಮಿಕ ನಂಬಿಕೆಯನ್ನು ತಿಳಿಸಲು ಭಯವೇಕೆ?

“ಶಾಲೆಯಲ್ಲಿ ನನ್ನ ಧಾರ್ಮಿಕ ನಂಬಿಕೆಗಳ ಕುರಿತು ಮಾತಾಡಲು ಹಲವಾರು ಸದವಕಾಶಗಳು ಸಿಕ್ಕಿದವಾದರೂ ನಾನು ಅವನ್ನು ಬಿಟ್ಟುಬಿಟ್ಟೆ.” —ಕ್ಯಾಲಬ್‌. *

“ವಿಕಾಸದ ಕುರಿತು ನಮ್ಮ ಅಭಿಪ್ರಾಯವೇನೆಂದು ಟೀಚರ್‌ ಕೇಳಿದರು, ನನ್ನ ಧಾರ್ಮಿಕ ನಂಬಿಕೆಯನ್ನು ಹಂಚಿಕೊಳ್ಳಲು ಇಂದೊಂದು ಉತ್ತಮ ಅವಕಾಶವೆಂದು ನನಗೆ ಗೊತ್ತಿತ್ತು. ಆದರೆ ಭಯದಿಂದ ಬೆಚ್ಚಿ ಮೂಕಳಾದೆ. ಆಮೇಲಂತೂ ತುಂಬ ಬೇಸರವಾಯಿತು.” —ಜ್ಯಾಸ್ಮಿನ್‌.

ನೀವು ಕ್ರೈಸ್ತ ಯುವ ವ್ಯಕ್ತಿಯಾಗಿರುವಲ್ಲಿ ಕ್ಯಾಲಬ್‌ ಮತ್ತು ಜ್ಯಾಸ್ಮಿನ್‌ರಂಥ ಅನುಭವ ನಿಮಗೂ ಆಗಿರಬಹುದು. ಅವರಂತೆ ನಿಮಗೂ ಬೈಬಲ್‌ ಸತ್ಯಗಳು ತುಂಬ ಅಚ್ಚುಮೆಚ್ಚು. ಇತರರಿಗೆ ತಿಳಿಸಲೂ ಬಯಸುತ್ತೀರಿ. ಆದರೆ ಆ ಕುರಿತು ಮಾತಾಡಲು ಎಲ್ಲಿಲ್ಲದ ಭಯ. ನಿಮಗೆ ಧೈರ್ಯ ಬೇಕು ನಿಜ. ಆದರೆ ಅದನ್ನು ಪಡೆಯುವುದು ಹೇಗೆ? ಪ್ರತಿ ಶಾಲಾ ವರ್ಷಗಳಲ್ಲಿ ಈ ಕೆಳಗಿನ ಹೆಜ್ಜೆಗಳನ್ನು ತಕ್ಕೊಳ್ಳಿರಿ.

1. ಭಯದ ಕಾರಣಗಳನ್ನು ತಿಳಿಸಿರಿ. ನಿಮ್ಮ ಧಾರ್ಮಿಕ ನಂಬಿಕೆಯ ಕುರಿತು ಹಂಚಿಕೊಳ್ಳುವುದನ್ನು ನೆನಸುವಾಗ ಆಕಾಶವೇ ತಲೆ ಮೇಲೆ ಬಿದ್ದಂತೆ ನಿಮಗನಿಸಬಹುದು! ಆದರೆ ಭಯದ ಕಾರಣಗಳನ್ನು ಒಂದುವೇಳೆ ನೀವು ಬರೆದಿಡುವುದಾದರೆ ಸ್ವಲ್ಪಮಟ್ಟಿಗೆ ಅದನ್ನು ನಿವಾರಿಸಸಾಧ್ಯವಿದೆ.

ಕೆಳಗಿನ ವಾಕ್ಯವನ್ನು ಪೂರ್ತಿಗೊಳಿಸಿ.

ಶಾಲೆಯಲ್ಲಿ ನನ್ನ ಧಾರ್ಮಿಕ ನಂಬಿಕೆಗಳ ಕುರಿತು ಮಾತಾಡಿದಲ್ಲಿ ಹೀಗಾಗಬಹುದು:

.....

ಇತರ ಯುವ ಕ್ರೈಸ್ತರಿಗೆ ನಿಮ್ಮಂತೆಯೇ ಭಯವಿದೆ ಎಂದು ತಿಳಿಯುವುದರಿಂದ ತುಸು ನೆಮ್ಮದಿ ದೊರಕೀತು. ಉದಾಹರಣೆಗೆ 14 ವರ್ಷದ ಕ್ರಿಸ್ಟಫರ್‌, “ಮಕ್ಕಳು ನನ್ನನ್ನು ನೋಡಿ ನಗಾಡಿ ನಾನೊಂದು ವಿಚಿತ್ರ ಪ್ರಾಣಿಯೆಂದು ಎಲ್ಲರಿಗೂ ಹೇಳಿಬಿಟ್ಟಾರು” ಎನ್ನುತ್ತಾನೆ. ಮತ್ತು ಮೇಲೆ ತಿಳಿಸಲಾದ ಕ್ಯಾಲಬ್‌ ಹೇಳುವುದು: “ಯಾರಾದರು ಪ್ರಶ್ನೆ ಕೇಳಿಬಿಟ್ಟರೆ ಉತ್ತರ ಏನು ಹೇಳುವುದೆಂದೇ ನನಗೆ ಭಯ.”

2. ಸವಾಲನ್ನು ಜಯಿಸಿರಿ. ನಿಮಗೆ ವಿನಾಕಾರಣ ಭಯ ಎಂದು ಇದರರ್ಥವೋ? ಹಾಗೆ ನೆನಸುವ ಅಗತ್ಯವಿಲ್ಲ. “ಕೆಲವು ಮಕ್ಕಳು ನನ್ನ ಧಾರ್ಮಿಕ ನಂಬಿಕೆಯಲ್ಲಿ ಆಸಕ್ತಿಯಿರುವಂತೆ ನಟಿಸಿದರು. ಆದರೆ ಕೊನೆಗೆ ನನ್ನ ಮಾತಿಗೆ ಒಂದಕ್ಕೆರಡು ಕೂಡಿಸಿ ಬೇರೆಯವರ ಮುಂದೆ ನನ್ನನ್ನು ಅಣಕಿಸಿದರು” ಎಂದಳು ಆಶ್ಲೀ. ನಿಕೋಲ್‌ ಎಂಬ 17 ವರ್ಷದ ಹುಡುಗಿಗೂ ತದ್ರೀತಿಯ ಅನುಭವವಾಗಿತ್ತು: “ಒಬ್ಬ ಹುಡುಗ ತನ್ನ ಬೈಬಲಿನ ವಚನವನ್ನು ನನ್ನ ಬೈಬಲ್‌ನೊಂದಿಗೆ ಹೋಲಿಸಿದಾಗ ವಾಕ್ಯರಚನೆ ಬೇರೆಯಾಗಿತ್ತು. ನಿನ್ನ ಬೈಬಲ್‌ ಬೇರೆ, ನನ್ನ ಬೈಬಲ್‌ ಬೇರೆ ಎಂದ. ನನಗೆ ದಂಗುಬಡಿದಂತಾಯಿತು! ಏನು ಹೇಳುವುದೆಂದೇ ತೋಚಲಿಲ್ಲ.” *

ಇಂಥಾ ಸನ್ನಿವೇಶಗಳು ತುಂಬಾ ಭಯಹುಟ್ಟಿಸುವಂತೆ ಕಾಣಬಹುದು! ಆದರೆ ಅವುಗಳಿಂದ ನುಣುಚಿಕೊಳ್ಳುವ ಬದಲು ಅವನ್ನು ನಿಮ್ಮ ಕ್ರೈಸ್ತ ಜೀವಿತದ ಸಾಮಾನ್ಯ ಸವಾಲುಗಳೆಂದು ಪರಿಗಣಿಸಿ. (2 ತಿಮೊಥೆಯ 3:12) “ತನ್ನ ಹಿಂಬಾಲಕರು ಹಿಂಸಿಸಲ್ಪಡುವರು ಎಂದು ಯೇಸು ಹೇಳಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ನಮ್ಮನ್ನು ಅಥವಾ ನಮ್ಮ ಧಾರ್ಮಿಕ ನಂಬಿಕೆಗಳನ್ನು ಮೆಚ್ಚುವರೆಂದು ಅಪೇಕ್ಷಿಸಸಾಧ್ಯವಿಲ್ಲ” ಎಂದನು 13 ವರ್ಷದ ಮ್ಯಾಥ್ಯೂ.—ಯೋಹಾನ 15:20.

3. ಪ್ರಯೋಜನಗಳನ್ನು ಮನಸ್ಸಿನಲ್ಲಿಡಿ. ಕೆಟ್ಟದೆಂದು ತೋರುವ ಅನುಭವಗಳಿಂದ ಒಳ್ಳೆದೇನಾದರೂ ಸಿಗಬಹುದೋ? ಹೌದೆನ್ನುತ್ತಾಳೆ 21 ವರ್ಷದ ಆ್ಯಂಬರ್‌. “ಬೈಬಲನ್ನು ಗೌರವಿಸದ ಜನರೊಂದಿಗೆ ನಮ್ಮ ನಂಬಿಕೆಯ ಕುರಿತು ಮಾತಾಡುವುದು ಕಷ್ಟದ ಕೆಲಸ. ಆದರೆ ಅದು ನಿಮ್ಮ ನಂಬಿಕೆಯನ್ನು ನೀವು ಇನ್ನೂ ಹೆಚ್ಚಾಗಿ ಪರಿಶೋಧಿಸಿ ತಿಳಿಯುವಂತೆ ನಿಮಗೆ ಸಹಾಯಮಾಡುವುದು.”—ರೋಮನ್ನರಿಗೆ 12:2.

ಒಂದನೇ ಹೆಜ್ಜೆಯಲ್ಲಿ ವಿವರಿಸಲಾದ ಸನ್ನಿವೇಶವನ್ನು ಪುನಃ ಗಮನಿಸಿ. ಆ ಸನ್ನಿವೇಶದಿಂದ ಬರಸಾಧ್ಯವಿರುವ ಕಡಿಮೆಪಕ್ಷ ಎರಡು ಒಳಿತನ್ನು ಯೋಚಿಸಿ ಈ ಕೆಳಗೆ ಬರೆಯಿರಿ.

1 .....

2 .....

ಸುಳಿವು: ನಿಮ್ಮ ಧಾರ್ಮಿಕ ನಂಬಿಕೆಯನ್ನು ತಿಳಿಸುವ ಮೂಲಕ ಸಮವಯಸ್ಕರು ಹಾಕುವ ಒತ್ತಡವನ್ನು ಹೇಗೆ ಕಡಿಮೆಗೊಳಿಸಬಹುದು? ಅದು ನಿಮ್ಮ ಆತ್ಮಸ್ಥೈರ್ಯವನ್ನು ಹೇಗೆ ಪ್ರಭಾವಿಸಬಹುದು? ಯೆಹೋವನ ಕಡೆಗಿರುವ ನಿಮ್ಮ ಭಾವನೆಗಳನ್ನು ಮತ್ತು ಆತನಿಗೆ ನಿಮ್ಮ ಮೇಲಿರುವ ಅನಿಸಿಕೆಗಳನ್ನು ಹೇಗೆ ಪ್ರಭಾವಿಸುತ್ತದೆ?—ಜ್ಞಾನೋಕ್ತಿ 23:15.

4. ತಯಾರಾಗಿರಿ. “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ” ಎನ್ನುತ್ತದೆ ಜ್ಞಾನೋಕ್ತಿ 15:28. ನೀವೇನನ್ನು ಹೇಳಲಿದ್ದೀರೋ ಅದನ್ನು ಮನನಮಾಡಿರಿ, ಅಲ್ಲದೆ ಬೇರೆಯವರು ಕೇಳಬಹುದಾದ ಪ್ರಶ್ನೆಗಳ ಕುರಿತೂ ಯೋಚಿಸಿರಿ. ಆ ವಿಷಯಗಳ ಕುರಿತು ಸಂಶೋಧನೆ ಮಾಡಿ ಸರಳ ಭಾಷೆಯಲ್ಲಿ ಉತ್ತರಿಸುವಂತೆ ತಯಾರುಮಾಡಿ.—27ನೇ ಪುಟದಲ್ಲಿರುವ “ಉತ್ತರ ಕೊಡಲು ಸಿದ್ಧರಾಗಿರ್ರಿ” ಎಂಬ ಚೌಕ ನೋಡಿ.

5. ಶುರುಮಾಡಿ. ನಿಮ್ಮ ಧಾರ್ಮಿಕ ನಂಬಿಕೆಗಳ ಕುರಿತು ಮಾತಾಡಲು ಸಿದ್ಧರಾದಿರಿ ಎಂದ ಮೇಲೆ ಅದನ್ನು ಶುರುಮಾಡುವುದು ಹೇಗೆ? ನಿಮಗೆ ಹಲವಾರು ಆಯ್ಕೆಗಳಿವೆ. ಒಂದರ್ಥದಲ್ಲಿ ನಂಬಿಕೆ ಹಂಚಿಕೊಳ್ಳುವುದನ್ನು ಈಜುವಿಕೆಗೆ ಹೋಲಿಸಬಹುದು. ಕೆಲವರು ಸುಲಭವಾಗಿ ನೀರಿಗಿಳಿಯುತ್ತಾರೆ. ಇತರರು ದುಡುಮ್ಮನೆ ಧುಮುಕುತ್ತಾರೆ. ಅದೇ ರೀತಿ ನೀವು ಸಹ ಧರ್ಮಕ್ಕೆ ಸಂಬಂಧಿಸದ ವಿಷಯಗಳ ಕುರಿತು ಮಾತಾಡಿ ಮೆಲ್ಲಮೆಲ್ಲನೆ ಆ ವ್ಯಕ್ತಿಗೆ ಆಸಕ್ತಿಯಿದೆಯೋ ಎಂದು ನೋಡಬಹುದು. ಆದರೆ ಏನು ತಪ್ಪಾಗುವುದೋ ಎಂಬ ಭಯ ನಿಮ್ಮನ್ನು ಕಾಡಿಸಿದ್ದಲ್ಲಿ ನೇರವಾಗಿ ನಿಮ್ಮ ನಂಬಿಕೆಯ ಕುರಿತು ಮಾತಾಡಿ. (ಲೂಕ 12:11, 12) “ನನ್ನ ನಂಬಿಕೆಯ ಕುರಿತು ಬಾಯ್ತೆರೆದು ಮಾತಾಡುವುದಕ್ಕಿಂತ ಅದನ್ನು ಹೇಗೆ ಹೇಳುವುದಪ್ಪಾ ಎಂದು ಮನಸ್ಸಿನಲ್ಲಿ ಯೋಚಿಸುತ್ತಾ ಇರುವುದೇ ಅತಿ ಕಷ್ಟ. ಒಮ್ಮೆ ಸಂಭಾಷಣೆ ಆರಂಭಿಸಿದೆನೆಂದರೆ ಮತ್ತೆ ಸರಾಗವಾಗಿ ಮಾತು ಮುಂದುವರಿಸಬಹುದು” ಎನ್ನುತ್ತಾನೆ 17 ವರ್ಷದ ಆ್ಯಂಡ್ರೂ. *

6. ವಿವೇಚನೆಯುಳ್ಳವರಾಗಿರ್ರಿ. ಆಳವಿಲ್ಲದ ನೀರಿಗೆ ನೀವು ಧುಮುಕುವುದಿಲ್ಲ, ಹಾಗೆಯೇ ಅರ್ಥವಿಲ್ಲದ ವಾದಗಳಿಗೆ ಧುಮುಕದಂತೆ ಜಾಗ್ರತೆವಹಿಸಿ. ಮಾತಾಡುವ ಮತ್ತು ಸುಮ್ಮನಿರುವ ಸಮಯವಿದೆ ಎಂದು ನೆನಪಿಡಿ. (ಪ್ರಸಂಗಿ 3:1, 7) ಯೇಸು ಸಹ ಕೆಲವೊಮ್ಮೆ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. (ಮತ್ತಾಯ 26:62, 63) ಈ ಸೂತ್ರವನ್ನು ನೆನಪಿಡಿ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 22:3.

ಒಂದು ವಾದವಿವಾದವು ತಲೆದೋರುತ್ತಿದೆ ಎಂದು ನಿಮಗೆ ಗೊತ್ತಾದರೆ “ಮುಂದೆ ಹೋಗಿ” ಸಿಕ್ಕಿಕೊಳ್ಳಬೇಡಿ. ಬದಲಿಗೆ ವಿವೇಚನೆಯಿಂದ ಚುಟುಕಾಗಿ ಉತ್ತರಿಸಿ. ಉದಾಹರಣೆಗೆ ನೀವು ಸಿಗರೇಟ್‌ ಯಾಕೆ ಸೇದುವುದಿಲ್ಲ? ಎಂದು ನಿಮ್ಮ ಸಹಪಾಠಿ ಅಣಕಿಸಿದರೆ, ‘ನನ್ನ ದೇಹವನ್ನು ಕೆಡಿಸಲು ನಾನು ಇಷ್ಟಪಡುವುದಿಲ್ಲ ಅದಕ್ಕೇ!’ ಎಂದು ಸರಳವಾಗಿ ಹೇಳಿ. ಅವನ ಪ್ರತ್ಯುತ್ತರದ ಮೇಲೆ ಹೊಂದಿಕೊಂಡು ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಹೆಚ್ಚು ವಿವರಿಸಬೇಕೋ ಬಾರದೋ ಎಂಬುದನ್ನು ನಿರ್ಣಯಿಸಿರಿ.

ಮೇಲಿನ ಹೆಜ್ಜೆಗಳು ನಿಮ್ಮ ನಂಬಿಕೆಯ ಕುರಿತ ಪ್ರಶ್ನೆಗಳಿಗೆ ‘ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಲು’ ಸಹಾಯಮಾಡುತ್ತವೆ. (1 ಪೇತ್ರ 3:15) ನಿಮಗೆ ಗಾಬರಿಯೇ ಆಗದು ಎಂದಿದರ ಅರ್ಥವಲ್ಲ ನಿಶ್ಚಯ. ಎಲಾನ ಎಂಬ 18 ವಯಸ್ಸಿನ ಹುಡುಗಿ ಹೇಳುವುದು: “ತುಂಬ ಹೆದರಿದ್ದಾಗಲೂ ನೀವು ನಿಮ್ಮ ಧಾರ್ಮಿಕ ನಂಬಿಕೆಯನ್ನು ಇತರರಿಗೆ ತಿಳಿಸುವಾಗ ನೀವೇನನ್ನೋ ಸಾಧಿಸಿದಿರಿ ಎಂಬ ಆತ್ಮತೃಪ್ತಿ ನಿಮಗಿರುವುದು. ನೀವು ನಿಮ್ಮ ಭಯವನ್ನು ಮೆಟ್ಟಿನಿಂತು ಫಲಿತಾಂಶವು ಏನೇ ಆಗಲಿ ನಂಬಿಕೆಯನ್ನು ತಿಳಿಸಿಬಿಟ್ಟಿದ್ದೀರಿ. ಮತ್ತು ಫಲಿತಾಂಶ ಒಳ್ಳೇದಾದರಂತೂ ನಿಮಗೆ ಇನ್ನಷ್ಟು ಸಂತೋಷ! ಮಾತಾಡಲು ಧೈರ್ಯ ತಂದುಕೊಂಡದಕ್ಕಾಗಿ ತುಂಬಾ ಖುಷಿ.” (g 7/09)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಕೆಲವು ಹೆಸರುಗಳು ಬದಲಾಗಿವೆ.

^ ಬೈಬಲ್‌ ಭಾಷಾಂತರಗಳು ಬೇರೆ ಬೇರೆ ಪದಪ್ರಯೋಗಗಳನ್ನು ಮಾಡುತ್ತವೆ. ಆದರೂ ಕೆಲವು ಭಾಷಾಂತರಗಳು ಬೈಬಲಿನ ಮೂಲ ಭಾಷೆಗಳಿಗೆ ಹೆಚ್ಚು ನಿಷ್ಠೆಯಿಂದಿವೆ.

^ ಪುಟ 28ರಲ್ಲಿರುವ “ಸಂಭಾಷಣೆಯ ಪ್ರಾರಂಭಕಗಳು” ಎಂಬ ಚೌಕ ನೋಡಿ.

ಯೋಚಿಸಿ

ಶಾಲೆಯಲ್ಲಿ ಯಾರಾದರೊಬ್ಬರು ನಿಮಗೆ ಹೀಗೆ ಹೇಳಬಹುದೇ?

‘ನೀನು ಯೆಹೋವನ ಸಾಕ್ಷಿಯೆಂದು ನನಗೆ ಗೊತ್ತು. ನಾನು ನಿನ್ನನ್ನು ಗೇಲಿ ಮಾಡುತ್ತೇನೆಂದು ನೀನು ನೆನಸಬಹುದು. ಆದರೆ ನಾನು ನಿಜವಾಗಿ ನಿನ್ನನ್ನು ಗೌರವಿಸುತ್ತೇನೆ. ಲೋಕದಲ್ಲಿರುವ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ನೀನು ಇಷ್ಟು ಶಾಂತನಾಗಿರುವುದು ಹೇಗೆಂದೇ ನನಗೆ ತಿಳಿಯದು. ನನಗಂತೂ ತುಂಬ ಭಯ. ನಮ್ಮ ದೇಶದಲ್ಲಿ ಯುದ್ಧವಾಗಲಿದೆಯೋ? ನನ್ನ ಶಿಕ್ಷಣವನ್ನು ಮುಗಿಸಲು ಹೆತ್ತವರಲ್ಲಿ ಹಣವಿರುವುದೋ? ಶಾಲೆಯಲ್ಲಿ ನಾನು ಬೇರೆ ಮಕ್ಕಳಿಂದ ಗುದ್ದು-ಪೆಟ್ಟು ತಿನ್ನದೆ ಮನೆಗೆ ಸುರಕ್ಷಿತವಾಗಿ ಮರಳುವೆನೋ? ಹೀಗೆ ನನ್ನಲ್ಲಿ ಅನೇಕ ಪ್ರಶ್ನೆಗಳಿವೆ. ಆದರೆ ನೀನಾದರೋ ನಿಶ್ಚಿಂತನಾಗಿ ನೆಮ್ಮದಿಯಿಂದಿದ್ದೀ. ಹಾಗಿರಲು ನಿನ್ನ ಧರ್ಮವೇ ಕಾರಣವೋ? ನಾನದನ್ನು ಚರ್ಚಿಸಲು ಬಯಸುತ್ತೇನೆ. ಆದರೆ ಆ ವಿಷಯವನ್ನು ಮುಂತರಲು ನನಗೆ ಭಯ. ನೀನೇ ಅದರ ಬಗ್ಗೆ ಮಾತಾಡುತ್ತೀಯಾ?’

[ಪುಟ 28ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಹೇಳುವುದು . . .

“ನನ್ನ ಧಾರ್ಮಿಕ ನಂಬಿಕೆಯನ್ನು ತಿಳಿಸಿದಾಗ ಕೆಲವು ಮಕ್ಕಳು ಗೇಲಿಮಾಡಿ ನಗಾಡುತ್ತಿದ್ದರು. ಆದರೆ ಅವರ ಗೇಲಿಯನ್ನು ನಾನು ಕಿವಿಗೆ ಹಾಕಿಕೊಳ್ಳುತ್ತಿಲ್ಲವೆಂದು ಅವರಿಗೆ ತಿಳಿದಾಗ ನನ್ನಿಂದ ದೂರಹೋಗುತ್ತಿದ್ದರು.”—ಫ್ರಾಂಚೆಸ್ಕಾ, ಬೆಲ್ಜಿಯಮ್‌.

“ನೀವು ಕ್ರೈಸ್ತರೆಂದು ಜನರಿಗೆ ತಿಳಿಸದೇ ಹೋದಲ್ಲಿ ನೀವು ಯಾರೆಂದೇ ನಿಮಗೆ ಮರೆತುಹೋಗಿ ಬೇರೆಲ್ಲರಂತೆ ವರ್ತಿಸಲು ತೊಡಗುವಿರಿ. ಬೇರೆಯವರನ್ನು ಅನುಸರಿಸುವವರಾಗುವಂತೆ ಬಿಡದೆ, ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಿ.”—ಸಮಂತ, ಅಮೆರಿಕ.

“ನಾನು ಚಿಕ್ಕವನಿದ್ದಾಗ ಬೇರೆ ಮಕ್ಕಳಿಗಿಂತ ಭಿನ್ನವಾಗಿರಲು ಬಯಸಿರಲಿಲ್ಲ. ಆದರೆ ನನ್ನ ಧಾರ್ಮಿಕ ನಂಬಿಕೆಯು ಒಂದು ಒಳ್ಳೇ ಗುಣಮಟ್ಟದ ಜೀವನಕ್ಕೆ ನೆರವಾಗುತ್ತದೆಂದು ಕಂಡಾಗ ನನ್ನ ಆತ್ಮವಿಶ್ವಾಸ ಉಕ್ಕೇರಿತು. ನನ್ನ ನಂಬಿಕೆಯ ಕುರಿತು ನಾನು ಹೆಮ್ಮೆಪಟ್ಟೆ.”—ಜೇಸನ್‌, ನ್ಯೂ ಸೀಲೆಂಡ್‌.

[ಪುಟ 28ರಲ್ಲಿರುವ ಚೌಕ]

ಸಂಭಾಷಣೆಯ ಪ್ರಾರಂಭಕಗಳು

“ಬೇಸಗೆ ರಜೆಯಲ್ಲಿ ಎಲ್ಲಿಗೆ ಹೋಗುತ್ತೀರಿ?” [ಪ್ರತಿಕ್ರಿಯೆಯ ನಂತರ ನಿಮ್ಮ ಆಧ್ಯಾತ್ಮಿಕ ಯೋಜನೆಗಳನ್ನು ಅಂದರೆ ಅಧಿವೇಶನಕ್ಕೆ ಹೋಗುವ ಅಥವಾ ಶುಶ್ರೂಷೆಯನ್ನು ಹೆಚ್ಚಿಸುವ ಕುರಿತು ತಿಳಿಸಿರಿ.]

◼ ಯಾವುದೇ ವಾರ್ತೆಯನ್ನು ತಿಳಿಸುತ್ತಾ ಹೀಗನ್ನಿರಿ: “ಈ ಸುದ್ದಿ ನೀವು ಕೇಳಿದ್ದೀರೋ? ಅದರ ಬಗ್ಗೆ ನೀವೇನು ಹೇಳುತ್ತೀರಾ?”

“ಲೋಕದಲ್ಲಿರುವ ಹಣಕಾಸಿನ ಬಿಕ್ಕಟ್ಟು [ಅಥವಾ ಇನ್ನೊಂದು ಸಮಸ್ಯೆ] ಸುಧಾರಿಸಬಹುದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ] ಹಾಗೇಕೆ ನೆನಸುತ್ತೀರಿ?”

“ನಿಮಗೆ ಧರ್ಮದಲ್ಲಿ ಅಭಿರುಚಿ ಇದೆಯೋ?”

“ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಗುರಿ ಏನಾಗಿರುವುದು?” [ಪ್ರತಿಕ್ರಿಯೆಯ ನಂತರ ನಿಮ್ಮ ಆಧ್ಯಾತ್ಮಿಕ ಗುರಿಗಳನ್ನು ತಿಳಿಸಿರಿ.]

[ಪುಟ 28ರಲ್ಲಿರುವ ಕೋಷ್ಟಕ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಉತ್ತರ ಕೊಡಲು ಸಿದ್ಧರಾಗಿರ್ರಿ! ಕತ್ತರಿಸಿ!

ಸಲಹೆ: ಈ ಚಾರ್ಟ್‌ ಅನ್ನು ನಿಮ್ಮ ಹೆತ್ತವರೊಂದಿಗೆ ಮತ್ತು ಮಿತ್ರರೊಂದಿಗೆ ಚರ್ಚಿಸಿರಿ. ಖಾಲಿ ಬಿಟ್ಟ ಸ್ಥಳವನ್ನು ಭರ್ತಿಮಾಡಿ. ಅನಂತರ, ನಿಮ್ಮ ಸಹಪಾಠಿಗಳಲ್ಲಿ ಇನ್ನೂ ಬೇರೆ ಪ್ರಶ್ನೆಗಳಿರಬಹುದೋ ಎಂದು ಯೋಚಿಸಿನೋಡಿ.

ಪ್ರಶ್ನೆ ಉತ್ತರ

ನೈತಿಕ ಸಲಿಂಗಕಾಮದ ಬಗ್ಗೆ ಸಲಿಂಗಕಾಮಿಗಳನ್ನು

ನೀವೇನನ್ನುತ್ತೀರಿ? ನಾನು ದ್ವೇಷಿಸುವುದಿಲ್ಲ,

ಆದರೆ ಅವರ ನಡವಳಿಕೆಯನ್ನು

ನಾನು ಒಪ್ಪಲಾರೆ.

ಡೇಟಿಂಗ್‌ ನೀನು ಏಕೆ ಡೇಟಿಂಗ್‌ ನಾನು ಸಾಕಷ್ಟು

ಮಾಡುವುದಿಲ್ಲ? ದೊಡ್ಡವನಾಗುವ ತನಕ

ಪ್ರಣಯ ಸಂಬಂಧದಲ್ಲಿ

ಸಿಲುಕದಿರಲು

ನಿರ್ಧರಿಸಿದ್ದೇನೆ.

ತಾಟಸ್ಥ್ಯ ನೀನು ಧ್ವಜವಂದನೆ ನನ್ನ ದೇಶವನ್ನು ನಾನು

ಏಕೆ ಮಾಡುವುದಿಲ್ಲ? ಗೌರವಿಸುತ್ತೇನೆ, ಆದರೆ

ಅದನ್ನು ಆರಾಧಿಸುವುದಿಲ್ಲ.

ರಕ್ತ ರಕ್ತಪೂರಣವನ್ನು ನೀನು ಬೈಬಲ್‌ ರಕ್ತವನ್ನು

ಏಕೆ ಸ್ವೀಕರಿಸುವುದಿಲ್ಲ? ವರ್ಜಿಸುವಂತೆ

ಹೇಳುವುದರಿಂದ ನಾನು

ರಕ್ತಪೂರಣವನ್ನು

ಸ್ವೀಕರಿಸುವುದಿಲ್ಲ. ಆದರೆ

ರಕ್ತರಹಿತ ಬದಲಿ

ಚಿಕಿತ್ಸೆಯನ್ನು

ಸ್ವೀಕರಿಸುತ್ತೇನೆ. ಅದರಲ್ಲಿ

ಏಡ್ಸ್‌ನ ಅಪಾಯವಿಲ್ಲ.

ಆಯ್ಕೆಗಳು ನಿಮ್ಮ ಧರ್ಮದವರಾದ ನಮಗೆ ದೇವರ

ಇಂಥವರೊಬ್ಬರು ಇಂಥಿಂ ನೀತಿನಿಯಮಗಳನ್ನು

ಥವುಗಳನ್ನು ಮಾಡಿದ್ದಾರೆ. ಕಲಿಸಲಾಗುತ್ತದೆ

ನೀನೇಕೆ ಮಾಡಲಾರೆ? ಆದರೆ ಅದನ್ನು

ಅನುಸರಿಸಲೇಬೇಕೆಂದು

ಬಲವಂತವಿಲ್ಲ! ಅದು ನಮ್ಮ

ಆಯ್ಕೆಗೆ ಬಿಟ್ಟದ್ದು.

ಸೃಷ್ಟಿ ನೀನೇಕೆ ವಿಕಾಸವಾದವನ್ನು ಮೇಧಾವಿಗಳೆನಿಸುವ

ನಂಬುವುದಿಲ್ಲ? ವಿಜ್ಞಾನಿಗಳೇ ಅದನ್ನು

ಒಪ್ಪದಾಗ ನಾನೇಕೆ ಅದನ್ನು

ನಂಬಬೇಕು?

ಮರು ಪ್ರಶ್ನೆ ಸಂಶೋಧನೆ ಉತ್ತರ

ನೈತಿಕ ಅಂಥಾ ದೃಷ್ಟಿಕೋನ 1 ಕೊರಿಂಥ 6:9, 10; ಅಲ್ಲವೇ ಅಲ್ಲ,

ದುರಭಿಪ್ರಾಯವಲ್ಲವೇ? ಯುವ ಜನರ ಸಲಿಂಗಕಾಮವಾಗಿರಲಿ

ಪ್ರಶ್ನೆಗಳು—ಕಾರ್ಯಸಾಧಕ ಬೇರೆ ಏನೇ ಆಗಿರಲಿ

ಉತ್ತರಗಳು, ಸಂಪುಟ 2 ಅನೈತಿಕತೆಯನ್ನು

(ಇಂಗ್ಲಿಷ್‌), ಅಧ್ಯಾಯ 28. * ಎಲ್ಲ ರೀತಿಯ

ನಾನು ದ್ವೇಷಿಸುತ್ತೇನೆ.

ಡೇಟಿಂಗ್‌ ನಿನ್ನ ಧರ್ಮ ಹಾಗೆ ಪರಮ ಗೀತ 8:4; ಹೌದು.

ಮಾಡುವಂತೆ ಯುವ ಜನರ ಪ್ರಶ್ನೆಗಳು ನಾವು

ಹೇಳುತ್ತದೋ? —ಕಾರ್ಯಸಾಧಕ ಡೇಟಿಂಗ್‌

ಉತ್ತರಗಳು, ಸಂಪುಟ 2 ಮಾಡುವುದು

(ಇಂಗ್ಲಿಷ್‌), ಮದುವೆಯಾಗುವ

ಅಧ್ಯಾಯ 1. ಉದ್ದೇಶ ಇರುವಾಗಲೇ.

ಮದುವೆಗೆ ನಾನಿನ್ನೂ

ಸಿದ್ಧನಾಗಿಲ್ಲ!

ತಾಟಸ್ಥ್ಯ ಹಾಗಾದರೆ ನಿನ್ನ ಯೆಶಾಯ 2:4; ಇಲ್ಲ, ಬೇರೆ

ದೇಶಕ್ಕಾಗಿ ನೀನು ಯೋಹಾನ 13:35; ದೇಶಗಳಲ್ಲಿರುವ

ಯುದ್ಧಮಾಡುವುದಿಲ್ಲವೋ? ಬೈಬಲ್‌ ನಿಜವಾಗಿಯೂ ಲಕ್ಷಾಂತರ

ಏನನ್ನು ಬೋಧಿಸುತ್ತದೆ? ಯೆಹೋವನ

ಪುಟ. 148-151. * ಸಾಕ್ಷಿಗಳು ಸಹ ಈ

ದೇಶದ ವಿರುದ್ಧ

ಹೋರಾಡುವುದಿಲ್ಲ.

ರಕ್ತ ನೀನು ಒಂದುವೇಳೆ ಅ. ಕಾರ್ಯಗಳು 5:28, 29; .....

ಸಾಯುವ ಪರಿಸ್ಥಿತಿಯಲ್ಲಿದ್ದರೆ ಇಬ್ರಿಯ 11:6;

ಆಗೇನು? ಬೈಬಲ್‌ ಬೋಧಿಸುತ್ತದೆ

ದೇವರು ನಿನ್ನನ್ನು ಪುಸ್ತಕದ ಪುಟ. 129-131.

ಕ್ಷಮಿಸಲಾರನೋ?

ಆಯ್ಕೆಗಳು ಹಾಗಾದರೆ ನಿಮ್ಮ ..... .....

ಧರ್ಮದಲ್ಲಿ ಒಬ್ಬೊಬ್ಬರಿಗೆ

ಒಂದೊಂದು ನಿಯಮವೋ?

ಸೃಷ್ಟಿ ..... ..... .....

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 28ರಲ್ಲಿರುವ ಚಿತ್ರ]

ನಂಬಿಕೆಯನ್ನು ಹಂಚಿಕೊಳ್ಳುವುದು ಈಜುವಿಕೆಯಂತೆ. ಬೇಕಾದರೆ ನೀವು ಮೆಲ್ಲನೆ ಇಳಿಯಬಹುದು ಇಲ್ಲವೆ ನೇರವಾಗಿ ಧುಮುಕಬಹುದು!