ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುಟ 2

ಪುಟ 2

ಪುಟ 2

ನಿಮ್ಮ ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಸುವುದು

ಹೆತ್ತವರು ತಮ್ಮ ನವಜಾತ ಕಂದನನ್ನು ಮೊದಲ ಬಾರಿ ಕಣ್ತುಂಬ ನೋಡುವಾಗ ಆನಂದಿಸುತ್ತಾರೆ. ಆದರೆ ಆ ಪುಟ್ಟ ಮಗು ಬೆಳೆದು ಪ್ರಾಪ್ತ ವಯಸ್ಕನಾಗಿ ಮುಂದೆ ತಮ್ಮಿಂದ ಪ್ರತ್ಯೇಕವಾಗಿ ತನ್ನ ಕಾಲ ಮೇಲೇ ನಿಲ್ಲುವನೆಂದು ಆ ಕ್ಷಣದಲ್ಲಿ ಯೋಚಿಸುವುದಿಲ್ಲ. ಆದರೆ ಅದೇ ವಾಸ್ತವಾಂಶ. ಬೈಬಲ್‌ ಸಹ ಅದನ್ನೇ ಹೇಳುತ್ತದೆ: “ಪುರುಷನು ತಂದೆತಾಯಿಗಳನ್ನು ಬಿಟ್ಟು” ಪ್ರತ್ಯೇಕನಾಗುವನು. (ಆದಿಕಾಂಡ 2:24) ಈ ಮಾತನ್ನೇ ಸ್ತ್ರೀಯ ವಿಷಯದಲ್ಲೂ ಹೇಳಬಹುದು.

ಆದರೆ ಮಗ ಇಲ್ಲವೆ ಮಗಳು ದೊಡ್ಡವರಾಗಿ ಮದುವೆಯಾಗಿಯೊ ಉದ್ಯೋಗಕ್ಕೆಂದೊ ಅವರಿಂದ ಪ್ರತ್ಯೇಕವಾಗುವ ಆ ಸಿಹಿಕಹಿ ಬೆರೆತ ದಿನದಂದು ಅನೇಕ ಹೆತ್ತವರು ಚಿಂತಿತರಾಗುತ್ತಾರೆ. ‘ನನ್ನ ಮಗನನ್ನು/ಳನ್ನು ಸರಿಯಾಗಿ ಬೆಳೆಸಿದ್ದೇನೊ?’ ಎಂದವರು ಯೋಚಿಸುತ್ತಾರೆ. ‘ಅವರು ಉದ್ಯೋಗಮಾಡಲು, ಮನೆ ನೋಡಿಕೊಳ್ಳಲು, ಬಜೆಟ್‌ಗನುಸಾರ ಜೀವನ ನಡೆಸಲು ಶಕ್ತರಾಗುವರೊ?’ ಇದೆಲ್ಲಕ್ಕಿಂತಲೂ ಮುಖ್ಯವಾಗಿ, ‘ನಾವು ಕಲಿಸಿದ ಮೌಲ್ಯಗಳಿಗನುಸಾರ ಜೀವಿಸುವರೊ?’ ಎಂದು ತಮ್ಮನ್ನೇ ಕೇಳಿಕೊಳ್ಳುತ್ತಾರೆ.—ಜ್ಞಾನೋಕ್ತಿ 22:6; 2 ತಿಮೊಥೆಯ 3:15.

ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ ಬೈಬಲಾಧರಿತ ಸಲಹೆಗಳು ಹೆತ್ತವರಿಗೆ ಹೇಗೆ ನೆರವಾಗಬಲ್ಲವೆಂದು ಎಚ್ಚರ! ಪತ್ರಿಕೆಯ ಈ ವಿಶೇಷ ಸಂಚಿಕೆ ತೋರಿಸುತ್ತದೆ. (g11-E 10)