ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸರಕಾರದಲ್ಲಿ ನ್ಯಾಯದ್ದೇ ರಾಜ್ಯಭಾರ

ದೇವರ ಸರಕಾರದಲ್ಲಿ ನ್ಯಾಯದ್ದೇ ರಾಜ್ಯಭಾರ

ದೇವರ ಸರಕಾರದಲ್ಲಿ ನ್ಯಾಯದ್ದೇ ರಾಜ್ಯಭಾರ

ಬೇಗನೆ ಅನ್ಯಾಯ ತುಂಬಿರುವ ಈ ಲೋಕವನ್ನು ದೇವರು ತೆಗೆದುಹಾಕಿ ಒಂದು ಹೊಸ ಸರಕಾರವನ್ನು ರಚಿಸಲಿದ್ದಾನೆಂದು ಬೈಬಲ್‌ ಭವಿಷ್ಯ ನುಡಿದಿದೆ. ದೇವರ ರಾಜ್ಯ ಎನ್ನಲಾಗುವ ಈ ಸರಕಾರ ಇಡೀ ಲೋಕಕ್ಕೆ ಏಕೈಕ ಸರಕಾರವಾಗಿದ್ದು, ಯೇಸು ಕ್ರಿಸ್ತ ಅದರ ರಾಜನಾಗಿರುತ್ತಾನೆ. (ಪ್ರಕಟನೆ 11:15) ದೇವರ ರಾಜ್ಯ ಅನ್ಯಾಯವನ್ನು ಬೇರು ಸಮೇತ ನಿರ್ಮೂಲ ಮಾಡಲಿದೆ. ಹೇಗೆ? ಎರಡು ವಿಧಗಳಲ್ಲಿ ಕಾರ್ಯ ನಿರ್ವಹಿಸಲಿದೆ.

1. ಅನ್ಯಾಯವನ್ನೇ ಬಂಡವಾಳ ಮಾಡಿಕೊಂಡಿರುವ ಅಯೋಗ್ಯ ಸರಕಾರಗಳನ್ನು ದೇವರ ರಾಜ್ಯ ಅಳಿಸಿಹಾಕಲಿದೆ. “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಸರಕಾರವನ್ನು] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, . . . [ಮಾನವ ನಿರ್ಮಿತ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು” ಎನ್ನುತ್ತೆ ಬೈಬಲಿನ ದಾನಿಯೇಲ 2:44.

2. ದೇವರ ರಾಜ್ಯ ದುಷ್ಟರನ್ನು ಅಳಿಸಿಹಾಕಿ, ನ್ಯಾಯವನ್ನು ಉಳಿಸಲಿದೆ. ಬೈಬಲಿನ ಕೀರ್ತನೆ 37:10 ಹೇಳ್ತದೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು.” 28ನೇ ವಾಕ್ಯ “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು” ಎನ್ನುತ್ತೆ.

ಈ ಭಕ್ತರು ಯೇಸುವಿನ ಮಾದರಿ ಪ್ರಾರ್ಥನೆಯ ನೆರವೇರಿಕೆಯನ್ನು ಕಣ್ಣಾರೆ ಕಾಣುವರು. ಅವನಂದದ್ದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾಯ 6:10) ಭೂಮಿಯ ಬಗ್ಗೆ ದೇವರ ಉದ್ದೇಶವೇನು?

ದೇವರ ಆಡಳಿತದಲ್ಲಿ . . .

ಭ್ರಷ್ಟಾಚಾರ ಮತ್ತು ದಬ್ಬಾಳಿಕೆ ಇರುವುದಿಲ್ಲ. ಯೇಸು ಕ್ರಿಸ್ತನ ಬಗ್ಗೆ “ನೀನು ನೀತಿಯನ್ನು ಪ್ರೀತಿಸಿದಿ ಮತ್ತು ಅಧರ್ಮವನ್ನು ದ್ವೇಷಿಸಿದಿ” ಎನ್ನುತ್ತೆ ಬೈಬಲ್‌. (ಇಬ್ರಿಯ 1:9) ನ್ಯಾಯವಂತ ರಾಜನಾದ ಯೇಸು “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. . . . ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:12-14.

ಆಹಾರಕ್ಕೆ ಕೊರತೆಯಿಲ್ಲ. “ಭೂಮಿಯು ಒಳ್ಳೇ ಬೆಳೆಯನ್ನು [ಕೊಡುವುದು]. ದೇವರು, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.” (ಕೀರ್ತನೆ 67:6) “ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯವರೆಗೂ ಇರುವುದು.” (ಕೀರ್ತನೆ 72:16, ಪವಿತ್ರ ಗ್ರಂಥ ಭಾಷಾಂತರ) ಯೇಸು ಭೂಮಿ ಮೇಲಿದ್ದಾಗ ಸಾವಿರಾರು ಜನರಿಗೆ ಉಣಿಸಿದನು. ಇದು ಆತ ದೇವರ ರಾಜ್ಯದಲ್ಲಿ ಮಾಡಲಿರುವ ಸಂಗತಿಗಳಿಗೆ ಹಿಡಿದ ಕನ್ನಡಿಯಾಗಿತ್ತು.—ಮತ್ತಾಯ 14:15-21; 15:32-38.

ಅನ್ಯಾಯಕ್ಕೆ ಎಡೆಯಿಲ್ಲ. ಮನುಷ್ಯನ ಕಣ್ಣಿಗೆ ಮಣ್ಣೆರಚಿ ಅನ್ಯಾಯ ಮಾಡಲಾಗುತ್ತಿದೆ. ಏಕೆಂದರೆ ಮನುಷ್ಯನ ಸಾಮರ್ಥ್ಯಕ್ಕೆ ಮಿತಿಯಿದೆ. ಆದರೆ ದೇವರ “ದೃಷ್ಟಿಗೆ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ; ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ಕಣ್ಣುಗಳಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ.” (ಇಬ್ರಿಯ 4:13) ಯೇಸು “ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವದಿಲ್ಲ; ಬಡವರಿಗೋಸ್ಕರ ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು” ಎನ್ನುತ್ತೆ ಬೈಬಲ್‌.—ಯೆಶಾಯ 11:3, 4.

ಶೀಘ್ರದಲ್ಲೇ ಬರಲಿದೆ ದೇವರ ಸರಕಾರ!

ಲೋಕದ ಸ್ಥಿತಿಗತಿ ಗಮನಿಸಿದರೆ ಲೋಕಾಂತ್ಯ ಹತ್ತಿರವಾಗುತ್ತಿರುವ ಸೂಚನೆ ಸಿಗುತ್ತಿದೆ. “ದುಷ್ಟರು ಹುಲ್ಲಿನಂತೆ ಬೆಳೆಯುವದೂ ಕೆಡುಕರು ಹೂವಿನಂತೆ ಮೆರೆಯುವದೂ ತೀರಾ ಹಾಳಾಗುವದಕ್ಕಾಗಿಯೇ” ಎನ್ನುತ್ತೆ ಬೈಬಲ್‌. (ಕೀರ್ತನೆ 92:7) ದೇವರ ಅವಕೃಪೆಗೆ ಒಳಗಾಗದೆ ಪಾರಾಗಿ ಉಳಿಯಲು ಏನು ಮಾಡಬೇಕು? ನಾಶನದ ಬರಸಿಡಿಲಿನಿಂದ ಪಾರಾಗಲು “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ” ಇರಬೇಕು ಎಂದನು ಯೇಸು ಕ್ರಿಸ್ತ.—ಯೋಹಾನ 17:3.

ಅಂಥ ಅಮೂಲ್ಯ ಜ್ಞಾನ ಪಡೆಯಲು ಬಯಸುತ್ತೀರಾ? ಹೈಡಿ, ದೊರತಿ, ಫೀರೋದ್ದಿನ್‌ರಂತೆ ನೀವೂ ಯೆಹೋವನ ಸಾಕ್ಷಿಗಳ ಸಹಾಯ ಪಡೆಯಬಹುದು. ಅವರು ಬೇಷರತ್ತಿನಿಂದ, ಉಚಿತವಾಗಿ ನೆರವು ನೀಡಲು ಸದಾ ಸಿದ್ಧರು. (g12-E 05)

[ಪುಟ 15ರಲ್ಲಿರುವ ಚೌಕ/ಚಿತ್ರ]

ಬದುಕೇ ದ್ರೋಹಬಗೆದಂತೆ ಭಾಸವಾದರೆ. . .

ಎಮಿಲಿ ಯುನೈಟೆಡ್‌ ಸ್ಟೇಟ್ಸ್‌ನ ನಿವಾಸಿ. ಆಕೆಗೆ ಲುಕೇಮಿಯ (ರಕ್ತದ ಕ್ಯಾನ್ಸರ್‌) ಎಂದು ಗೊತ್ತಾದಾಗ ಏಳರ ಬಾಲೆ. ಆಕೆಯ ಸ್ನೇಹಿತ/ಸ್ನೇಹಿತೆಯರು ಯಾವಾಗಲೋ ಒಮ್ಮೊಮ್ಮೆ ಶೀತ, ಜ್ವರ ಅಂತ ಬಳಲಿದರೆ ಈಕೆಗೆ ಮಾತ್ರ ವರ್ಷಾನುಗಟ್ಟಲೆ ಚಿಕಿತ್ಸೆ. ಅದೂ ಕಿಮೊ ಥೆರಪಿಯಂಥ ಜೀವಹಿಂಡುವ ಚಿಕಿತ್ಸೆ. “ಬೇಡಪ್ಪಾ! ಕ್ಯಾನ್ಸರ್‌ ಮಾತ್ರ ಬರಬಾರ್ದು!” ಅಂತಾಳೆ ಎಮಿಲಿ.

ಬದುಕು ಇಂಥ ಭಾರಿ ಹೊಡೆತ ಕೊಟ್ಟರೂ ಬಾಳುವ ಆಸೆಯನ್ನು ಬಿಟ್ಟುಕೊಡಲಿಲ್ಲ ಎಮಿಲಿ. ಆಕೆಯ ಭರವಸೆಯೆಲ್ಲಾ ದೇವರ ರಾಜ್ಯದ ಮೇಲೆ. ಅದರ ಬರುವಿಕೆಗಾಗಿ ಕಾಯುತ್ತಿದ್ದಾಳೆ. ಅಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) “ಮಾರ್ಕ 12:30 ನನ್ನ ಅಚ್ಚುಮೆಚ್ಚಿನ ಬೈಬಲ್‌ ವಾಕ್ಯ. ಅದ್ರಲ್ಲಿ ‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು’ ಅಂತ ಹೇಳುತ್ತೆ. ಯೆಹೋವ ದೇವರನ್ನೇ ಬೇಡಿಕೊಳ್ಳುತ್ತೇನೆ, ಆತನೇ ನಂಗೆ ಸಹಿಸಿಕೊಳ್ಳೋ ಶಕ್ತಿ ಕೊಡ್ತಾನೆ. ದೇವರು ನಂಗೆ ಪ್ರೀತಿಯ ಕುಟುಂಬ, ಸಭೆಯನ್ನ ಕೊಟ್ಟಿದಕ್ಕೆ ತುಂಬ ಧನ್ಯವಾದ ಹೇಳ್ತೀನಿ. ದೇವರ ರಾಜ್ಯದಲ್ಲಿ ಶಾಶ್ವತ ಜೀವ್ನದಂಥ ಅದ್ಭುತ ನಿರೀಕ್ಷೆನ ಕೊಟ್ಟಿದಕ್ಕೂ ಥ್ಯಾಂಕ್ಸ್‌. ಆ ನಿರೀಕ್ಷೆಯಿಂದ ನನಗಾಗಿರೋ ಸಹಾಯನ ಎಷ್ಟು ವರ್ಣಿಸಿದ್ರೂ ಕಡಿಮೆನೇ.”

[ಪುಟ 14,15ರಲ್ಲಿರುವ ಚಿತ್ರ]

ದೇವರ ರಾಜ್ಯದಲ್ಲಿ ಆಹಾರ, ನ್ಯಾಯ ಅಳಿಯದು. ಪೂರ್ವಗ್ರಹ ಸುಳಿಯದು