ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒತ್ತಡದಿಂದ ಹೊರಗೆ ಬನ್ನಿ

ಒತ್ತಡಕ್ಕೆ ಶಾಶ್ವತ ಪರಿಹಾರ

ಒತ್ತಡಕ್ಕೆ ಶಾಶ್ವತ ಪರಿಹಾರ

ಬೈಬಲ್‌ ಕೊಡೋ ಸಲಹೆಗಳನ್ನು ಪಾಲಿಸಿದರೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಆಗುತ್ತೆ. ಮನುಷ್ಯರಾದ ನಮಗೆ ಎಲ್ಲಾ ರೀತಿಯ ಒತ್ತಡಗಳನ್ನು ತೆಗೆದು ಹಾಕಲು ಆಗಲ್ಲ ನಿಜ. ಆದರೆ ನಮ್ಮನ್ನು ಸೃಷ್ಟಿಸಿದ ದೇವರಿಂದ ಇದು ಸಾಧ್ಯ. ಇದಕ್ಕೆ ಅಂತಾನೇ ದೇವರು ಒಬ್ಬ ವ್ಯಕ್ತಿನಾ ನೇಮಿಸಿದ್ದಾನೆ. ಅದು ಯಾರು ಗೊತ್ತಾ? ಯೇಸು ಕ್ರಿಸ್ತ. ಅವನು ಮಾನವನಾಗಿ ಭೂಮಿಯಲ್ಲಿ ಇದ್ದಾಗ ಅನೇಕ ಅದ್ಭುತಗಳನ್ನು ಮಾಡಿದ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅದ್ಭುತಗಳನ್ನು ಮಾಡಲಿದ್ದಾನೆ. ಇದಕ್ಕೆ ಕೆಲವು ಆಧಾರಗಳು ಕೆಳಗಿವೆ:

ಯೇಸು ಎಲ್ಲಾ ರೋಗಗಳನ್ನು ಗುಣಪಡಿಸುತ್ತಾನೆ.

“ಬೇರೆ ಬೇರೆ ರೋಗಗಳಿಂದ ಮತ್ತು ಯಾತನೆಗಳಿಂದ ಬಾಧೆಪಡುತ್ತಿದ್ದವರನ್ನೂ . . . . [ಯೇಸುವಿನ] ಬಳಿಗೆ ತಂದರು ಮತ್ತು ಅವನು ಅವರನ್ನು ಗುಣಪಡಿಸಿದನು.”—ಮತ್ತಾಯ 4:24.

ಯೇಸು ಎಲ್ಲರಿಗೆ ಮನೆ ಮತ್ತು ಆಹಾರ ಕೊಡುತ್ತಾನೆ.

“ಜನರು [ಕ್ರಿಸ್ತನ ಪ್ರಜೆಗಳು] ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:21, 22.

ಯೇಸು ಇಡೀ ಭೂಮಿಯಲ್ಲಿ ಶಾಂತಿ ಮತ್ತು ಭದ್ರತೆ ತರಲಿದ್ದಾನೆ.

“ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣಸೌಭಾಗ್ಯವಿರಲಿ. ಅವನು ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳಲಿ. . . . ಅವನ ವೈರಿಗಳು ಮಣ್ಣುಮುಕ್ಕಲಿ.”—ಕೀರ್ತನೆ 72:7-9.

ಯೇಸು ಅನ್ಯಾಯವನ್ನು ತೆಗೆದುಹಾಕುತ್ತಾನೆ.

“ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.”—ಕೀರ್ತನೆ 72:13, 14.

ಯೇಸು ಕಷ್ಟ ಮತ್ತು ಮರಣವನ್ನು ತೆಗೆದುಹಾಕುತ್ತಾನೆ.

“ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.