ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಗೆಳೆತನದ ಮೇಲೆ

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಗೆಳೆತನದ ಮೇಲೆ

ತಂತ್ರಜ್ಞಾನದಿಂದ ದೂರ ದೂರದಲ್ಲಿರೋ ಗೆಳೆಯರಿಗೆ ಮೆಸೇಜ್‌ ಮಾಡೋಕೆ, ಇಮೇಲ್‌ ಕಳಿಸೋಕೆ, ವಿಡಿಯೋ ಕಾಲ್‌ ಮಾಡೋಕೆ ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಕಾಂಟ್ಯಾಕ್ಟ್‌ನಲ್ಲಿ ಇರೋಕೆ ಸಹಾಯ ಆಗುತ್ತೆ. ಈ ಉದ್ದೇಶದಿಂದ ತಂತ್ರಜ್ಞಾನ ಬಳಸುವವರಿಗೆ ಅದು ಯಜಮಾನ ಅಲ್ಲ, ದಾಸ ಆಗಿರುತ್ತೆ.

ಆದರೆ ಫ್ರೆಂಡ್ಸ್‌ ಜೊತೆ ಬರೀ ತಂತ್ರಜ್ಞಾನ ಉಪಯೋಗಿಸಿ ಮಾತಾಡೋರು . . .

  • ಸ್ನೇಹಿತರ ಭಾವನೆಗಳನ್ನ ಅರ್ಥಮಾಡಿಕೊಳ್ಳಲ್ಲ.

  • ನಾನು ಯಾವಾಗಲೂ ಒಂಟಿ ಅಂದ್ಕೊತಾರೆ.

  • ಫ್ರೆಂಡ್ಸಿಗಿಂತ ತಮ್ಮ ಬಗ್ಗೆನೇ ಹೆಚ್ಚು ಯೋಚಿಸ್ತಾರೆ.

ನಿಮಗೆ ಗೊತ್ತಿರಬೇಕಾದ ವಿಷಯಗಳು

ಬೇರೆಯವರ ಭಾವನೆಗಳನ್ನ ಅರ್ಥಮಾಡಿಕೊಳ್ಳೋದು

ಬೇರೆಯವರ ಭಾವನೆಗಳನ್ನ ಅರ್ಥಮಾಡಿಕೊಳ್ಳಲು ಸಮಯ ತಗೊಂಡು ಅವರ ಬಗ್ಗೆ ಯೋಚಿಸಬೇಕು. ಆದ್ರೆ ಯಾವಾಗಲೂ ಮೆಸೇಜ್‌ ಓದುತ್ತಾ, ರಿಪ್ಲೈ ಮಾಡ್ತಾ ಸೋಶಿಯಲ್‌ ಮೀಡಿಯಾದಲ್ಲೇ ಮುಳುಗಿದ್ರೆ ಇದನ್ನ ಮಾಡೋದು ಕಷ್ಟ ಆಗುತ್ತೆ.

ನಿಮಗೆ ಸುಮಾರು ಮೆಸೇಜ್‌ಗಳು ಬಂದಿದ್ರೆ ಅದ್ರಲ್ಲಿ ನಿಮ್ಮ ಫ್ರೆಂಡ್‌ ಕಳಿಸಿದ ಮೆಸೇಜಿಗೆ ರಿಪ್ಲೈ ಮಾಡೋದು ಕಷ್ಟ ಆಗುತ್ತೆ. ಆಗ ನಿಮ್ಮ ಫ್ರೆಂಡಿಗೆ ಸಹಾಯ ಮಾಡೋದನ್ನ ಬಿಟ್ಟು ಬಂದಿರೋ ಮೆಸೇಜ್‌ಗಳನ್ನ ಡಿಲೀಟ್‌ ಮಾಡೋದೇ ದೊಡ್ಡ ಕೆಲಸ ಆಗುತ್ತೆ.

ಯೋಚಿಸಿ: ತಂತ್ರಜ್ಞಾನ ಉಪಯೋಗಿಸಿ ಫ್ರೆಂಡ್ಸ್‌ ಜೊತೆ ಮಾತಾಡುವಾಗ ಅವರ ‘ನೋವನ್ನ ಅರ್ಥಮಾಡಿಕೊಳ್ತಿರ’ ಅಂತ ಹೇಗೆ ತೋರಿಸುತ್ತೀರ?—1 ಪೇತ್ರ 3:8.

ಒಂಟಿತನ ಕಾಡೋದು

ಸೋಶಿಯಲ್‌ ಮೀಡಿಯಾವನ್ನು ತುಂಬ ಬಳಸಿದ್ರಿಂದ ಜನರಿಗೆ ನಿರಾಶೆಯಾಗಿದೆ. ಬೇರೆಯವರು ಪೋಸ್ಟ್‌ ಮಾಡಿರೋ ಫೋಟೋಗಳನ್ನ ಮತ್ತು ಬೇರೆ ವಿಷಯಗಳನ್ನ ನೋಡಿ “ನಾನು ಬದುಕಿದ್ದು ಏನು ಪ್ರಯೋಜನ” ಅನ್ನೋ ಭಾವನೆ ಜನರಲ್ಲಿದೆ ಅಂತ ಕೆಲವು ಸಂಶೋಧಕರು ವರದಿಸಿದ್ದಾರೆ.

ಬೇರೆಯವರು ಪೋಸ್ಟ್‌ ಮಾಡಿರೋ ಫೋಟೋಗಳಿಗೆ ತಮ್ಮನ್ನೇ ಹೋಲಿಸಿಕೊಳ್ಳೋದ್ರಿಂದ ಜನರಲ್ಲಿ ತಮ್ಮ ಬಗ್ಗೆ ಕೀಳಾದ ಭಾವನೆ ಬಂದಿದೆ. ಅಷ್ಟೇ ಅಲ್ಲ ಅದನ್ನ ನೋಡ್ತಾ ನೋಡ್ತಾ ‘ಅವರೆಲ್ಲಾ ಜೀವನದಲ್ಲಿ ಮಜಾ ಮಾಡ್ತಾ ಖುಷಿಯಾಗಿದ್ದಾರೆ’ ಅಂತ ಯೋಚಿಸುತ್ತಾರೆ. ಆಗ ಒಂಟಿತನ ಕಾಡುತ್ತೆ.

ಯೋಚಿಸಿ: ಸೋಶಿಯಲ್‌ ಮೀಡಿಯಾ ಬಳಸುವಾಗ ಬೇರೆಯವರಿಗೆ ನಿಮ್ಮನ್ನ ಹೋಲಿಸದೆ ಇರೋಕೆ ಏನು ಮಾಡ್ತೀರಾ?—ಗಲಾತ್ಯ 6:4.

ತಮ್ಮ ಬಗ್ಗೆನೇ ಯೋಚಿಸೋದು

ಒಬ್ಬರು ಟೀಚರ್‌ ಹೇಳಿದ್ದು, ಅವರ ಕೆಲವು ವಿದ್ಯಾರ್ಥಿಗಳು ತುಂಬ ಸ್ವಾರ್ಥಿಗಳು. ತಮಗೋಸ್ಕರ ಕೆಲವು ವಿಷಯ ಮಾಡೋರನ್ನ ಮಾತ್ರ ಫ್ರೆಂಡ್ಸಾಗಿ ಇಟ್ಕೊಳ್ತಾರೆ. ಇಂಥವರು ತಮಗೇನು ಲಾಭ ಅಂತಷ್ಟೇ ನೋಡ್ತಾರೆ. ಇವರು ಫ್ರೆಂಡ್ಸನ್ನ ಕಂಪ್ಯೂಟರ್‌ ಅಥವಾ ಫೋನ್‌ ತರ ನೋಡ್ತಾರೆ. ಬೇಕಿದ್ದಾಗ ಬಳಸ್ತಾರೆ ಬೇಡದಿದ್ದಾಗ ಆಫ್‌ ಮಾಡ್ತಾರೆ.

ಯೋಚಿಸಿ: ಸೋಶಿಯಲ್‌ ಮೀಡಿಯಾದಲ್ಲಿ ನೀವು ಹಾಕೋ ವಿಡಿಯೋ, ಫೋಟೋಗಳು ಸೂಪರಾಗಿ ಇರ್ಬೇಕು, ಎಲ್ಲರೂ ನಿಮ್ಮನ್ನೇ ನೋಡಬೇಕು ಅಂತ ತೋರಿಸುತ್ತಾ?—ಗಲಾತ್ಯ 5:26.

ನೀವು ಮಾಡಬೇಕಾದ ವಿಷಯಗಳು

ತಂತ್ರಜ್ಞಾನವನ್ನು ಹೇಗೆ ಬಳಸ್ತಿದ್ದೀರಾ ಅಂತ ಪರೀಕ್ಷಿಸಿ

ತಂತ್ರಜ್ಞಾನ ನಿಮ್ಮ ದಾಸನಾಗಿದ್ರೆ ಫ್ರೆಂಡ್ಸ್‌ ಜೊತೆ ಮಾತಾಡೋಕೆ ಮತ್ತು ನಿಮ್ಮ ಗೆಳೆತನ ಗಟ್ಟಿ ಮಾಡೋಕೆ ಸಹಾಯ ಮಾಡುತ್ತೆ.

ಬೈಬಲ್‌ ತತ್ವ: “ಪ್ರೀತಿ ಇರುವವನು . . . ಸ್ವಾರ್ಥಿಯಾಗಿರಲ್ಲ.”—1 ಕೊರಿಂಥ 13:4, 5.

ನೀವು ಬದಲಾವಣೆ ಮಾಡಿಕೊಳ್ಳಲು ಬಯಸುವ ವಿಷಯಗಳಿಗೆ ಟಿಕ್‌ ಮಾಡಿ ಅಥವಾ ನಿಮಗೆ ಅನಿಸಿದ ಬೇರೆ ವಿಷಯಗಳನ್ನ ಬರೆಯಿರಿ.

  • ನಿಮ್ಮ ಫ್ರೆಂಡಿಗೆ ಮೆಸೇಜ್‌ ಅಥವಾ ಇಮೇಲ್‌ ಕಳಿಸೋ ಬದಲು ಅವರ ಜೊತೆ ನೇರವಾಗಿ ಮಾತಾಡಿ

  • ಬೇರೆಯವರ ಜೊತೆ ಮಾತಾಡುವಾಗ ಫೋನ್‌ ಸೈಲೆಂಟಲ್ಲಿ ಇಡಿ ಅಥವಾ ದೂರದಲ್ಲಿಡಿ

  • ಸೋಶಿಯಲ್‌ ಮೀಡಿಯಾದಲ್ಲಿ ನೀವು ಕಳೆಯೋ ಸಮಯವನ್ನು ಕಡಿಮೆ ಮಾಡಿ

  • ಬೇರೆಯವರು ಮಾತಾಡುವಾಗ ಚೆನ್ನಾಗಿ ಕೇಳಿಸಿಕೊಳ್ಳಿ

  • ಕಷ್ಟದಲ್ಲಿರೋ ಫ್ರೆಂಡ್‌ ಜೊತೆ ಮಾತಾಡಿ