ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

ದೇವರು ಸೃಷ್ಟಿಮಾಡಲು ಆರಂಭಿಸುತ್ತಾನೆ

ದೇವರು ಸೃಷ್ಟಿಮಾಡಲು ಆರಂಭಿಸುತ್ತಾನೆ

 ಮಗಿರುವ ಎಲ್ಲಾ ಒಳ್ಳೆಯ ವಸ್ತುಗಳು ದೇವರಿಂದಲೇ ಬಂದಿರುತ್ತವೆ. ಹಗಲಲ್ಲಿ ನಮಗೆ ಬೆಳಕನ್ನು ಕೊಡಲು ಸೂರ್ಯನನ್ನೂ ರಾತ್ರಿಯಲ್ಲಿ ನಾವು ಸ್ವಲ್ಪ ಬೆಳಕನ್ನು ಪಡೆಯುವಂತೆ ಚಂದ್ರ ಮತ್ತು ನಕ್ಷತ್ರಗಳನ್ನೂ ಆತನೇ ಉಂಟುಮಾಡಿದನು. ನಾವು ಸದಾ ಜೀವಿಸುತ್ತಾ ಇರಲಿಕ್ಕಾಗಿ ದೇವರು ಭೂಮಿಯನ್ನು ಉಂಟುಮಾಡಿದನು.

ಆದರೆ ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಭೂಮಿ ದೇವರು ಸೃಷ್ಟಿಸಿದ ಪ್ರಥಮ ವಸ್ತುಗಳಾಗಿರಲಿಲ್ಲ. ಮೊದಲನೆಯದು ಯಾವುದಾಗಿತ್ತೆಂದು ನಿಮಗೆ ಗೊತ್ತಿದೆಯೆ? ದೇವರು ಮೊದಲಾಗಿ ತನ್ನಂತಿರುವ ವ್ಯಕ್ತಿಗಳನ್ನು ಉಂಟುಮಾಡಿದನು. ದೇವರನ್ನು ನಾವು ಹೇಗೆ ನೋಡಸಾಧ್ಯವಿಲ್ಲವೋ ಹಾಗೆಯೇ ಈ ವ್ಯಕ್ತಿಗಳನ್ನೂ ನಾವು ನೋಡಲಾರೆವು. ಬೈಬಲ್‌ನಲ್ಲಿ ಈ ವ್ಯಕ್ತಿಗಳನ್ನು ದೇವದೂತರೆಂದು ಕರೆಯಲಾಗಿದೆ. ಪರಲೋಕದಲ್ಲಿ ತನ್ನೊಂದಿಗೆ ಜೀವಿಸುವಂತೆ ದೇವರು ಈ ದೂತರನ್ನು ಉಂಟುಮಾಡಿದನು.

ದೇವರು ಉಂಟುಮಾಡಿದ ಮೊದಲನೆಯ ದೇವದೂತನು ಅತಿ ವಿಶಿಷ್ಟನಾಗಿದ್ದನು. ಅವನು ದೇವರ ಪ್ರಥಮ ಪುತ್ರನು. ಅವನು ತನ್ನ ತಂದೆಯೊಂದಿಗೆ ಕೆಲಸಮಾಡಿದನು. ಬೇರೆ ಎಲ್ಲಾ ವಸ್ತುಗಳನ್ನು ಸೃಷ್ಟಿಸುವುದರಲ್ಲಿ ಅವನು ದೇವರಿಗೆ ಸಹಾಯಮಾಡಿದನು. ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ನಮ್ಮ ಭೂಮಿಯನ್ನು ಸಹ ಉಂಟುಮಾಡಲು ಅವನು ದೇವರಿಗೆ ನೆರವಾದನು.

ಆಗ ಭೂಮಿಯು ಹೇಗಿತ್ತು ಗೊತ್ತಾ? ಆರಂಭದಲ್ಲಿ ಯಾರೊಬ್ಬರೂ ಅದರ ಮೇಲೆ ಜೀವಿಸಸಾಧ್ಯವಿರಲಿಲ್ಲ. ಭೂಮಿಯ ಮೇಲೆಲ್ಲಾ ಒಂದು ದೊಡ್ಡ ಜಲಸಾಗರವಲ್ಲದೆ ಬೇರೇನೂ ಇರಲಿಲ್ಲ. ಆದರೆ ಭೂಮಿಯ ಮೇಲೆ ಜನರು ಜೀವಿಸಬೇಕೆಂದು ದೇವರು ಬಯಸಿದನು. ಆದುದರಿಂದ ಅವನು ನಮಗೆ ಬೇಕಾದದ್ದನ್ನೆಲ್ಲಾ ಸಿದ್ಧಮಾಡತೊಡಗಿದನು. ಆತನು ಏನು ಮಾಡಿದನು?

ಮೊದಲು ಭೂಮಿಗೆ ಬೆಳಕು ಬೇಕಿತ್ತು. ಆದುದರಿಂದ ಸೂರ್ಯನ ಬೆಳಕು ಭೂಮಿಯ ಮೇಲೆ ಬೆಳಗುವಂತೆ ದೇವರು ಮಾಡಿದನು. ಹೀಗೆ ಹಗಲು-ರಾತ್ರಿ ಎರಡನ್ನೂ ಉಂಟುಮಾಡಿದನು. ತದನಂತರ ದೇವರು ಸಾಗರದ ನೀರಿನೊಳಗಿಂದ ನೆಲವು ಮೇಲೆ ಬರುವಂತೆ ಮಾಡಿದನು.

ಮೊದಲಲ್ಲಿ ಭೂಮಿಯ ಮೇಲೆ ಏನೂ ಇರಲಿಲ್ಲ. ಅದು ನೀವು ಇಲ್ಲಿ ನೋಡುವ ಚಿತ್ರದಂತಿತ್ತು. ಯಾವ ಹೂವುಗಳಾಗಲಿ ಮರಗಳಾಗಲಿ ಪ್ರಾಣಿಗಳಾಗಲಿ ಅಲ್ಲಿರಲಿಲ್ಲ. ಸಮುದ್ರದಲ್ಲಿ ಯಾವ ಮೀನುಗಳೂ ಇರಲಿಲ್ಲ. ಪ್ರಾಣಿಗಳು ಮತ್ತು ಜನರು ಜೀವಿಸುತ್ತಾ ಇರುವಂತೆ ಭೂಮಿಯನ್ನು ಸುಂದರಗೊಳಿಸಲು ದೇವರಿಗೆ ಬಹಳ ಕೆಲಸವನ್ನು ಮಾಡಲಿಕ್ಕಿತ್ತು.