ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 8

ಭೂಮಿಯಲ್ಲಿ ಮಹಾಶರೀರಿಗಳು

ಭೂಮಿಯಲ್ಲಿ ಮಹಾಶರೀರಿಗಳು

ನಿಮ್ಮ ಮನೆಯ ಸೂರಿನಷ್ಟು ಎತ್ತರವಿರುವ ವ್ಯಕ್ತಿಯೊಬ್ಬನು ನಿಮ್ಮ ಕಡೆಗೆ ಬರುತ್ತಿರುವುದಾದರೆ ನಿಮಗೆ ಹೇಗೆ ಅನಿಸುತ್ತದೆ? ತುಂಬಾ ಭಯವಾಗುತ್ತದೆ ಅಲ್ಲವೆ? ಒಂದಾನೊಂದು ಕಾಲದಲ್ಲಿ ಭೂಮಿಯ ಮೇಲೆ ನಿಜವಾಗಿಯೂ ಅಂಥ ಮಹಾಶರೀರಿಗಳಿದ್ದರು. ಸ್ವರ್ಗದ ದೇವದೂತರು ಅವರ ತಂದೆಗಳಾಗಿದ್ದರೆಂದು ಬೈಬಲ್‌ ತೋರಿಸುತ್ತದೆ. ಆದರೆ ಅದು ಹೇಗೆ ಸಾಧ್ಯ?

ಕೆಟ್ಟ ದೂತನಾದ ಸೈತಾನನು ತೊಂದರೆ ಉಂಟುಮಾಡುವುದರಲ್ಲಿ ತೀರ ಕಾರ್ಯಮಗ್ನನಾಗಿದ್ದನು ಎಂಬುದನ್ನು ನೆನಪಿಸಿಕೊಳ್ಳಿ. ದೇವದೂತರನ್ನು ಕೆಟ್ಟವರನ್ನಾಗಿ ಮಾಡಲು ಸಹ ಅವನು ಪ್ರಯತ್ನಿಸುತ್ತಿದ್ದನು. ಸಮಯಾನಂತರ, ಈ ದೇವದೂತರಲ್ಲಿ ಕೆಲವರು ಸೈತಾನನ ಮಾತನ್ನು ಕೇಳಲು ಪ್ರಾರಂಭಿಸಿದರು. ಸ್ವರ್ಗದಲ್ಲಿ ದೇವರು ಅವರಿಗೆ ಮಾಡಲು ಕೊಟ್ಟಿದ್ದ ಕೆಲಸವನ್ನು ಅವರು ನಿಲ್ಲಿಸಿದರು. ಅವರು ಕೆಳಗೆ ಭೂಮಿಗೆ ಬಂದು ತಮಗಾಗಿ ಮನುಷ್ಯ ದೇಹಗಳನ್ನು ಮಾಡಿಕೊಂಡರು. ಯಾಕೆಂದು ನಿಮಗೆ ಗೊತ್ತೋ?

ಯಾಕೆಂದರೆ ಈ ದೇವರ ಕುಮಾರರು ಭೂಮಿಯ ಮೇಲೆ ಸುಂದರಿಯರಾದ ಸ್ತ್ರೀಯರನ್ನು ಕಂಡು ಅವರೊಂದಿಗೆ ಜೀವಿಸಲು ಬಯಸಿದರು ಎಂದು ಬೈಬಲ್‌ ಹೇಳುತ್ತದೆ. ಆದುದರಿಂದ ಅವರು ಭೂಮಿಗೆ ಬಂದು ಈ ಸ್ತ್ರೀಯರನ್ನು ಮದುವೆಯಾದರು. ಇದು ಕೆಟ್ಟದಾಗಿತ್ತೆಂದು ಬೈಬಲ್‌ ಹೇಳುತ್ತದೆ. ಯಾಕೆಂದರೆ ದೇವದೂತರನ್ನು ಸ್ವರ್ಗದಲ್ಲಿ ಜೀವಿಸುವುದಕ್ಕಾಗಿ ದೇವರು ಉಂಟುಮಾಡಿದನು.

ಭೂಮಿಗೆ ಬಂದಿದ್ದ ದೇವದೂತರ ಹೆಂಡತಿಯರಿಗೆ ಮಕ್ಕಳಾದಾಗ ಆ ಮಕ್ಕಳು ಭಿನ್ನರಾಗಿದ್ದರು. ಆರಂಭದಲ್ಲಿ ಅವರು ಅಷ್ಟೇನು ಭಿನ್ನರಾಗಿ ಕಂಡಿರಲಿಕ್ಕಿಲ್ಲ. ಆದರೆ ಅವರು ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವರಾಗಿ, ತುಂಬಾ ಶಕ್ತಿಶಾಲಿಗಳಾಗಿ ಕೊನೆಗೆ ಮಹಾಶರೀರಿಗಳಾದರು.

ಈ ಮಹಾಶರೀರಿಗಳು ಕೆಟ್ಟವರಾಗಿದ್ದರು. ಅವರು ಬಲಿಷ್ಠರೂ ಆಗಿದ್ದುದರಿಂದ ಜನರಿಗೆ ಹಾನಿಯನ್ನು ಮಾಡಿದರು. ಎಲ್ಲರೂ ತಮ್ಮಂತೆ ಕೆಟ್ಟವರಾಗಿರುವಂತೆ ಅವರು ಒತ್ತಾಯಿಸಲು ಪ್ರಯತ್ನಿಸಿದರು.

ಆ ಸಮಯದಲ್ಲಿ ಹನೋಕನು ಸತ್ತುಹೋಗಿದ್ದರೂ, ಭೂಮಿಯಲ್ಲಿ ಒಬ್ಬ ಒಳ್ಳೆಯ ಮನುಷ್ಯನಿದ್ದನು. ಆ ಮನುಷ್ಯನ ಹೆಸರು ನೋಹ. ದೇವರು ಏನು ಹೇಳುತ್ತಾನೋ ಅದನ್ನು ಅವನು ಯಾವಾಗಲೂ ಮಾಡುತ್ತಿದ್ದನು.

ಒಂದು ದಿನ ದೇವರು ನೋಹನಿಗೆ ಕೆಟ್ಟ ಜನರೆಲ್ಲರನ್ನು ನಾಶಮಾಡುವ ಸಮಯವು ಬಂದಿದೆಯೆಂದು ಹೇಳಿದನು. ಆದರೆ ದೇವರು ನೋಹನನ್ನು, ಅವನ ಕುಟುಂಬವನ್ನು ಮತ್ತು ಅನೇಕ ಪ್ರಾಣಿಗಳನ್ನು ರಕ್ಷಿಸಲಿಕ್ಕಿದ್ದನು. ದೇವರು ಇದನ್ನು ಹೇಗೆ ಮಾಡಿದನೆಂದು ನಾವು ನೋಡೋಣ.