ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3

ಐಗುಪ್ತದಿಂದ ಬಿಡುಗಡೆಯಾದ ಸಮಯದಿಂದ ಇಸ್ರಾಯೇಲಿನ ಮೊದಲನೆಯ ಅರಸನ ತನಕ

ಐಗುಪ್ತದಿಂದ ಬಿಡುಗಡೆಯಾದ ಸಮಯದಿಂದ ಇಸ್ರಾಯೇಲಿನ ಮೊದಲನೆಯ ಅರಸನ ತನಕ

ಮೋಶೆಯು ಇಸ್ರಾಯೇಲ್ಯರನ್ನು ಐಗುಪ್ತದ ಬಂದಿವಾಸದಿಂದ ಬಿಡಿಸಿ ಸೀನಾಯಿ ಬೆಟ್ಟಕ್ಕೆ ನಡೆಸಿದನು. ಅಲ್ಲಿ ದೇವರು ಅವರಿಗೆ ತನ್ನ ನಿಯಮಗಳನ್ನು ಕೊಟ್ಟನು. ತದನಂತರ, ಕಾನಾನ್‌ ದೇಶವನ್ನು ಗುಟ್ಟಾಗಿ ಸಂಚರಿಸಿ ನೋಡುವುದಕ್ಕಾಗಿ ಮೋಶೆಯು 12 ಮಂದಿ ಪುರುಷರನ್ನು ಕಳುಹಿಸಿದನು. ಆದರೆ ಅವರಲ್ಲಿ 10 ಮಂದಿ ಕೆಟ್ಟ ವರದಿಯೊಂದಿಗೆ ಹಿಂದಿರುಗಿದರು. ಅವರಿಂದಾಗಿ ಜನರು ತಿರುಗಿ ಐಗುಪ್ತಕ್ಕೆ ಹೋಗಲು ಬಯಸಿದರು. ಅವರ ನಂಬಿಕೆಯ ಕೊರತೆಯ ಕಾರಣ, ದೇವರು ಇಸ್ರಾಯೇಲ್ಯರನ್ನು 40 ವರ್ಷಗಳ ತನಕ ಅರಣ್ಯದಲ್ಲಿಯೇ ಅಲೆಯುವಂತೆ ಬಿಟ್ಟು ಶಿಕ್ಷಿಸಿದನು.

ಕೊನೆಗೆ, ಇಸ್ರಾಯೇಲ್ಯರನ್ನು ಕಾನಾನ್‌ ದೇಶದೊಳಗೆ ನಡೆಸಲು ಯೆಹೋವನು ಯೆಹೋಶುವನನ್ನು ಆರಿಸಿದನು. ಅವರು ದೇಶವನ್ನು ವಶಪಡಿಸಿಕೊಳ್ಳಲು ಸಹಾಯಮಾಡಲಿಕ್ಕಾಗಿ ಯೆಹೋವನು ಅದ್ಭುತಗಳನ್ನು ನಡೆಸಿದನು. ಯೊರ್ದನ್‌ ಹೊಳೆ ಹರಿಯುವುದು ನಿಲ್ಲುವಂತೆ, ಯೆರಿಕೋ ಪಟ್ಟಣದ ಗೋಡೆಗಳು ಬೀಳುವಂತೆ ಮತ್ತು ಸೂರ್ಯನು ಒಂದು ಇಡೀ ದಿನ ಸ್ತಬ್ಧನಾಗಿ ನಿಲ್ಲುವಂತೆ ಆತನು ಮಾಡಿದನು. ಆರು ವರ್ಷಗಳ ಅನಂತರ ದೇಶವನ್ನು ಕಾನಾನ್ಯರಿಂದ ವಶಪಡಿಸಿಕೊಳ್ಳಲಾಯಿತು.

ಯೆಹೋಶುವನಿಂದ ಆರಂಭಿಸಿ 356 ವರ್ಷಗಳ ತನಕ ಇಸ್ರಾಯೇಲ್‌ನಲ್ಲಿ ನ್ಯಾಯಸ್ಥಾಪಕರು ಆಳ್ವಿಕೆ ನಡೆಸಿದರು. ಬಾರಾಕ, ಗಿದ್ಯೋನ, ಯೆಪ್ತಾಹ, ಸಂಸೋನ ಮತ್ತು ಸಮುವೇಲರ ಸಮೇತ ಅವರಲ್ಲಿ ಅನೇಕರ ಕುರಿತು ನಾವು ಕಲಿಯುತ್ತೇವೆ. ರಾಹಾಬ್‌, ದೆಬೋರ, ಯಾಯೇಲ್‌, ರೂತ್‌, ನೊವೊಮಿ ಮತ್ತು ದೆಲೀಲಾರಂಥ ಸ್ತ್ರೀಯರ ಕುರಿತೂ ನಾವು ಓದುತ್ತೇವೆ. ಒಟ್ಟಿಗೆ ಭಾಗ ಮೂರು 396 ವರ್ಷಗಳ ಇತಿಹಾಸವನ್ನು ಆವರಿಸುತ್ತದೆ.

 

ಈ ಭಾಗದಲ್ಲಿ

ಕಥೆ 34

ಹೊಸ ವಿಧದ ಆಹಾರ

ದೇವರು ಕೊಟ್ಟ ಈ ವಿಶೇಷ ಆಹಾರ ಆಕಾಶದಿಂದ ಬೀಳುತ್ತಿತ್ತು.

ಕಥೆ 35

ಯೆಹೋವನು ನಿಯಮಗಳನ್ನು ಕೊಡುತ್ತಾನೆ

ದಶಾಜ್ಞೆಗಳಿಗಿಂತ ಪ್ರಾಮುಖ್ಯವಾಗಿರುವ ಎರಡು ನಿಯಮಗಳು ಯಾವುವು?

ಕಥೆ 36

ಚಿನ್ನದ ಬಸವ

ಜನರು ಯಾಕೆ ತಮ್ಮ ಕಿವಿಯೋಲೆಗಳನ್ನು ಕರಗಿಸಿ ಮಾಡಿದ ಮೂರ್ತಿಯನ್ನು ಆರಾಧಿಸುತ್ತಾರೆ?

ಕಥೆ 37

ಆರಾಧನೆಗಾಗಿ ಒಂದು ಡೇರೆ

ಅದರ ಚಿಕ್ಕ ಕೋಣೆಯಲ್ಲಿ ಒಡಂಬಡಿಕೆಯ ಮಂಜೂಷವಿದೆ.

ಕಥೆ 38

ಹನ್ನೆರಡು ಗೂಢಚಾರರು

10 ಮಂದಿ ಒಂದು ರೀತಿಯಾಗಿ ವರದಿ ಹೇಳಿದರೆ, ಉಳಿದ ಇಬ್ಬರು ಮಂದಿ ಬೇರೆ ರೀತಿಯಾಗಿ ಹೇಳುತ್ತಾರೆ. ಯಾರ ವರದಿಯನ್ನು ಇಸ್ರಾಯೇಲ್ಯರು ನಂಬುತ್ತಾರೆ?

ಕಥೆ 39

ಆರೋನನ ಕೋಲು ಹೂಬಿಡುತ್ತದೆ

ರಾತ್ರಿ ಬೆಳಗಾಗುವುದರೊಳಗೆ ಜೀವವಿಲ್ಲದ ಮರದ ತುಂಡಿನಲ್ಲಿ ಹೂವು ಅರಳಿ ಹಣ್ಣುಗಳು ಹೇಗೆ ಬೆಳೆದವು?

ಕಥೆ 40

ಮೋಶೆ ಬಂಡೆಯನ್ನು ಹೊಡೆಯುತ್ತಾನೆ

ಮೋಶೆ ಬಂಡೆಗೆ ಬಡಿದಾಗ ನೀರು ಬಂತು, ಆದರೆ ಅದೇ ಸಮಯದಲ್ಲಿ ಯೆಹೋವನಿಗೆ ಮೋಶೆಯ ಮೇಲೆ ಸಿಟ್ಟುಬಂತು.

ಕಥೆ 41

ತಾಮ್ರದ ಸರ್ಪ

ಇಸ್ರಾಯೇಲ್ಯರಿಗೆ ಕಚ್ಚುವಂತೆ ಹಾವುಗಳನ್ನು ದೇವರು ಕಳುಹಿಸಿದ್ದೇಕೆ?

ಕಥೆ 42

ಕತ್ತೆ ಮಾತಾಡುತ್ತದೆ

ಕತ್ತೆಗೆ ಏನೋ ಕಾಣಿಸುತ್ತದೆ, ಆದರೆ ಅದು ಬಿಳಾಮನಿಗೆ ಕಾಣಿಸುವುದಿಲ್ಲ.

ಕಥೆ 43

ಯೆಹೋಶುವನು ನಾಯಕನಾಗುತ್ತಾನೆ

ಮೋಶೆಯು ಇನ್ನೂ ಸುದೃಢನಾಗಿದ್ದಾನೆ, ಹಾಗಿದ್ದ ಮೇಲೆ ಯಾಕೆ ಯೆಹೋಶುವನನ್ನು ಮೋಶೆಗೆ ಬದಲಾಗಿ ನಾಯಕನಾಗಿ ನೇಮಿಸಲಾಯಿತು?

ಕಥೆ 44

ರಾಹಾಬಳು ಗೂಢಚಾರರನ್ನು ಅಡಗಿಸಿಡುತ್ತಾಳೆ

ರಾಹಾಬಳು ಇಬ್ಬರು ಪುರುಷರಿಗೆ ಹೇಗೆ ಸಹಾಯ ಮಾಡುತ್ತಾಳೆ? ಅವರಿಂದ ಅವಳು ಯಾವ ಸಹಾಯ ಕೇಳುತ್ತಾಳೆ?

ಕಥೆ 45

ಯೊರ್ದನ್‌ ಹೊಳೆಯನ್ನು ದಾಟುವುದು

ಯಾಜಕರು ನೀರಿನಲ್ಲಿ ಕಾಲಿಟ್ಟ ಕೂಡಲೇ ಒಂದು ಅದ್ಭುತ ನಡೆಯುತ್ತದೆ.

ಕಥೆ 46

ಯೆರಿಕೋವಿನ ಗೋಡೆಗಳು

ಒಂದು ಕೆಂಪು ದಾರದಿಂದಾಗಿ ಹೇಗೆ ಗೋಡೆ ಸ್ಥಿರವಾಗಿ ನಿಲ್ಲುತ್ತದೆ?

ಕಥೆ 47

ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ

ಒಬ್ಬ ಕೆಟ್ಟ ಮನುಷ್ಯನಿಂದ ಇಡೀ ಜನಾಂಗಕ್ಕೆ ಆಪತ್ತನ್ನು ಬರಬಲ್ಲದೇ?

ಕಥೆ 48

ವಿವೇಕಿಗಳಾದ ಗಿಬ್ಯೋನ್ಯರು

ಅವರು ಉಪಾಯಮಾಡಿ ಯೆಹೋಶುವನು ಮತ್ತು ಇಸ್ರಾಯೇಲ್ಯರು ತಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮಾಡುತ್ತಾರೆ. ಇಸ್ರಾಯೇಲ್ಯರು ತಮ್ಮ ಮಾತನಂತೆ ನಡೆಯುತ್ತಾರೆ.

ಕಥೆ 49

ಸೂರ್ಯನು ಕದಲದೆ ನಿಲ್ಲುತ್ತಾನೆ

ದೇವರು ಯೆಹೋಶುವನಿಗಾಗಿ ಒಂದು ಅದ್ಭುತ ಮಾಡುತ್ತಾನೆ. ಹಿಂದೆಂದೂ ಮಾಡಿರದ, ಅದರ ನಂತರವೂ ಮಾಡಿರದ ಅದ್ಭುತವದು!

ಕಥೆ 50

ಧೀರೆಯರಾದ ಇಬ್ಬರು ಸ್ತ್ರೀಯರು

ಬಾರಾಕ ಇಸ್ರಾಯೇಲ್ಯರನ್ನು ಯುದ್ಧಕ್ಕೆ ನಡೆಸಿದರು ಆದರೆ ಯಾಯೇಲಳಿಗೆ ಯಾಕೆ ಹೆಸರು ಬಂತು?

ಕಥೆ 51

ರೂತ್‌ ಮತ್ತು ನೊವೊಮಿ

ರೂತಳು ತನ್ನ ಮನೆಯನ್ನು ಬಿಟ್ಟು ನೊವೋಮಿಯ ಜೊತೆ ವಾಸಿಸುತ್ತಾಳೆ ಮತ್ತು ಯೆಹೋವನನ್ನು ಆರಾಧಿಸುತ್ತಾಳೆ.

ಕಥೆ 52

ಗಿದ್ಯೋನ ಮತ್ತು ಅವನ 300 ಪುರುಷರು

ನೀರನ್ನು ಹೇಗೆ ಕುಡಿಯುತ್ತಾರೆ ಅನ್ನೋ ವಿಚಿತ್ರ ಪರೀಕ್ಷೆಯ ಮೂಲಕ ಯೆಹೋವನು ಈ ಚಿಕ್ಕ ಸೈನ್ಯವನ್ನು ಆರಿಸುತ್ತಾನೆ.

ಕಥೆ 53

ಯೆಪ್ತಾಹನ ವಚನ

ಯೆಪ್ತಾಹನ ವಚನ ತನ್ನನ್ನು ಮಾತ್ರವಲ್ಲ ತನ್ನ ಮಗಳನ್ನೂ ಬಾಧಿಸಿತು.

ಕಥೆ 54

ಅತಿ ಬಲಿಷ್ಠ ಪುರುಷ

ಸಂಸೋನನಿಗಿರುವ ಶಕ್ತಿಯ ಗುಟ್ಟು ದೆಲೀಲಾಗೆ ಹೇಗೆ ಗೋತ್ತಾಯಿತು?

ಕಥೆ 55

ಪುಟ್ಟ ಬಾಲಕನು ದೇವರ ಸೇವೆಮಾಡುತ್ತಾನೆ

ಬಾಲಕ ಸಮುವೇಲನ ಮೂಲಕ ದೇವರು ಏಲೀಯನಿಗೆ ದುಃಖದ ಒಂದು ಸಂದೇಶವನ್ನು ತಿಳಿಸುತ್ತಾರಿ.