ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 5

ಬಾಬೆಲಿನ ಬಂದಿವಾಸದಿಂದ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವ ತನಕ

ಬಾಬೆಲಿನ ಬಂದಿವಾಸದಿಂದ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವ ತನಕ

ಇಸ್ರಾಯೇಲ್ಯರು ಬಾಬೆಲಿನಲ್ಲಿ ಬಂದಿಯಾಗಿರುವಾಗ ಅನೇಕ ಪರೀಕ್ಷೆಗಳನ್ನು ಎದುರಿಸಿದರು. ಇದು ಅವರ ನಂಬಿಕೆಯನ್ನು ಪರೀಕ್ಷಿಸಿದವು. ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಇವರನ್ನು ಧಗಧಗನೆ ಉರಿಯುವ ಬೆಂಕಿಯಲ್ಲಿ ಹಾಕಲಾಯಿತು. ಆದರೆ ದೇವರು ಅವರನ್ನು ಆ ಬೆಂಕಿಯಿಂದ ಕಾಪಾಡಿದನು. ತದನಂತರ, ಮೇದ್ಯಯ ಮತ್ತು ಪಾರಸಿಯರಿಂದ ಬಾಬೆಲ್‌ ಸೋಲಿಸಲ್ಪಟ್ಟಾಗ, ದಾನಿಯೇಲನು ಸಿಂಹಗಳ ಗುಹೆಯೊಳಗೆ ಹಾಕಲ್ಪಟ್ಟನು. ಆದರೆ ದೇವರು ಆ ಸಿಂಹಗಳ ಬಾಯಿಗಳನ್ನು ಕಟ್ಟಿ ಅವನನ್ನೂ ಕಾಪಾಡಿದನು.

ಕೊನೆಗೆ, ಪಾರಸಿಯ ಅರಸ ಕೋರೆಷನು ಇಸ್ರಾಯೇಲ್ಯರನ್ನು ಬಿಡುಗಡೆಮಾಡಿದನು. ಅವರು ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಟ್ಟು ಸರೀ 70 ವರ್ಷಗಳ ಅನಂತರ ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. ಯೆರೂಸಲೇಮಿಗೆ ಹಿಂದಿರುಗಿದಾಗ ಅವರು ಮಾಡಿದ ಮೊದಲ ಕೆಲಸವೆಂದರೆ ಯೆಹೋವನ ಆಲಯವನ್ನು ಕಟ್ಟಲಾರಂಭಿಸಿದ್ದೇ. ಆದರೆ, ಶತ್ರುಗಳು ಬೇಗನೆ ಅವರ ಕೆಲಸಕ್ಕೆ ತಡೆಯುಂಟುಮಾಡಿದರು. ಹೀಗೆ ಕಟ್ಟಕಡೆಗೆ ಅವರು ಆಲಯವನ್ನು ಕಟ್ಟಿಮುಗಿಸಿದ್ದು ಯೆರೂಸಲೇಮಿಗೆ ಹಿಂದಿರುಗಿ ಸುಮಾರು 22 ವರುಷಗಳ ಅನಂತರ.

ಆಮೇಲೆ, ಆಲಯವನ್ನು ಅಂದಗೊಳಿಸಲಿಕ್ಕಾಗಿ ಎಜ್ರನು ಯೆರೂಸಲೇಮಿಗೆ ಮಾಡಿದ ಪ್ರಯಾಣದ ಕುರಿತು ನಾವು ಕಲಿಯಲಿದ್ದೇವೆ. ಇದು ಆಲಯ ಕಟ್ಟಿ ಮುಗಿದ ಸುಮಾರು 47 ವರುಷಗಳ ಅನಂತರ ನಡೆಯಿತು. ಎಜ್ರನ ಪ್ರಯಾಣದ 13 ವರ್ಷಗಳ ತರುವಾಯ ಯೆರೂಸಲೇಮಿನ ಮುರಿದು-ಬಿದ್ದ ಗೋಡೆಗಳನ್ನು ಪುನಃ ಕಟ್ಟಲು ನೆಹೆಮೀಯನು ಸಹಾಯಮಾಡುತ್ತಾನೆ. ಭಾಗ ಐದು ಈ ಸಮಯದ ವರೆಗೆ 152 ವರ್ಷಗಳ ಇತಿಹಾಸವನ್ನು ಆವರಿಸುತ್ತದೆ.

 

ಈ ಭಾಗದಲ್ಲಿ

ಕಥೆ 77

ಅವರು ಅಡ್ಡಬೀಳುವುದಿಲ್ಲ

ಈ ಮೂವರು ಒಳ್ಳೇ ವಿಧೇಯ ಯುವಕರನ್ನು ಬೆಂಕಿಯಲ್ಲಿ ಸುಡುವಂತೆ ದೇವರು ಬಿಡುತ್ತಾನಾ? ನೋಡೋಣ ಬನ್ನಿ.

ಕಥೆ 78

ಗೋಡೆಯ ಮೇಲೆ ಕೈಬರಹ

ನಾಲ್ಕು ನಿಗೂಢ ಪದಗಳ ಅರ್ಥವನ್ನು ದಾನಿಯೇಲನು ಬಿಡಿಸಿ ಹೇಳುತ್ತಾನೆ.

ಕಥೆ 79

ಸಿಂಹಗಳ ಗವಿಯಲ್ಲಿ ದಾನಿಯೇಲ

ದಾನಿಯೇಲನಿಗೆ ಬಂದ ಮರಣ ಶಿಕ್ಷೆಯನ್ನು ಅವನು ತಪ್ಪಿಸಿಕೊಳ್ಳಬಹುದಿತ್ತಾ?

ಕಥೆ 80

ದೇವಜನರು ಬಾಬೆಲನ್ನು ಬಿಟ್ಟುಬರುತ್ತಾರೆ

ಪಾರಸಿಯ ರಾಜ ಬಾಬೆಲನ್ನು ಮುತ್ತಿಗೆ ಹಾಕುವ ಮೂಲಕ ಬೈಬಲಿನ ಒಂದು ಪ್ರವಾದನೆಯನ್ನು ನೆರವೇರಿಸಿದ, ಈಗ ಇನ್ನೊಂದನ್ನೂ ನೆರವೇರಸಲಿದ್ದಾನೆ.

ಕಥೆ 81

ದೇವರ ಸಹಾಯದಲ್ಲಿ ಭರವಸೆ

ದೇವರಿಗೆ ವಿಧೇಯರಾಗಲು ಇಸ್ರಾಯೇಲ್ಯರು ಮನುಷ್ಯರ ಆಜ್ಞೆಯನ್ನು ಮೀರುತ್ತಾರೆ. ದೇವರು ಅವರನ್ನು ಆಶೀರ್ವದಿಸಿದನಾ?

ಕಥೆ 82

ಮೊರ್ದೆಕೈ ಮತ್ತು ಎಸ್ತೇರ್‌

ರಾಣಿ ವಷ್ಟಿ ಸುಂದರಿಯಾಗಿದ್ದಳು. ಆದರೂ ರಾಜ ಅಹಶ್ವೇರೋಷನು ವಷ್ಟಿಯ ಬದಲಾಗಿ ಎಸ್ತೇರಳನ್ನು ರಾಣಿಯಾಗಿ ಮಾಡಿದನು. ಏಕೆ?

ಕಥೆ 83

ಯೆರೂಸಲೇಮಿನ ಗೋಡೆಗಳು

ಗೋಡೆ ಕಟ್ಟುವಾಗ ಕೆಲಸಗಾರರು ಹಗಲು ರಾತ್ರಿ ತಮ್ಮ ಕತ್ತಿ ಮತ್ತು ಬರ್ಜಿಗಳನ್ನು ತಯಾರಾಗಿ ಇಟ್ಟಿರಬೇಕಿತ್ತು.