ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 6

ಯೇಸುವಿನ ಜನನದಿಂದ ಮರಣದ ತನಕ

ಯೇಸುವಿನ ಜನನದಿಂದ ಮರಣದ ತನಕ

ದೇವರು ಗಬ್ರಿಯೇಲನೆಂಬ ದೇವದೂತನನ್ನು ಮರಿಯಳೆಂಬ ಒಳ್ಳೆಯ ಯುವತಿಯ ಬಳಿಗೆ ಕಳುಹಿಸಿದನು. ಆಕೆ ಒಂದು ಮಗುವನ್ನು ಹೆರುವಳೆಂದು ಮತ್ತು ಅವನು ರಾಜನಾಗಿ ಸದಾಕಾಲ ಆಳುವನೆಂದು ಆ ದೂತನು ಅವಳಿಗೆ ತಿಳಿಸಿದನು. ಆ ಕೂಸು ಅಂದರೆ ಯೇಸು ಒಂದು ಹಟ್ಟಿಯಲ್ಲಿ ಜನಿಸಿದನು. ಕುರುಬರು ಅಲ್ಲಿ ಹೋಗಿ ಅವನನ್ನು ನೋಡಿದರು. ತದನಂತರ, ಒಂದು ನಕ್ಷತ್ರವು ಪೂರ್ವ ದೇಶದ ಜನರನ್ನು ಈ ಎಳೆಯ ಕೂಸಿನ ಬಳಿಗೆ ನಡೆಸಿತು. ಆ ನಕ್ಷತ್ರವನ್ನು ಅವರು ಕಾಣುವಂತೆ ಮಾಡಿದವನು ಯಾರೆಂದು ನಾವು ಕಲಿಯಲಿದ್ದೇವೆ. ಅಲ್ಲದೆ ಯೇಸುವನ್ನು ಕೊಲ್ಲಲು ಮಾಡಲಾದ ಪ್ರಯತ್ನಗಳಿಂದ ಅವನು ಹೇಗೆ ಸಂರಕ್ಷಿಸಲ್ಪಟ್ಟನೆಂದೂ ಕಲಿಯುತ್ತೇವೆ.

ಆಮೇಲೆ, ಯೇಸು 12 ವರ್ಷ ಪ್ರಾಯದಲ್ಲಿ ದೇವಾಲಯದಲ್ಲಿ ಬೋಧಕರೊಂದಿಗೆ ಮಾತಾಡಿದ್ದನ್ನು ನಾವು ಕಾಣುತ್ತೇವೆ. ಇದಾಗಿ ಹದಿನೆಂಟು ವರ್ಷಗಳ ಅನಂತರ ಯೇಸುವಿಗೆ ದೀಕ್ಷಾಸ್ನಾನವಾಯಿತು. ಅನಂತರ, ದೇವರು ಅವನನ್ನು ಭೂಮಿಗೆ ಯಾಕಾಗಿ ಕಳುಹಿಸಿದನೋ ಆ ಕೆಲಸವನ್ನು ಮಾಡಲು ಅಂದರೆ ದೇವರ ರಾಜ್ಯದ ಕುರಿತು ಸಾರಲು ಮತ್ತು ಕಲಿಸಲು ಅವನು ಪ್ರಾರಂಭಿಸಿದನು. ಈ ಕಾರ್ಯದಲ್ಲಿ ನೆರವಾಗಲು ಯೇಸು 12 ಮಂದಿ ಪುರುಷರನ್ನು ಆರಿಸಿಕೊಂಡು, ಅವರನ್ನು ತನ್ನ ಅಪೊಸ್ತಲರನ್ನಾಗಿ ಮಾಡಿದನು.

ಯೇಸು ಅನೇಕ ಅದ್ಭುತಗಳನ್ನೂ ಮಾಡಿದನು. ಕೆಲವೇ ಮೀನುಗಳಿಂದ ಮತ್ತು ರೊಟ್ಟಿಗಳಿಂದ ಅವನು ಸಾವಿರಾರು ಜನರಿಗೆ ಉಣಿಸಿದನು. ರೋಗಿಗಳನ್ನು ವಾಸಿಮಾಡಿದನು. ಸತ್ತವರನ್ನು ಕೂಡ ಎಬ್ಬಿಸಿದನು. ಯೇಸುವಿನ ಜೀವನದ ಕೊನೆಯಲ್ಲಿ ಸಂಭವಿಸಿದ ಅನೇಕ ಸಂಗತಿಗಳ ಕುರಿತು ಮತ್ತು ಅವನು ಹೇಗೆ ಕೊಲ್ಲಲ್ಪಟ್ಟನೆಂಬದರ ಕುರಿತು ನಾವು ಕೊನೆಯಲ್ಲಿ ಕಲಿಯುತ್ತೇವೆ. ಯೇಸು ಸುಮಾರು ಮೂರೂವರೆ ವರ್ಷ ಸಾರಿದನು. ಹೀಗೆ ಭಾಗ ಆರು ಮೂವತ್ತನಾಲ್ಕು ವರ್ಷಗಳಿಗಿಂತ ತುಸು ಹೆಚ್ಚಿನ ಸಮಯಾವಧಿಯನ್ನು ಆವರಿಸುತ್ತದೆ.

 

ಈ ಭಾಗದಲ್ಲಿ

ಕಥೆ 84

ಒಬ್ಬ ದೇವದೂತನು ಮರಿಯಳನ್ನು ಭೇಟಿಯಾಗುತ್ತಾನೆ

ದೇವರಿಂದ ಒಂದು ಸಂದೇಶವನ್ನು ಅವನು ತರುತ್ತಾನೆ: ನಿತ್ಯಕ್ಕೂ ರಾಜನಾಗಿರುವ ಒಂದು ಮಗು ಅವಳಿಗೆ ಹುಟ್ಟುತ್ತದೆ.

ಕಥೆ 85

ಯೇಸು ಒಂದು ಹಟ್ಟಿಯಲ್ಲಿ ಜನಿಸುತ್ತಾನೆ

ಭವಿಷ್ಯದಲ್ಲಿ ರಾಜ ಆಗಲಿದ್ದವನು ಪ್ರಾಣಿಗಳ ಹಟ್ಟಿಯಲ್ಲಿ ಯಾಕೆ ಹುಟ್ಟಿದ?

ಕಥೆ 86

ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು

ಪುರುಷರನ್ನು ಯೇಸುವಿನ ಹತ್ತಿರ ಮಾರ್ಗದರ್ಶಿಸಿದ್ದು ಯಾರು? ಉತ್ತರ ನಿಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ.

ಕಥೆ 87

ಬಾಲಕನಾದ ಯೇಸು ದೇವಾಲಯದಲ್ಲಿ

ದೇವಾಲಯದ ಹಿರಿಪುರುಷರು ಸಹ ಅವನನ್ನು ಕಂಡು ಆಶ್ಚರ್ಯಪಡುವಂತ ವಿಷಯ ಯೇಸುವಿನಲ್ಲಿತ್ತು.

ಕಥೆ 88

ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ

ಯೋಹಾನನು ಪಾಪಿಗಳಿಗೆ ದೀಕ್ಷಾಸ್ನಾನ ಕೂಡುತ್ತಿದ್ದ ಯೊರ್ದಾನ್‌ ಹೊಲೆಗೆ ಯೇಸು ಬರುತ್ತಾನೆ. ಯೇಸು ಯಾವತ್ತೂ ಪಾಪಮಾಡಿಲ್ಲ. ಆದರೆ ಯೋಹಾನ ಯಾಕೆ ಯೇಸುವಿಗೆ ದೀಕ್ಷಾಸ್ನಾನ ಕೊಡುತ್ತಾನೆ?

ಕಥೆ 89

ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ

ಯೇಸುವಿನ ಕೋಪ ಅವನಿಗೆಷ್ಟು ಪ್ರೀತಿ ಇತ್ತೆಂದು ತೋರಿಸಿತು.

ಕಥೆ 90

ಬಾವಿಯ ಬಳಿ ಸ್ತ್ರೀಯೊಂದಿಗೆ

ಯೇಸು ಕೊಡುವ ನೀರನ್ನು ಕುಡಿದರೆ ಆ ಸ್ತ್ರೀಗೆ ಬಾಯರಿಕೆಯೇ ಆಗದಿರುವುದು ಹೇಗೆ?

ಕಥೆ 91

ಯೇಸು ಪರ್ವತದ ಮೇಲೆ ಕಲಿಸುತ್ತಾನೆ

ಅವನ ಪರ್ವತ ಪ್ರಸಂಗದಲ್ಲಿ ಎಂದೆಂದಿಗೂ ಬೆಲೆಬಾಳುವ ಪಾಠಗಳನ್ನು ಕಲಿಯಿರಿ.

ಕಥೆ 92

ಯೇಸು ಸತ್ತವರನ್ನು ಎಬ್ಬಿಸುತ್ತಾನೆ

ದೇವರ ಶಕ್ತಿಯನ್ನು ಬಳಸಿ ಯೇಸು ಬರೀ ಎರಡೇ ಪದಗಳನ್ನು ಹೇಳಿದನು. ಹೀಗೆ ಯಾಯೀರನ ಮಗಳನ್ನು ಪುನರುತ್ಥಾನ ಮಾಡಿದನು.

ಕಥೆ 93

ಯೇಸು ಅನೇಕ ಜನರಿಗೆ ಉಣಿಸುತ್ತಾನೆ

ಅದ್ಭುತವಾಗಿ ಸಾವಿರಾರು ಮಂದಿಗೆ ಉಣಿಸುವ ಮೂಲಕ ಯೇಸು ಯಾವ ವಿಷಯವನ್ನು ಸಾಬೀತುಪಡಿಸಿದನು?

ಕಥೆ 94

ಅವನು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆ

ಚಿಕ್ಕ ಮಕ್ಕಳ ಕುರಿತು ಅಷ್ಟೇ ಅಲ್ಲ, ಚಿಕ್ಕ ಮಕ್ಕಳಿಂದ ಸಹ ತುಂಬ ವಿಷಯಗಳನ್ನು ತನ್ನ ಅಪೋಸ್ತಲರು ಕಲಿಯಲಿಕ್ಕಿದೆ ಎಂದು ಯೇಸು ಹೇಳಿದನು.

ಕಥೆ 95

ಯೇಸು ಕಲಿಸುವ ವಿಧ

ಪಕ್ಕದ ಊರಿನ ಸಮಾರ್ಯದವನ ದೃಷ್ಟಾಂತ ಯೇಸುವಿನ ಬೋಧನೆ ಹೇಗಿತ್ತು ಎಂಬುದಕ್ಕೊಂದು ಉದಾಹರಣೆ.

ಕಥೆ 96

ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ

ಯೇಸು ಅಧ್ಬುತಗಳನ್ನು ಮಾಡುವ ಮೂಲಕ ಏನನ್ನು ಸಾಬೀತುಪಡಿಸಿದನು?

ಕಥೆ 97

ಯೇಸು ರಾಜನೋಪಾದಿ ಬರುತ್ತಾನೆ

ದೊಡ್ಡ ಗುಂಪೊಂದು ಅವನನ್ನು ಸ್ವಾಗತಿಸುತ್ತೆ. ಆದರೆ ಎಲ್ಲರಿಗೂ ಇದರ ಬಗ್ಗೆ ಸಂತೋಷವಿಲ್ಲ.

ಕಥೆ 98

ಆಲಿವ್‌ ಮರಗಳ ಗುಡ್ಡದ ಮೇಲೆ

ನಮ್ಮ ಸಮಯಗಳಲ್ಲಿ ಆಗುತ್ತಿರುವ ಸಂಗತಿಗಳ ಬಗ್ಗೆ ಯೇಸು ತನ್ನ ನಾಲ್ಕು ಮಂದಿ ಶಿಷ್ಯರಿಗೆ ಹೇಳುತ್ತಿದ್ದಾನೆ.

ಕಥೆ 99

ಮಾಳಿಗೆಯ ಒಂದು ಕೋಣೆಯಲ್ಲಿ

ಈ ವಿಶೇಷ ಭೋಜನವನ್ನು ಪ್ರತಿ ವರ್ಷ ಮಾಡಬಬೇಕೆಂದು ಯೇಸು ಹೇಳಿದ್ದೇಕೆ?

ಕಥೆ 100

ತೋಟದಲ್ಲಿ ಯೇಸು

ಯೂದನು ಯೇಸುವಿಗೆ ಮುದ್ದಿಟ್ಟು ದ್ರೋಹವೆಸಗಿದ್ದು ಏಕೆ?

ಕಥೆ 101

ಯೇಸು ಕೊಲ್ಲಲ್ಪಡುತ್ತಾನೆ

ಕಂಬದ ಮೇಲೆ ತೂಗುಹಾಕಿದ್ದಾಗ ಯೇಸು ಪರದೈಸಿನ ಬಗ್ಗೆ ವಚನಕೊಟ್ಟನು.