ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 7

ಯೇಸುವಿನ ಪುನರುತ್ಥಾನದಿಂದ ಪೌಲನ ಸೆರೆವಾಸದ ತನಕ

ಯೇಸುವಿನ ಪುನರುತ್ಥಾನದಿಂದ ಪೌಲನ ಸೆರೆವಾಸದ ತನಕ

ಯೇಸು ತನ್ನ ಮರಣದ ನಂತರ ಮೂರನೆಯ ದಿನದಲ್ಲಿ ಪುನರುತ್ಥಾನಗೊಳಿಸಲ್ಪಟ್ಟನು. ಆ ದಿನದಲ್ಲಿ ಅವನು ತನ್ನ ಹಿಂಬಾಲಕರಿಗೆ ಐದು ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಿಸಿಕೊಂಡನು. 40 ದಿನಗಳ ತನಕ ಅವನು ಅವರಿಗೆ ಪದೇ ಪದೇ ಕಾಣಿಸಿಕೊಂಡನು. ಅನಂತರ, ತನ್ನ ಕೆಲವು ಶಿಷ್ಯರು ನೋಡುತ್ತಿದ್ದಂತೆಯೇ ಯೇಸು ಪರಲೋಕಕ್ಕೆ ಏರಿಹೋದನು. ಹತ್ತು ದಿನಗಳ ತರುವಾಯ ಯೆರೂಸಲೇಮಿನಲ್ಲಿದ್ದ ಯೇಸುವಿನ ಹಿಂಬಾಲಕರ ಮೇಲೆ ದೇವರು ಪವಿತ್ರಾತ್ಮವನ್ನು ಸುರಿಸಿದನು.

ತದನಂತರ, ದೇವರ ಶತ್ರುಗಳು ಅಪೊಸ್ತಲರನ್ನು ಸೆರೆಮನೆಯೊಳಗೆ ಹಾಕಿಸಿದರು. ಆದರೆ ಒಬ್ಬ ದೇವದೂತನು ಅವರನ್ನು ಬಿಡಿಸಿದನು. ಶಿಷ್ಯ ಸ್ತೆಫನನು ವಿರೋಧಿಗಳಿಂದ ಕಲ್ಲೆಸೆಯಲ್ಪಟ್ಟು ಕೊಲ್ಲಲ್ಪಟ್ಟನು. ಆದರೆ ಆ ವಿರೋಧಿಗಳಲ್ಲಿ ಒಬ್ಬನನ್ನು ಯೇಸು ಹೇಗೆ ತನ್ನ ವಿಶೇಷ ಸೇವಕನಾಗಿ ಆರಿಸಿಕೊಂಡನೆಂದು ನಾವು ಕಲಿಯುತ್ತೇವೆ. ಅಪೊಸ್ತಲ ಪೌಲನೆಂದು ಪ್ರಸಿದ್ಧನಾದವನೇ ಅವನು. ಯೇಸುವಿನ ಮರಣದ ಮೂರುವರೆ ವರ್ಷಗಳ ನಂತರ ಯೆಹೂದ್ಯನಲ್ಲದ ಕೊರ್ನೇಲ್ಯನಿಗೂ ಅವನ ಮನೆಯವರಿಗೂ ಸುವಾರ್ತೆಯನ್ನು ಸಾರುವಂತೆ ದೇವರು ಅಪೊಸ್ತಲ ಪೇತ್ರನನ್ನು ಕಳುಹಿಸಿದನು.

ಸುಮಾರು 13 ವರ್ಷಗಳಾದ ಮೇಲೆ ಪೌಲನು ತನ್ನ ಮೊದಲನೆಯ ಸಾರುವ ಸಂಚಾರವನ್ನು ಪ್ರಾರಂಭಿಸಿದನು. ಅವನ ಎರಡನೆಯ ಸಂಚಾರದಲ್ಲಿ ತಿಮೊಥೆಯನು ಪೌಲನನ್ನು ಜೊತೆಗೂಡಿದನು. ದೇವರ ಸೇವೆಯಲ್ಲಿ ಪೌಲನಿಗೆ ಮತ್ತು ಅವನ ಸಂಚಾರ ಸಂಗಡಿಗರಿಗಾದ ಅನೇಕ ರೋಮಾಂಚಕ ಸಮಯಗಳ ಕುರಿತು ನಾವು ಕಲಿಯುತ್ತೇವೆ. ಕೊನೆಗೆ, ಪೌಲನು ರೋಮಿನಲ್ಲಿ ಸೆರೆಮನೆಗೆ ಹಾಕಲ್ಪಟ್ಟನು. ಎರಡು ವರ್ಷಗಳ ಬಳಿಕ ಅವನು ಬಿಡಿಸಲ್ಪಟ್ಟನು. ಆದರೆ ಅವನು ಪುನಃ ಸೆರೆಗೆ ಹಾಕಲ್ಪಟ್ಟು ಕೊಲ್ಲಲ್ಪಟ್ಟನು. ಭಾಗ ಏಳರ ಘಟನೆಗಳು ಸುಮಾರು 32 ವರ್ಷಗಳ ಕಾಲಾವಧಿಯಲ್ಲಿ ನಡೆದವು.

 

ಈ ಭಾಗದಲ್ಲಿ

ಕಥೆ 102

ಯೇಸು ಜೀವದಿಂದಿದ್ದಾನೆ

ಯೇಸುವಿನ ಸಮಾಧಿಗೆ ಮುಚ್ಚಲಾಗಿದ್ದ ಕಲ್ಲನ್ನು ದೇವದೂತನು ತೆಗೆದಮೇಲೆ ಒಳಗೆ ನೋಡಿದ ಕಾವಲುಗಾರರು ಸ್ತಬ್ಧರಾಗುತ್ತಾರೆ.

ಕಥೆ 103

ಬಾಗಿಲುಮುಚ್ಚಿದ್ದ ಕೋಣೆಯಲ್ಲಿ

ಯೇಸು ಪುನರುತ್ಥಾನಗೊಂಡ ಮೇಲೆ ಶಿಷ್ಯರಿಗೆ ಏಕೆ ಅವನ ಗುರುತು ಸಿಗುವುದಿಲ್ಲ?

ಕಥೆ 104

ಯೇಸು ಪರಲೋಕಕ್ಕೆ ಹಿಂದಿರುಗುತ್ತಾನೆ

ಯೇಸು ಸ್ವರ್ಗಕ್ಕೆ ಹೋಗುವುದಕ್ಕಿಂತ ಮುಂಚೆ ತನ್ನ ಶಿಷ್ಯರಿಗೆ ಕೊನೇ ಆಜ್ಞೆಯನ್ನು ಕೊಡುತ್ತಾನೆ.

ಕಥೆ 105

ಯೆರೂಸಲೇಮಿನಲ್ಲಿ ಕಾಯುವುದು

ಪಂಚಶತ್ತಮದಂದು ಯೇಸು ಏಕೆ ಪವಿತ್ರಾತ್ಮವನ್ನು ತನ್ನ ಶಿಷ್ಯರ ಮೇಲೆ ಪವಿತ್ರಾತ್ಮವನ್ನು ಸುರಿದನು?

ಕಥೆ 106

ಸೆರೆಮನೆಯಿಂದ ಬಿಡುಗಡೆ

ಸಾರುವ ಕೆಲಸವನ್ನು ನಿಲ್ಲಿಸಲು ಯೆಹೂದ ಧಾರ್ಮಿಕ ಮುಖಂಡರು ಅಪೊಸ್ತಲರನ್ನು ಸೆರೆಮನೆಯಲ್ಲಿ ಹಾಕಿದರು. ಆದರೆ ದೇವರ ಮನಸ್ಸಲ್ಲಿ ಬೇರೆ ವಿಷಯವಿತ್ತು.

ಕಥೆ 107

ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ

ಸ್ತೆಫನನ್ನು ಕಲ್ಲೆಸೆದು ಕೊಲ್ಲಲಾಗುತ್ತಿರುವಾಗ ಅವನೊಂದು ಅಸಾಮಾನ್ಯ ಪ್ರಾರ್ಥನೆ ಮಾಡುತ್ತಾನೆ.

ಕಥೆ 108

ದಮಸ್ಕಕ್ಕೆ ಹೋಗುವ ದಾರಿಯಲ್ಲಿ

ಪ್ರಕಾಶವಾದ ಬೆಳಕು ಮತ್ತು ಸ್ವರ್ಗದಿಂದ ಬಂದ ಶಬ್ಧ ಸೌಲನ ಜೀವನ ಬದಲಾಯಿಸುತ್ತದೆ.

ಕಥೆ 109

ಪೇತ್ರನು ಕೊರ್ನೇಲ್ಯನನ್ನು ಭೇಟಿಯಾಗುತ್ತಾನೆ

ಒಂದು ಜಾತಿಯ ಜನರು ಇನ್ನೊಂದಕ್ಕಿಂತ ಮೇಲು ಎಂದು ದೇವರು ನೆನಸುತ್ತಾರಾ?

ಕಥೆ 110

ತಿಮೊಥೆಯ—ಪೌಲನ ಹೊಸ ಸಹಾಯಕ

ತಿಮೊಥೆಯನು ಮನೆಬಿಟ್ಟು ಪೌಲನ ಜೊತೆ ಸೇರಿ ಸುವಾರ್ತೆ ಸಾರಲು ಉತ್ಸಾಹದಿಂದ ಹೋಗುತ್ತಾನೆ.

ಕಥೆ 111

ನಿದ್ದೆಹೋದ ಒಬ್ಬ ಹುಡುಗ

ಪೌಲನ ಮೊದಲನೇ ಭಾಷಣದಲ್ಲಿ ಯೂತಿಖನು ನಿದ್ದೆ ಹೋದ, ಆದರೆ ಎರಡನೆಯ ಭಾಷಣದಲ್ಲಿ ಅಲ್ಲ. ಈ ಎರಡು ಭಾಷಣಗಳ ಮಧ್ಯೆ ನಡೆದ ವಿಷಯ ಒಂದು ಅದ್ಭುತವಾಗಿತ್ತು.

ಕಥೆ 112

ದ್ವೀಪವೊಂದರಲ್ಲಿ ಹಡಗು ಒಡೆದುಹೋದದ್ದು

ಇನ್ನೇನು ಯಾವ ನಿರೀಕ್ಷೆಯು ಇಲ್ಲವೆಂದು ಪೌಲನಿಗೆ ಅನಿಸಿತು. ಆಗ ದೇವರಿಂದ ಅವನಿಗೆ ನಿರೀಕ್ಷೆ ಕೊಡುವ ಸಂದೇಶ ಸಿಕ್ಕಿತು.

ಕಥೆ 113

ರೋಮ್‌ನಲ್ಲಿ ಪೌಲನು

ಸೆರೆಮನೆಯಲ್ಲಿರುವಾಗ ತನ್ನ ಅಪೊಸ್ತಲ ಕೆಲಸವನ್ನು ಪೌಲನು ಹೇಗೆ ಮಾಡ ಸಾಧ್ಯ?