ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 103

“ಮನೆಮನೆಯಲ್ಲಿ”

“ಮನೆಮನೆಯಲ್ಲಿ”

(ಅಪೊಸ್ತಲರ ಕಾರ್ಯಗಳು 20:20)

1. ಮನೆಮನೇಲಿ ಸಾರೋಣ

ಯೆಹೋವ ವಾಕ್ಯವ.

ನಗರ, ಹಳ್ಳಿಗಳಲ್ಲಿ

ಕುರಿ ಉಣಿಸುತ್ತ.

ದೇವ ರಾಜ್ಯ ಆಳುತ್ತಿದೆ

ಎಂಬ ಈ ಸುವಾರ್ತೆ,

ಆಬಾಲವೃದ್ಧರಿದನ್ನು

ಸಾರುತ್ತಲಿದ್ದಾರೆ.

2. ಮನೆಮನೇಲಿ ರಕ್ಷಣೆ

ಸಾರಿ ಹೇಳುತ್ತೇವೆ.

ಲಭ್ಯವದು ಯೆಹೋವನನ್ನು

ಕೋರುವವಗೆ.

ಆ ನಾಮ ತಿಳಿಯದವ

ಕೋರುವುದು ಹೇಗೆ?

ಮನೆಮನೆಗೆ ಆ ನಾಮ

ಹೋಗಬೇಕೀಗಲೇ.

3. ಹೋಗೋಣ ಮನೆಮನೆಗೆ

ಹಬ್ಬಿಸ ಸುವಾರ್ತೆ.

ಬೇಕು, ಬೇಡ ಎಂಬ ಆಯ್ಕೆ

ಮಾಡಲಿ ಜನತೆ.

ಯೆಹೋವ ನಾಮ, ಸತ್ಯವ

ಸಾರೋಣ ಬಿಡದೆ.

ಮನೆಮನೆ ಹೋಗುವಾಗ

ಕುರಿ ಲಭ್ಯ ಖರೆ.

(ಅ. ಕಾ. 2:21; ರೋಮ. 10:14 ಸಹ ನೋಡಿ.)