ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 10

“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”

(ಯೆಶಾಯ 6:8)

1. ದೇವರ ನಾಮ ದೂಷಣೆ

ಜನರು ಮಾಡುತ್ತಿದ್ದಾರೆ,

ದೇವರೇ ಇಲ್ಲ ಅಥವಾ

ಕ್ರೂರಿ ಎನ್ನುತ್ತಾರೆ ಜನ.

ಈ ಅಪವಾದ ತೆಗೆಯ,

ಯಾವನು ತಾನೇ ಹೋಗುವ?

ಇಗೋ, ದೇವಾ ಕಳಿಸೆನ್ನ,

ನಾ ಹಾಡುವೆ ಸ್ತುತಿ ನಿನ್ನ.

(ಪಲ್ಲವಿ)

ಈ ಗೌರವವು ಅನುಪಮ,

ಇಗೋ ಕಳುಹಿಸೆನ್ನ.

2. ದೇವ ನಿಧಾನಿ ಎನ್ನುತೆ

ಭಯವಿಲ್ಲದ ಜನತೆ.

ವಿಗ್ರಹಕೆ, ಕೈಸರಗೆ

ತೋರಿಸುತ್ತಾರೆ ಪೂಜ್ಯತೆ.

ಯಾರಿದ್ದಾರೆ ತಿಳಿಸಲು,

ದುಷ್ಟರ ದುರ್ಗತಿಯನ್ನು?

ಇಗೋ, ದೇವಾ ಕಳಿಸೆನ್ನ,

ಕೊಡುವೆ ಎಚ್ಚರಿಕೆಯ.

(ಪಲ್ಲವಿ)

ಈ ಗೌರವವು ಅನುಪಮ,

ಇಗೋ ಕಳುಹಿಸೆನ್ನ.

3. ನೋಡಿ ದುಷ್ಟತನವನು

ದುಃಖಿಸುತ್ತಾರೆ ದೀನರು.

ಸಹೃದಯದಿ ಅವರು

ಮೆಚ್ಚುತ್ತಾರೆ ಸತ್ಯವನ್ನು.

ಸಾಂತ್ವನವನ್ನು ನೀಡಲು

ಯಾರು ಹೋಗಲು ಸಿದ್ಧನು?

ಇಗೋ, ದೇವಾ ಕಳಿಸೆನ್ನ,

ಕಲಿಸುವೆ ತಾಳ್ಮೆಯಿಂದ.

(ಪಲ್ಲವಿ)

ಈ ಗೌರವವು ಅನುಪಮ,

ಇಗೋ ಕಳುಹಿಸೆನ್ನ.