ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 114

ದೇವರ ಸ್ವಂತ ಗ್ರಂಥ​—⁠ಒಂದು ನಿಧಿ

ದೇವರ ಸ್ವಂತ ಗ್ರಂಥ​—⁠ಒಂದು ನಿಧಿ

(ಜ್ಞಾನೋಕ್ತಿ 2:1)

1. ಬಹು ಪುಟಗಳ ಗ್ರಂಥವೊಂದಿದೆ,

ಶಾಂತಿ, ನಿರೀಕ್ಷೆಯದ್ದು ಆ ಗ್ರಂಥ.

ಅದರ ಚಿಂತನೆಯಲ್ಲಿದೆ ಬಲ;

“ಮೃತ,” “ಅಂಧ” ಆಗುತ್ತಾನೆ ಸ್ವಸ್ಥ.

ಬೈಬಲೇ ದೇವರ ಪವಿತ್ರ ಗ್ರಂಥ.

ಅದರ ಮಾತು ದೈವಪ್ರೇರಿತ.

ದೇವಪ್ರೇಮಿಗಳ ಬರಹವಿದು,

ಪವಿತ್ರಾತ್ಮ ಪ್ರೇರಿಸಿತವರ.

2. ಬರೆದರವರುಸೃಷ್ಟಿಯ ಬಗ್ಗೆ.

ವಿಶ್ವ ಅಸ್ತಿತ್ವಕ್ಕೆ ಬಂದ ವಿಧ.

ಪಾಪರಹಿತ ಮನುಜನ ಬಗ್ಗೆ.

ಆ ಪರದೈಸ್‌ ನಷ್ಟವಾದ ವಿಧ.

ಯೆಹೋವನ ದೂತನೊಬ್ಬನ ಬಗ್ಗೆ,

ಅವನು ಸವಾಲೊಡ್ಡಿದ ವಿಧ.

ಪಾಪ, ಶೋಕ ಪ್ರವೇಶಿಸಿದ ಬಗ್ಗೆ,

ಆ ಪರದೈಸ್‌ ಇಲ್ಲವಾದ ವಿಧ.

3. ನಮ್ಮದು ಅಪಾರ ಹರ್ಷದ ಕಾಲ,

ಕ್ರಿಸ್ತನ ರಾಜ್ಯ ಇಲ್ಲಿದೆ ಈಗ.

ಇದು ರಕ್ಷಣೆಯ ದಿವಸ ಸಹ

ವಿಧೇಯರೆಲ್ಲರಿಗೆ ಸುದಿನ.

ಗ್ರಂಥದಲ್ಲಿದೆ ಹರ್ಷಕರ ವಾರ್ತೆ;

ಪವಿತ್ರ ಔತಣದೂಟ ಸಹ.

ಯೋಚನೆ ಮೀರುವ ಶಾಂತಿಯ ಬಗ್ಗೆ

ಈ ಗ್ರಂಥ ‘ಬನ್ನಿ ಓದಿ’ ಎನ್ನುತೆ.