ಗೀತೆ 20
ನಮ್ಮ ಕೂಟವನ್ನು ಹರಸು
1. ಯೆಹೋವನೇ, ಈ ಕೂಟವ
ದಯವಿಟ್ಟು ಹರಸು.
ಕೃತಜ್ಞರು ಈ ಕೂಟಕ್ಕೆ,
ನಿನ್ನಾತ್ಮವ ಸುರಿಸು.
2. ಆರಾಧನೆ ಸಂಸ್ಕರಿಸಿ
ವಾಕ್ಯದಿ ನಮ್ಮ ತುಂಬು.
ಸಾಕ್ಷಿಗೆಮ್ಮ ಮನಸ್ಸನ್ನು
ಪ್ರೀತಿಯಿಂದ ತುಂಬಿಸು.
3. ಪ್ರಿಯ ಪಿತ ಹರಸೆಮ್ಮ,
ಪ್ರೀತಿ ಐಕ್ಯವ ಕೊಟ್ಟು.
ಶ್ಲಾಘಿಸಲಿ ಪಾರಮ್ಯವ
ನಮ್ಮ ನಡೆನುಡಿಯು.
(ಕೀರ್ತ. 22:22; 34:3; ಯೆಶಾ. 50:4 ಸಹ ನೋಡಿ.)