ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 15

ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಸುತ್ತದೆ

ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಸುತ್ತದೆ

(ಕೀರ್ತನೆ 19)

1. ಯೆಹೋವನೇ, ನಾನರಿತಿರುವೆ,

ತಾರಾ ಸಮೂಹ ಸಾರುತೆ ಪ್ರಭೆ.

ದಿನರಾತ್ರಿ ಹೇಳುತೆ ಮಹಿಮೆ,

ನೀಡುತೆ ಜ್ಞಾನವನು ದೀನಗೆ.

ದಿನರಾತ್ರಿ ಹೇಳುತೆ ಮಹಿಮೆ,

ನೀಡುತೆ ಜ್ಞಾನವನು ದೀನಗೆ.

2. ಸೃಷ್ಟಿಸಿ ಸೂರ್ಯ, ಚಂದ್ರ, ನಕ್ಷತ್ರ,

ಹಾಕಿದಿ ಸಾಗರಕ್ಕೆ ತಡೆಯ.

ಕಣ್ಣೆತ್ತಿ ನೋಡಲಾಗಿ ಆಕಾಶ,

ನೀನೆಮ್ಮ ಸ್ಮರಿಸೋದು ಆಶ್ಚರ್ಯ.

ಕಣ್ಣೆತ್ತಿ ನೋಡಲಾಗಿ ಆಕಾಶ,

ನೀನೆಮ್ಮ ಸ್ಮರಿಸೋದು ಆಶ್ಚರ್ಯ.

3. ನಿರ್ಮಲ ಸತ್ಯ ನಿನ್ನಾಜ್ಞೆಗಳು,

ಕೊಡುವ ಮರುಜ್ಞಾಪನಗಳು.

ಚಿನ್ನಕ್ಕಿಂತ ಅವೆಷ್ಟೋ ಮಿಗಿಲು,

ನಮ್ಮದಾಗಿ ಮಾಡೋಣ ಅವನ್ನು.

ಚಿನ್ನಕ್ಕಿಂತ ಅವೆಷ್ಟೋ ಮಿಗಿಲು,

ನಮ್ಮದಾಗಿ ಮಾಡೋಣ ಅವನ್ನು.