ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 24

ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

(2 ಕೊರಿಂಥ 4:18)

1. ಅಂಧನ ಕಣ್ಣು ಕಾಣೋದು,

ಕಿವುಡನು ಕೇಳುವನು,

ಮರುಭೂಮೀಲಿ ಪುಷ್ಪವು,

ಬೆಂಗಾಡಿನಲ್ಲಿ ಬುಗ್ಗೆಯು.

ಕುಂಟ ನೆಗೆಯುವನಾಗ,

ಪ್ರಿಯರು ಅಗಲರಾಗ.

ಅಂಥ ಸಮಯ ಬರುತೆ,

ದೃಷ್ಟಿ ಇನಾಮ ಮೇಲಿಡೆ.

2. ಮೂಕನು ಮಾತಾಡುವಾಗ,

ವೃದ್ಧ ಯುವನಾಗುವಾಗ,

ಭೂಮಿ ಫಲ ಬಿಡುವಾಗ,

ಸದಾ ಹರ್ಷ ಇರುವಾಗ.

ಮಕ್ಕಳ ಇಂಪು ಗಾಯನ,

ಸುಶಾಂತಿಯು ಬರುವಾಗ,

ಪುನರುತ್ಥಾನ ಆಗುತೆ,

ದೃಷ್ಟಿ ಇನಾಮ ಮೇಲಿಡೆ.

3. ತೋಳ ಕುರಿಯ ಜೊತೇಲಿ,

ಕರಡಿ ಕರು ಪಕ್ಕದಿ,

ಬಾಲಕ ಮೇಯಿಸುವಾಗ,

ಕರೆದು ನಡೆಸುವಾಗ.

ಕಣ್ಣೀರು ಇನ್ನಿಲ್ಲದಾಗ,

ಭಯ, ಬೇನೆ ತೀರುವಾಗ,

ಹರ್ಷಾನುಭವವಾಗುತೆ,

ದೃಷ್ಟಿ ಇನಾಮ ಮೇಲಿಡೆ.