ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 28

ಹೊಸ ಕೀರ್ತನೆ

ಹೊಸ ಕೀರ್ತನೆ

(ಕೀರ್ತನೆ 98)

1. ಹಾಡಿ ದೇವಗೆ ಹೊಚ್ಚ ಹೊಸ ಗೀತೆಯನು,

ಹೇಳಿ ಗತ, ಭಾವೀ ಕಾರ್ಯಾದಿಗಳನ್ನು.

ಆತ ಪ್ರಬಲ ವಿಜಯಶಾಲಿ ದೇವರು.

ನೀತಿ ನ್ಯಾಯದಿಂದ ಮಾಡುವನು ತೀರ್ಪು.

(ಪಲ್ಲವಿ)

ಹಾಡಿರಿ!

ಹೊಸ ಕೀರ್ತನೆಯ!

ಹಾಡಿರಿ!

ಯೆಹೋವ ಅರಸ.

2. ಮಾಡಿ ಜೈಘೋಷ, ಹರ್ಷದಿ ಮಹಾರಾಜಗೆ!

ನಾಮವ ಸ್ತುತಿಸಿ, ಹಾಡಿ ಹರ್ಷಗೀತೆ.

ಕರ್ತನ ಸನ್ನಿಧಿ ಜನಸ್ತೋಮ ಹಾಡಲಿ

ತುತೂರಿ ಕಿನ್ನರಿ ಕೊಂಬನ್ನು ಮೇಳಿಸಿ.

(ಪಲ್ಲವಿ)

ಹಾಡಿರಿ!

ಹೊಸ ಕೀರ್ತನೆಯ!

ಹಾಡಿರಿ!

ಯೆಹೋವ ಅರಸ.

3. ಹಾಡು ಸಮುದ್ರ, ಜಲರಾಶಿಯ ಸಮೇತ.

ಭೂಸೃಷ್ಟಿಯ ಜೊತೆ ಸ್ವರವೆತ್ತಿ ಗೀತ,

ನದಿ ಹರ್ಷಿಸಿ ಹೊಡೆಯಲಿ ಚಪ್ಪಾಳೆಯ,

ಗುಡ್ಡ ಬೆಟ್ಟಗಳು ಹಾಡಲಿ ಸ್ತೋತ್ರವ.

(ಪಲ್ಲವಿ)

ಹಾಡಿರಿ!

ಹೊಸ ಕೀರ್ತನೆಯ!

ಹಾಡಿರಿ!

ಯೆಹೋವ ಅರಸ.