ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 38

ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

(ಕೀರ್ತನೆ 55)

1. ಲಾಲಿಸು, ಓ ಯೆಹೋವನೇ,

ತೋರ್ಪಡಿಸು ನಿನ್ನನ್ನು.

ನೀಡಪ್ಪಾ ಸದುತ್ತರವ,

ಭಯ ಹೋಗಲಾಡಿಸು.

(ಪಲ್ಲವಿ)

ನಿನ್ನ ಚಿಂತಾಭಾರವನ್ನು

ಯೆಹೋವ ಮೇಲೆ ಹಾಕು.

ಕದಲಗೊಡಿಸನಾತ,

ಸ್ಥಿರ ನಿಲ್ಲಿಸುವನು.

2. ರೆಕ್ಕೆ ಪಾರಿವಾಳದ್ದಿರೆ,

ದೂರ ಹಾರಿ ಹೋಗುವೆ.

ದುಷ್ಟರನ್ನು ತ್ಯಜಿಸಿ, ನಾ

ನಿನ್ನಾಶ್ರಯ ಪಡೆವೆ.

(ಪಲ್ಲವಿ)

ನಿನ್ನ ಚಿಂತಾಭಾರವನ್ನು

ಯೆಹೋವ ಮೇಲೆ ಹಾಕು.

ಕದಲಗೊಡಿಸನಾತ,

ಸ್ಥಿರ ನಿಲ್ಲಿಸುವನು.

3. ಯೆಹೋವಗೆ ಮೊರೆಯಿಟ್ಟು,

ಆಸರೆಯ ಬೇಡುವೆ.

ದೀನರಿಗಾತನ ದಾನ,

ಶಾಂತಿ, ಸಾಮರ್ಥ್ಯಗಳೇ.

(ಪಲ್ಲವಿ)

ನಿನ್ನ ಚಿಂತಾಭಾರವನ್ನು

ಯೆಹೋವ ಮೇಲೆ ಹಾಕು.

ಕದಲಗೊಡಿಸನಾತ,

ಸ್ಥಿರ ನಿಲ್ಲಿಸುವನು.

(ಕೀರ್ತ. 22:5; 31:1-24 ಸಹ ನೋಡಿ.)