ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 65

“ಇದೇ ಮಾರ್ಗ”

“ಇದೇ ಮಾರ್ಗ”

(ಯೆಶಾಯ 30:20, 21)

1. ಇದೆ ಒಂದು ಮಾರ್ಗ,

ಅದು ಶಾಂತಿ ಮಾರ್ಗ.

ಆ ಮಾರ್ಗ ಪೂರ್ವದ್ದು

ಎಂದು ಬಲ್ಲೆ ನೀನು,

ಬೋಧಿಸಿದ ಯೇಸು

ಈ ಮಾರ್ಗದ ಬಗ್ಗೆ.

ಇದೇ ಶಾಂತಿ ಮಾರ್ಗ

ವಾಕ್ಯವೆನ್ನುತ್ತದೆ.

(ಪಲ್ಲವಿ)

ಇದು ಜೀವ ಮಾರ್ಗ; ಇದೇ ಮಾರ್ಗ.

ಕೊಡು ಲಕ್ಷ್ಯ, ನೋಡದೆ ಅತ್ತಿತ್ತ.

ಇಗೋ ಕೇಳು ದೇವರ ಕರೆ;

‘ಇದೇ ಮಾರ್ಗ’ ಎನ್ನುತೆ ಆ ಕರೆ.

2. ಇದೆ ಒಂದು ಮಾರ್ಗ,

ಅದು ಪ್ರೀತಿ ಮಾರ್ಗ.

ದೇವರ ವಾಣಿಯು

ತೋರಿಸಿತಾಮಾರ್ಗ.

ದೇವಪ್ರೀತಿ ಸಂಪೂರ್ಣ,

ಸಂಪ್ರೀತಿಯದು.

ಇದೇ ಪ್ರೀತಿ ಮಾರ್ಗ,

ಸರ್ವಸ್ಪರ್ಶಿಯದು.

(ಪಲ್ಲವಿ)

ಇದು ಜೀವ ಮಾರ್ಗ; ಇದೇ ಮಾರ್ಗ.

ಕೊಡು ಲಕ್ಷ್ಯ, ನೋಡದೆ ಅತ್ತಿತ್ತ.

ಇಗೋ ಕೇಳು ದೇವರ ಕರೆ;

‘ಇದೇ ಮಾರ್ಗ’ ಎನ್ನುತೆ ಆ ಕರೆ.

3. ಇದೆ ಒಂದು ಮಾರ್ಗ,

ಅದು ಜೀವ ಮಾರ್ಗ.

ಶಾಂತಿ, ಪ್ರೀತಿ, ಜೀವ

ಮಾರ್ಗಗಳಿಗಿಂತ

ಶ್ರೇಷ್ಠವಾದ ಇನ್ನಾವ

ಮಾರ್ಗವು ಇಲ್ಲ.

ಇದೇ ಜೀವ ಮಾರ್ಗ,

ಕೃತಜ್ಞರು ಸದಾ.

(ಪಲ್ಲವಿ)

ಇದು ಜೀವ ಮಾರ್ಗ; ಇದೇ ಮಾರ್ಗ.

ಕೊಡು ಲಕ್ಷ್ಯ, ನೋಡದೆ ಅತ್ತಿತ್ತ.

ಇಗೋ ಕೇಳು ದೇವರ ಕರೆ;

‘ಇದೇ ಮಾರ್ಗ’ ಎನ್ನುತೆ ಆ ಕರೆ.