ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 48

ಯೆಹೋವನೊಂದಿಗೆ ಪ್ರತಿದಿನ ನಡೆಯುವುದು

ಯೆಹೋವನೊಂದಿಗೆ ಪ್ರತಿದಿನ ನಡೆಯುವುದು

(ಮೀಕ 6:8)

1. ದೇವರ ಹಸ್ತ ಹಿಡಿದು

ನಡೆಯೋಣ ಪ್ರತಿ ದಿನವೂ.

ಆತನ ದಯೆ ಅಪಾರ,

ದೊರೆಯುತೆ ದೀನಗೆ ಅದು.

ಈ ಏರ್ಪಾಡಲ್ಲಿ ನಾವಿರೆ,

ಕೈಹಿಡಿಯಲರ್ಹರು.

ಯೆಹೋವಗೆ ಸಮರ್ಪಣೆ

ನಮ್ಮ ಸ್ಥಿರ ನಿಲ್ಲಿಸೋದು.

2. ಇದು ತೀರ್ಪಿನ ಸಮಯ,

ವ್ಯವಸ್ಥೆಯ ಅಂತ್ಯ ಸಮೀಪ.

ವಿರೋಧ ಎದುರಾದಾಗ,

ಭಯಭೀತರಾಗೋದು ಸಾಧ್ಯ.

ಯೆಹೋವ ಜೊತೆ ನಿಂತರೆ

ಆತ ರಕ್ಷೆ ನೀಡುವ.

ಆತನ ಸದಾ ಸೇವಿಸಿ,

ನಿಷ್ಠೆಯಿಂದ ಪ್ರೀತಿಸೋಣ.

3. ದೇವರ ಸಹಾಯ ಲಭ್ಯ

ವಾಕ್ಯದ ಮೂಲಕ ನಮಗೆ.

ಕ್ರೈಸ್ತ ಸಭೆ, ಪ್ರಾರ್ಥನೆಯು

ನಮಗೆ ಸಹಾಯ ನೀಡುತೆ.

ಯೆಹೋವ ಜೊತೆ ಹೋದರೆ

ಸಹಾಯಕ್ಕಾತ ಸಿದ್ಧ.

ನಮ್ರರಾಗಿ ನಡೆವಾಗ

ದಯಾಶೀಲರಾಗಿರೋಣ.