ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 82

ಕ್ರಿಸ್ತನ ಸೌಮ್ಯಭಾವವನ್ನು ಅನುಕರಿಸಿರಿ

ಕ್ರಿಸ್ತನ ಸೌಮ್ಯಭಾವವನ್ನು ಅನುಕರಿಸಿರಿ

(ಮತ್ತಾಯ 11:28-30)

1. ಕ್ರಿಸ್ತನು ಮಾನವರಲ್ಲಿ ಶ್ರೇಷ್ಠನು,

ಆತ ಹೆಮ್ಮೆ ಪಡಲಿಲ್ಲ ಆದರೂ.

ದೇವೋದ್ದೇಶದ ಮುಖ್ಯ ಪಾತ್ರಧಾರಿ,

ಆದರೂ ವಿನಮ್ರ ಹೃದಯದಲಿ.

2. ಕಷ್ಟಪಟ್ಟು ಹೊರೆ ಹೊರುವವರ

‘ಬನ್ನಿ ನೊಗದಡಿ’ ಎನ್ನುತ್ತಾನವ.

ರಾಜ್ಯದಾಹಿಗಳಿಗಿದೆ ವಿಶ್ರಾಂತಿ,

ಆತ ದೀನಪ್ರಿಯ, ಸೌಮ್ಯ ಸ್ವಭಾವಿ.

3. ‘ಸೋದರರು ನೀವು’ ಎಂದ ಕ್ರಿಸ್ತನು,

ಆದ್ದರಿಂದ ನಾವಲ್ಲ ಉತ್ಕೃಷ್ಟರು.

ದೀನ, ಶಾಂತರು ದೇವಗಮೂಲ್ಯರು,

ಭೂಮಿಗೆ ಬಾಧ್ಯರಾಗುವರವರು.