ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 70

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿರಿ’

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿರಿ’

(ಫಿಲಿಪ್ಪಿ 1:10)

1. ನಮಗಿಂದು ಸತ್ಯ ಆವಶ್ಯಕ,

ವಿವೇಚನೆಯು ಸಹ.

ಪ್ರಮುಖತೆಯಲ್ಲಿ ಹೆಚ್ಚು ಶ್ರೇಷ್ಠ

ಸಂಗತಿಗಳ ಜ್ಞಾನ.

ಒಳ್ಳೇದನ್ನು ಪ್ರೀತಿಸೋದು

ಅವಶ್ಯವು.

ಪ್ರಾರ್ಥನೆ, ಅಧ್ಯಯನ ಅಗತ್ಯ;

ಈ ಪ್ರಮುಖ

ವಿಷಯಗಳನ್ನು ಮಾಡೋಣ.

2. ರಾಜ್ಯ ವಾರ್ತೆ ಸಾರುವುದಕ್ಕಿಂತ

ಶ್ರೇಷ್ಠ ಕಾರ್ಯವಿದೆಯೆ?

ಪಥಭ್ರಷ್ಟ ಕುರಿಗೆ ಸಹಾಯ

ಎಷ್ಟೋ ಶ್ರೇಷ್ಠವಲ್ಲವೆ?

ಅವರಿಗೆ ಬೇಕು ಜ್ಞಾನ.

ಪ್ರೀತಿಯಿಂದ

ಸಹಾಯವನ್ನು ಒದಗಿಸುತ್ತಾ

ಈ ಪ್ರಮುಖ

ಕಾರ್ಯವನ್ನು ಮಾಡುತ್ತಿರೋಣ.

3. ಪ್ರಮುಖ ವಿಷಯವು ಮಾಡುತೆ

ನಮ್ಮ ನಂಬಿಕೆ ಸ್ಥಿರ.

ಗ್ರಹಿಕೆ ಮೀರುವ ದೇವಶಾಂತಿ

ನಮ್ಮ ನಿರೀಕ್ಷೆ ದೃಢ.

ನಿಜ ಪ್ರೀತಿ, ನಿಜ ಮಿತ್ರ

ಆಗ ಲಭ್ಯ.

ಜ್ಞಾನಾರ್ಜನೆ, ವಿವೇಚನೆಗಾಗಿ

ಈ ಪ್ರಮುಖ

ವಿಷಯವ ಮಾಡುತ್ತಿರೋಣ.